AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​ ಸಂದರ್ಭದಲ್ಲಿ ಸರ್ಕಾರಿ ಶಾಲೆಯಾಯ್ತು ಕಲರ್​ಫುಲ್ ಸ್ಕೂಲ್

ಧಾರವಾಡ: ಕೊರೊನಾ ಹಾವಳಿ ಶುರುವಾದಾಗಿನಿಂದ ವಿದ್ಯಾರ್ಥಿಗಳು, ಶಿಕ್ಷಕರು ಶಾಲೆ ಕಡೆಗೆ ಹೋಗಿಯೇ ಇಲ್ಲ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಇನ್ನೂ ಒಂದೆರಡು ತಿಂಗಳು ಇದೇ ರೀತಿ ಸಮಸ್ಯೆ ಮುಂದುವರೆಯುವ ಲಕ್ಷಣಗಳು ಕಂಡು ಬರುತ್ತಿವೆ. ಆದರೆ ಇಂಥ ಸಂದರ್ಭವನ್ನೇ ಬಳಸಿಕೊಂಡ ಧಾರವಾಡದ ಶಿಕ್ಷಕರೊಬ್ಬರು ತಮ್ಮ ಶಾಲೆಯನ್ನು ಸುಂದರಗೊಳಿಸೋ ಕೆಲಸದಲ್ಲಿ ತೊಡಗಿಕೊಂಡು ಜನರಿಗೆ ಅಚ್ಚರಿ ಮೂಡಿಸಿದ್ದಾರೆ. ಮಾರ್ಚ್ 24ರಿಂದ ದೇಶಾದ್ಯಂತ ಕೊರೊನಾ ಸೋಂಕಿನಿಂದಾಗಿ ಪ್ರಧಾನಿ ಮೋದಿ ಲಾಕ್‍ಡೌನ್‍ ಘೋಷಿಸಿದರು. ಅಲ್ಲಿಂದ ಇಂದಿನವರೆಗೂ ಯಾರೂ ಶಾಲೆಯತ್ತ ಸುಳಿದಿಲ್ಲ. ಆದರೆ ಧಾರವಾಡ ನಗರದ ನವಲಗುಂದ […]

ಲಾಕ್​ಡೌನ್​ ಸಂದರ್ಭದಲ್ಲಿ ಸರ್ಕಾರಿ ಶಾಲೆಯಾಯ್ತು ಕಲರ್​ಫುಲ್ ಸ್ಕೂಲ್
ಸಾಧು ಶ್ರೀನಾಥ್​
| Edited By: |

Updated on: Jun 09, 2020 | 2:20 PM

Share

ಧಾರವಾಡ: ಕೊರೊನಾ ಹಾವಳಿ ಶುರುವಾದಾಗಿನಿಂದ ವಿದ್ಯಾರ್ಥಿಗಳು, ಶಿಕ್ಷಕರು ಶಾಲೆ ಕಡೆಗೆ ಹೋಗಿಯೇ ಇಲ್ಲ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಇನ್ನೂ ಒಂದೆರಡು ತಿಂಗಳು ಇದೇ ರೀತಿ ಸಮಸ್ಯೆ ಮುಂದುವರೆಯುವ ಲಕ್ಷಣಗಳು ಕಂಡು ಬರುತ್ತಿವೆ. ಆದರೆ ಇಂಥ ಸಂದರ್ಭವನ್ನೇ ಬಳಸಿಕೊಂಡ ಧಾರವಾಡದ ಶಿಕ್ಷಕರೊಬ್ಬರು ತಮ್ಮ ಶಾಲೆಯನ್ನು ಸುಂದರಗೊಳಿಸೋ ಕೆಲಸದಲ್ಲಿ ತೊಡಗಿಕೊಂಡು ಜನರಿಗೆ ಅಚ್ಚರಿ ಮೂಡಿಸಿದ್ದಾರೆ.

ಮಾರ್ಚ್ 24ರಿಂದ ದೇಶಾದ್ಯಂತ ಕೊರೊನಾ ಸೋಂಕಿನಿಂದಾಗಿ ಪ್ರಧಾನಿ ಮೋದಿ ಲಾಕ್‍ಡೌನ್‍ ಘೋಷಿಸಿದರು. ಅಲ್ಲಿಂದ ಇಂದಿನವರೆಗೂ ಯಾರೂ ಶಾಲೆಯತ್ತ ಸುಳಿದಿಲ್ಲ. ಆದರೆ ಧಾರವಾಡ ನಗರದ ನವಲಗುಂದ ರಸ್ತೆಯ ಹೆಬ್ಬಳ್ಳಿ ಫಾರ್ಮ್​ನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮೌನೇಶ್ವರ ಕಮ್ಮಾರ ಮಾತ್ರ ಇದೇ ವೇಳೆಯಲ್ಲಿ ಶಾಲೆಗೆ ಬಣ್ಣ ಬಳಿದಿದ್ದಾರೆ. ಕೊರೊನಾ ಸಂದರ್ಭದಲ್ಲಿ ಜನರು, ಮಕ್ಕಳು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸಿದ್ದಾರೆ.

