ವಿಶ್ವದಲ್ಲೆ ಅತಿ ಉದ್ದದ ರೈಲ್ವೆ ಫ್ಲಾಟ್ ಫಾರ್ಮ್, ಸ್ವಚ್ಛತೆಯಲ್ಲಿಯೂ ಮೊದಲ ಸ್ಥಾನ ಪಡೆದು ಸೈ ಅನ್ನಿಸಿಕೊಂಡಿದೆ- ಇದು ಉತ್ತರ ಕರ್ನಾಟಕ ಜನತೆಯ ಹೆಮ್ಮೆ

ಪ್ಲಾಸ್ಟಿಕ್ ಅಸುರ ಅಂದ್ರೆ ಬೆಂಗಳೂರ ರೇಲ್ವೆ ನಿಲ್ದಾಣದಲ್ಲಿ ಪ್ಲಾಸ್ಟಿಕ್ ನಲ್ಲಿಯೇ ರಾವಣನ ವೇಷ ಹಾಕಿ ಜಾಗೃತಿ ಮೂಡಿಸಿದ್ದು,ಇನ್ನೊಂದು ರೇಲ್ವೆ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್ ಗಳಿಂದಲೇ ಪ್ರಯಾಣಿಕರು ಎಸೆಯಲ್ಪಟ್ಟ ನೀರಿನ ಬಾಟಲ್ ಕಲೆಕ್ಟ್ ಮಾಡಿ ಭೂಮಿಯ ಆಕೃತಿ ರಚಿಸಲಾಗಿತ್ತು. ಈ ಮೂಲಕ ಪ್ಲಾಸ್ಟಿಕ್ ಭೂಮಿಗೆ ಹೇಗೆ ಕಂಟಕವಾಗತ್ತೆ ಅನ್ನೋದನ್ನ ತೋರಿಸಲಾಗಿತ್ತು. ಈ ಎರಡು ಅಭಿಯಾನಗಳು ವಿಶೇಷ ಅನಿಸಿದ ಹಿನ್ನೆಲೆಯಲ್ಲಿ ಮೊದಲ ಪ್ರಶಸ್ತಿ ಸಿಕ್ಕಿದೆ

ವಿಶ್ವದಲ್ಲೆ ಅತಿ ಉದ್ದದ ರೈಲ್ವೆ ಫ್ಲಾಟ್ ಫಾರ್ಮ್, ಸ್ವಚ್ಛತೆಯಲ್ಲಿಯೂ ಮೊದಲ ಸ್ಥಾನ ಪಡೆದು ಸೈ ಅನ್ನಿಸಿಕೊಂಡಿದೆ- ಇದು ಉತ್ತರ ಕರ್ನಾಟಕ ಜನತೆಯ ಹೆಮ್ಮೆ
ಸ್ವಚ್ಛತೆಯಲ್ಲಿಯೂ ಮೊದಲ ಸ್ಥಾನ ಪಡೆದ ಹುಬ್ಬಳ್ಳಿ ರೈಲ್ವೆ ನಿಲ್ದಾಣ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಸಾಧು ಶ್ರೀನಾಥ್​

