AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್ಟ್ ಆಫ್ ಲಿವಿಂಗ್ ಪಾರಂಪರಿಕ ಶಾಲೆಯಿಂದ 48 ವಿದ್ಯಾರ್ಥಿಗಳಿಗೆ ಶಿವಾಗಮ ವಿದ್ಯಾನಿಧಿ ಪ್ರಶಸ್ತಿ ಪ್ರದಾನ

ದಿ ಆರ್ಟ್ ಆಫ್ ಲಿವಿಂಗ್ (Art of Living) ಅಂತಾರಾಷ್ಟ್ರೀಯ ಕೇಂದ್ರದಲ್ಲಿ ವೇದ ಆಗಮ ಸಂಸ್ಕೃತ ಮಹಾ ಪಾಠಶಾಲೆಯ 22ನೇ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಇನ್ನು ಇದೇ ವೇಳೆ 48 ವಿದ್ಯಾರ್ಥಿಗಳಿಗೆ ಶಿವಾಗಮ ವಿದ್ಯಾನಿಧಿ ಎಂಬ ಗೌರವಾನ್ವಿತ ಪದವಿ ಪ್ರದಾನ ಮಾಡಲಾಯಿತು. ಅಲ್ಲದೇ ವಿವಿಧ ಬ್ಯಾಚ್‌ಗಳ ವಿದ್ಯಾರ್ಥಿಗಳು ಹಲವು ವೈದಿಕ ಸಂಪ್ರದಾಯಗಳ ಕುರಿತು ವಿವರವಾದ ಸಂಶೋಧನಾ ಪ್ರಾಜೆಕ್ಟ್‌ಗಳನ್ನು ಪ್ರಸ್ತುತಪಡಿಸಿದ್ದು, ಅವುಗಳ ವಿವರ ಇಲ್ಲಿದೆ.

ಆರ್ಟ್ ಆಫ್ ಲಿವಿಂಗ್ ಪಾರಂಪರಿಕ ಶಾಲೆಯಿಂದ 48 ವಿದ್ಯಾರ್ಥಿಗಳಿಗೆ ಶಿವಾಗಮ ವಿದ್ಯಾನಿಧಿ ಪ್ರಶಸ್ತಿ ಪ್ರದಾನ
Art Of Living
TV9 Web
| Edited By: |

Updated on: Mar 06, 2025 | 11:03 PM

Share

ಬೆಂಗಳೂರು, (ಮಾರ್ಚ್​ 06): ವೇದ ಆಗಮ ಸಂಸ್ಕೃತ ಮಹಾ ಪಾಠಶಾಲೆಯ 22ನೇ ವಾರ್ಷಿಕೋತ್ಸವವನ್ನು ದಿ ಆರ್ಟ್ ಆಫ್ ಲಿವಿಂಗ್ (Art of Living) ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ವೇದಾಧ್ಯಯನದ ಪ್ರಮುಖ ಸಂಸ್ಥೆಗಳಲ್ಲೊಂದಾದ ಈ ಪಾಠಶಾಲೆಯ ವಾರ್ಷಿಕ ಕಾರ್ಯಕ್ರಮವು ಗುರುದೇವ ಶ್ರೀ ಶ್ರೀ ರವಿ ಶಂಕರ್ ಅವರ ದಿವ್ಯ ಆಶೀರ್ವಾದದೊಂದಿಗೆ ನೆರವೇರಿತು.

ಈ ಸಂದರ್ಭದಲ್ಲಿ ವಿದ್ವತ್ಪೂರ್ಣ ಸಮ್ಮೇಳನ, ಭವ್ಯ ಪ್ರದರ್ಶನ ಹಾಗೂ ಬಹು-ನಿರೀಕ್ಷಿತ ಪದವೀಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ರತ್ನಗಿರಿಯ ಶ್ರೀ ಬಾಲಮುರುಗನ್ ದೇವಸ್ಥಾನದ ಶ್ರೀ ಬಾಲಮುರುಗನ್ ಆದಿಮಾಯಿ ಸ್ವಾಮಿಗಳು ಮುಖ್ಯ ಅತಿಥಿಯಾಗಿ ಪದವೀಪ್ರದಾನ ಭಾಷಣವನ್ನು ನೀಡಿದರು.

ಇನ್ನು ಇದೇ ವೇಳೆ 48 ವಿದ್ಯಾರ್ಥಿಗಳಿಗೆ ಶಿವಾಗಮ ವಿದ್ಯಾನಿಧಿ ಎಂಬ ಗೌರವಾನ್ವಿತ ಪದವಿ ಪ್ರದಾನ ಮಾಡಲಾಯಿತು. ಅವರು ವೇದ ಆಗಮ ಶಾಸ್ತ್ರಗಳಲ್ಲಿ ಎಂಟು ವರ್ಷಗಳ ಕಠಿಣ, ಸಮಗ್ರ ವಸತಿ ಅಧ್ಯಯನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಪದವೀಧರರಲ್ಲಿ ಹಲವರು ದೇಶ-ವಿದೇಶಗಳ ಗೌರವಾನ್ವಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಲು ಆಯ್ಕೆಯಾಗಿದ್ದು, ಭವ್ಯ ವೇದ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ.

