ಪ್ರಯಾಣಿಕರ ಗಮನಕ್ಕೆ: ಹುಬ್ಬಳ್ಳಿ-ವಿಜಯಪುರ ಮಧ್ಯೆ ರೈಲು ಸಂಚಾರ 5 ದಿನ ರದ್ದು
ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಸುರಕ್ಷತಾ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಹುಬ್ಬಳ್ಳಿ-ವಿಜಯಪುರ ಮತ್ತು ಗದಗ-ವಿಜಯಪುರ ರೈಲು ಮಾರ್ಗಗಳಲ್ಲಿ ರೈಲು ಸಂಚಾರವನ್ನು ರದ್ದು ಅಥವಾ ಭಾಗಶಃ ರದ್ದು ಮಾಡಿದೆ. ಏಪ್ರಿಲ್ 20 ರಿಂದ 25ರವರೆಗೆ ಹಲವಾರು ರೈಲುಗಳ ಸಂಚಾರ ರದ್ದಾಗಿವೆ. ಯಾವ್ಯಾವ ರೈಲುಗಳು ರದ್ದಾಗಿವೆ? ಇಲ್ಲಿದೆ ಮಾಹಿತಿ

ಹುಬ್ಬಳ್ಳಿ, ಏಪ್ರಿಲ್ 19: ನೈಋತ್ಯ ರೈಲ್ವೆಯು (South Western Railway) ಬಾಗಲಕೋಟೆ (Bagalkot) ರೈಲು ನಿಲ್ದಾಣದಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ವಿಜಯಪುರ (Hubblli-Vijayapura) ಮಧ್ಯೆ ಸಂಚರಿಸುವ ಕೆಲ ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ. ಇನ್ನು, ಗದಗ-ವಿಜಯಪುರ ಮಧ್ಯೆ ಸಂಚರಿಸುವ ಕೆಲ ರೈಲುಗಳ ಸಂಚಾರವನ್ನು ಭಾಗಶಃ ರದ್ದು ಮಾಡಲಾಗಿದೆ. ಯಾವ್ಯಾವ ರೈಲುಗಳ ಸಂಚಾರ ರದ್ದು ಮಾಡಲಾಗಿದೆ ಇಲ್ಲಿದೆ ವಿವರ.
ರೈಲು ರದ್ದು
- ರೈಲು ಸಂಖ್ಯೆ 06920: ವಿಜಯಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ ರೈಲು ಸಂಚಾರವನ್ನು ಏಪ್ರಿಲ್ 21 ರಿಂದ 25ರವರೆಗೆ ರದ್ದು ಮಾಡಲಾಗಿದೆ.
- ರೈಲು ಸಂಖ್ಯೆ 06919: ಎಸ್‌ಎಸ್‌ಎಸ್ ಹುಬ್ಬಳ್ಳಿ-ವಿಜಯಪುರ ರೈಲು ಸಂಚಾರವನ್ನು ಏಪ್ರಿಲ್ 21 ರಿಂದ 24 ರವರೆಗೆ ರದ್ದು ಮಾಡಲಾಗಿದೆ.
- ರೈಲು ಸಂಖ್ಯೆ 56906: ಎಸ್‌ಎಸ್‌ಎಸ್ ಹುಬ್ಬಳ್ಳಿ-ಸೋಲಾಪುರ ರೈಲು ಸಂಚಾರವನ್ನು ಏಪ್ರಿಲ್ 21 ರಿಂದ 24ರವರೆಗೆ ರದ್ದು ಮಾಡಲಾಗಿದೆ.
- ರೈಲು ಸಂಖ್ಯೆ 56903: ಸೋಲಾಪುರ-ಧಾರವಾಡ ರೈಲು ಸಂಚಾರವನ್ನು ಏಪ್ರಿಲ್ 22 ರಿಂದ 25 ರವರೆಗೆ ರದ್ದುಗೊಳಿಸಲಾಗಿದೆ.
- ರೈಲು ಸಂಖ್ಯೆ 11415: ಸೋಲಾಪುರ-ಹೊಸಪೇಟೆ ರೈಲು ಸಂಚಾರವನ್ನು ಏಪ್ರಿಲ್ 22 ರಿಂದ 24 ರವರೆಗೆ ರದ್ದುಗೊಳಿಸಲಾಗಿದೆ.
