AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ ಫ್ಲೈಓವರ್​ ಕಾಮಗಾರಿ ವೇಳೆ ಭಾರೀ ಅವಘಡ, ASI ಸ್ಥಿತಿ ಗಂಭೀರ

ಹುಬ್ಬಳ್ಳಿ ಫ್ಲೈಓವರ್ ಕಾಮಗಾರಿ ವೇಳೆ ಅವಘಡವೊಂದು ಸಂಭವಿಸಿದ್ದು, ಕೋರ್ಟ್ ವೃತ್ತದ ಬಳಿ ಪೊಲೀಸ್ ಅಧಿಕಾರಿಯ ತಲೆಯ ಮೇಲೆ ಕಬ್ಬಿಣದ ರಾಡ್ ಬಿದ್ದಿದೆ. ಸಧ್ಯ ಹುಬ್ಬಳ್ಳಿ(Hubballi) ಉಪನಗರ ಪೊಲೀಸ್ ಠಾಣೆ ಎಎಸ್‌ಐ ನಾಭಿರಾಜ್ ದಯಣ್ಣವರ ( 59) ಸಾವು ಬದುಕಿನ ಹೋರಾಟ ನಡೆಸಿದ್ದಾರೆ.

ಹುಬ್ಬಳ್ಳಿ ಫ್ಲೈಓವರ್​ ಕಾಮಗಾರಿ ವೇಳೆ ಭಾರೀ ಅವಘಡ, ASI ಸ್ಥಿತಿ ಗಂಭೀರ
ಹುಬ್ಬಳ್ಳಿ ಫ್ಲೈಓವರ್​ ಕಾಮಗಾರಿ ವೇಳೆ ಪೊಲೀಸ್ ಅಧಿಕಾರಿ ತಲೆಯ ಮೇಲೆ ಬಿತ್ತು ಕಬ್ಬಿಣದ ರಾಡ್
ಶಿವಕುಮಾರ್ ಪತ್ತಾರ್
| Edited By: |

Updated on: Sep 10, 2024 | 5:53 PM

Share

ಹುಬ್ಬಳ್ಳಿ, ಸೆ.10: ಹುಬ್ಬಳ್ಳಿಯ ಮಹತ್ವದ ಯೋಜನೆ ಫ್ಲೈಓವರ್ ಕಾಮಗಾರಿ ವೇಳೆ ಅವಘಡವೊಂದು ಸಂಭವಿಸಿದ್ದು, ಕೋರ್ಟ್ ವೃತ್ತದ ಬಳಿ ಪೊಲೀಸ್ ಅಧಿಕಾರಿಯ ತಲೆಯ ಮೇಲೆ ಕಬ್ಬಿಣದ ರಾಡ್ ಬಿದ್ದಿದೆ. ಸಧ್ಯ ಹುಬ್ಬಳ್ಳಿ(Hubballi) ಉಪನಗರ ಪೊಲೀಸ್ ಠಾಣೆ ಎಎಸ್‌ಐ ನಾಭಿರಾಜ್ ದಯಣ್ಣವರ ( 59) ಸಾವು ಬದುಕಿನ ಹೋರಾಟ ನಡೆಸಿದ್ದಾರೆ. ಕಬ್ಬಿಣದ ಸಲಾಕೆಗಳನ್ನು ಜೋಡಿಸುತ್ತಿರುವ ಸಂದರ್ಭದಲ್ಲಿ ಇಂದು ಮತ್ತೊಂದು ದುರಂತ ಸಂಭವಿಸಿದೆ.  ಇನ್ನೂ ಅದೆಷ್ಟೋ ಜೀವ ತೆಗೆದುಕೊಳ್ಳುತ್ತೋ ಗೊತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಅವೈಜ್ಞಾನಿಕ ಕಾರ್ಯಾಚರಣೆಯಿಂದ ಫ್ಲೈಓವರ್ ಸಾರ್ವಜನಿಕರಿಗೆ ಸಂಕಷ್ಟ ಎದುರಾಗಿದ್ದು, ಇದೀಗ ಕರ್ತವ್ಯದ ಮೇಲೆ ಪೊಲೀಸ್ ಠಾಣೆಗೆ ತೆರಳುವ ಸಂದರ್ಭದಲ್ಲಿ ಎಎಸ್ಐ ನಾಭಿರಾಜ್ ತಲೆ ಮೇಲೆ ಕಬ್ಬಿಣದ ರಾಡ್​ ಬಿದ್ದಿದೆ. ತೀವ್ರ ರಕ್ತಸ್ರಾವ ಉಂಟಾಗಿದ್ದು, ಕೂಡಲೇ ಅವರನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಹುಬ್ಬಳ್ಳಿಯ ಹೃದಯ ಭಾಗದಲ್ಲಿರುವ ಸರ್ಕಲ್​ನಲ್ಲಿ ಗುತ್ತಿಗೆದಾರ ಅವೈಜ್ಞಾನಿಕ ರೀತಿಯಲ್ಲಿ ಹಾಡುಹಗಲೇ ಕಾಮಗಾರಿ ಕೈಗೊಂಡಿದ್ದಾನೆ. ಜನರ ಓಡಾಟ ಹೆಚ್ಚಾಗಿರುವಾಗಲೇ ಕಬ್ಬಿಣದ ಸಲಾಕೆಗಳನ್ನು ಹಾಕಲು ಈ ಕಾರ್ಮಿಕರು ಮುಂದಾಗಿದ್ದರು. ಈ ವೇಳೆ ದುರಂತ ನಡೆದಿದೆ.

ಇದನ್ನೂ ಓದಿ:ಹುಬ್ಬಳ್ಳಿಯ ಬಹು ನಿರೀಕ್ಷಿತ ಯೋಜನೆಗೆ ಬಿತ್ತು ಕೊಕ್ಕೆ; ಫ್ಲೈಓವರ್ ಕಾಮಗಾರಿಯ ಭೂಸ್ವಾಧೀನ ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ

ಇನ್ನು 2022 ರಲ್ಲೂ ಇಂತಹುದೇ ಘಟನೆಯೊಂದು ನಡೆದಿತ್ತು. ಪ್ಲೈಓವರ್ ಕಾಮಗಾರಿ ವೇಳೆ ಪ್ಲೈಓವರ್ ಮೇಲಿಂದ ಕಬ್ಬಿಣದ ರಾಡ್ ಅಂತರಾಜ್ಯ ಕಾರ್ಮಿಕನ ಬಲಗಡೆಯ ಎದೆ ಭಾಗಕ್ಕೆ ಸಿಲುಕಿಕೊಂಡಿತ್ತು. ಗಾಯಾಳುವನ್ನು ಕೊಲ್ಕತ್ತಾ ಮೂಲದ ಅಬ್ದುಲ್ ಗಫರ್ ಎಂದು ಗುರುತಿಸಲಾಗಿತ್ತು. ಕೂಡಲೇ ಅಲ್ಲೇ ಕೆಲಸ ಮಾಡುತ್ತಿದ್ದ ಸಹ ಕಾರ್ಮಿಕರು ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಿದ್ದರು. ಇದೀಗ ಮತ್ತೊಂದು ಘಟನೆ ನಡೆದಿದ್ದು, ಹುಬ್ಬಳ್ಳಿ ಮಂದಿ ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