Panchakshari Gawai Birthday : ಸಮಾಜಸೇವೆಗಾಗಿ ಪಂಚಾಕ್ಷರಿ ಗವಾಯಿಗಳು ಅವಿವಾಹಿತರಾಗಿ ಉಳಿದರೇ?

Musician : ಒಮ್ಮೆ ಕುಮಾರಸ್ವಾಮಿಗಳೊಂದಿಗೆ ಪಂಚಾಕ್ಷರಿ ಗವಾಯಿಗಳು ಹುಬ್ಬಳ್ಳಿಗೆ ಬಂದಿದ್ದರು. ಪುರಾಣ, ಪ್ರವಚನ, ಕೀರ್ತನ, ಗಾಯನ ಕಾರ್ಯಕ್ರಮಗಳು ಎಡೆಬಿಡದೆ ಸಾಗಿದ್ದವು. ಪಂಚಾಕ್ಷರಿ ಗವಾಯಿಗಳ ಗಾಯನ ಕೇಳಿ ಮರುಳಾದ ವಾರಾಂಗನೆಯೊಬ್ಬಳು ಅವರಲ್ಲಿ ಮೋಹಿತಳಾದಳು. ಅವರ ಬಿಡಾರಕ್ಕೆ ಬಂದು ಕಾಮಭಿಕ್ಷೆ ಬೇಡಿದಳು.

Panchakshari Gawai Birthday : ಸಮಾಜಸೇವೆಗಾಗಿ ಪಂಚಾಕ್ಷರಿ ಗವಾಯಿಗಳು ಅವಿವಾಹಿತರಾಗಿ ಉಳಿದರೇ?
ಗಾನಯೋಗಿ ಪಂಚಾಕ್ಷರಿ ಗವಾಯಿ ಮತ್ತು ಹಾನಗಲ್ಲ ಕುಮಾರೇಶ್ವರ ಸ್ವಾಮಿಗಳು
Follow us
| Updated By: ಶ್ರೀದೇವಿ ಕಳಸದ

Updated on:Feb 02, 2022 | 11:16 AM

ಗಾನಯೋಗಿ ಪಂಚಾಕ್ಷರಿ ಗವಾಯಿ | Panchakshari Gawai :  ಪಂಚಾಕ್ಷರಿ ಗವಾಯಿಗಳ ವ್ಯಕ್ತಿತ್ವ ಪುಟಕ್ಕಿಟ್ಟ ಚಿನ್ನದಂತೆ ಪರಿಶುದ್ಧವಾಗಿತ್ತು. ಯಾವ ದೃಷ್ಟಿಯಿಂದ ನೋಡಿದರೂ, ರಾವುಗನ್ನಡಿ ಹಿಡಿದು ನೋಡಿದರೂ ಅವರ ವ್ಯಕ್ತಿತ್ವದಲ್ಲಿ ಸಣ್ಣತನವಿರಲಿಲ್ಲ. ಅವರದು ತುಂಬು ವ್ಯಕ್ತಿತ್ವ, ಹಿರಿದಾದ ಚೇತನ. ಪಂಚಾಕ್ಷರಿ ಗವಾಯಿಗಳು ಸಂಗೀತ ಸೇವೆಯಲ್ಲಿಯೇ ಜೀವ ಸವೆಸಿದವರು. ಉತ್ತರ ಕರ್ನಾಟಕದಲ್ಲಿ ಸಂಗೀತ ಪ್ರಸಾರಕ್ಕೆ ಬೃಹತ್‌ಚಾಲನೆ ನೀಡಿದವರು. ಸುತ್ತಿ ಸುಳಿದು ನೋಡದಂತೆ ಅಂಧರಾಗಿ ಹುಟ್ಟಿದರೂ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದವರು. ಅನೇಕ ಶ್ರೇಷ್ಠ ಸಂಗೀತಗಾರರನ್ನು ತಯಾರಿಸಿದವರು. ಪ್ರಾತಃಸ್ಮರಣೀಯ ಪುಣ್ಯಚರಿತರು. ಗದುಗಿನಲ್ಲಿರುವ ಸಂಗೀತ ಆಶ್ರಮ ‘ಶ್ರೀ ವೀರೇಶ್ವರ ಪುಣ್ಯಾಶ್ರಮ’ದ ಸಂಸ್ಥಾಪಕರು. ಇವರು ಜನಿಸಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಾಡಶೆಟ್ಟಿಹಳ್ಳಿ. ಇವರ ತಾಯಿ ನೀಲಮ್ಮ, ತಂದೆ ಗುರುಪಾದಯ್ಯ ಚರಂತಿಮಠ. ಗದಿಗೆಯ್ಯ ಇವರ ಹುಟ್ಟುಹೆಸರು. ಇಂದು ಅವರ 130ನೇ ಜನ್ಮದಿನ.

