AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್ ಮುಖಂಡನಿಂದಲೇ ಪತ್ನಿ ಹತ್ಯೆಗೆ ಸಂಚು; ಪತಿಯ ವಿರುದ್ಧವೇ ಸ್ಪೋಟಕ ಆರೋಪ‌ ಮಾಡಿದ ಹೆಂಡತಿ

ಪತಿಯ ಜೊತೆ ಗದಗ ಮೂಲದ ಯುವತಿಗೆ ಸಂಬಂಧವಿದೆ. ಡ್ರಗ್ ಪೆಡ್ಲರ್​ಗಳ ಜೊತೆಯೂ ಸಂರ್ಪಕವಿದೆ. ಈ ಹಿಂದೆ ಬೆಂಗಳೂರಿನ ಡ್ರಗ್ಸ್ ಕೇಸ್​ನಲ್ಲೂ ಗಿರೀಶ್ ವಿಚಾರಣೆಗೊಳಗಾಗಿದ್ದರು. ಅದನ್ನು ಕೇಳಿದಕ್ಕೆ ನನ್ನ ಮೇಲೆ ಹಲವಾರು ಭಾರಿ ಹಲ್ಲೆ ಮಾಡಿದ್ದಾರೆ ಎಂದು ಪತ್ನಿ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ಮುಖಂಡನಿಂದಲೇ ಪತ್ನಿ ಹತ್ಯೆಗೆ ಸಂಚು; ಪತಿಯ ವಿರುದ್ಧವೇ ಸ್ಪೋಟಕ ಆರೋಪ‌ ಮಾಡಿದ ಹೆಂಡತಿ
ಕಾಂಗ್ರೆಸ್ ಮುಖಂಡ ಗಿರೀಶ್ ಗದಿಗೆಪ್ಪಗೌಡರ್
Follow us
TV9 Web
| Updated By: preethi shettigar

Updated on:Jan 19, 2022 | 8:04 PM

ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡ(Congress leader) ಗಿರೀಶ್ ಗದಿಗೆಪ್ಪಗೌಡರ್ ನನ್ನ ಮೇಲೆ ಹತ್ಯೆಗೆ (Murder) ಸಂಚು ನಡೆಸಿದ್ದಾರೆ ಎಂದು ಗಿರೀಶ್ ಗದಿಗೆಪ್ಪಗೌಡರ್ ಪತ್ನಿ (Wife) ಆರೋಪ ಮಾಡಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕೈ ಟಿಕೆಟ್ ಅಕಾಂಕ್ಷಿಯಾಗಿರುವ ಗಿರೀಶ್​ನ ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಕೊಲೆ ಯತ್ನ ಮಾಡಿದ್ದಾರೆ ಎಂದು ಪತ್ನಿ ಆರೋಪ ಮಾಡಿದ್ದಾರೆ. ಪತಿಯ ಜೊತೆ ಗದಗ ಮೂಲದ ಯುವತಿಗೆ ಸಂಬಂಧವಿದೆ. ಡ್ರಗ್ ಪೆಡ್ಲರ್​ಗಳ ಜೊತೆಯೂ ಸಂರ್ಪಕವಿದೆ. ಈ ಹಿಂದೆ ಬೆಂಗಳೂರಿನ ಡ್ರಗ್ಸ್ ಕೇಸ್​ನಲ್ಲೂ ಗಿರೀಶ್ ವಿಚಾರಣೆಗೊಳಗಾಗಿದ್ದರು. ಅದನ್ನು ಕೇಳಿದಕ್ಕೆ ನನ್ನ ಮೇಲೆ ಹಲವಾರು ಭಾರಿ ಹಲ್ಲೆ ಮಾಡಿದ್ದಾರೆ ಎಂದು ಪತ್ನಿ ಆರೋಪ ಮಾಡಿದ್ದಾರೆ.

