Panchakshari Gawai Birthday : ‘ಕನ್ನಡದ ಚೀಜು ಹಾಡುತ್ತೇನೆ ಎಂದಾಗ ಎಚ್​ಎಂವಿ ಕಂಪೆನಿಯವರು ಗಾಬರಿಯಾದರು’

Music Teaching : ಬಸವರಾಜ ರಾಜಗುರು ಪಂಚಾಕ್ಷರಿ ಗವಾಯಿಗಳಲ್ಲಿ ವಿದ್ಯಾಭ್ಯಾಸಗೈದು ಹೋಗುವಾಗ “ಗುರುಗಳೆ, ನಾನು ಬಡವ, ಗುರುದಕ್ಷಿಣೆ ನೀಡಲು ಹಣವಿಲ್ಲ. ಏನು ಮಾಡಲಿ?” ಎಂದರು. ಪಂಚಾಕ್ಷರಿ ಗವಾಯಿಗಳು, “ಚಿಂತಿಸಬೇಡ. ನನ್ನಂತೆ ನೀನೂ ದುಡ್ಡಿಗಾಸೆಪಡದ ಜಾತಿವಿಜಾತಿಯೆನ್ನದೆ ವಿದ್ಯಾದಾನ ಮಾಡು, ಅದೇ ನೀನು ನನಗೆ ನೀಡುವ ಗುರುದಕ್ಷಿಣೆ” ಎಂದರು.

Panchakshari Gawai Birthday : ‘ಕನ್ನಡದ ಚೀಜು ಹಾಡುತ್ತೇನೆ ಎಂದಾಗ ಎಚ್​ಎಂವಿ ಕಂಪೆನಿಯವರು ಗಾಬರಿಯಾದರು’
ಹಿಂದೂಸ್ತಾನ ಶಾಸ್ತ್ರೀಯ ಸಂಗೀತದ ದಿಗ್ಗಜರಾದ ಪಂಚಾಕ್ಷರಿ ಗವಾಯಿ ಮತ್ತು ಪಂಡಿತ್ ಬಸವರಾಜ ರಾಜಗುರು
Follow us
| Updated By: ಶ್ರೀದೇವಿ ಕಳಸದ

