ಹುಬ್ಬಳ್ಳಿ: ತೋಟದ ಮನೆಯಲ್ಲಿ ನಕಲಿ ಗೋವಾ ಮದ್ಯ ತಯಾರಿ ದಂಧೆ, ಅಬಕಾರಿ ಬಲೆಗೆ ಬಿದ್ದ ಗ್ಯಾಂಗ್

| Updated By: Ganapathi Sharma

Updated on: Mar 07, 2025 | 7:24 AM

ಅದು ಛೋಟಾ ಮುಂಬೈ ಎಂದು ಹೆಸರಾದ ಪ್ರದೇಶ. ಅಲ್ಲಿ ದೋ ನಂಬರ್ ದಂಧೆಗೇನೂ ಕಡಿಮೆ ಇಲ್ಲ. ಅಲ್ಲಿ ಬಹುತೇಕ ಎಲ್ಲವೂ ನಕಲಿ. ಇದೀಗ ಅದೇ ಛೋಟಾ ಮುಂಬೈಯಲ್ಲಿ ನಕಲಿ ಮದ್ಯೆ ತಯಾರಿಕೆ ಗ್ಯಾಂಗ್ ಸಕ್ರಿಯವಾಗಿದೆ. ಹಣ ಮಾಡುವ ಆಸೆಗೆ ಬಾಟಲ್​ನಿಂದ ಹಿಡಿದು ಎಲ್ಲವೂ ಡುಪ್ಲಿಕೇಟ್. ಎಣ್ಣೆ ಮಾತ್ರ ಅಲ್ಲ, ಅಲ್ಲಿರುವ ಲೇಬಲ್ ಕೂಡಾ ನಕಲಿ. ತೋಟದ ಮನೆಯಲ್ಲಿ ನಕಲಿ ಮದ್ಯ ತಯಾರು ಮಾಡುತ್ತಿದ್ದ ಇಬ್ಬರನ್ನು ಅಬಕಾರಿ ಅಧಿಕಾರಿಗಳು ಬಂಧಿಸಿದ್ದು, ಕಿಂಗ್​ಪಿನ್​ಗಾಗಿ ಬಲೆ ಬೀಸಿದ್ದಾರೆ.

ಹುಬ್ಬಳ್ಳಿ: ತೋಟದ ಮನೆಯಲ್ಲಿ ನಕಲಿ ಗೋವಾ ಮದ್ಯ ತಯಾರಿ ದಂಧೆ, ಅಬಕಾರಿ ಬಲೆಗೆ ಬಿದ್ದ ಗ್ಯಾಂಗ್
ನಕಲಿ ಗೋವಾ ಮದ್ಯ ತಯಾರಿಸುತ್ತಿದ್ದವರ ಬಂಧನ
Follow us on

ಹುಬ್ಬಳ್ಳಿ, ಮಾರ್ಚ್ 7: ಒಂದು ಕಡೆ ಅಸಲಿಯಂತೆ ಕಾಣುವ ಬಾಟಲ್​ಗಳು. ಮತ್ತೊಂದು ಕಡೆ ತೋಟದ ಮನೆ. ತೋಟದ ಮನೆಯಲ್ಲಿ ಅಬಕಾರಿ ಅಧಿಕಾರಿಗಳ ತಂಡ. ಅಬಕಾರಿ ಅಧಿಕಾರಿಗಳು ದಾಳಿ ಮಾಡಿರುವ ಈ ತೋಟದ ಮನೆ ಇರುವುದು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರ ತೋಟದ ಪಕ್ಕದಲ್ಲಿಯೇ. ಇಲ್ಲಿ ಬರೋಬ್ಬರಿ ಐದು ಲಕ್ಷ ರೂ. ಮೌಲ್ಯದ ನಕಲಿ ಮದ್ಯ ಸೀಜ್ ಮಾಡಲಾಗಿದೆ. ಹುಬ್ಬಳ್ಳಿ (Hubli) ತಾಲೂಕಿನ ಛಬ್ಬಿ ಗ್ರಾಮದ ಬಮ್ಮಸಮುದ್ರ ರಸ್ತೆ ಬಳಿಯ ತೋಟದ ಮನೆಯಲ್ಲಿ ನಕಲಿ ಮದ್ಯೆ ಪತ್ತೆಯಾಗಿದೆ. ನಕಲಿ ಮದ್ಯ ತಯಾರಿಕೆ ಅಡ್ಡೆ ಮೇಲೆ ಬೆಳಗಾವಿ ವಿಭಾಗದ ಅಬಕಾರಿ, ಜಂಟಿ ಆಯುಕ್ತರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಅಪಾರ ಪ್ರಮಾಣದ ನಕಲಿ ಮದ್ಯ ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದ ಬಳಿಯ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಹೊರಠಾಣೆಯ ಕೂಗಳತೆಯ ದೂರದಲ್ಲಿಯೇ ನಕಲಿ ಮದ್ಯ ಮಾರಾಟ ದಂಧೆ ಎಗ್ಗಿಲ್ಲದೆ ಮುಂದುವರಿದಿತ್ತು. ಖಚಿತ ಮಾಹಿತಿ ಮೇರೆಗೆ ಅಬಕಾರಿ ಎಸ್​​ಪಿ ವಿಜಯಕುಮಾರ್ ಹಿರೇಮಠ ನೇತೃತ್ವದಲ್ಲಿ ದಾಳಿ ಮಾಡಿ ಅಪಾರ ಪ್ರಮಾಣದ ನಕಲಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.‌ ಈ ಬಗ್ಗೆ ಧಾರವಾಡ ಅಬಕಾರಿ ಉಪಆಯುಕ್ತ ರಮೇಶ್ ಕುಮಾರ್ ಹೆಚ್ ಮಾಹಿತಿ ನೀಡಿದ್ದಾರೆ.