ಧಾರವಾಡದಲ್ಲಿ ವಾಸಿಸುತ್ತಿದ್ದ ಲೇಖಕ, ಅನುವಾದಕ ಸದಾನಂದ ಕನವಳ್ಳಿ ಅವರು ಬರೆದ ಲೇಖನ ನಿಮ್ಮ ಓದಿಗೆ.

*

(ಭಾಗ-1)

ಹಾನಗಲ್ಲ ಕುಮಾರಸ್ವಾಮಿಗಳ ಕರುಣೆಯ ಕಂದನಾಗಿ ಬೆಳೆಯುತ್ತ ಕರ್ನಾಟಕಿ ಸಂಗೀತದಲ್ಲಿ ಪರಿಣತನಾಗಿ ಗದಿಗೆಯ್ಯ. ಪಂಚಾಕ್ಷರಿ ಗವಾಯಿಗಳಾದರು. ಹಿಂದೂಸ್ತಾನಿ ಸಂಗೀತ ಕಲಿಯಬೇಕೆಂಬ ಆಸೆ ಅಂಕುರಿಸಿತು. ಪಂಚಾಕ್ಷರಿ ಗವಾಯಿಗಳ ಮನಸ್ಸಿನಲ್ಲಿ ಇಚ್ಛೆ ಮೂಡುವುದೇ ತಡ, ಅದನ್ನು ಕುಮಾರಸ್ವಾಮಿಗಳು ತಕ್ಷಣ ಈಡೇರಿಸಿಬಿಡುತ್ತಿದ್ದರು. ಸುಪ್ರಸಿದ್ಧ ಗಾಯಕ ಅಬ್ದುಲ್ ವಹೀದ ಖಾನರನ್ನು ಕುಮಾರಸ್ವಾಮಿಗಳು ಶಿವಯೋಗಮಂದಿರಕ್ಕೆ ಕರೆಯಿಸಿ ಅಂದಿನ ಸೋವಿ ಕಾಲದಲ್ಲಿ (1917-1921) ತಿಂಗಳಿಗೆ ನೂರೈವತ್ತು ರೂಪಾಯಿ ಸಂಭಾವನೆ ನೀಡಿ ಪಂಚಾಕ್ಷರಿ ಗವಾಯಿಗಳ ಹಿಂದೂಸ್ತಾನಿ ಸಂಗೀತ ಶಿಕ್ಷಣಕ್ಕೆ ಏರ್ಪಾಡು ಮಾಡಿದರು. ಬಳಿಕ ಪಂಚಾಕ್ಷರಿ ಗವಾಯಿಗಳು ಗ್ವಾಲಿಯರ್ ಘರಾಣೆಯ ನೀಲಕಂಠಬುವಾ ಮಿರಜಕರ ಅವರಲ್ಲಿ ವಿದ್ಯಾಭ್ಯಾಸ ಗೈದರು. ಸಂಗೀತ ಸಮುದ್ರವಿದ್ದಂತೆ. ಬೆಳಗಾವಿಯಲ್ಲಿ ನಾಗನೂರ ಸ್ವಾಮಿಗಳ ಮಠದಲ್ಲಿ ನಾಲ್ಕಾರು ತಿಂಗಳು ವಾಸ ಮಾಡಿದಾಗ ರಾಮಕೃಷ್ಣ ಬುವಾ ವಝೆ ಅವರಲ್ಲಿ ತಿಂಗಳಿಗೆ 200 ರೂಪಾಯಿ ಗೊತ್ತುಮಾಡಿ ಅಭ್ಯಾಸಗೈದರು.

