ಟೀಕಿಸುವ ಭರದಲ್ಲಿ ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಬಿಟ್ಟ ಛಲವಾದಿ ನಾರಾಯಣಸ್ವಾಮಿ
ಸಿಎಂ ಸಿದ್ದರಾಮಯ್ಯ ಮಂಡಿನೋವಿನಿಂದ ಬಳಲುತ್ತಿದ್ದಾರೆ. ಕಳೆದ ಒಂದು ತಿಂಗಳಿನಿಂದ ವೀಲ್ಚೇರ್ನಲ್ಲಿ ಓಡಾಡುತ್ತಿದ್ದಾರೆ. 76 ವರ್ಷವಾದರೂ ಪಕ್ಷದ ಚಟುವಟಿಕೆ, ಓಡಾಟ ಅಂತಾ ಬಂದ್ರೆ, ತುಂಬಾನೇ ಆ್ಯಕ್ಟೀವ್ ಆಗಿರುತ್ತಾರೆ. ಇದೀಗ ಮಂಡಿನೋವಿನಿಂದಾಗಿ ವೀಲ್ಚೇರ್ನಲ್ಲಿ ಓಡಾಡ್ತಿದ್ದಾರೆ. ಆದ್ರೆ ಸಿಎಂ ಸಿದ್ದರಾಮಯ್ಯರನ್ನ ಟೀಕಿಸೋ ಭರದಲ್ಲಿ, ಛಲವಾದಿ ನಾರಾಯಣಸ್ವಾಮಿ ನಾಲಗೆ ಹರಿಬಿಟ್ಟಿದ್ದು, ಕಾಂಗ್ರೆಸ್ ಪಾಳಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಬೆಂಗಳೂರು, (ಮಾರ್ಚ್ 06): ನಮ್ಮ ಜನರಿಗೆ ಅನ್ಯಾಯ ಮಾಡಿರೋದಕ್ಕೆ, ನೀವು ಕುಂಟುತಿರೋದು, ಇದೀಗ ವ್ಹೀಲ್ಚೇರ್ ( wheelchair) ಬಂದಿದೆ. ಮುಂದೆ ಬೇರೆ ಚೇರ್ ಬರುತ್ತೆ ಎಂದು ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chaluvadi Narayanaswamy) ಸಿಎಂ ಸಿದ್ದರಾಮಯ್ಯನವರ(siddaramaiah) ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ಎಸ್ಸಿಪಿ ಟಿಎಸ್ಪಿ ಹಣ ದುರ್ಬಳಕೆ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಇಂದು (ಮಾರ್ಚ್ 06) ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದವು .ಇದಕ್ಕೆ ಬಿಜೆಪಿ ಬೆಂಬಲ ನೀಡಿದ್ದು, ರಾಜ್ಯ ಸರ್ಕಾರವನ್ನ ಕುಟುಕುವ ಭರದಲ್ಲಿ ಚೆಲುವಾದಿ ನಾರಾಯಣಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಮಂಡಿನೋವು ಉಲ್ಲೇಖಿಸಿ ವ್ಯಂಗ್ಯವಾಡಿದರು. ಇದಕ್ಕೆ ಕಾಂಗ್ರೆಸ್ ನಾಯಕರು ಸಿಡಿದೆದ್ದಿದ್ದಾರೆ.
ನಮ್ಮ ಜನರಿಗೆ ಅನ್ಯಾಯ ಮಾಡಿದ್ದಕ್ಕೆ ನೀವು ಕುಂಟುತ್ತಿದ್ದೀರಿ. ನಮ್ಮವರ ಹಣ ದುರುಪಯೋಗ ಮಾಡಿದ್ದಕ್ಕೆ ನೀವು ಈಗ ವ್ಹೀಲ್ ಚೇರ್ ನಲ್ಲೇ ಬರುತ್ತಿರುವುದು. 25 ಸಾವಿರ ಕೋಟಿ ರೂ. ದಲಿತರ ಹಣ ದುರ್ಬಳಕೆ ಆಗಿದೆ ಎಂದು ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಕ್ರೋಶ ಹೊರಹಾಕಿದರು.
ನಾರಾಯಣಸ್ವಾಮಿ ಉಮಾಶ್ರೀ ಕೆಂಡಾಮಂಡಲ
ಛಲವಾದಿ ನಾರಾಯಣಸ್ವಾಮಿ ಅವರ ಈ ಮಾತು ರಾಜ್ಯ ಕಾಂಗ್ರೆಸ್ ಕಲಿಗಳನ್ನ ಕೆರಳಿಸುವಂತೆ ಮಾಡಿದೆ. ಸಿಎಂ ಪರಿಸ್ಥಿತಿ ಕುರಿತು ನಾಲಿಗೆ ಹರಿಬಿಟ್ಟ ಚೆಲುವಾದಿ ನಾರಾಯಣಸ್ವಾಮಿ ವಿರುದ್ದ ಕೈ ಪಡೆ ಎಗರಿ ಎಗರಿ ದಾಳಿ ನಡೆಸಿದೆ. ಅದರಲ್ಲೂವಿಧಾನಪರಿಷತ್ ಕಾಂಗ್ರೆಸ್ ಸದಸ್ಯೆ ಉಮ್ರಾಶ್ರೀ ಪಿತ್ತ ನೆತ್ತಿಗೇರುವಂತೆ ಮಾಡಿದ್ದು, ಮನುಷ್ಯತ್ವ ಇದ್ದರೆ ಸಿದ್ದರಾಮಯ್ಯ ಅವರಿಗೆ ಸಾರಿ ಕೇಳಬೇಕು ಎಂದು ತಿವಿದರು.
