ಸೌಹಾರ್ದತೆಗೆ ಸಾಕ್ಷಿಯಾದ ಅಡ್ಡಪಲ್ಲಕ್ಕಿ ಉತ್ಸವ, ಜಾತಿ-ಮತ ಮರೆತು ಶ್ರೀಗಳ ದರ್ಶನ ಪಡೆದ ಮುಸ್ಲಿಂ ಮುಖಂಡರು!
Hindu Muslim devotees: ಇಂದು ಬೆಳಗ್ಗೆ ಹಿಂದೂ ಮುಸ್ಲಿಂ ಸಮುದಾಯದ ಜನರು ತಮ್ಮ ತಮ್ಮ ಮನೆಯ ಆವರಣದಲ್ಲಿ ಸಾರಿಸಿ, ಸ್ವಚ್ಛಗೊಳಿಸಿ ರಂಗೋಲಿ ಹಾಕಿದ್ದರು. ಅಲ್ಲದೇ ಅಡ್ಡಪಲ್ಲಕ್ಕಿ ಮನೆಯ ಮುಂದೆ ಬರುತ್ತಿದ್ದಂತೆಯೇ ಮುಸ್ಲಿಂ ಸಮುದಾಯದ ಮುಖಂಡರೊಬ್ಬರು ಶ್ರೀಗಳ ದರ್ಶನ ಪಡೆದು ಶ್ರೀಗಳಿಗೆ ಗೌರವ ಅರ್ಪಣೆ ಮಾಡಿದರು.
ಹುಬ್ಬಳ್ಳಿ: ಕೇಸರಿ ಶಾಲು, ಹಿಜಾಬ್ ವಿವಾದದಿಂದ ಜನರ ಸೌಹಾರ್ದತೆಗೆ ಧಕ್ಕೆ ಉಂಟು ಮಾಡುತ್ತಿರುವ ಕೆಲ ಘಟನೆಗಳ ಮಧ್ಯೆಯೇ ಹುಬ್ಬಳ್ಳಿಯು ಹಿಂದೂ ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾಗಿದೆ. ಹೌದು… ಹಳೆ ಹುಬ್ಬಳ್ಳಿಯ ಹಿರೇಪೇಟೆಯಲ್ಲಿ (Hubballi) ಹಮ್ಮಿಕೊಳ್ಳಲಾಗಿದ್ದ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವದಲ್ಲಿ (Balehonnur Rambhapuri Adda Pallakki) ಹಿಂದೂ ಮುಸ್ಲಿಂ ಎಂಬ ಬೇಧವನ್ನು ಮರೆತು ಉತ್ಸವದಲ್ಲಿ ಪಾಲ್ಗೊಂಡಿರುವುದು ನಿಜಕ್ಕೂ ಸೌಹಾರ್ದತೆಗೆ ಸಾಕ್ಷಿಯಾಗಿದೆ. ಇಸ್ಲಾಂ ಧರ್ಮದ ಪವಿತ್ರ ರಂಜಾನ್ ತಿಂಗಳಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಆಚರಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆಯುವ ಮೂಲಕ ನಾವೆಲ್ಲರೂ (Hindu Muslim devotees) ಒಂದೇ ಎಂಬ ಸಂದೇಶವನ್ನು ಸಾರಿದ್ದಾರೆ.
ಇಂದು ಬೆಳಗ್ಗೆ ಹಿಂದೂ ಮುಸ್ಲಿಂ ಸಮುದಾಯದ ಜನರು ತಮ್ಮ ತಮ್ಮ ಮನೆಯ ಆವರಣದಲ್ಲಿ ಸಾರಿಸಿ, ಸ್ವಚ್ಛಗೊಳಿಸಿ ರಂಗೋಲಿ ಹಾಕಿದ್ದರು. ಅಲ್ಲದೇ ಅಡ್ಡಪಲ್ಲಕ್ಕಿ ಮನೆಯ ಮುಂದೆ ಬರುತ್ತಿದ್ದಂತೆಯೇ ಮುಸ್ಲಿಂ ಸಮುದಾಯದ ಮುಖಂಡರೊಬ್ಬರು ಶ್ರೀಗಳ ದರ್ಶನ ಪಡೆದು ಶ್ರೀಗಳಿಗೆ ಗೌರವ ಅರ್ಪಣೆ ಮಾಡಿದರು. ಇದೇ ಸಂದರ್ಭದಲ್ಲಿ ಶ್ರೀಗಳು ಪ್ರಸಾದ ನೀಡುವ ಮೂಲಕ ಜಾತಿ ಮತ ಬೇಧವನ್ನು ಮರೆತು ಎಲ್ಲರೂ ಒಂದಾಗಿ ಬಾಳುವಂತೆ ಸಲಹೆ ನೀಡಿದರು. -ರಹಮತ್ ಕಂಚಗಾರ್, ಟಿವಿ 9, ಹುಬ್ಬಳ್ಳಿ
ರಥೋತ್ಸವದ ವೇಳೆಯೇ ಕಳಚಿ ಬಿದ್ದ ಕಳಶ- ಪ್ರಾಣದ ಹಂಗು ತೊರೆದು ಕಳಶವನ್ನು ಕಾಪಾಡಿದ ಯುವಕನಿಗೆ ಸನ್ಮಾನ! ವಿಜಯನಗರ: ನೂತನ ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದಲ್ಲಿ ನಿನ್ನೆ ಜರುಗಿದ ಶ್ರೀ ಸಣ್ಣಕ್ಕಿ ವೀರಭದ್ರೇಶ್ವರ ಸ್ವಾಮಿ ರಥೋತ್ಸವ ಸಂದರ್ಭದಲ್ಲಿ ಕಳಶ ಕಾಪಾಡಿದ ಯುವಕನಿಗೆ ಅಭಿನಂದಿಸಿ ಸನ್ಮಾನಿಸಲಾಯಿತು. ಹೊಸಪೇಟೆ ನಗರದ ವಡಕರಾಯ ದೇವಸ್ಥಾನ ಪ್ರದೇಶದ ನಿವಾಸಿಯಾದ ಸಂಗಪ್ಪ ವಡಕರಾಯ ಅವರ ಪುತ್ರ ಸಂಜು ಎಂಬ ಯುವಕ ಪ್ರಾಣದ ಹಂಗು ತೊರೆದು ನಿನ್ನೆ ರಥೋತ್ಸವ ಸಂಪನ್ನ ಆಗುವವರೆಗೂ ರಥವನ್ನೇರಿ ಕಳಚಿದ ಕಳಶವನ್ನು ಹಿಡಿದುಕೊಂಡೇ ಕಳಶ ಕಾಪಾಡಿದ್ದ. ಹೀಗಾಗಿ ಜೀವದ ಹಂಗು ತೊರೆದು ಕಳಶ ಕಾಪಾಡಿದ ಯುವಕನಿಗೆ ಇಂದು ಸಮಾಜದ ಮುಖಂಡರು, ಭಕ್ತರು ಸನ್ಮಾನ ಮಾಡಿ ಯುವಕನ ಧೈರ್ಯವನ್ನ ಕೊಂಡಾಡಿದರು.