1933 ರಲ್ಲಿ ಎಚ್.ಎಂ.ವಿ. ಧ್ವನಿಮುದ್ರಣಕ್ಕಾಗಿ ಮುಂಬಯಿಗೆ ಹೋದಾಗ ಆರು ತಿಂಗಳು ಅಲ್ಲಿದ್ದರು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮುಂಬಯಿಯಲ್ಲಿದ್ದ ಶ್ರೇಷ್ಠ ಗವಾಯಿಗಳ ಗಾಯನ ಕೇಳಿದರು. ಅವರು ಅನುಕೂಲ ಮಾಡಿಕೊಂಡು ವಿನಾಯಕರಾವ ಪಟವರ್ಧನ, ಮಾಸ್ಟರ್‌ ದೀನಾನಾಥ, ನಾರಾಯಣ ರಾವ್, ವ್ಯಾಸ, ಓಂಕಾರನಾಥ ಠಾಕೂರ, ಮಾಸ್ಟರ್‌ ವಸಂತ, ಮಂಜೀಖಾನ, ಬುರ್ಜಿ ಖಾನ, ಮೋಘುಬಾಯಿ ಕುರ್ಡಿಕರ, ಕೇಸರಬಾಯಿ ಕೇರಕರ ಮೊದಲಾದವರ ಗಾನಸುಧೆ ಸವಿದರು. ಪಂಚಾಕ್ಷರಿ ಗವಾಯಿಗಳಿಗೆ ಅಬ್ದುಲ್ ಕರೀಮಖಾನ ಹಾಗೂ ಸವಾಯಿ ಗಂಧರ್ವರ ನಿಕಟ ಪರಿಚಯವಿತ್ತು. 1937-38ರಲ್ಲಿ ಇನಾಯತ್ ಹುಸೇನಖಾನರು ಗದಗಿನಲ್ಲಿ ವಾಸ್ತವ್ಯ ಹೂಡಿದಾಗ ಅವರಿಂದಲೂ ಕೆಲವು ತಿಂಗಳು ಹೇಳಿಸಿಕೊಂಡರು. ಉತ್ತಮವಾದುದು ಎಲ್ಲಿಯೆ ಇರಲಿ, ಅದನ್ನು ಗ್ರಹಿಸುವ, ಸಂಗ್ರಹಿಸುವ ಇಚ್ಛೆ ಪಂಚಾಕ್ಷರಿ ಗವಾಯಿಗಳದು.

ಹಲವು ಗುರುಗಳಿಂದ ಕಲಿತ, ಅನೇಕರ ಗಾಯನ ಆಲಿಸಿದ ಫಲವಾಗಿ ಪಂಚಾಕ್ಷರಿ ಗವಾಯಿಗಳ ಗಾಯನದಲ್ಲಿ ಹಲವು ಘರಾಣೆಯ ಶೈಲಿಗಳ, ಹಲವು ಗಾಯನ ಪ್ರಕಾರಗಳ ಮಾಧುರ್ಯ, ವೈವಿಧ್ಯ ಮುಪ್ಪುರಿಗೊಂಡಿದ್ದವು. ಖ್ಯಾಲ, ಠುಮರಿ. ಘರಲ್, ಟಪ್ಪಾ, ದ್ರುಪದಗಳನ್ನು ಅವರು ಲೀಲಾಜಾಲವಾಗಿ ಹಾಡಬಲ್ಲವರಾಗಿದ್ದರು.