Updated on:Feb 02, 2022 | 11:03 AM

ಪಂಚಾಕ್ಷರಿ ಗವಾಯಿ | Panchakshari Gawai : ಪಂಚಾಕ್ಷರಿ ಗವಾಯಿಗಳ ಅವರ ವಿದ್ವತ್ತು ಮತ್ತು ವಾತ್ಸಲ್ಯಗಳಿಂದಾಗಿ ಬೆಲ್ಲಕ್ಕೆ ಇರುವ ಮುತ್ತುವಂತೆ ವಿದ್ಯಾರ್ಥಿಗಳಿಂದ ಆಕರ್ಷಿತರಾದರು. ಜಾತಿ, ಮತ, ಪಂಥಭೇದವಿಲ್ಲದೆ ವಿದ್ಯಾದಾನ ಮಾಡಿದರು. ಬಂಕಾಪುರದ ಶಂಕರ ದೀಕ್ಷಿತರು ಸ್ಮಾರ್ತ ಬ್ರಾಹ್ಮಣರು. ಸಂಗೀತ ಕಲಿಯಲು ಪಂಚಾಕ್ಷರಿ ಗವಾಯಿಗಳಲ್ಲಿದ್ದಾಗ ಅವರ ವ್ರತನಿಯಮ ಪಾಲನೆಗೆ ಅನುಕೂಲವಾಗಲೆಂದು ಒಬ್ಬ ಬ್ರಾಹ್ಮಣ ವಿದ್ಯಾರ್ಥಿಯನ್ನು ಅವರ ಸೇವೆಗೆ ನಿಯಮಿಸಿದ್ದರು. ವ್ಯತ್ಯಯವಾಗದಿರಲೆಂದು ಪಂಚಾಕ್ಷರಿ ಗವಾಯಿಗಳು ಅವರಿಗೆ ಒಬ್ಬ ಬ್ರಾಹ್ಮಣರ ಮನೆಯಲ್ಲಿ ವ್ಯವಸ್ಥೆ ಮಾಡಿದ್ದರು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಆದಾಯ-ಖರ್ಚು ಬಾಯಿಗೂಡುವುದು ದುಸ್ತರವಾಗುತ್ತ ನಡೆಯಿತು. ಸಂಗೀತ ಶಾಲೆಯ ವ್ಯವಸ್ಥಾಪಕರಾಗಿದ್ದ ಚಿತ್ತರಗಿ ಗಂಗಾಧರ ಶಾಸ್ತ್ರಿಗಳು ಪಂಚಾಕ್ಷರಿ ಗವಾಯಿಗಳಿಗೆ ಮಾತ್ರ ಹಾಲು ಕೊಡಹತ್ತಿದ್ದರು. ಇದು ಪಂಚಾಕ್ಷರಿ ಗವಾಯಿಗಳಿಗೆ ಗೊತ್ತಾಗಿ “ಮಕ್ಕಳನ್ನು ಬಿಟ್ಟು ನನಗೊಬ್ಬನಿಗೇ ಹಾಲು ಕುಡಿ ಎನ್ನುವಿರಾ? ಇದು ತಂದೆಯ ಧರ್ಮವೆ ? ಹಾಲು ತರಿಸಿ ಮಕ್ಕಳಿಗೆಲ್ಲ ಕೊಡುವ ದೇವರು ಬಡವನಲ್ಲ’’ ಎಂದು ಹೇಳಿದರು.