- ರೈಲು ಸಂಖ್ಯೆ 11416: ಹೊಸಪೇಟೆ-ಸೋಲಾಪುರ ರೈಲು ಸಂಚಾರವನ್ನು ಏಪ್ರಿಲ್ 23 ರಿಂದ 25 ರವರೆಗೆ ರದ್ದು ಮಾಡಲಾಗಿದೆ.
- ರೈಲು ಸಂಖ್ಯೆ 07329: ಎಸ್‌ಎಸ್‌ಎಸ್ ಹುಬ್ಬಳ್ಳಿ-ವಿಜಯಪುರ ರೈಲು ಸಂಚಾರವನ್ನು ಏಪ್ರಿಲ್ 22 ರಿಂದ 24 ರವರೆಗೆ ರದ್ದುಗೊಳಿಸಲಾಗಿದೆ.
- ರೈಲು ಸಂಖ್ಯೆ 07330: ವಿಜಯಪುರ-ಎಸ್ ಎಸ್ ಎಸ್ ಹುಬ್ಬಳ್ಳಿ ರೈಲು ಸಂಚಾರವನ್ನು ಏಪ್ರಿಲ್ 23 ರಿಂದ 25 ರವರೆಗೆ ರದ್ದು ಮಾಡಲಾಗಿದೆ.
ಭಾಗಶಃ ರದ್ದು
- ರೈಲು ಸಂಖ್ಯೆ 07378: ಎಸ್‌ಎಸ್‌ಎಸ್ ಹುಬ್ಬಳ್ಳಿ-ವಿಜಯಪುರ ನಿಲ್ದಾಣಗಳ ನಡುವೆ ಸಂಚರಿಸುವ ವಿಶೇಷ ರೈಲು ಏಪ್ರಿಲ್ 20 ರಿಂದ 24 ರವರೆಗೆ ಭಾಗಶಃ ರದ್ದಾಗಲಿದೆ. ಇದನ್ನು ಎಸ್‌ಎಸ್‌ಎಸ್ ಹುಬ್ಬಳ್ಳಿಯಲ್ಲಿ ಅಲ್ಪಾವಧಿಗೆ ಕೊನೆಗೊಳಿಸಲಾಗುತ್ತದೆ.
- ರೈಲು ಸಂಖ್ಯೆ 07377: ವಿಜಯಪುರ-ಮಂಗಳೂರು ಸೆಂಟ್ರಲ್ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಏಪ್ರಿಲ್ 21 ರಿಂದ 25,ರವರೆಗೆ ವಿಜಯಪುರದ ಬದಲಿಗೆ ಎಸ್‌ಎಸ್‌ಎಸ್ ಹುಬ್ಬಳ್ಳಿಯಿಂದ ಹೊರಡಲಿದೆ.
- ರೈಲು ಸಂಖ್ಯೆ 06545: ಯಶವಂತಪುರ-ವಿಜಯಪುರ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು ಏಪ್ರಿಲ್ 20 ರಿಂದ 24 ರವರೆಗೆ ಗದಗ ಮತ್ತು ವಿಜಯಪುರ ನಡುವೆ ಭಾಗಶಃ ರದ್ದಾಗಲಿದ್ದು, ಗದಗದನಲ್ಲಿ ಅಲ್ಪಾವಧಿಗೆ ಕೊನೆಗೊಳ್ಳಲಿದೆ.
- ರೈಲು ಸಂಖ್ಯೆ 06546: ವಿಜಯಪುರ-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್ ವಿಶೇಷ ರೈಲು, ಏಪ್ರಿಲ್ 21 ರಿಂದ 25, 2025 ರವರೆಗೆ ವಿಜಯಪುರದ ಬದಲಿಗೆ ಗದಗದಿಂದ ಹೊರಡಲಿದೆ.
- ರೈಲು ಸಂಖ್ಯೆ 17307: ಮೈಸೂರು-ಬಾಗಲಕೋಟೆ ಬಸವ ಡೈಲಿ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 20 ರಿಂದ 24 ರವರೆಗೆ ವಿಜಯಪುರ ಮತ್ತು ಬಾಗಲಕೋಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಬಾಗಲಕೋಟೆ ಬದಲಿಗೆ ವಿಜಯಪುರದಲ್ಲಿ ಅಲ್ಪಾವಧಿಗೆ ಕೊನೆಗೊಳ್ಳುತ್ತದೆ.
- ರೈಲು ಸಂಖ್ಯೆ 17308: ಬಾಗಲಕೋಟೆ-ಮೈಸೂರು ಬಸವ ಡೈಲಿ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 21 ರಿಂದ 25 ರವರೆಗೆ ಬಾಗಲಕೋಟೆ ಬದಲಿಗೆ ವಿಜಯಪುರದಿಂದ ಹೊರಡಲಿದೆ.