Indian Musician Panchakshari Gawayi Birthday Article by Dr Sadanand Kanavalli

ಸಂಗೀತ ಕಲಾವಿದರಾದ ಉಸ್ತಾದ್ ಅಬ್ದುಲ್ ವಹೀದ್ ಖಾನ್ ಮತ್ತು ಪಂಡಿತ್ ರಾಮಕೃಷ್ಣ ಬುವಾ ವಝೆ

ಲಿಂಗವ್ಯಸನಿ, ಜಂಗಮಪ್ರೇಮಿ

ಪಂಚಾಕ್ಷರಿ ಗವಾಯಿಗಳಿಗೆ ಇಪ್ಪತ್ತೈದರ ತುಂಬು ಹರೆಯ. ನರನಾಡಿಗಳಲ್ಲಿ ಮಿಂಚಿನ ಸಂಚಾರ, ಎಲ್ಲ ಯುವಕರಿಗಿರುವಂತೆ ಮದುವೆಯಾಗುವ ಅದಮ್ಯ ಬಯಕೆ. ಆದರೆ, ಹಾಗೆಂದು ಕುಮಾರಸ್ವಾಮಿಗಳಲ್ಲಿ ಅರಿಕೆಮಾಡಿಕೊಳ್ಳುವುದೆಂತು ಎಂಹ ಆತಂಕ. ಇ. ಒಂದು ದಿನ ಕುಮಾರಸ್ವಾಮಿಗಳು ಪಂಚಾಕ್ಷರಿ ಗವಾಯಿಗಳನ್ನು ಉದ್ದೇಶಿಸಿ ಇಂತು ಉಪದೇಶಿಸಿದರು :

“ನೀನು ಅವಿಚ್ಛಿನ್ನವಾಗಿ ಸಮಾಜಸೇವೆ ಮಾಡು. ಅದಕ್ಕಾಗಿ ಬ್ರಹ್ಮಚರ್ಯ ಪಾಲಿಸುವುದು ಅಗತ್ಯ.”

“ಗುರುವೆ, ನಿಮ್ಮೆಲ್ಲ ಆಜ್ಞೆಗಳನ್ನು ಪಾಲಿಸುವೆ, ಆದರೆ ನನ್ನಿಂದ ಬ್ರಹ್ಮಚರ್ಯ ವ್ರತ ಸಾಧ್ಯವಿಲ್ಲ. ತಾವು ನನ್ನ ವಿವಾಹವೇರ್ಪಡಿಸಿ ನನ್ನನ್ನು ಉದ್ಧರಿಸಬೇಕು.”

ಕುವಾರಸ್ವಾಮಿಗಳಿಗೆ ಸಂದಿಗ್ಧ. ಅತ್ತ ತೆರ ವಿರೋಧಿಸುವ ತತ್ವ, ಇತ್ಯ ಶಿಷ್ಯವಾತ್ಸಲ್ಯ, ಕನ್ಯಾಶುಲ್ಕವೀಯುವಂತಿಲ್ಲ. ಅದಿಲ್ಲದೆ ಕನ್ಯೆ ಸಿಗುವಂತಿಲ್ಲ. ಇದಕ್ಕೇನುಪಾಯ. ಶ್ರೀಗಳವರು ಕನ್ಯಾಶುಲ್ಕದ ಬದಲು ಕನಕಾಭರಣಗಳನ್ನು ನೀಡುವುದಾಗಿ ಘೋಷಿಸಿದರು. ಫಲಿಸಲಿಲ್ಲ. ಕುಮಾರಸ್ವಾಮಿಗಳು ಚಿಂತೆಯಿಂದ ಕೊರಗಹತ್ತಿದರು. ಇದನ್ನೆಲ್ಲ ಕಂಡು ನೊಂದವರಲ್ಲೊಬ್ಬರಾದ ಆಲೂರ ಗುರಪ್ಪ ಪಂಚಾಕ್ಷರಿ ಗವಾಯಿಗಳಿಗೆ ಬುದ್ಧಿವಾದ ಹೇಳಿದರು : “ಗವಾಯಿಗಳ, ನಿಮಗೇನು ತಲೆ ಕೆಟ್ಟಿದೆಯೆ? ನಿಮ್ಮನ್ನು ತಂದೆತಾಯಿಗಿಂತ ಹೆಚ್ಚಾಗಿ ಸಾಕಿ ಸಲುಹಿ, ನೀರಿನಂತೆ ಹಣ ಸುರಿದು ನಿಮಗೆ ಸಂಗೀತವಿದೆ ಕೊಡಿಸಿ ಉನ್ನತ ಮಟ್ಟಕ್ಕೇರಿಸಿದ ಗುರುಗಳ ಮನಸ್ಸನ್ನೇ ನೋಯಿಸುವುದೆ ? ಶ್ರೀಗಳವರಿಗೆ ಈ ಪರಿ ತೊಂದರೆ ಕೊಟ್ಟುದಕ್ಕೆ ಇಡೀ ವೀರಶೈವ ಸಮಾಜ ನಿಮ್ಮ ಮೇಲೆ ಸಿಟ್ಟಾಗಿದೆ. ನೀವೊಬ್ಬರು ಲಗ್ನವಾಗದಿದ್ದರೆ ಜಗತ್ತೇ ಹಾಳಾಗಿ ಹೋಗುವುದೆ ?”