Updated on:Nov 17, 2023 | 6:25 PM

ಅದು ವಿಶ್ವದಲ್ಲೆ ಉದ್ದದ ಫ್ಲಾಟ್ ಫಾರ್ಮ್ ಹೊಂದಿದ ರೈಲ್ವೆ ನಿಲ್ದಾಣ… ಆ ರೈಲ್ವೆ ನಿಲ್ದಾಣದಿಂದ ನಿತ್ಯ ಸಾವಿರಾರು ಪ್ರಯಾಣಿಕರು ಪ್ರಯಾಣ ಮಾಡ್ತಾರೆ. ಆ ರೈಲ್ವೆ ನಿಲ್ದಾಣಕ್ಕೆ ದಿನಕ್ಕೆ ಸುಮಾರು 50 ಕ್ಕೂ ಹೆಚ್ಚು ಟ್ರೇನ್ ಬಂದು ಹೋಗುತ್ತವೆ. ಪ್ರಮುಖ ವಾಣಿಜ್ಯ ನಗರಗಳಿಗೆ ಸಂಪರ್ಕ ಕಲ್ಪಿಸೋ ರೈಲ್ವೆ ನಿಲ್ದಾಣವದು. ಆ ರೈಲ್ವೆ ನಿಲ್ದಾಣ ಇದೀಗ ಸತತ ಎರಡು ವರ್ಷಗಳ ಕಾಲ ಸ್ವಚ್ಛತೆಯಲ್ಲಿ ಮೊದಲ ಸ್ಥಾನ ಪಡದುಕೊಂಡಿದೆ. 17 ರೈಲ್ವೆ ವಲಯಗಳ ಪೈಕಿ ಆ ರೈಲ್ವೆ ವಲಯಕ್ಕೆ ಸತತ ಎರಡು ವರ್ಷಗಳ ಕಾಲ ಮೊದಲನೇ ಸ್ಥಾನ ಸಿಕ್ಕಿದೆ. ಅಷ್ಟಕ್ಕೂ ಅತೀ ಉದ್ದದ ಪ್ಲಾಟ್ ಫಾರ್ಮ್ ಹೊಂದಿದೆ. ಸ್ವಚ್ಛತೆಯಲ್ಲಿ ಮೊದಲ ಸ್ಥಾನ ಪಡೆದ (swachhta abhiyan) ರೈಲು ನಿಲ್ದಾಣ ಯಾವದೂ ಅಂತೀರಾ ಈ ಸ್ಟೋರಿ ನೋಡಿ. ಒಂದು ಕಡೆ ರೈಲು ನಿಲ್ದಾಣದಲ್ಲಿ ಸ್ವಚ್ಛಗೊಳಿಸ್ತಿರೋ ಕಾರ್ಮಿಕರು… ಟ್ರ್ಯಾಕ್ ನಲ್ಲೂ ಪ್ರತಿ ಗಂಟೆಗೊಮ್ಮೆ ಕ್ಲೀನಿಂಗ್ ಮಾಡ್ತಿರೋ ಕಾರ್ಮಿಕರು.. ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತೆಗಾಗಿ ವಿವಿಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರೋ ದೃಶ್ಯ. ಹೌದು ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿಯಲ್ಲಿ… ಹುಬ್ಬಳ್ಳಿಯ ಶ್ರೀ ಸಿದ್ದಾರೂಢರ ರೈಲ್ವೆ ನಿಲ್ದಾಣ (Hubballi siddaruda railway junction) ಈಗ ಮತ್ತೊಂದು ಅವಾರ್ಡ್ ಪಡೆದಿದ್ದು, ಸ್ವಚ್ಛತಾ ಪಾಕ್ಷಿಕ 2023 ರಲ್ಲಿ ನೈಋತ್ಯ ರೈಲ್ವೆ ಮೊದಲ ಸ್ಥಾನ ಪಡೆದುಕೊಂಡಿದೆ.

ಕಳೆದ ವರ್ಷವೂ ನೈಋತ್ಯ ರೈಲ್ವೆ ವಲಯ ಮೊದಲ ಸ್ಥಾನ ಪಡೆದುಕೊಂಡಿತ್ತು. ಸತತ ಎರಡು ವರ್ಷಗಳ ಕಾಲ ನೈಋತ್ಯ ರೈಲ್ವೆ ವಲಯ ಸ್ವಚ್ಛತೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಸ್ವಚ್ಚತಾ ಪಾಕ್ಷಿಕ 2023 ರಲ್ಲಿ ನೈಋತ್ಯ ರೈಲ್ವೆ ಮೊದಲ ಸ್ಥಾನ ಪಡೆದುಕೊಂಡರೆ, ಈಶ್ಯಾನ ಹಾಗೂ ದಕ್ಷಿಣ ಮಧ್ಯ ರೈಲ್ವೆ ಎರಡು ಹಾಗೂ ಮೂರನೇ ಸ್ಥಾನ ಗಳಿಸಿವೆ.

ಇದೇ ಸೆಪ್ಟೆಂಬರ್ ತಿಂಗಳಿನಲ್ಲಿ ಸ್ವಚ್ಛತಾ ಪಾಡಾ 2023 ಅಭಿಯಾನ ಆರಂಭವಾಗಿತ್ತು. ಈ ಅಭಿಯಾನದಲ್ಲಿ ರೈಲ್ವೆ ಇಲಾಖೆಯ ರೈಲ್ವೆ ನಿಲ್ದಾಣ , ರೈಲ್ವೆ ಹಳಿಗಳು , ಕಚೇರಿಗಳು ಸ್ವಚ್ಛವಾಗಿಡುವುದು, ಪ್ರಯಾಣಿಕರ ಹಾಗೂ ರೈಲ್ವೆ ಸಿಬ್ಬಂದಿಗಳನ್ನು ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ದಿನನಿತ್ಯದ ವರದಿಗಳ ಮೌಲ್ಯಮಾಪನದ ಆಧಾರದ ಮೇಲೆ ನೈಋತ್ಯ ರೈಲ್ವೆಯು ಎಲ್ಲಾ ವಲಯ ರೈಲ್ವೆ ಗಳಲ್ಲಿ ಅತ್ಯುತ್ತಮವೆಂದು ಗುರುತಿಸಲ್ಪಟ್ಟಿದೆ.