ಸದಾನಂದ ಕನವಳ್ಳಿ, ಲೇಖಕ, ಅನುವಾದಕ

*

ಭಾಗ – 2

ಮಕ್ಕಳೂ ಪಂಚಾಕ್ಷರಿ ಗವಾಯಿಗಳೂ ಹಾಲು ಕುಡಿದು ಸುಖನಿದ್ರೆಗೈದರು. ಸಾಲ ತೀರಿಸುವುದೆಂತು ಎಂಬ ಚಿಂತೆಯಲ್ಲಿ ಚಿತ್ತರಗಿ ಗಂಗಾಧರ ಶಾಸ್ತ್ರಿಗಳಿಗೆ ನಿದ್ದೆ ಹತ್ತಲಿಲ್ಲ. ಮರು ದಿನ ಬೆಳಿಗ್ಗೆ ಯಾರೋ ಹಿತೈಷಿಗಳು 200 ರೂಪಾಯಿ ಮನಿ ಆರ್ಡರ್ ಕಳಿಸಿದ್ದರು. ಪಂಚಾಕ್ಷರಿ ಗವಾಯಿಗಳು ಗಂಗಾಧರ ಶಾಸ್ತ್ರಿಗಳನ್ನು ಕರೆದು “ತೆಗೆದುಕೊ, ಹಾಲಿನ ಸಾಲ ತೀರಿಸು” ಎಂದು ಆ ದುಡ್ಡು ಕೊಟ್ಟರು. 1942. ಭೀಕರ ಬರಗಾಲ. ಪಂಚಾಕ್ಷರಿ ಗವಾಯಿಗಳ ಗಿಳಿವಿಂಡು ತಿರುಗಿ ತಿರುಗಿ ಸುಸ್ತಾಗಿ ಗದಗಿಗೆ ಬಂದಿಳಿಯಿತು. ಆಗ ಸಂಗೀತ-ನಾಟಕ ಶಾಲೆಯಲ್ಲಿ 120-130 ವಿದ್ಯಾರ್ಥಿಗಳಿದ್ದರು. ಗದಗಿನ ಪ್ರಮುಖರು ಮಕ್ಕಳನ್ನು ಕೆಲಕಾಲ ಅವರವರ ಊರಿಗೆ ಕಳಿಸಲು ಸೂಚಿಸಿದರು. ಪಂಚಾಕ್ಷರಿ ಗವಾಯಿಗಳು ದುರ್ಭಿಕ್ಷದ ಸಮಯವೆಂದು ಮಕ್ಕಳನ್ನು ಮನೆಬಿಟ್ಟು ಕಳಿಸುವುದುಂಟೆ? ನಾನು ಉಪವಾಸವಿದ್ದಾದರೂ ನನ್ನ ತಂಬೂರಿಯ ತಂತಿಯನ್ನು ಮಾರಿಯಾದರೂ ಮಕ್ಕಳನ್ನು ಸಲಹುವೆ ಎಂದು ತಮ್ಮ ನಿರ್ಧಾರ ವ್ಯಕ್ತವಾಡಿದರು. ಇದರಿಂದ ಪ್ರಭಾವಿತರಾದ ದಾನಶೂರ ಬಸರಿಗಿಡದ ವೀರಪ್ಪನವರು ಗವಾಯಿಗಳ ತಂಡದ ಊಟದ ವ ವಸ್ಥೆಯನ್ನು ತಾವೇ ನೋಡಿಕೊಳ್ಳುತ್ತೇವೆಂದು ಸಾರಿದರು. ತಮ್ಮ ಉದ್ಯೋಗದಲ್ಲಿ ಬಂದ ಲಾಭದಲ್ಲಿ ಒಂದು ಪಾಲನ್ನು ಪಂಚಾಕ್ಷರಿ ಗವಾಯಿಗಳಿಗೆ ನೀಡಿದರು. ಬಸರಿಗಿಡದ ವೀರಪ್ಪನವರು ದಾನಮಾಡಿದ ನಿವೇಶನದಲ್ಲಿ ವೀರೇಶ್ವರ ಪುಣ್ಯಾಶ್ರಮ ತಲೆಯೆತ್ತಿ ನಿಂತಿದೆ. ಪಂಚಾಕ್ಷರಿ ಗವಾಯಿಗಳು ಗದಗಿನಲ್ಲಿ ನೆಲೆನಿಂತರು.

ಬಸವರಾಜ ರಾಜಗುರು ಪಂಚಾಕ್ಷರಿ ಗವಾಯಿಗಳಲ್ಲಿ 12 ವರ್ಷ ವಿದ್ಯಾಭ್ಯಾಸಗೈದು ಹೋಗುವಾಗ “ಗುರುಗಳೆ, ನಾನು ಬಡವ, ಗುರುದಕ್ಷಿಣೆ ನೀಡಲು ಹಣವಿಲ್ಲ. ಏನು ಮಾಡಲಿ?” ಎಂದರು. ಪಂಚಾಕ್ಷರಿ ಗವಾಯಿಗಳು “ನೀನು ಚಿಂತಿಸಬೇಡ. ನನ್ನಂತೆ ನೀನೂ ದುಡ್ಡಿಗಾಸೆಪಡದ ಜಾತಿವಿಜಾತಿಯೆನ್ನದೆ ವಿದ್ಯಾದಾನ ಮಾಡು, ಅದೇ ನೀನು ನನಗೆ ನೀಡುವ ಗುರುದಕ್ಷಿಣೆ” ಎಂದರು. ಈ ಪ್ರಸಂಗವನ್ನು ಹೇಳುವಾಗ ಬಸವರಾಜ ರಾಜಗುರು ಅವರ ಕಣ್ಣು ಹನಿಗೂಡುತ್ತಿದ್ದವು. ಅಂತೆಯೆ, ಬಸವರಾಜ ರಾಜಗುರು ಅನೇಕ ಶಿಷ್ಯರಿಗೆ ವಿದ್ಯಾದಾನ ಮಾಡಿದರು.