ಪಂಚಾಕ್ಷರಿ ಗವಾಯಿಗಳ ಕಣ್ಣು ತೆರೆಯಿತು. ಕೂಡಲೆ ಕುಮಾರಸ್ವಾಮಿಗಳಿದ್ದೆಡೆ ಬಂದು ಕಾಲಿಗೆರಗಿದರು.

“ಗುರುವೆ, ನನ್ನಿಂದ ಘೋರ ತಪ್ಪಾಯಿತು. ನನಗೆ ಲಗ್ನ ಬೇಡ. ನಿಮ್ಮ ಆಣತಿಯಂತೆ ಬ್ರಹ್ಮಚರ್ಯ ಪಾಲಿಸಿ ಸಮಾಜಸೇವೆಗೈಯುವೆ.” ಅಂದಿನಿಂದ ಅವರು ಚಿತ್ತಚಾಂಚಲ್ಯಕ್ಕೆ ಅವಕಾಶವೀಯಲಿಲ್ಲ. ಲಿಂಗವ್ಯಸನಿ, ಜಂಗಮಪ್ರೇವಿಯಾದರು. ಲಿಂಗಾರ್ಚನೆ, ವಿದ್ಯಾರ್ಜನೆ, ವಿದ್ಯಾದಾನಗಳಲ್ಲಿ ತಲ್ಲೀನರಾದರು. ಕುಮಾರಸ್ವಾಮಿಗಳ  ಸಂತೋಷಕ್ಕೆ ಪಾರವಿರಲಿಲ್ಲ. ಇನ್ನೂ ಸ್ವಲ್ಪ ಕಾಲ ಪರೀಕ್ಷಿಸಿ ನೋಡೋಣ ಎಂದು ಸುಮ್ಮನಿದ್ದರು.

ಒಮ್ಮೆ ಕುಮಾರಸ್ವಾಮಿಗಳೊಂದಿಗೆ ಪಂಚಾಕ್ಷರಿ ಗವಾಯಿಗಳು ಹುಬ್ಬಳ್ಳಿಗೆ ಬಂದಿದ್ದರು. ಪುರಾಣ, ಪ್ರವಚನ, ಕೀರ್ತನ, ಗಾಯನ ಕಾರ್ಯಕ್ರಮಗಳು ಎಡೆಬಿಡದೆ ಸಾಗಿದ್ದವು. ಒಂದು ದಿನ ಪಂಚಾಕ್ಷರಿ ಗವಾಯಿಗಳ ಗಾಯನ ಕೇಳಿ ಮರುಳಾದ ವಾರಾಂಗನೆಯೊಬ್ಬಳು ಅವರಲ್ಲಿ ಮೋಹಿತಳಾದಳು. ಅವರ ಬಿಡಾರಕ್ಕೆ ಬಂದು ಕಾಮಭಿಕ್ಷೆ ಬೇಡಿದಳು, ಪಂಚಾಕ್ಷರಿ ಗವಾಯಿಗಳು ವಿಷಯಕ್ಕೆಳಸದೆ “ಕಾಂತಿಯರನ್ನ ಮಾತೆಯರೆಂಬೆ” ಎಂದುಚ್ಚರಿಸಿ ಬ್ರಹ್ಮಚರ್ಯ ವ್ರತದಲ್ಲಿ ತಮ್ಮ ನೈತಿಕತೆಯನ್ನು ಸ್ಪಷ್ಟಪಡಿಸಿದರು.