ಹುಲಿ ಯಾವತ್ತಿದ್ರೂ ಹುಲಿನೇ
ಛಲವಾದಿ ನಾರಾಯಣಸ್ವಾಮಿ ಪರಿಷತ್ ವಿಪಕ್ಷ ನಾಯಕರು. ಸಿದ್ದರಾಮಯ್ಯನವರ ಟೀಕಿಸಿ ಏನು ಸಾಧನೆ ಮಾಡುತ್ತೀರಿ? ಈ ರೀತಿ ಮಾತನಾಡಿ ಸಿಎಂ ಅವರನ್ನ ಏನೂ ಮಾಡೋಕಾಗಲ್ಲ. ಹುಲಿ ಯಾವತ್ತಿದ್ರೂ ಹುಲಿನೇ. ಛಲವಾದಿ ಅವರಿಗೆ ಹೋಲಿಸಿದ್ರೆ ಸಿದ್ದರಾಮಯ್ಯ ಪ್ರಬುದ್ಧರು. ಇಡೀ ರಾಜ್ಯ, ದೇಶ ಸೇರಿ ಬಿಜೆಪಿ ನಾಯಕರು ಗೌರವಿಸುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಎಲ್ಲರೂ ಗೌರವಿಸುತ್ತಾರೆ. ಕ್ಷುಲ್ಲಕ, ಕೆಟ್ಟದಾಗಿ ಮಾತನಾಡುವುದು ಅತ್ಯಂತ ಕೆಳ ಮನಸ್ಥಿತಿ ಎಂದು ಕಿಡಿಕಾರಿದರು.
ಸಿದ್ದರಾಮಯ್ಯನವರ ಟೀಕೆ ಮಾಡಿ ರಾಜಕೀಯವಾಗಿ ಏನು ಸಾಧನೆ ಮಾಡುತ್ತೇನೆ ಅಂದರೆ ಅದು ಸಾಧ್ಯವೇ ಇಲ್ಲ. ಛಲವಾದಿ ನಾರಾಯಣಸ್ವಾಮಿ ಅವರಿಗೆ ಹೋಲಿಕೆ ಮಾಡಿದರೆ ತುಂಬಾ ಪ್ರಬುದ್ಧವಾದ ರಾಜಕಾರಣಿ ಸಿದ್ದರಾಮಯ್ಯ. ಇಡೀ ರಾಜ್ಯ ದೇಶ ಸೇರಿ ಬಿಜೆಪಿ ನಾಯಕರು ಸಿದ್ದರಾಮಯ್ಯನವರನ್ನು ಗೌರವಿಸುತ್ತಾರೆ
ಬಿಜೆಪಿಯಲ್ಲಿ ಸಿದ್ದರಾಮಯ್ಯನವರ ವಿರುದ್ಧ ಮಾತನಾಡಲು ಇಂಥವರನ್ನು ಬಳಸಿ ಸ್ಥಾನಮಾನ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ ಉಮಾಶ್ರೀ, ಮಾಡಿರುವ ಕೆಲಸಗಳನ್ನು ರಾಜಕೀಯವಾಗಿ ಟೀಕೆ ಮಾಡಿ. ವೈಯಕ್ತಿಕವಾಗಿ ಟೀಕೆ ಮಾಡುತ್ತಾರೆಂದರೆ ಇವರ ನೀಚ ಮನಸ್ಥಿತಿ ಗೊತ್ತಾಗುತ್ತದೆ. ಯಾವ ಮನುಷ್ಯನಿಗೆ ದೈಹಿಕವಾಗಿ ಸಮಸ್ಯೆ ಬರುವುದಿಲ್ಲ. ಅದನ್ನ ಮಾನವೀಯತೆಯಿಂದ ನೋಡಬೇಕು. ಈ ರೀತಿ ವೈಯಕ್ತಿಕ ಟೀಕೆ ಮಾಡಲು ಯಾರು ನಿಮಗೆ ಹಕ್ಕು ಕೊಟ್ಟಿರುವುದು ಎಂದು ಛಲವಾದಿ ನಾರಾಯಣಸ್ವಾಮಿಗೆ ಖಾರವಾಗಿ ಪ್ರಶ್ನಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