ಈ ಅದ್ಭುತ ಕ್ಷಣಕ್ಕೆ ಮತ್ತಷ್ಟು ಮೆರುಗು ನೀಡುವಂತೆ ಒಂದು ವಿಶಿಷ್ಟ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಮಂದಿರ ವಾಸ್ತುಶಿಲ್ಪ, ವೈದಿಕ ಸಂಪ್ರದಾಯಗಳು ಹಾಗೂ ಪವಿತ್ರ ರೇಖಾಗಣಿತದ ಆಕರ್ಷಕ ನೋಟ ಸಿಗುವಂತೆ ಮಾಡಲಾಗಿತ್ತು.

ವಿವಿಧ ಬ್ಯಾಚ್‌ಗಳ ವಿದ್ಯಾರ್ಥಿಗಳು ಹಲವು ವೈದಿಕ ಸಂಪ್ರದಾಯಗಳ ಕುರಿತು ವಿವರವಾದ ಸಂಶೋಧನಾ ಪ್ರಾಜೆಕ್ಟ್‌ಗಳನ್ನು ಪ್ರಸ್ತುತಪಡಿಸಿದರು.  ಅವು ಈ ಕೆಳಗಿನಂತಿವೆ.

  • ಉತ್ತಮ ಪಕ್ಷ ಯಾಗಶಾಲೆ – ಸಂಕೀರ್ಣವಾದ ವೈದಿಕ ಹವನಗಳಲ್ಲಿ ಬಳಸುವ ಪ್ರಗತಿಶೀಲ ಅಗ್ನಿಕುಂಡ ವಿನ್ಯಾಸ.
  • ಸಹಸ್ರ ಲಿಂಗಂ – ಒಂದೇ ದೇವಸ್ಥಾನದಲ್ಲಿ ಸಾವಿರ ಶಿವಲಿಂಗಗಳನ್ನು ಸಾಂಕೇತಿಕವಾಗಿ ಪ್ರತಿನಿಧಿಸುವುದು. ಇದು ಅನಂತ ವಿಶ್ವ ಶಕ್ತಿಯನ್ನು ಸಾಕಾರಗೊಳಿಸುವುದು.
  •  ಶ್ರೀ ಚಕ್ರಂ – ಪವಿತ್ರ ರೇಖಾಗಣಿತದ ಮೂಲಕ ದೈವೀ ಶಕ್ತಿಯ ಪ್ರತೀಕವಾಗಿರುವ, ತಾಂತ್ರಿಕ ಸಂಕೇತ.
  •  ಶಂಖಾಭಿಷೇಕ ಮಂಡಲಂ – ಸಂಕೀರ್ಣವಾದ ಮಂಡಲ ಮಾದರಿಗಳಲ್ಲಿ, ಪವಿತ್ರ ಶಂಖಗಳ ಮೂಲಕ ಜಲ ಅರ್ಪಣೆ ಮಾಡುವ ವಿಶಿಷ್ಟ ವೈದಿಕ ಆಚರಣೆ.
  •  ಅತಿರುದ್ರ ಯಾಗಶಾಲೆ – ಭಗವಾನ್ ರುದ್ರನ ಆರಾಧನೆಗಾಗಿ ದೊಡ್ಡ ಮಟ್ಟದಲ್ಲಿ ಆಯೋಜಿಸಲಾಗುವ, ಅತ್ಯಂತ ಅಪರೂಪವಾದ ವೈದಿಕ ಹವನ ಪ್ರಕ್ರಿಯೆ.
  •  ಪಂಚಾಸನ ಪಂಚಮಾವರಣಂ – ಐದು ಆಸನಗಳ ತಾಂತ್ರಿಕ ವಿಧಿಗಳು ಮತ್ತು ಅವುಗಳ ರಕ್ಷಣಾತ್ಮಕ ಆವರಣಗಳ ಸಂಕೀರ್ಣ ಚಿತ್ರಣ.
  •  ಪಂಚರಾತ್ರಾಗಮ ಪಂಚಾಗ್ನಿ ಯಾಗಶಾಲೆ – ಪಂಚರಾತ್ರ ಪರಂಪರೆಯ ಐದು ಪವಿತ್ರ ಅಗ್ನಿಗಳನ್ನು ಪ್ರತಿಬಿಂಬಿಸುವ, ಪ್ರಗತಿಶೀಲ ಅನುಷ್ಠಾನ ಕೊಠಡಿ.
  •  ಪಂಚಗವ್ಯ ಕ್ರಮಂ ಮತ್ತು ಪಂಚಾಮೃತ ಕ್ರಮಂ – ಶುದ್ಧೀಕರಣ ಹಾಗೂ ದೈವ ಅರ್ಪಣೆಗಳಿಗಾಗಿ, ಪವಿತ್ರ ಗೋವುಗಳಿಂದ ಪಡೆದ ಪದಾರ್ಥಗಳಿಂದ ಮಾಡುವ ತಯಾರಿಕೆಯ ವಿವರವಾದ ಪ್ರಸ್ತುತಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಜರ್ಮನ್ ಚಾನ್ಸೆಲರ್ ಜತೆ ಸಬರಮತಿ ಆಶ್ರಮದಲ್ಲಿ ಗಾಳಿಪಟ ಹಾರಿಸಿದ ಮೋದಿ
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಶಕ್ತಿ ಯೋಜನೆ ಎಫೆಕ್ಟ್​​​ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ 
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
ಬಿಗ್ ಬಾಸ್​ಗೆ ಮಲ್ಲಮ್ಮ; ಅಟ್ಯಾಚ್​​ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​