AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಕಳೆಪ್ಪ ನಮ್ ಮಗಳನ್ನು ತುಂಡು ಮಾಡಿ ಫ್ರಿಡ್ಜ್​ನಲ್ಲಿ ಇಡುತ್ತಾನೆ: ಆತಂಕ ವ್ಯಕ್ತಪಡಿಸಿದ ಯುವತಿಯ ತಾಯಿ

ಯೂಟ್ಯೂಬರ್ ಮುಕಳೆಪ್ಪ ಅಂತರ್ ಧರ್ಮೀಯ ವಿವಾಹ ಪ್ರರಕಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದೀಗ ಯುವತಿಯ ತಾಯಿ ಶಿವಕ್ಕ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮದುವೆಯಾಗಿ ನಮ್ಮ ಮನೆಗೇ ಬಂದು ಅಣ್ಣ-ತಂಗಿ ರೀತಿ ಇರುತ್ತೇವೆ ಎಂದು ಮೋಸ ಮಾಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.

ಮುಕಳೆಪ್ಪ ನಮ್ ಮಗಳನ್ನು ತುಂಡು ಮಾಡಿ ಫ್ರಿಡ್ಜ್​ನಲ್ಲಿ ಇಡುತ್ತಾನೆ: ಆತಂಕ ವ್ಯಕ್ತಪಡಿಸಿದ ಯುವತಿಯ ತಾಯಿ
ಗಾಯಿತ್ರಿ ಜಾಲಿಹಾಳ್ ತಾಯಿ ಶಿವಕ್ಕ
ಸಂಜಯ್ಯಾ ಚಿಕ್ಕಮಠ
| Updated By: Ganapathi Sharma|

Updated on:Sep 26, 2025 | 2:40 PM

Share

ಹುಬ್ಬಳ್ಳಿ, ಸೆಪ್ಟೆಂಬರ್ 26: ಯೂಟ್ಯೂಬರ್ ಮುಕಳೆಪ್ಪ (Mukaleppa) ಅಲಿಯಾಸ್ ಖ್ವಾಜಾ ಶಿರಹಟ್ಟಿ ಮತ್ತು ಗಾಯಿತ್ರಿ ಜಾಲಿಹಾಳ್ ಅಂತರ್ಧರ್ಮೀಯ ವಿವಾಹ ದೀನಾ ಒಂದಿಲ್ಲೊಂದು ಕಾರಣಕ್ಕೆ ಚರ್ಚೆಯಲ್ಲಿದೆ. ಇದೀಗ ಗಾಯಿತ್ರಿ ಜಾಲಿಹಾಳ್ ತಾಯಿ ಶಿವಕ್ಕ ಹುಬ್ಬಳ್ಳಿಯಲ್ಲಿ (Hubballi) ಪತ್ರಿಕಾಗೋಷ್ಠಿ ನಡೆಸಿ ಕಣ್ಣೀರು ಹಾಕಿದ್ದಾರೆ. ಅಲ್ಲದೆ, ಮುಕಳೆಪ್ಪ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಮಗಳನ್ನು ಮತಾಂತರ ಮಾಡಿಲ್ಲ ಎಂದು ಖ್ವಾಜಾ ಹೇಳುತ್ತಿದ್ದಾನೆ. ಆದರೆ, ಮೋಸ ಮಾಡಿದ್ದಾನೆ. ಆತನ ಮೇಲೆ ನಮಗೆ ನಂಬಿಕೆ ಇಲ್ಲ. ಆತ ಮುಂದೊಂದು ದಿನ ನಮ್ಮ ಮಗಳನ್ನು ತಂಡು ಮಾಡಿ ಫ್ರಿಡ್ಜ್​ನಲ್ಲಿ ಇಡುತ್ತಾನೆ ಎಂದು ಶಿವಕ್ಕ ಆತಂಕ ವ್ಯಕ್ತಪಡಿಸಿದ್ದಾರೆ.

