AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತರಿಗೆ ಸಿಕ್ಕಾಪಟ್ಟೆ ಖುಷಿಕೊಟ್ಟ ಕೃಷಿ ವಿವಿ Agri War Room ಪ್ರಯೋಗ!

ಧಾರವಾಡ: ರಾಜ್ಯದಲ್ಲಿ ಕೆಲ ಕೃಷಿ ವಿಶ್ವವಿದ್ಯಾಲಯಗಳು ಕೇವಲ ಸಂಶೋಧನೆ ಮತ್ತು ಪಾಠ ಪ್ರವಚನಕ್ಕೆ ಮಾತ್ರ ಸಿಮೀತವಾಗಿವೆ. ಆದ್ರೆ ಬಿಸಿಲನಾಡು ರಾಯಚೂರು ಕೃಷಿ ವಿಶ್ವವಿದ್ಯಾಲಯ ಮಾತ್ರ ವಿಭಿನ್ನ ರೀತಿಯಲ್ಲಿ ರೈತರಿಗೆ ಆಸರೆ ಆಗುವ ಮೂಲಕ ಅನ್ನದಾತರ ಮೆಚ್ಚುಗೆಗೆ ಪಾತ್ರವಾಗಿದೆ. ದೇಶಾದ್ಯಂತ ಕಠಿಣ ಲಾಕ್​ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲಿ ರೈತರು ಕಷ್ಟಪಟ್ಟು ಬೆಳೆದಿದ್ದ ಅಪಾರ ಪ್ರಮಾಣದ ಕೃಷಿ ಉತ್ಪನ್ನಗಳು ಮಾರಾಟವಾಗದೇ ಹಾಳಾಗಿದ್ದ ಅನೇಕ ಉದಾಹರಣೆಗಳಿವೆ. ಅದರಲ್ಲೂ ವಿಶೇಷವಾಗಿ ಈರುಳ್ಳಿ ಬೆಳೆ ಮಾರಾಟವಾಗದೇ ಸಾಕಷ್ಟು ಪ್ರಮಾಣದಲ್ಲಿ ಬೆಳೆ ರೈತರ ಜಮೀನಿನಲ್ಲೇ ಹಾಳಾಗಿತ್ತು. ರೈತರಿಗಾಗಿ […]

ರೈತರಿಗೆ ಸಿಕ್ಕಾಪಟ್ಟೆ ಖುಷಿಕೊಟ್ಟ ಕೃಷಿ ವಿವಿ Agri War Room ಪ್ರಯೋಗ!
ಆಯೇಷಾ ಬಾನು
|

Updated on:Jun 04, 2020 | 3:43 PM

Share

ಧಾರವಾಡ: ರಾಜ್ಯದಲ್ಲಿ ಕೆಲ ಕೃಷಿ ವಿಶ್ವವಿದ್ಯಾಲಯಗಳು ಕೇವಲ ಸಂಶೋಧನೆ ಮತ್ತು ಪಾಠ ಪ್ರವಚನಕ್ಕೆ ಮಾತ್ರ ಸಿಮೀತವಾಗಿವೆ. ಆದ್ರೆ ಬಿಸಿಲನಾಡು ರಾಯಚೂರು ಕೃಷಿ ವಿಶ್ವವಿದ್ಯಾಲಯ ಮಾತ್ರ ವಿಭಿನ್ನ ರೀತಿಯಲ್ಲಿ ರೈತರಿಗೆ ಆಸರೆ ಆಗುವ ಮೂಲಕ ಅನ್ನದಾತರ ಮೆಚ್ಚುಗೆಗೆ ಪಾತ್ರವಾಗಿದೆ. ದೇಶಾದ್ಯಂತ ಕಠಿಣ ಲಾಕ್​ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲಿ ರೈತರು ಕಷ್ಟಪಟ್ಟು ಬೆಳೆದಿದ್ದ ಅಪಾರ ಪ್ರಮಾಣದ ಕೃಷಿ ಉತ್ಪನ್ನಗಳು ಮಾರಾಟವಾಗದೇ ಹಾಳಾಗಿದ್ದ ಅನೇಕ ಉದಾಹರಣೆಗಳಿವೆ. ಅದರಲ್ಲೂ ವಿಶೇಷವಾಗಿ ಈರುಳ್ಳಿ ಬೆಳೆ ಮಾರಾಟವಾಗದೇ ಸಾಕಷ್ಟು ಪ್ರಮಾಣದಲ್ಲಿ ಬೆಳೆ ರೈತರ ಜಮೀನಿನಲ್ಲೇ ಹಾಳಾಗಿತ್ತು.

