ಹುಬ್ಬಳ್ಳಿ: ಹೂತಿಟ್ಟ ಕೋತಿ ಮೃತದೇಹ ತೆಗೆಯಲು ಮೌಲ್ವಿ ಯತ್ನ; ಗ್ರಾಮಸ್ಥರ ವಿರೋಧ
ಹುಬ್ಬಳ್ಳಿ(Hubballi) ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ಮೌಲ್ವಿಯೊಬ್ಬ ಹೂತಿಟ್ಟ ಕೋತಿ ಮೃತದೇಹವನ್ನ(monkey Deadbody) ತೆಗೆಯಲು ಯತ್ನಿಸಿದ ಘಟನೆ ನಡೆದಿದ್ದು, ಈ ವೇಳೆ ಅದನ್ನು ವಿರೋಧಿಸಿದ ಗ್ರಾಮಸ್ಥರು, ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸದ್ಯ ಇಮಾಮ್ ಸಾಬ್ನನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹುಬ್ಬಳ್ಳಿ, ಮಾ.31: ಹೂತಿಟ್ಟ ಕೋತಿ ಮೃತದೇಹವನ್ನ(monkey Deadbody) ತೆಗೆಯಲು ಮೌಲ್ವಿಯೊಬ್ಬ ಯತ್ನಿಸಿದ್ದು, ಅದಕ್ಕೆ ಗ್ರಾಮಸ್ಥರು ವಿರೋಧಿಸಿದ ಘಟನೆ ಹುಬ್ಬಳ್ಳಿ(Hubballi) ತಾಲೂಕಿನ ಬ್ಯಾಹಟ್ಟಿ ಗ್ರಾಮದಲ್ಲಿ ನಡೆದಿದೆ. ಬ್ಯಾಹಟ್ಟಿಯ ಮೌಲ್ವಿ ಇಮಾಮ್ ಸಾಬ್ ತಡಸ ಎಂಬುವವರು ಅದೇ ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ಹೂತಿಟ್ಟಿದ್ದ ಕೋತಿ ಮೃತದೇಹವನ್ನು ತಗೆಯುವ ವೇಳೆ ಅದನ್ನು ವಿರೋಧಿಸಿದ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಅದನ್ನು ಪ್ರಶ್ನಿಸಿದ ಜನರಿಗೆ ಮೌಲ್ವಿ ಇಮಾಮ್ ಸಾಬ್, ‘ಔಷಧಿಗಾಗಿ ಕೋತಿ ಬೇಕು ಎಂದು ಹೇಳಿದ್ದಾರೆ. ಸದ್ಯ ಇಮಾಮ್ ಸಾಬ್ನನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೀದರ್ ಪೋಲಿಸ್ ಇಲಾಖೆಯ ಹೆಮ್ಮೆಯ ಶ್ವಾನ ಬ್ರೂನೊ ಸಾವು
ಬೀದರ್: ಪೋಲಿಸ್ ಇಲಾಖೆಯ ಹೆಮ್ಮೆಯ ಶ್ವಾನ ಬ್ರೂನೊ ಇಂದು(ಮಾ.31) ಸಾವನ್ನಪ್ಪಿದೆ. ಸತತ ಹತ್ತು ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಶ್ವಾನ ಇದಾಗಿದ್ದು, ಮೈಸೂರು ದಸರಾ ಕರ್ತವ್ಯದಲ್ಲಿ ಭಾಗಿಯಾಗಿತ್ತು. ಜೊತೆಗೆ ವಲಯ ಮಟ್ಟದ ಕರ್ತವ್ಯ ಕೂಟದಲ್ಲಿ ಮೂರು ಸಲ ಮೊದಲನೆಯ ಸ್ಥಾನ ಮತ್ತು ಐದು ಸಲ ಎರಡನೇ ಸ್ಥಾನ ಪಡೆದ ಹೆಗ್ಗಳಿಕೆಗೆ ಶ್ವಾನ ಬ್ರೂನೊ ಪಾತ್ರವಾಗಿತ್ತು. ಇನ್ನು ಪೊಲೀಸ್ ಗೌರವದೊಂದಿಗೆ ಶ್ವಾನ ಬ್ರೂನೊ ಅಂತ್ಯಸಂಸ್ಕಾರ ಮಾಡಲಾಯಿತು. ಈ ವೇಳೆಎಸ್ಪಿ ಚೆನ್ನಬಸವಣ್ಣ, ಡಿ.ಸಿ. ಗೋವಿಂದ ರೆಡ್ಡಿ ಭಾಗಿಯಾಗಿದ್ದರು.

ಬೆಂಗಳೂರಿನ ಕಾಡುಗೋಡಿ ಅರಣ್ಯ ಪ್ರದೇಶದಲ್ಲಿ ಅಗ್ನಿ ಅವಘಡ
ಬೆಂಗಳೂರು: ವೈಟ್‌ಫೀಲ್ಡ್ ಮುಖ್ಯರಸ್ತೆಯ ಐಟಿಪಿಎಲ್ ಮುಂಭಾಗದಲ್ಲಿರುವ ಅರಣ್ಯದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ದಟ್ಟವಾದ ಹೊಗೆಯಿಂದ ಕೂಡಿದೆ. ಸುಮಾರು 700 ಎಕರೆ ವ್ಯಾಪ್ತಿಯಲ್ಲಿರೋ ಅರಣ್ಯ ಪ್ರದೇಶ ಇದಾಗಿದ್ದು, ಕಾಡಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:29 pm, Sun, 31 March 24