ಕಾಂಪೌಂಡ್ ಮೇಲೆ ಜಾಗೃತಿ ಮೂಡಿಸುವ ಕೆಲಸ: ಮಾಸ್ಕ್ ಧರಿಸಿ ಕೊರೊನಾ ಓಡಿಸಿ, ಕೈ ತೊಳೆಯಲು ಸ್ಯಾನಿಟೈಜರ್ ಉಪಯೋಗಿಸಿ, ಜೀವ ಜಲ ಅಮೂಲ್ಯ, ಅದು ಹಾಳಾಗದಂತೆ ಕಾಪಾಡಿ, ಸ್ವದೇಶಿ ಉತ್ಪನ್ನಗಳನ್ನು ಬಳಸಿ, ದೇಶವನ್ನು ಸದೃಢಗೊಳಿಸಿ ಅಂತಾ ಸಾರುವ ಚಿತ್ರಗಳಿಂದ ಹಿಡಿದು ವನ್ಯ ಜೀವಿ, ಜೀವ ಜಲದ ರಕ್ಷಣೆ ಬಗ್ಗೆ ಸಂದೇಶ ಸಾರುವಂತಹ ಚಿತ್ರಗಳನ್ನು ಶಾಲೆಯ ಕಾಂಪೌಂಡ್ ಮೇಲೆ ಬಿಡಿಸುವ ಮೂಲಕ ಮಕ್ಕಳು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.

ಲಾಕ್​ಡೌನ್ ಸಡಿಲಿಕೆಯಾಗುತ್ತಿದ್ದಂತೆಯೇ ಜನರು ದೂರದಿಂದ ನೋಡಿದರೂ ಅವರಿಗೆ ಸಂದೇಶ ಕಾಣುವಂತೆ ಹಾಗೂ ಅದು ಎಲ್ಲರಿಗೂ ಅರ್ಥವಾಗುವಂತಹ ಚಿತ್ರಗಳನ್ನು ಬಿಡಿಸಿದ್ದಾರೆ. ಇನ್ನು ಸಹೋದರರಾದ ನಾಗಲಿಂಗ ಲೋಹಾರ್, ಸೋಮಶೇಖರ್ ಗಣಮುಖಿ ಅವರ ಸಹಾಯದಿಂದ ಶಾಲೆಯ ಆವರಣದಲ್ಲಿರುವ ಉದ್ಯಾನವನ, ಶೌಚಾಲಯ, ಕೋಣೆಗಳನ್ನು ಸ್ವಚ್ಛಗೊಳಿಸುವ ಕೆಲಸವನ್ನು ಕೂಡ ಮಾಡಿದ್ದಾರೆ. ತಮ್ಮ ಸ್ವಂತ ಖರ್ಚಿನಲ್ಲಿಯೇ ಇದನ್ನೆಲ್ಲ ಮಾಡಿರೋ ಶಿಕ್ಷಕ ಕಮ್ಮಾರ್ ಅವರು ಶಾಲಾ ಆವರಣದಲ್ಲಿ ಬಾಳೆ ಗಿಡ ಸೇರಿದಂತೆ ಇತರೆ ಹೂ ಗಿಡಗಳನ್ನು ನೆಟ್ಟು ಉದ್ಯಾನವನವನ್ನು ನಿರ್ಮಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸುವ ಮೌನೇಶ್ವರ ಕಮ್ಮಾರ್ ಅವರು ಪ್ರತಿಯೊಬ್ಬರಿಗೂ ನಮ್ಮ ಶಾಲೆ, ನಮ್ಮ ಮಕ್ಕಳು ಎನ್ನುವ ಹೆಮ್ಮೆ ಇರಬೇಕು. ಅಂದಾಗ ಮಾತ್ರ ಶಾಲೆಯಲ್ಲಿ ಏನಾದರೂ ಇತರೆ ಚಟುವಟಿಕೆಗಳ ಕಾರ್ಯಗಳು ಬರಲು ಸಾಧ್ಯವಾಗಲಿದೆ. ನಮ್ಮ ಶಾಲೆಗೆ ನಮ್ಮ ಕೈಲಿಂದ ಸಾಧ್ಯವಾದಷ್ಟು ಕೆಲಸ ಮಾಡಿದ್ದೇವೆ ಅಷ್ಟೇ. ಶಾಲೆ ಸ್ವಚ್ಛವಾಗಿದ್ದರೆ ಕಲಿಕಾ ವಾತಾವರಣ ಚೆನ್ನಾಗಿರಲಿದೆ ಎನ್ನುತ್ತಾರೆ.

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್