ಎಲ್ಲೆಲ್ಲೂ ಅವರ ಜೀತೇಂದ್ರಿಯತ್ವದ ಗುಣಗಾನ, ಕುಮಾರಸ್ವಾಮಿಗಳಿಗಂತೂ ಹಿಡಿಸಲಾರದಷ್ಟು ಹಿಗ್ಗು, ಶಿವಯೋಗಮಂದಿರಕ್ಕೆ ಹಿಂತಿರುಗುತ್ತಲೆ ಬಿದರಿ ಪಟ್ಟದ ದೇವರಾದ ಶ್ರೀ ಪ್ರಭುಕುಮಾರ ಶಿವಾಚಾರ್ಯರನ್ನು ಕರೆಯಿಸಿ ಅವರಿಂದ ಅಮೃತ ಗಳಿಗೆಯಲ್ಲಿ ಶಿವದೀಕ್ಷೆ ಕೊಡಿಸಿದರು. ಅಂದಿನಿಂದ ಪಂಚಾಕ್ಷರಿ ಗವಾಯಿಗಳು ಗುರು, ಲಿಂಗ, ಜಂಗಮರಲ್ಲಿ ಶ್ರದ್ದೆಯಿಟ್ಟು ವಿದ್ಯುಕ್ತವಾಗಿ ತ್ರಿಕಾಲ ಪೂಜೆಯಲ್ಲಿ ನಿರತರಾಗಿ ಪಾದೋದಕ ಪ್ರಸಾದಗಳನ್ನು ಸ್ವೀಕರಿಸುತ್ತಿದ್ದರು. ತಮ್ಮ ನಿತ್ಯಾಚರಣೆಯಲ್ಲಿ ಅಷ್ಟಾವರಣವೇ ಅಂಗ, ಪಂಚಾಚಾರವೇ ಪ್ರಾಣ, ಷಟ್​ಸ್ಥಲವೇ  ಆತ್ಮ ಎಂಬ ಸಿದ್ದಾಂತವನ್ನು ಅನೂಚಾನವಾಗಿ ಅನುಸರಿಸಿದರು. ಬೇನೆ ಬೇಸರಿಕೆಗಳೆನ್ನದೆ ಲಿಂಗ ಪೂಜಾ ವ್ರತ ಆಚರಿಸಿದರು. ಮುಂಬಯಿ ಆಕಾಶವಾಣಿ ಕೇಂದ್ರದಿಂದ ಕಾರ್ಯಕ್ರಮ ನೀಡಲು ಕರೆಬಂದರೂ ಅಲ್ಲಿ ಸ್ನಾನಪೂಜೆಗಳಿಗೆ ವ್ಯವಸ್ಥೆಯಾಗದೆಂದು ಕಾರ್ಯಕ್ರಮ ಒಪ್ಪಿಕೊಳ್ಳಲಿಲ್ಲ. ಅಷ್ಟೇ ಏಕೆ, ಕೊನೆಯ ಗಳಿಗೆಯಲ್ಲಿ ಕೂಡ ಅಂಗೈಯಲ್ಲಿ ಲಿಂಗವನ್ನಿಟ್ಟುಕೊಂಡು ಪ್ರಾಣಬಿಟ್ಟರು.

(ಮುಂದಿನ ಭಾಗ ನಿರೀಕ್ಷಿಸಿ)

(ಸೌಜನ್ಯ : ಗಾನಯೋಗಿ ಪಂಚಾಕ್ಷರಿ ಗವಾಯಿಗಳು : ಸವಿನೆನಪು. ಜನ್ಮಶತಮಾನೋತ್ಸವ-1992 ಸಂ : ನಾಗರಾಜ ಹವಾಲ್ದಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ)

ಇದನ್ನೂ ಓದಿ : Music : ‘ನಾಕುತಂತಿಯ ಮಿಡಿತ’ ಹಿಂದೂಸ್ತಾನಿ ಗಾಯಕಿ ಶ್ರೀಮತಿದೇವಿಯವರ ಅಂಕಣ ನಾಳೆಯಿಂದ ಆರಂಭ