ರೈತರಿಗಾಗಿ ತೆರೆದ ಅಗ್ರಿ ವಾರ್ ರೂಮ್: ಇದೆಲ್ಲದರ ಮಧ್ಯೆ ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಗ್ರಿ ವಾರ್ ರೂಮ್ ಓಪನ್ ಮಾಡುವ ಮೂಲಕ ಸಂಕಷ್ಟದಲ್ಲಿರುವ ರೈತರಿಗೆ ನೆರವಾಗಿದೆ. ರಾಯಚೂರು ಜಿಲ್ಲೆಯಾದ್ಯಂತ ರೈತರು ಬೆಳೆದಿದ್ದ 400 ಟನ್ ಈರುಳ್ಳಿಯನ್ನ ಮಾರಾಟ ಮಾಡಿಸುವಲ್ಲಿ ಮಹತ್ವದ ಪಾತ್ರವಹಿಸಿದೆ. ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಮೂಲದ ವ್ಯಾಪಾರಿಗಳಿಗೆ ಸಂಪರ್ಕಿಸಿ ಜಿಲ್ಲೆಯಲ್ಲಿ ರೈತರು ಬೆಳೆದಿದ್ದ ಈರುಳ್ಳಿಯನ್ನ ಅಗ್ರಿ ವಾರ್ ರೂಮ್ ಸಿಬ್ಬಂದಿ ಯಶಸ್ವಿಯಾಗಿ ಮಾರಾಟ ಮಾಡಿಸಿದ್ದಾರೆ.

ಇದೊಂದೆ ಅಲ್ಲದೇ ರೈತರು ಬೆಳೆದಿದ್ದ ಮೂಸಂಬಿ, ದಾಳಿಂಬೆ, ಪಪ್ಪಾಯಿ ಹಣ್ಣುಗಳನ್ನ ಹೈದ್ರಾಬಾದಿನ ವ್ಯಾಪಾರಿಗಳಿಗೆ ಸಂಪರ್ಕಿಸಿ ರೈತರು ಬೆಳೆದೆ ಹಣ್ಣುಗಳನ್ನು ಖರೀದಿಸುವ ಮೂಲಕ ಕೃಷಿ ಅಗ್ರಿ ವಾರ್ ರೂಮ್ ಸಿಬ್ಬಂದಿ ರೈತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಜಿಲ್ಲೆಯಾದ್ಯಂತ ಬೆಳೆಯಲಾಗಿದ್ದ ಲಕ್ಷಾಂತರ ಟನ್ ಮೆಣಸಿನಕಾಯಿ ಬೆಳೆ ಸಹ ಮಾರಾಟವಾಗದೇ ರೈತರು ಕಂಗಾಲಾಗಿದ್ದರು. ಸಾವಿರಾರು ಮೂಟೆಗಳು ಜಿಲ್ಲೆಯ ವಿವಿಧೆಡೆ ಕೋಲ್ಡ್ ಸ್ಟೋರೇಜ್​ನಲ್ಲಿ ಬಂಧಿಯಾಗಿದ್ದವು.

ಅನ್ನದಾತರ ಮೆಚ್ಚುಗೆ ಪಾತ್ರವಾದ ರಾಯಚೂರು ಕೃಷಿ ವಿಶ್ವವಿದ್ಯಾಲಯ: ಈ ಬಗ್ಗೆಯೂ ಮೆಣಸಿನಕಾಯಿ ಖರೀದಿಸಿ ಪೌಡರ್ ಮಾಡಿ ಮಾರಾಟ ಮಾಡುವ ಬೆಳಗಾವಿ ಮೂಲದ ಕಂಪನಿಯೊಂದಕ್ಕೆ ಸಂಪರ್ಕಿಸಿದ ಅಗ್ರಿ ವಾರ್ ರೂಮ್ ಸಿಬ್ಬಂದಿ ಜಿಲ್ಲೆಯ ಅನೇಕ ರೈತರ ಮೆಣಸಿನಕಾಯಿ ಮಾರಾಟ ಮಾಡಿಸುವ ಮೂಲಕ ಸಂಕಷ್ಟದಲ್ಲಿರದ್ದ ಮೆಣಸಿನಕಾಯಿ ಬೆಳೆಗಾರರ ನೋವಿಗೆ ಅಗ್ರಿ ವಾರ್ ರೂಮ್ ಸ್ಪಂದಿಸಿದೆ. ಒಟ್ಟಾರೆಯಾಗಿ ಲಾಕ್​ಡೌನ್ ಅವಧಿಯಲ್ಲಿ ಮಾರಾಟವಾಗದೇ ವಿವಿಧೆಡೆ ಸ್ಟೋರ್ ಮಾಡಲಾಗಿದ್ದ ಬೆಳೆಗಳನ್ನ ಕೃಷಿ ವಿಶ್ವವಿದ್ಯಾಲಯದ ಅಗ್ರಿ ವಾರ್ ರೂಮ್ ಸಿಬ್ಬಂದಿ ಯಶಸ್ವಿಯಾಗಿ ಮಾರಾಟ ಮಾಡಿಸುವ ಮೂಲಕ ಅನ್ನದಾತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Published On - 2:07 pm, Thu, 4 June 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