ಗಾಂಧಿ ಜಯಂತಿ ಹಿನ್ನೆಲೆ ಒಂದು ತಿಂಗಳ ಕಾಲ ಸ್ವಚ್ಛತಾ ಪಾಕ್ಷಿಕ ಅಭಿಯಾನವನ್ನು ಹಮ್ಮಿಕೊಳ್ಳಲಾಗತ್ತೆ. ಇದೀಗ 17 ವಲಯಗಳ ಪೈಕಿ ನೈಋತ್ಯ ರೈಲ್ವೆ ವಲಯ ಮೊದಲ ಸ್ಥಾನ ಪಡೆದುಕೊಂಡಿದೆ. ಪ್ರತಿ ವರ್ಷ ಭಾರತ ಸರ್ಕಾರ ಸ್ವಚ್ಛತೆಯೆ ಸೇವೆ ಅಡಿಯಲ್ಲಿ ಸ್ವಚ್ಛತಾ ಪಾಕ್ಷಿಕ ಆಚರಣೆ ಮಾಡಲಾಗತ್ತೆ. ಒಂದು ತಿಂಗಳ ಕಾಲ ಜಾಗೃತಿ ಅಭಿಯಾನ ಮೂಡಿಸೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗತ್ತೆ. ಈ ಬಾರಿ ವಿನೂತನವಾಗಿ ಪ್ಲಾಸ್ಟಿಕ್ ಅಸುರ ಅನ್ನೋ ಅಭಿಯಾನ ಹಮ್ಮಿಕೊಂಡಿತ್ತು.

ಪ್ಲಾಸ್ಟಿಕ್ ಅಸುರ ಅಂದ್ರೆ ಬೆಂಗಳೂರ ರೇಲ್ವೆ ನಿಲ್ದಾಣದಲ್ಲಿ ಪ್ಲಾಸ್ಟಿಕ್ ನಲ್ಲಿಯೇ ರಾವಣನ ವೇಷ ಹಾಕಿ ಜಾಗೃತಿ ಮೂಡಿಸಿದ್ದು,ಇನ್ನೊಂದು ರೇಲ್ವೆ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್ ಗಳಿಂದಲೇ ಪ್ರಯಾಣಿಕರು ಎಸೆಯಲ್ಪಟ್ಟ ನೀರಿನ ಬಾಟಲ್ ಕಲೆಕ್ಟ್ ಮಾಡಿ ಭೂಮಿಯ ಆಕೃತಿ ರಚಿಸಲಾಗಿತ್ತು. ಈ ಮೂಲಕ ಪ್ಲಾಸ್ಟಿಕ್ ಭೂಮಿಗೆ ಹೇಗೆ ಕಂಟಕವಾಗತ್ತೆ ಅನ್ನೋದನ್ನ ತೋರಿಸಲಾಗಿತ್ತು. ಈ ಎರಡು ಅಭಿಯಾನಗಳು ವಿಶೇಷ ಅನಿಸಿದ ಹಿನ್ನೆಲೆಯಲ್ಲಿ ಮೊದಲ ಪ್ರಶಸ್ತಿ ಸಿಕ್ಕಿದೆ ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ್ ಹೆಗಡೆ ತಿಳಿಸಿದ್ದಾರೆ.

ಇದನ್ನೂ ಓದಿ: ಭರದಿಂದ ಸಾಗಿದೆ ರೈಲ್ವೆ ಡಬ್ಲಿಂಗ್ ಕಾಮಗಾರಿ: ಈ ರೈಲುಗಳ ಮಾರ್ಗ ಬದಲಾವಣೆಯಾಗಿದೆ, ಗಮನಿಸಿ