5 ಲಕ್ಷ ರೂ. ಮೌಲ್ಯದ ನಕಲಿ ಮದ್ಯ ವಶಕ್ಕೆ

ಇನ್ನು ತೋಟದ ಮನೆಯಲ್ಲಿ ನಕಲಿ ಮದ್ಯ ತಯಾರು ಮಾಡುತ್ತಿದ್ದ ಹುಬ್ಬಳ್ಳಿ ಮೂಲದ ಸಂದೀಪ್ ಹಾಗೂ ಅಮೃತ್ ಎಂಬ ಇಬ್ಬರು ಆರೋಪಿಗಳನ್ನ ವಶಕ್ಕೆ ಪಡೆಯಲಾಗಿದೆ. ನಕಲಿ ಲೇಬಲ್, ಭದ್ರಾತಾ ಚೀಟಿ ಸೇರಿ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಅಬಕಾರಿ ಪೊಲೀಸರು ದಾಳಿ ಮಾಡಿದಾಗ ಇಬ್ಬರು ಯುವಕರು ನಕಲಿ ಮದ್ಯ ತಯಾರು ಮಾಡುತ್ತಿದ್ದರು. ಇದರಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಬ್ರಾಂಡ್ ಯಾವುದೂ ಇರಲಿಲ್ಲ. ಬರೊಬ್ಬರಿ 5 ಲಕ್ಷ ರೂ. ಮೌಲ್ಯದ ಮದ್ಯ ಹಾಗೂ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಬಕಾರಿ‌ ಉಪ ಆಯುಕ್ತ ರಮೇಶ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ
ಟೀಕಿಸುವ ಭರದಲ್ಲಿ ಸಿಎಂ ವಿರುದ್ಧ ನಾಲಿಗೆ ಹರಿಬಿಟ್ಟ ಛಲವಾದಿ ನಾರಾಯಣಸ್ವಾಮಿ!
ಮನೆ ಕೆಲಸ ಮಾಡುತ್ತಿದ್ದಾಕೆ ಜೊತೆ ಸರ್ಕಾರಿ ವೈದ್ಯ ಅಸಭ್ಯ ವರ್ತನೆ
ಮಕ್ಕಳಲ್ಲಿ ಅತಿಯಾದ ಬೊಜ್ಜು ನಾನಾ ಸಮಸ್ಯೆಗೆ ಕಾರಣ: ಎಚ್ಚರಿಸಿದ ವರದಿ!
ಸದನದಲ್ಲಿ ಹೊಸ ರೇಷನ್​ ಕಾರ್ಡ್ ಬಗ್ಗೆ ಪ್ರಸ್ತಾಪ: ಸಚಿವ ಹೇಳಿದ್ದಿಷ್ಟು

ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಕೇಸ್‌ ಹಿಂಪಡೆಯುವ ತೀರ್ಮಾನ: ಸರ್ಕಾರದ ವಿರುದ್ಧ ತೊಡೆತಟ್ಟಿದ ಯುವ ವಕೀಲರು

ಮಾರುವೇಷದಲ್ಲಿ ದಾಳಿ ಮಾಡಿದ ಅಧಿಕಾರಿಗಳ ಬಲೆಗೆ ಬಿದ್ದ ಗ್ಯಾಂಗ್

ಅಬಕಾರಿ ಅಧಿಕಾರಿಗಳು ಮಾರುವೇಷದಲ್ಲಿ ಬಂದು ದಾಳಿ ಮಾಡಿದ್ದಾರೆ. ಮೊದಲೇ ಈ ನಕಲಿ ಮದ್ಯೆ ತಯಾರಿಕೆಯಲ್ಲಿ ತೊಡಗಿದ್ದವರ ಬಳಿ ಒಂದು ಬಾಕ್ಸ್ ಖರೀದಿ ಮಾಡಿದ್ದಾರೆ .ನಂತರ 20 ಬಾಕ್ಸ್ ಆರ್ಡರ್ ಮಾಡಿದ್ದಾರೆ. ಗೋವಾ ಮಾಲ್ ಬೇಕೆಂದು ಆರ್ಡರ್ ಮಾಡಿ ನಕಲಿ ಮದ್ಯ ತಯಾರಿಕೆ ಮಾಡುವವರನ್ನು ಖೆಡ್ಡಾಗೆ ಕೆಡವಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:13 am, Fri, 7 March 25