ಟ್ವಿಟರ್ ಪೋಸ್ಟ್
Kindly note: Due to safety-related and essential engineering works at Bagalkot station, the following train services will be cancelled and partially cancelled.#SWRupdates pic.twitter.com/AAuhI5BgPk
ಇದನ್ನೂ ಓದಿ— South Western Railway (@SWRRLY) April 16, 2025
ಬೆಳಗಾವಿ-ಬೆಂಗಳೂರು ನಡುವೆ ವಿಶೇಷ ರೈಲು
ಬೇಸಿಗೆ ರಜೆಯ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಬೆಳಗಾವಿ ಮತ್ತು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ನಡುವೆ ತಲಾ ಒಂದು ಟ್ರಿಪ್ ವಿಶೇಷ ಎಕ್ಸ್ಪ್ರೆಸ್ ರೈಲುಗಳನ್ನು ಓಡಿಸಲು ನೈಋತ್ಯ ರೈಲ್ವೆಯು ನಿರ್ಧರಿಸಿದೆ.
ರೈಲು ಸಂಖ್ಯೆ 07385: ಬೆಳಗಾವಿ-ಎಸ್‌ಎಮ್‌ವಿಟಿ ಬೆಂಗಳೂರು ವಿಶೇಷ ಎಕ್ಸಪ್ರೆಸ್ ರೈಲು ಏಪ್ರಿಲ್ 20 ರಂದು ಬೆಳಗಾವಿಯಿಂದ ಸಂಜೆ 05:30 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 5:00 ಗಂಟೆಗೆ ಎಸ್‌ಎಮ್‌ವಿಟಿ ಬೆಂಗಳೂರು ತಲುಪಲಿದೆ. ಹಿಂತಿರುಗುವ ಮಾರ್ಗದಲ್ಲಿ ರೈಲು ಸಂಖ್ಯೆ 07386 ಎಸ್‌ಎಮ್‌ವಿಟಿ ಬೆಂಗಳೂರು-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು ಏಪ್ರಿಲ್ 21 ರಂದು ಎಸ್‌ಎಮ್‌ವಿಟಿ ಬೆಂಗಳೂರಿನಿಂದ ರಾತ್ರಿ 07:00 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 08:00 ಗಂಟೆಗೆ ಬೆಳಗಾವಿ ತಲುಪಲಿದೆ.
ಈ ರೈಲು ಎರಡೂ ಮಾರ್ಗಗಳಲ್ಲಿ ಖಾನಾಪುರ, ಲೊಂಡಾ, ಅಳ್ಳಾವರ, ಧಾರವಾಡ, ಹುಬ್ಬಳ್ಳಿ, ಹಾವೇರಿ, ಹರಿಹರ, ದಾವಣಗೆರೆ, ಬಿರೂರು, ಅರಸೀಕೆರೆ, ತುಮಕೂರು ಮತ್ತು ಚಿಕ್ಕಬಾಣಾವರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಇದನ್ನೂ ಓದಿ: ಬೆಂಗಳೂರು-ಮಂಗಳೂರು-ಕೊಲ್ಲಂಗೆ ವಿಶೇಷ ರೈಲುಗಳು: ಇಲ್ಲಿದೆ ವೇಳಾಪಟ್ಟಿ
ಈ ರೈಲಿನಲ್ಲಿ ಒಟ್ಟು 16 ಬೋಗಿಗಳು ಇರಲಿವೆ: ಎಸಿ ಟು-ಟೈರ್ (1), ಎಸಿ ತ್ರಿ-ಟೈರ್ (1), ಸ್ಟೀವರ್ ಕ್ಲಾಸ್ (8), ಸಾಮಾನ್ಯ ದ್ವಿತೀಯ ದರ್ಜೆ (4) ಮತ್ತು ಎಸ್ಎಲ್‌ಆರ್/ಡಿ (2) ಬೋಗಿಗಳು ಇರಲಿವೆ.
ಪ್ರಯಾಣಿಕರು ಈ ವಿಶೇಷ ರೈಲುಗಳ ನಿಖರವಾದ ಆಗಮನ/ನಿರ್ಗಮನದ ಸಮಯದ ಕುರಿತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ರೈಲ್ವೆ ವೆಬ್‌ಸೈಟ್’ಗೆ ಭೇಟಿ ನೀಡಬಹುದು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:10 pm, Sat, 19 April 25