ಸೆಪ್ಟೆಂಬರ್ 16 ರಂದು ಬೆಂಗಳೂರಿನ ಕೆಎಸ್‌ಆರ್‌ ರೈಲ್ವೆ ನಿಲ್ದಾಣದಲ್ಲಿ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಸ್ವಚ್ಛತಾ ಪಾಕ್ಷಿಕ -2023 ಗೆ ಚಾಲನೆ ನೀಡಿದ್ದರು. ರೈಲ್ವೆ ನಿಲ್ದಾಣಗಳು ಮತ್ತು ಇತರ ಆವರಣಗಳಲ್ಲಿ ಸ್ವಚ್ಛತಾ ಚಟುವಟಿಕೆಗಳನ್ನು ಹೆಚ್ಚಿಸಲು ಸಕ್ರಿಯವಾಗಿ ಭಾಗವಹಿಸಿದವು. ನೈಋತ್ಯ ರೈಲ್ವೆ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು 915 ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಈ ಅಭಿಯಾನದಲ್ಲಿ 23,744 ಜನರು ಭಾಗವಹಿಸಿದ್ದು, ಬರೊಬ್ಬರಿ 5.27 ಕೋಟಿ ಚ.ಕಿ ಪ್ರದೇಶ ಸ್ವಚ್ಛಗೋಳಿಸಿದ್ದಾರೆ. ಈ ಸ್ವಚ್ಚತಾ ಅಭಿಯಾನದಲ್ಲಿ 252 ಮರಗಳ ನೆಟ್ಟು , 17 ಟನ್ ಪ್ಲಾಸ್ಟಿಕ್ ತೆಗೆಯಲಾಗಿದೆ, 22 ಟನ್ ತ್ಯಾಜ್ಯ ಸಂಗ್ರಹಿಸಲಾಗಿದೆ. ಸ್ವಚ್ಛತೆ ಕುರಿತು ರೈಲ್ವೆ ನಿಲ್ದಾಣಗಳಲ್ಲಿ ನಾಟಕ ಮಾಡುವ ಮೂಲಕ ಜಾಗೃತಿ ಮೂಡಿಸಲಾಗಿದೆ. ಪ್ರಯಾಣಿಕರಿಗೆ ಬಿತ್ತಿ ಪತ್ರ ಹಾಗೂ ಕರ ಪತ್ರ ಹಂಚಲಾಗಿದೆ. ನೈಋತ್ಯ ರೈಲ್ವೆ ಈ ಸಾಧನೆಗೆ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ ಭಾಗವಹಿಸಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

ನೈಋತ್ಯ ರೈಲ್ವೆ ವಲಯ ಮೊದಲ ಸ್ಥಾನ ಪಡದುಕೊಂಡಿದ್ದನ್ನು ಸಚಿವಾಲಯ ಖಚಿತ ಪಡಿಸಿದ್ದು.ನೈಋತ್ಯ ರೈಲ್ವೆ ವಲಯಕ್ಕೆ ಅಧಿಕೃತ ದಾಖಲೆ ಕಳಿಸಿದೆ..ಭಾರತದ ಎಲ್ಲ ರೈಲ್ವೆ ವಲಯಗಳ ಪೈಕಿ ನೈಋತ್ಯ ರೈಲ್ವೆ ವಲಯ ಮೊದಲ ಸ್ಥಾನ ಪಡೆದುಕೊಂಡಿದೆ..ಹುಬ್ಬಳ್ಳಿ ರೈಲ್ವೆ ನಿಲಯದ ಸ್ವಚ್ಛತೆ ಕಂಡು ಪ್ರಯಾಣಿಕರು ಸಹಿತ ಖುಷಿಯಾಗಿದ್ದಾರೆ.

ಒಟ್ಟಾರೆ ಹುಬ್ಬಳ್ಳಿಯ ಸಿದ್ದಾರೂಡ ರೇಲ್ವೆ ನಿಲ್ದಾಣಕ್ಕೆ ಮತ್ತೊಂದು ಗರಿ ಸಿಕ್ಕಿದೆ.ವಿಶ್ವದಲ್ಲಿಯೇ ಅತೀ ಉದ್ದದ ಫ್ಲಾಟ್ ಫಾರ್ಮ್​​ ಹೊಂದಿದ ರೈಲ್ವೆ ನಿಲ್ದಾಣ ಇದೀಗ ಸ್ವಚ್ಛತೆಯಲ್ಲೂ ಮನ ಸೆಳೆದಿದೆ. ಸತತ ಎರಡು ವರ್ಷಗಳ ಕಾಲ ನೈಋತ್ಯ ರೈಲ್ವೆ ವಲಯ ಮೊದಲ ಸ್ಥಾನ ಪಡೆದುಕೊಂಡಿದ್ದು ಉತ್ತರ ಕರ್ನಾಟಕ ಜನರಿಗೂ ಹೆಮ್ಮೆ ತಂದಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:24 pm, Fri, 17 November 23