ಇಂಡಿಯಾ ಮ್ಯಾಚ್ ಇದ್ದರೆ ನನಗೆ ಸರ್ಕಾರಿ ರಜೆ: ರೈತನ ದೇಶಾಭಿಮಾನದ ವಿಡಿಯೋ ವೈರಲ್
ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಭಾನುವಾರ (ನವೆಂಬರ್ 19) ವಿಶ್ವಕಪ್ 2023 ಫೈನಲ್ ಪಂದ್ಯ ನಡೆಯಲಿದೆ. ಭಾರತ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವಾಗಲೇ ಇಲ್ಲೊಂದು ರೈತನ ವಿಡಿಯೋ ವೈರಲ್ ಆಗುತ್ತಿದೆ. ಭಾರತದ ಕ್ರಿಕೆಟ್ ಮ್ಯಾಚ್ ಇರುವಾಗ ಈ ರೈತ ತನ್ನೆಲ್ಲಾ ಕೆಲಸಗಳಿಗೆ ರಜೆ ಕೊಟ್ಟು ಟಿವಿ ಮುಂದೆ ಕುಳಿತುಬಿಡುತ್ತಾರೆ..
ಹುಬ್ಬಳ್ಳಿ, ನ.17: ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಭಾನುವಾರ (ನವೆಂಬರ್ 19) ವಿಶ್ವಕಪ್ 2023 (World Cup) ಫೈನಲ್ ಪಂದ್ಯ ನಡೆಯಲಿದೆ. ಭಾರತ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವಾಗಲೇ ಇಲ್ಲೊಂದು ರೈತನ ವಿಡಿಯೋ ವೈರಲ್ (Video Viral) ಆಗುತ್ತಿದೆ. ಭಾರತದ ಕ್ರಿಕೆಟ್ ಮ್ಯಾಚ್ ಇರುವಾಗ ಈ ರೈತ ತನ್ನೆಲ್ಲಾ ಕೆಲಸಗಳಿಗೆ ರಜೆ ಕೊಟ್ಟು ಟಿವಿ ಮುಂದೆ ಕುಳಿತುಬಿಡುತ್ತಾರೆ..
ಹೌದು, ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಕೆ.ಹುಣಸಿಕಟ್ಟಿ ಗ್ರಾಮದ ರೈತನ ಶೇಖಯ್ಯ ಎಂಬವರು ಅಪ್ಪಟ ಕ್ರಿಕೆಟ್ ಅಭಿಮಾನಿ. ಭಾರತ ತಂಡದ ಮ್ಯಾಚ್ ಇತ್ತು ಎಂದಾದರೆ ಅಂದು ಶೇಖಯ್ಯ ಅವರು ಎಷ್ಟೇ ಕೆಲಸಗಳಿದ್ದರು ಅಂದು ಯಾವುದೇ ಕೆಲಸ ಮಾಡದೆ ಟಿವಿ ಮುಂದೆ ಕುಳಿತುಬಿಡುತ್ತಾರೆ.
ಇದನ್ನೂ ಓದಿ: 20 ವರ್ಷಗಳ ನಂತರ ಭಾರತ- ಆಸೀಸ್ ಫೈನಲ್ ಫೈಟ್; ಲೆಕ್ಕ ಚುಕ್ತಾ ಮಾಡುವ ತವಕದಲ್ಲಿ ಟೀಂ ಇಂಡಿಯಾ!
ಮ್ಯಾಚ್ ಇದ್ರೆ ಎಲ್ಲ ಕೆಲಸ ಬಿಟ್ಟು ಕ್ರಿಕೆಟ್ ನೋಡ್ತೀವಿ, ನಮಗೆ ಬೇಕಾದಷ್ಟ ಕೆಲಸ ಇದ್ರು ನಾವ ಕೆಲಸ ಮಾಡಲ್ಲ. ಅವತ್ತು ನಮಗೆ ಸರ್ಕಾರ ರಜೆ. ನಾವ ಕೆಲಸ ಮಾಡೋಕೆ ಸಮಯ ಇದೆ, ಆದ್ರೆ ಮ್ಯಾಚ್ ಇದ್ರೆ ನಮಗೆ ಸರ್ಕಾರಿ ರಜೆ. ಇಂಡಿಯಾದವರ ಆಟ ನಾವ ಮನಸ್ಸಿಗೆ ಬಂದಿದೆ ಎಂದು ಶೇಖಯ್ಯ ಹೇಳಿದ್ದಾರೆ. ಅಲ್ಲದೆ, ತಾನು ಹಿಂದಿನಿಂದಲೂ ಕ್ರಿಕೆಟ್ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ಈ ಬಾರಿ ಭಾರತ ವಿಶ್ವಕಪ್ ಗೆದ್ದೇ ಗೆಲ್ಲುತ್ತೆ ಎನ್ನುವ ವಿಶ್ವಾಸದಲ್ಲಿ ಶೇಖಯ್ಯ ಇದ್ದಾರೆ. ನಾವ ಪರಮಾತ್ಮನ ಹತ್ರ ಬೇಡಿಕೊಳ್ತೀವಿ ಇಂಡಿಯಾ ಗೆಲ್ಲಬೇಕು. ಮ್ಯಾಚ್ ನಮಗೆ ಇಂಟ್ರಸ್ಟ್ ಬರಬೇಕು ಎಂದು ಹೇಳಿದ್ದಾರೆ. ಸದ್ಯ ಇದರ ವಿಡಿಯೀ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:16 pm, Fri, 17 November 23