ಗಾಯತ್ರಿಯನ್ನು ಮತಾಂತರ ಮಾಡಲ್ಲ ಎಂದು ಖ್ವಾಜಾ ಹೇಳುತ್ತಾನೆ. ಹಾಗಾದರೆ, ಆತನೇ ನಮ್ಮ ಧರ್ಮಕ್ಕೆ ಬಂದು ಬಿಡಲಿ. ನಾವು ಇಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳುತ್ತೇವೆ. ಖ್ವಾಜಾನ ಬಳಿ ನಮ್ಮ ಮಗಳು ಚೆನ್ನಾಗಿ ಇರಲು ಸಾದ್ಯವಿಲ್ಲ. ಅವರು ಆಕೆಯನ್ನು ಕಡಿದು ಪ್ರಿಡ್ಜ್​​ನಲ್ಲಿಡುತ್ತಾರೆ ಎಂದು ಶಿವಕ್ಕ ಕಣ್ಣೀರು ಹಾಕಿದರು.

ಆಕೆಗೆ ನಮ್ಮ ಧರ್ಮದಲ್ಲಿಯೇ ಮದುವೆ ಮಾಡಲು ಹುಡುಗನನ್ನು ಹುಡುಕುತ್ತಿದ್ದೆವು. ಆಕೆ ಕೂಡಾ ಹುಡುಗನನ್ನು ನೋಡಲು ಹೇಳಿದ್ದಳು. ಆದರೆ ನಂತರ ಮುಕಳೆಪ್ಪ ಮೋಸ ಮಾಡಿ ಮದುವೆಯಾಗಿದ್ದಾನೆ. ನಮ್ಮ ಮಗಳು ನಮಗೆ ಬೇಕು. ದಯವಿಟ್ಟು ನಮ್ಮ ಮಗಳನ್ನು ನಮಗೆ ತಂದು ಕೊಡಿ ಎಂದು ಶಿವಕ್ಕ ಅಲವತ್ತುಕೊಂಡಿದ್ದಾರೆ.

ಮುಕಳೆಪ್ಪ ಜೀವ ಬೆದರಿಕೆ ಹಾಕಿದ್ದ: ಶಿವಕ್ಕ

ತಾಯಿ ಮಗಳು ನಾವು ರೀಲ್ಸ್ ಮಾಡುತ್ತಿದ್ದೆವು. ಮಗಳು ಯಶಸ್ಸುಗಳಿಸುವುದಕ್ಕೆ ಬೆಂಬಲ ಕೊಡುತ್ತೇನೆ. ನಾನು ದೇವರ ಮೇಲೆ ಪ್ರಮಾಣ ಮಾಡಲು ಸಿದ್ಧ. ಅವರು ಲವ್ ಮಾಡಲು, ಮದುವೆಯಾಗಲು ಸಪೋರ್ಟ್ ಮಾಡಿಲ್ಲ. ನಮಗೆ ಆತ ಜೀವ ಬೆದರಿಕೆ ಹಾಕಿದ್ದ ಎಂದು ಅವರು ಹೇಳಿದ್ದಾರೆ. ಹೀಗಾಗಿ ಅವರು ಮದುವೆಯಾದರೂ ಸುಮ್ಮನಾಗಿದ್ದೆವು. ಮದುವೆಯಾಗಿ ನಮ್ಮ ಮನೆಯಲ್ಲಿ ಕೆಲ ದಿನವಿದ್ದರೂ ನಮಗೆ ಗೊತ್ತಾಗಿರಲಿಲ್ಲ. ಅಣ್ಣ-ತಂಗಿಯರ ರೀತಿ ಇರುತ್ತೇವೆ ಎಂದು ಹೇಳಿದ್ದ. ಹಾಗೆ ಹೇಳಿಯೇ ನಮಗೆ ಮೋಸ ಮಾಡಿದ್ದಾನೆ ಎಂದು ಶಿವಕ್ಕ ಹೇಳಿದ್ದಾರೆ.