ಘಟನೆ ಏನು: ಹೊಸಪೇಟೆಯ ಸಣ್ಣಕ್ಕಿ ವೀರಭದ್ರೇಶ್ವರ ರಥೋತ್ಸವದ ವೇಳೆ ಅವಘಡವೊಂದು ಸಂಭವಿಸಿತ್ತು. ನಿನ್ನೆ ಸಂಜೆ ಜರುಗಿದ ರಥೋತ್ಸವ ವೇಳೆ ಹೊಸ ತೇರಿನ ಮೇಲೆ ಅಳವಡಿಸಿದ ಕಳಸ ಕಳಚಿ ಬಿದ್ದಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿತ್ತು. ಪ್ರತಿ ವರ್ಷದಂತೆ ಯುಗಾದಿ ಪಾಡ್ಯದಂದು ಜರುಗುವ ಹೊಸಪೇಟೆ ಪಟ್ಟಣದಲ್ಲಿನ ಸಣ್ಣಕ್ಕಿ ವೀರಭದ್ರೇಶ್ವರ ಜಾತ್ರಾ ಮಹೋತ್ಸವವು ಕೊವಿಡ್ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ನಡೆದಿರಲಿಲ್ಲ. ಆದ್ರೆ ಈ ವರ್ಷ ಹೊಸ ತೇರಿನಲ್ಲಿ ರಥೋತ್ಸವ ಜರುಗಿದ ವೇಳೆ ಸಾವಿರಾರು ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗಿದ್ದರು. ಆದರೆ ರಥ ಎಳೆಯುವ ವೇಳೆ ತೇರಿನ ಮೇಲಿದ್ದ ಕಳಶ ಕಳಚಿ ಬಿದ್ದಿತ್ತು.
ಸಾವಿರಾರು ಭಕ್ತರು ರಥ ಎಳೆಯುವ ವೇಳೆ ೫೦ ಮೀಟರ್ ದೂರ ರಥೋತ್ಸವ ಸಾಗುತ್ತಿದ್ದಂತೆ ತೇರಿನ ಮೇಲಿದ್ದ ಕಳಸ ಕಳಚಿ ಬಿದ್ದಿತ್ತು. ಈ ವೇಳೆ ರಥದಲ್ಲಿದ್ದ ಕೆಲ ಯುವಕರು ರಥದ ಮೇಲೆ ಹತ್ತಿ ಕಳಶ ಸರಿಪಡಿಸಿ ಮರಳಿ ರಥವನ್ನ ಎಳೆದಿದ್ದರು.
ರಥೋತ್ಸವಕ್ಕೂ ಮುನ್ನ ತೇರಿನ ಕಳಸ ಕಟ್ಟುವವರ ನಿರ್ಲಕ್ಷ್ಯದಿಂದ ಅಚಾತುರ್ಯ ಸಂಭವಿಸಿದೆ ಎಂದು ದೇವಾಲಯದ ಸಮಿತಿ ಸ್ಪಷ್ಟನೆ ನೀಡಿತು. ಅಲ್ಲದೇ ಭಕ್ತರು ಯಾವುದೇ ಆತಂಕ ಪಡುವ ಅವಶ್ಯಕತೆಯಿಲ್ಲ. ಇದೊಂದು ಆಕಸ್ಮಿಕ ಘಟನೆಯಾಗಿದೆ ಎಂದು ಹಂಪಿ ಶ್ರೀವಿರೂಪಾಕ್ಷೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಾಥಶರ್ಮ ತಿಳಿಸಿದರು. ಆದರೂ ರಥ ಎಳೆಯುವ ವೇಳೆ ಕಳಸ ಕೆಳಗೆ ಬಿದ್ರೆ ಅದೊಂದು ಅಪಶಕುನ ಎನ್ನುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ.
Also Read:ಖಾನಾಪುರ ಬಳಿ ಕಾರು ಪಲ್ಟಿಯಾಗಿ ತಂದೆ ಮಗ ಸಾವು; ಈಜುಬಾರದಿದ್ದರೂ ಕಾಲುವೆಗೆ ಇಳಿದ ವಿದ್ಯಾರ್ಥಿ ನೀರುಪಾಲು
Published On - 8:30 pm, Mon, 4 April 22