ವಚನ ಪಿತಾಮಹ ಫ. ಗು. ಹಳಕಟ್ಟಿಯವರು ತಮ್ಮ ಪ್ರಥಮ ವಚನಸಂಗ್ರಹವನ್ನು ಕುಮಾರಸ್ವಾಮಿಗಳಿಗೆ ಅರ್ಪಿಸಿದ್ದರು. ಅದರ ಒಂದು ಪ್ರತಿಯನ್ನು ಆ ಪಂಚಾಕ್ಷರಿ ಗವಾಯಿಗಳಿಗೂ ಕಳಿಸಿದ್ದರು. ಕುಮಾರಸ್ವಾಮಿಗಳು ಬರಹೋಗುವ . ಭಕ್ತಾದಿಗಳಿಗೆ ವಚನಗಳ ಮಹತಿಯನ್ನು ತಿಳಿಸಿಹೇಳುತ್ತಿದ್ದರು. ಅದೆಲ್ಲದರ ಪ್ರಭಾವ ಪಂಚಾಕ್ಷರಿ ಗವಾಯಿಗಳ ಮೇಲಾಯಿತು. ಅವರ ಮನ ಅವುಗಳ ಸಂಗೀದತ್ತ ಹರಿಯಿತು. ಅವುಗಳನ್ನು ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿ ಅಭಂಗ ಧಾಟಿಯಲ್ಲಿ ಹಾಡಲಾರಂಭಿಸಿದರು. ಹಾಗೆ ಮಾಡಿದವರಲ್ಲಿ ಅವರೇ ಪ್ರಥಮರು. ಅವರು ಸಿದ್ದಪಡಿಸಿದ ಪ್ರಥಮ ವಚನವೆಂದರೆ, ನಾದಪ್ರಿಯ ಶಿವನೆಂಬರು… 1932ರಲ್ಲಿ ಬಸವ ಜಯಂತಿ ಉತ್ಸವಕ್ಕೆ ಸೊಲ್ಲಾಪುರದ ಶರಣಮ್ಮನವರಿಂದ ಆಮಂತ್ರಣ ಬಂದಿತು. ಪಂಚಾಕ್ಷರಿ ಗವಾಯಿಗಳು ವಾದ್ಯಮೇಳ ಸಿದ್ಧಪಡಿಸಿಕೊಂಡು ಹೋಗಿ ಸೋಲ್ಲಾಪುರದಲ್ಲಿ ಪ್ರಥವು ಸಾರ್ವಜನಿಕ ವಚನ-ಗಾಯನ ಕಾರ್ಯಕ್ರಮ ನೀಡಿದರು. ಇಂದು ವಚನಗಳು ಎಷ್ಟು ಜನಪ್ರಿಯವಾಗಿವೆಯೆಂದರೆ ಅವುಗಳನ್ನು ಬಲ್ಲ ಸಂಗೀತ ಗಾರರು ತಮ್ಮ ಕಚೇರಿಯಲ್ಲಿ ಒಂದೋ ಎರಡೋ ವಚನ ಹಾಡುವುದು ಸರ್ವೆ ಸಾಮಾನ್ಯ. ಈ ಜನಪ್ರಿಯತೆಗೆ ಅಸ್ತಿವಾರ ಹಾಕಿದವರು ಪಂಚಾಕ್ಷರಿ ಗವಾಯಿಗಳು.