ಮುಂಡಗೋಡ ಟ್ರಿನಿಟಿ ಹಾಲ್​ನಲ್ಲಿ ಮದುವೆಯೇ ನಡೆದಿಲ್ಲ: ಶ್ರೀರಾಮ ಸೇನೆ ಆರೋಪ

ಖ್ವಾಜಾ ಶಿರಹಟ್ಟಿ ವಿರುದ್ದ ಶ್ರೀರಾಮಸೇನೆ ಸಂಘಟನೆಯವರು ಕಿಡಿಕಾರುವದನ್ನು ಮುಂದುವರಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಶ್ರೀರಾಮಸೇನೆ ಕಾರ್ಯಕರ್ತರು, ಖ್ವಾಜಾ ಶಿರಹಟ್ಟಿ ನಕಲಿ ದಾಖಲಾತಿಗಳನ್ನು ನೀಡಿ ವಿವಾಹವಾಗಿದ್ದಾನೆ. ಮುಂಡಗೋಡದಲ್ಲಿ ನಕಲಿ ವಿಳಾಸ ನೀಡಿದ್ದಾನೆ. ಮುಂಡಗೋಡದಲ್ಲಿರುವ ಟ್ರಿನಿಟಿ ಹಾಲ್​ನಲ್ಲಿ ಗುರುಹಿರಿಯರ ಸಮಕ್ಷಮದಲ್ಲಿ ವಿವಾಹವಾಗಿರುವುದಾಗಿ ಪ್ರಮಾಣ ಪತ್ರವನ್ನು ಮದುವೆ ಸಮಯದಲ್ಲಿ ನೀಡಿದ್ದಾನೆ. ಆದರೆ ಆ ಹಾಲ್​​ನಲ್ಲಿ ಮದುವೆಯೇ ಆಗಿಲ್ಲ. ನಕಲಿ ಸಾಕ್ಷಿಗಳಿಂದ ಸಹಿ ಮಾಡಿಸಿ ಮದುವೆಯಾಗಿದ್ದಾನೆ. ಹೀಗಾಗಿ ವಿವಾಹ ಪ್ರಮಾಣ ಪತ್ರವನ್ನು ರದ್ದು ಮಾಡಬೇಕು. ಜೊತೆಗೆ ಖ್ವಾಜಾ ಮತ್ತು ಅಕ್ರಮ ವಿವಾಹದಲ್ಲಿ ಬಾಗಿಯಾದವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಕೂಡಾ ಹೇಳಿದ್ದಾರೆ.

ಇದನ್ನೂ ಓದಿ: ಮುಕಳೆಪ್ಪ ಮದ್ವೆ ಕಹಾನಿಗೆ ಬಿಗ್ ಟ್ವಿಸ್ಟ್: ಕಾಮಿಡಿ ಕಿಲಾಡಿಯ ಅಂತರ್ ಧರ್ಮೀಯ ವಿವಾಹ ರಹಸ್ಯ ಮತ್ತಷ್ಟು ಬಯಲು

ಒಂದಡೆ, ಈಗಾಗಲೇ ಮದುವೆಯಾಗಿರುವುದಾಗಿ ಹೇಳುತ್ತಿರುವ ಜೋಡಿ ಒಟ್ಟಾಗಿ ಬಾಳುತ್ತಿದೆ. ನಾವು ಪರಸ್ಪರ ಧರ್ಮಗಳನ್ನು ಗೌರವಿಸಿದ್ದು, ನಮಗೆ ಬಾಳಲು ಅವಕಾಶ ನೀಡಿ ಎಂದು ಮೇಲಿಂದ ಮೇಲೆ ಮನವಿ ಮಾಡುತ್ತಲೇ ಇದೆ. ಆದರೆ ಅನ್ಯಧರ್ಮೀಯ ವಿವಾಹವಾಗಿರುವುದಕ್ಕೆ ಯುವತಿ ತಾಯಿ ಮತ್ತು ಹಿಂದೂಪರ ಸಂಘಟನೆಗಳು ಮಾತ್ರ ವಿರೋಧ ಮಾಡುತ್ತಲೇ ಇವೆ. ಮುಂದೆ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:33 pm, Fri, 26 September 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