ಕ್ಯಾಶಿನೋ ಗಲಾಟೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ಪತ್ನಿ

ಗನ್ ಇಟ್ಟುಕೊಂಡು ಬೇದರಿಕೆ ಹಾಕುತ್ತಾರೆ. ನಂಗೆ ಪ್ರಾಣಭಯವಿದೆ. ಹೀಗಾಗಿ ರಕ್ಷಣೆ ಬೇಕು. ಸದ್ಯ ನನ್ನ ತಾಯಿಯ ಮನೆಯಲ್ಲಿದ್ದೇನೆ. ಡಿವೋಸ್೯ ನೋಟಿಸ್ ಕೊಟ್ಟಿದ್ದಾರೆ. ಅವರ ವ್ಯವಹಾರ ನಂಗೆ ಬೇಕಿಲ್ಲ. ಅವರ ಅಳಿಯ ಹಾಗೂ ಕುಟುಂಬಸ್ಥರಿಂದಲೂ ಪ್ರಾಣ ಬೇದರಿಕೆ ನನ್ನ ಮೇಲೆ ಇದೆ. ಸಿದ್ದರಾಮಯ್ಯ, ಕೈ ನಾಯಕರು ಜೊತೆಗಿದ್ದಾರೆ ಎಂದು ಬೇದರಿಕೆ ಹಾಕುತ್ತಾರೆ ಎಂದು ಗಿರೀಶ್​ ಪತ್ನಿ ಜಯಲಕ್ಷ್ಮಿ ಮಾಹಿತಿ ನೀಡಿದ್ದಾರೆ.

ಚಾಮರಾಜನಗರ: ಕಾಲು ಜಾರಿ ಜಲಪಾತಕ್ಕೆ ಬಿದ್ದ ಬಾಲಕಿ ಸಾವು

ಕಾಲು ಜಾರಿ ಜಲಪಾತಕ್ಕೆ ಬಿದ್ದು ಬಾಲಕಿ ಸಾವನ್ನಪ್ಪಿದ ಘಟನೆ ಚಾಮರಾಜನಗರ ತಾಲೂಕಿನ ಚಿಕ್ಕಹೊಳೆ ಜಲಾಶಯದಲ್ಲಿ ನಡೆದಿದೆ. ಸೌಂದರ್ಯ (15) ಮೃತ ಬಾಲಕಿ. ಮತ್ತೊರ್ವ ಯುವತಿ ರೂಪಾ ಅಪಾಯದಿಂದ ಪಾರಾಗಿದ್ದಾರೆ. ಜಲಾಶಯ ನೋಡಲು ಬಂದಿದ್ದ ವೇಳೆ ದುರಂತ ನಡೆದಿದೆ. ಚಾಮರಾಜನಗರ ಪೂರ್ವ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ: ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕ ನೀರುಪಾಲು

ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕ ನೀರುಪಾಲಕ ನೀರುಪಾಲಾದ ಘಟನೆ ಚಿತ್ರದುರ್ಗ ತಾಲೂಕಿನ ಭರಮಸಾಗರ ಕೆರೆಯಲ್ಲಿ ನಡೆದಿದೆ. ಭರಮಸಾಗರದ ಶಿವಕುಮಾರ್(16) ನೀರುಪಾಲಾದ ಬಾಲಕ. ದೊಡ್ಡಕೆರೆಯಲ್ಲಿ ಸದ್ಯ ಶಿವಕುಮಾರ್‌ಗಾಗಿ ಶೋಧಕಾರ್ಯ ನಡೆಯುತ್ತಿದೆ. ಭರಮಸಾಗರ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಪೊಲೀಸ್ ಇನ್ಸ್​​ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ

ಹೆಣ್ಣೂರು ಠಾಣೆ ಇನ್ಸ್​​ಪೆಕ್ಟರ್ ವಸಂತ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿದೆ. ಸದ್ಯ ಪೊಲೀಸ್ ಆಯುಕ್ತರಿಗೆ ದೂರು ನೀಡಿರುವ ಸಂತ್ರಸ್ತ ಮಹಿಳೆ, ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಮನೆ ಭೋಗ್ಯಕ್ಕೆ ನೀಡಿದ್ದರು. ಮನೆಯಲ್ಲಿ ವಾಸವಿದ್ದ ಕುಟುಂಬದ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ. ಭೋಗ್ಯಕ್ಕೆ ಇದ್ದವರ ವಿರುದ್ಧ ದೂರು ನೀಡಲು ಹೋಗಿದ್ದ ವೇಳೆ ಇನ್ಸ್​​ಪೆಕ್ಟರ್ ವಸಂತ್ ಅಸಭ್ಯ ವರ್ತನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ಸ್​​ಪೆಕ್ಟರ್ ವಸಂತ್ ಕುಮಾರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಮಹಿಳೆಯ ದೂರು ನೀಡಿದ್ದಾರೆ.