Indian Musician Panchakshari Gawai Birthday Article by Dr Sadanand Kanavalli

ಫ.ಗು. ಹಳಕಟ್ಟಿ

1933ರಲ್ಲಿ ಪಂಚಾಕ್ಷರಿ ಗವಾಯಿಗಳಿಗೆ ಎಚ್. ಎಂ. ವಿ. ಕಂಪನಿಯಿಂದ ಧ್ವನಿಮುದ್ರಣಕ್ಕೆ ಆಮಂತ್ರಣ ಬಂದಿತು, ಒಂಭತ್ತು ಜನರ ಪರಿವಾರ ಪಯಣ ಬೆಳೆಸಿತು. ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಗವಾಯಿಗಳು, ಬಸವರಾಜ ರಾಜಗುರು, ಒಬ್ಬರು ಕಾರಕೂನರು, ಒಬ್ಬ ಅಡಿಗೆಯವ, ಒಬ್ಬ ನೀರು ನಿಗದಿ ಸೇವೆಯವ, ಒಬ್ಬ ಕ್ರಿಯಾಮೂರ್ತಿ, ಇಬ್ಬರು ವಿದ್ಯಾರ್ಥಿಗಳು, ಮುಂಬಯಿಯ ಕಲ್ಬಾದೇವಿ ರಸ್ತೆಯಲ್ಲಿ ಹತ್ತರಕಿ ನಂದೆಪ್ಪ (ಸಂಕೇಶ್ವರ ಹತ್ತಿರ) ಅಡದ ಅಂಗಡಿ ಇಟ್ಟಿದ್ದರು. ಅಲ್ಲಿಯೇ ವಾಸಕ್ಕೆ ಅನುಕೂಲ ಮಾಡಿಕೊಟ್ಟರು. ಪರಿವಾರದ ಊಟಕ್ಕೆ ವಾರದ ಮನೆ ವ್ಯವಸ್ಥೆಯಾಯಿತು.

ಪಂಚಾಕ್ಷರಿ ಗವಾಯಿಗಳು, ಪುಟ್ಟರಾಜ ಗವಾಯಿಗಳು, ಬಸವರಾಜ ರಾಜಗುರು ಮೂವರೂ ಧ್ವನಿಮುದ್ರಣ ನೀಡಬೇಕಿತ್ತು. ಎರಡೆರಡು ಕನ್ನಡ ಚೀಜುಗಳನ್ನು ಹಾಡುವಂತ ಪಂಚಾಕ್ಷರಿ ಗವಾಯಿಗಳು ನಿರ್ಧರಿಸಿದ್ದರು. ಇದನ್ನು ಕೇಳಿ ಎಚ್. ಎಂ. ವಿ. ಕಂಪನಿಯವರು ಗಾಬರಿಯಾಗಿ ಅದು ಸಾಧ್ಯವಿಲ್ಲ ಎಂದರು. ಹಾಗಾದರೆ, ಧ್ವನಿಮುದ್ರಣ ಬೇಡ ಎಂದು ಪಂಚಾಕ್ಷರಿ ಗವಾಯಿಗಳ ಪಟ್ಟು, ಕೊನೆಗೆ ಎಚ್. ಎಂ. ವಿಯವರೆ ಮಣಿದು ಒಪ್ಪಿದರು.

ಪಂಚಾಕ್ಷರಿ ಗವಾಯಿಗಳು ಖಮಾಜ್ (ಹಿಂದೂಸ್ಥಾನಿ) ರಾಗದಲ್ಲಿ “ನೋಡಲಾಗದೆ ದೇವಿ ಮತ್ತು ಪಟದೀಪ ರಾಗದಲ್ಲಿ ಮಾಡಲಿಲ್ಲವೆ ತಪವ” ಹಾಡಿದರು. ಎರಡೂ ನಿಜಗುಣ ಶಿವಯೋಗಿಗಳ ಕೃತಿಗಳು. ಅಲ್ಲದೆ, ದರಬಾರ್ (ಕರ್ನಾಟಕಿ) ರಾಗದಲ್ಲಿ ತ್ಯಾಗರಾಜರ ಲೋಚನ ಕಮಲಲೋಚನ” ಕೃತಿಯನ್ನೂ ಬೇಗಡ (ಕರ್ನಾಟಕ)… ರಾಗದಲ್ಲಿ “ತ್ಯಾಗರಾಜಾಯ ನಮಸ್ತೆ’’ ಕೃತಿಯನ್ನೂ ಹಾಡಿದರು.