Published On - 10:04 am, Wed, 2 February 22

ಬಿಗ್​ಬಾಸ್​ನಲ್ಲಿ ಶುರುವಾಯ್ತು ಪಕ್ಷ ರಾಜಕೀಯ, ಸ್ಪರ್ಧಿಗಳ ನಡುವೆ ಗಲಾಟೆ
ಬಿಗ್​ಬಾಸ್​ನಲ್ಲಿ ಶುರುವಾಯ್ತು ಪಕ್ಷ ರಾಜಕೀಯ, ಸ್ಪರ್ಧಿಗಳ ನಡುವೆ ಗಲಾಟೆ
ಭಾರತ- ಪಾಕಿಸ್ತಾನದ ನಡುವೆ ರಾಜಿಯಾಗಬೇಕು; ಮೆಹಬೂಬಾ ಮುಫ್ತಿ ಹೇಳಿಕೆ
ಭಾರತ- ಪಾಕಿಸ್ತಾನದ ನಡುವೆ ರಾಜಿಯಾಗಬೇಕು; ಮೆಹಬೂಬಾ ಮುಫ್ತಿ ಹೇಳಿಕೆ
ಇವತ್ತು ಸಾಯಂಕಾಲ ಎನ್​ಡಿಎ ಅಭ್ಯರ್ಥಿ ಹೆಸರು ಘೋಷಣೆ ಸಾಧ್ಯತೆ: ನಿಖಿಲ್
ಇವತ್ತು ಸಾಯಂಕಾಲ ಎನ್​ಡಿಎ ಅಭ್ಯರ್ಥಿ ಹೆಸರು ಘೋಷಣೆ ಸಾಧ್ಯತೆ: ನಿಖಿಲ್
ಕಂಜನ್​ ಮತ್ತು ಧನಂಜಯ ಆನೆಗಳ ನಡುವೆ ಮತ್ತೆ ಗಲಾಟೆ: ತಪ್ಪಿದ ಭಾರೀ ಅನಾಹುತ
ಕಂಜನ್​ ಮತ್ತು ಧನಂಜಯ ಆನೆಗಳ ನಡುವೆ ಮತ್ತೆ ಗಲಾಟೆ: ತಪ್ಪಿದ ಭಾರೀ ಅನಾಹುತ
ತನ್ನನ್ನು ತಾನೇ ನಾಮಿನೇಟ್ ಮಾಡಿಕೊಂಡ ಹನುಮಂತ; ಈ ವಾರವೇ ಔಟ್?
ತನ್ನನ್ನು ತಾನೇ ನಾಮಿನೇಟ್ ಮಾಡಿಕೊಂಡ ಹನುಮಂತ; ಈ ವಾರವೇ ಔಟ್?
ನಾನು ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವಂತೆ ಹೈಕಮಾಂಡ್ ಹೇಳಿದೆ: ಸುರೇಶ್
ನಾನು ಸ್ವಲ್ಪ ಸಮಯ ವಿಶ್ರಾಂತಿ ಪಡೆಯುವಂತೆ ಹೈಕಮಾಂಡ್ ಹೇಳಿದೆ: ಸುರೇಶ್
ಡಿಕೆ ಸುರೇಶ್ ಗೆಲುವು ಮತ್ತು ಸೋಲು ಎರಡಕ್ಕೂ ಕಾರಣನಾಗಿದ್ದೇನೆ: ಯೋಗೇಶ್ವರ್
ಡಿಕೆ ಸುರೇಶ್ ಗೆಲುವು ಮತ್ತು ಸೋಲು ಎರಡಕ್ಕೂ ಕಾರಣನಾಗಿದ್ದೇನೆ: ಯೋಗೇಶ್ವರ್
ಹೆಚ್ ಡಿ ಕುಮಾರಸ್ವಾಮಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲರ ಕಣ್ಣು
ಹೆಚ್ ಡಿ ಕುಮಾರಸ್ವಾಮಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲರ ಕಣ್ಣು
ದಿವಾಕರ್ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ, ಬಂಡಾಯವೆದ್ದಿಲ್ಲ: ರೆಡ್ಡಿ
ದಿವಾಕರ್ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ, ಬಂಡಾಯವೆದ್ದಿಲ್ಲ: ರೆಡ್ಡಿ
ಬಿಜೆಪಿ ನಾಯಕ ಸಿಪಿ ಯೋಗೇಶ್ವರ್​ ಕಾಂಗ್ರೆಸ್​ ಸೇರ್ಪಡೆ, ಲೈವ್ ನೋಡಿ​
ಬಿಜೆಪಿ ನಾಯಕ ಸಿಪಿ ಯೋಗೇಶ್ವರ್​ ಕಾಂಗ್ರೆಸ್​ ಸೇರ್ಪಡೆ, ಲೈವ್ ನೋಡಿ​