ಮೈಸೂರು: ಶಾರ್ಟ್ ಸರ್ಕ್ಯೂಟ್‌ನಿಂದ ಥರ್ಮೋಕೋಲ್ ಫ್ಯಾಕ್ಟರಿಗೆ ಬೆಂಕಿ

ಶಾರ್ಟ್ ಸರ್ಕ್ಯೂಟ್‌ನಿಂದ ಥರ್ಮೋಕೋಲ್ ಫ್ಯಾಕ್ಟರಿಗೆ ಬೆಂಕಿ ಬಿದ್ದು, ಲಕ್ಷಾಂತರ ಮೌಲ್ಯದ ಥರ್ಮೋಕೋಲ್ ಬೆಂಕಿಗಾಹುತಿಯಾದ ಘಟನೆ ಮೈಸೂರಿನ ಅಶೋಕ ಪುರಂ ರೈಲ್ವೆ ನಿಲ್ದಾಣ ಸಮೀಪ ನಡೆದಿದೆ. ಕೂದಲೆಳೆ ಅಂತರದಲ್ಲಿ ಮೂವರು ಕಾರ್ಮಿಕರು ಪಾರಾಗಿದ್ದಾರೆ. ಸಂಜೆ ಸುಮಾರು 5ಗಂಟೆ ವೇಳೆಗೆ ಶಾರ್ಟ್ ಸರ್ಕ್ಯೂಟ್ ಆಗಿದೆ. ಬೆಂಕಿ ಕಂಡು ಕಾರ್ಖಾನೆಯಿಂದ ಹೊರ ಓಡಿದ ಕಾರ್ಮಿಕರು, ಕೂಡಲೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ನಾಲ್ಕು ಅಗ್ನಿಶಾಮಕ ವಾಹನದಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಲಕ್ಷಾಂತರ ಮೌಲ್ಯದ ಥರ್ಮೋಕೋಲ್ ಸುಟ್ಟು ಭಸ್ಮವಾಗಿದೆ.

ಬೆಳಗಾವಿ: ಬೀದಿನಾಯಿಗಳ ದಾಳಿಯಿಂದ 4 ವರ್ಷದ ಬಾಲಕಿ ಸಾವು

ಬೀದಿನಾಯಿಗಳ ದಾಳಿಯಿಂದ 4 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಬಳವಾಡ ಗ್ರಾಮದಲ್ಲಿ ನಡೆದಿದೆ. ಸೌಜನ್ಯ ಮಲ್ಲಪ್ಪ ಮುತ್ತೂರು(4) ಸಾವನ್ನಪ್ಪಿದ ಬಾಲಕಿ. ಮಗು ಕಳೆದುಕೊಂಡು ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮುಟ್ಟಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮೈಸೂರು: ಪಾರಿವಾಳದ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ

ಪಾರಿವಾಳದ ವಿಚಾರವಾಗಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಮೈಸೂರಿನ ಸುಣ್ಣದಕೇರಿಯಲ್ಲಿ ಗೋವಿಂದರಾಜು(49) ಕೊಲೆಯಾದ ದುರ್ದೈವಿ. ಆರೋಪಿಗಳಾದ ಮನೋಜ್‌ನಾಯಕ್, ಜಯಶಂಕರ್​ನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನಿಬ್ಬರು ಆರೋಪಿಗಳಾದ ವಿನಾಯಕ್, ಪ್ರಮೋದ್ ನಾಯಕ್ ಪರಾರಿಯಾಗಿದ್ದಾರೆ. ಮನೆಯಲ್ಲಿ ಪಾರಿವಾಳ ಸಾಕಿದ್ದ ಗೋವಿಂದರಾಜು ಪುತ್ರ ಉಲ್ಲಾಸ್, ಸಂಕ್ರಾಂತಿ ಹಬ್ಬದ ದಿನ ಪಾರಿವಾಳ ಕಳ್ಳತನವಾಗಿದ್ದ ಹಿನ್ನೆಲೆ, ಕಳ್ಳತನ ಮಾಡಿದವರ ವಿರುದ್ಧ ಬೈದು ಸುಮ್ಮನಾಗಿದ್ದರು. ಉಲ್ಲಾಸ್ ನಿನ್ನೆ ವಿನಾಯಕ್ ಮನೆಯಲ್ಲಿ ಪಾರಿವಾಳ ಇದೆ ಎಂದು ಪರಿಶೀಲನೆ ಮಾಡಿದ್ದಾರೆ.

ಉಲ್ಲಾಸ್ ಸ್ನೇಹಿತನಾದ ಪ್ರಮೋದ್ ಪರಿಶೀಲನೆ ಮಾಡಿದ್ದ. ಈ ವೇಳೆ ಪ್ರಮೋದ್ ಮೇಲೆ ಹಲ್ಲೆ ಮಾಡಿದ್ದ ವಿನಾಯಕ್, ಜಯಶಂಕರ್, ಪ್ರಮೋದ್ ನಾಯಕ್, ಮನೋಜ್ ನಾಯಕ್. ಹಲ್ಲೆ ನಡೆಸಿದ್ದನ್ನು ಪ್ರಶ್ನಿಸಿದ್ದ ಗೋವಿಂದರಾಜುವಿನ ಮೇಲೆ ನಾಲ್ವರು ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಗೋವಿಂದರಾಜು ಸಾವನ್ನಪ್ಪಿದ್ದಾರೆ.

ದಾವಣಗೆರೆ: ವೈದ್ಯರ ನಿರ್ಲಕ್ಷ್ಯದಿಂದ ಬಾಲಕ ಸಾವು ಆರೋಪ; ಶವವಿಟ್ಟು ಪ್ರತಿಭಟನೆ

ವೈದ್ಯರ ನಿರ್ಲಕ್ಷ್ಯದಿಂದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಸಾರ್ವಜನಿಕ ಆಸ್ಪತ್ರೆ ಎದುರು ಬಾಲನ ಶವವಿಟ್ಟು ಪ್ರತಿಭಟನೆ ಮಾಡಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ. ಮಹೇಶ-ನೇತ್ರಾವತಿ ದಂಪತಿ ಮಗ ಭರತ್ (13) ಮೃತ ಬಾಲಕ. ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಕನ್ನು ಪಾಲಕರು ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದರು. ಕರ್ತವ್ಯದಲ್ಲಿದ್ದ ವೈದ್ಯರು ಬಾಲಕನ ಚಿಕಿತ್ಸಗೆ ಸ್ಪಂದಿಸದ ಆರೋಪ ಕೇಳಿಬಂದಿದೆ. ಸಕಾಲಕ್ಕೆ ಚಿಕಿತ್ಸೆ ದೊರೆಯದೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

ಇದನ್ನೂ ಓದಿ: ಮಂಗಳಮುಖಿ ಕೊಲೆ ಪ್ರಕರಣ; 3 ವರ್ಷ ಕಳೆದರೂ ಪತ್ತೆಯಾಗದ ಮತ್ತೋರ್ವ ಮಂಗಳಮುಖಿ, ಮರ್ಯಾದಾ ಹತ್ಯೆ ನಡೆದಿರುವ ಶಂಕೆ

ಸ್ನೇಹಿತರಿಂದಲೇ ಸ್ನೇಹಿತನ ಬರ್ಬರ ಕೊಲೆ: ಜೊತೆಯಲ್ಲೇ ಎಣ್ಣೆ ಪಾರ್ಟಿ ಮಾಡಿ ಕತ್ತಿಗೆ ಚೂರಿ ಹಾಕಿದ್ರು

Published On - 7:35 pm, Wed, 19 January 22