ಪುಟ್ಟರಾಜ ಗವಾಯಿಗಳು ನಾಲ್ಕು ಹಿಂದೂಸ್ತಾನಿ ರಾಗಗಳನ್ನು ಹಾಡಿದರು. ದೇಸಕಾರ ರಾಗದಲ್ಲಿ ಘನಮಠಾರರ ‘‘ಧ್ಯಾನವ ವರಾಡೋ ನಿಜಗುರು,” ಜೀವನಪುರಿ ರಾಗದಲ್ಲಿ ಬಾಲಲೀಲಾ ಮಹಾಂತ ಶಿವಯೋಗಿಗಳ ‘‘ಮಗನ ತೂಗಿರೆ,” ಬಾಗೇಶ್ರೀ ರಾಗದಲ್ಲಿ “ಚೈನ ನಹಿ ಮೈತೋ ಆಯೋ ಪಿಯಾ ಬಿನ” ಹಾಗೂ ಕೇದಾರ ರಾಗದಲ್ಲಿ “ಕಂಗನದಾ ಮೊರಾ’’. ಬಸವರಾಜ ರಾಜಗುರು ಕುಮಾರಸ್ವಾಮಿಗಳ ಎರಡು ಸ್ತೋತ್ರಗಳನ್ನು ಹಿಂದೂಸ್ತಾನಿ ಪದ್ಧತಿಯಲ್ಲಿ ಹಾಡಿದರು. ದೇಸಕಾರ ರಾಗದಲ್ಲಿ “ಹಾನಗಲ್ಲ ಶ್ರೀ ಕುಮಾರದೇವ”, ಖಮಾಜ ರಾಗದಲ್ಲಿ “ಶ್ರೀ ಕುಮಾರದೇವ”.

ಈಗ ಕೂಡ ಗಾಯಕರು ಕನ್ನಡ ಚೀಜುಗಳನ್ನು (ವಚನಗಳನ್ನುಳಿದು) ಹಾಡಲು ಹಿಂದೇಟು ಹಾಕುತ್ತಾರೆ. ಹಿಂದೂಸ್ತಾನಿಯವರಾದರೆ ಹಿಂದಿ, ಮರಾಠಿ ಚೀಜುಗಳನ್ನು ಹಾಡಿಯಾರು. ಕರ್ನಾಟಕಿಯವರಾದರೆ ತೆಲುಗು, ತಮಿಳು ಕೃತಿಗಳನ್ನು ಹಾಡಿಯಾರು. ಈ ಹಿನ್ನೆಲೆಯಲ್ಲಿ 80 ವರ್ಷಗಳ ಹಿಂದೆಯೇ ಪಂಚಾಕ್ಷರಿ ಗವಾಯಿಗಳು ಕನ್ನಡ ಡಿಂಡಿಮವನ್ನು ಬಾರಿಸಿದುದು ಅಚ್ಚರಿ ಉಂಟುಮಾಡುತ್ತದೆ.

(ಮುಂದಿನ ಭಾಗ ನಿರೀಕ್ಷಿಸಿ)

ಹಿಂದಿನ ಭಾಗ : Panchakshari Gawai Birthday : ಸಮಾಜಸೇವೆಗಾಗಿ ಪಂಚಾಕ್ಷರಿ ಗವಾಯಿಗಳು ಅವಿವಾಹಿತರಾಗಿ ಉಳಿದರೇ?

Published On - 10:58 am, Wed, 2 February 22

ಯೋಗೇಶ್ವರ್ ಮನವೊಲಿಸಿದ ಸುರೇಶ್ ಬೆಳಗ್ಗೆಯೇ ಅಣ್ಣನ ಮನೆಯಲ್ಲಿ ಹಾಜರ್!
ಯೋಗೇಶ್ವರ್ ಮನವೊಲಿಸಿದ ಸುರೇಶ್ ಬೆಳಗ್ಗೆಯೇ ಅಣ್ಣನ ಮನೆಯಲ್ಲಿ ಹಾಜರ್!
ಕೊಹ್ಲಿ ಆರ್ಭಟಕ್ಕೆ 2 ವರ್ಷ: ಪಂದ್ಯ ಗೆದ್ದ ಬಳಿಕ ನಡೆದಿದ್ದೇನು?
ಕೊಹ್ಲಿ ಆರ್ಭಟಕ್ಕೆ 2 ವರ್ಷ: ಪಂದ್ಯ ಗೆದ್ದ ಬಳಿಕ ನಡೆದಿದ್ದೇನು?
‘ಬಿಗ್ ಬಾಸ್’ ಮನೆಯಲ್ಲಿ ಓಪನ್ ಆಗಿ ಶುರುವಾಯ್ತು ರಾಜಕೀಯ
‘ಬಿಗ್ ಬಾಸ್’ ಮನೆಯಲ್ಲಿ ಓಪನ್ ಆಗಿ ಶುರುವಾಯ್ತು ರಾಜಕೀಯ
ಧೈರ್ಯ ಸಾಹಸೇ ಲಕ್ಷ್ಮಿ ದೇವಿ ಮಂತ್ರದ ಹಿಂದಿನ ರಹಸ್ಯ ತಿಳಿಯಿರಿ
ಧೈರ್ಯ ಸಾಹಸೇ ಲಕ್ಷ್ಮಿ ದೇವಿ ಮಂತ್ರದ ಹಿಂದಿನ ರಹಸ್ಯ ತಿಳಿಯಿರಿ
Nithya Bhavishya: ಈ ರಾಶಿಯ ವ್ಯಾಪಾರಿಗಳು ಇಂದು ಶುಭ ಸುದ್ದಿ ಕೇಳುವರು
Nithya Bhavishya: ಈ ರಾಶಿಯ ವ್ಯಾಪಾರಿಗಳು ಇಂದು ಶುಭ ಸುದ್ದಿ ಕೇಳುವರು
ಸಹಿಸಲಾಗದ ನೋವಿನಿಂದ ಆಸ್ಪತ್ರೆಗೆ ಬಂದ ದರ್ಶನ್; ಮುಗಿಬಿದ್ದ ಅಭಿಮಾನಿಗಳು
ಸಹಿಸಲಾಗದ ನೋವಿನಿಂದ ಆಸ್ಪತ್ರೆಗೆ ಬಂದ ದರ್ಶನ್; ಮುಗಿಬಿದ್ದ ಅಭಿಮಾನಿಗಳು
ಮನೆಯೊಂದರ ಬೆಡ್​ರೂಂನಲ್ಲಿ 2 ಹಾವುಗಳ ಜಗಳ; ಬೆಚ್ಚಿ ಬೀಳಿಸುವ ವಿಡಿಯೋ ವೈರಲ್
ಮನೆಯೊಂದರ ಬೆಡ್​ರೂಂನಲ್ಲಿ 2 ಹಾವುಗಳ ಜಗಳ; ಬೆಚ್ಚಿ ಬೀಳಿಸುವ ವಿಡಿಯೋ ವೈರಲ್
ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್​ ಮೂಲಕ ದರ್ಶನ್ ಶಿಫ್ಟ್
ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್​ ಮೂಲಕ ದರ್ಶನ್ ಶಿಫ್ಟ್
20 ರೂಪಾಯಿಗಾಗಿ ಜಗಳ; ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
20 ರೂಪಾಯಿಗಾಗಿ ಜಗಳ; ರಿಕ್ಷಾ ಚಾಲಕನಿಗೆ ಚಪ್ಪಲಿಯಲ್ಲಿ ಹೊಡೆದ ಮಹಿಳೆ
ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಬೇಸರ ಮಾಡಿಕೊಂಡು ಹೊರಟ ವಿಜಯಲಕ್ಷ್ಮಿ
ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ಬೇಸರ ಮಾಡಿಕೊಂಡು ಹೊರಟ ವಿಜಯಲಕ್ಷ್ಮಿ