ಮಹಿಳೆಯರ ಒಳ ಉಡುಪು ಕದ್ದು ವಿಕೃತಾನಂದ: ಹುಬ್ಬಳ್ಳಿಯಲ್ಲಿ ಸೈಕೋ ವ್ಯಕ್ತಿ ಅಂದರ್​

ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಮನೆ ಹೊರಗೆ ಒಣಗಲೆಂದು ಹಾಕಲಾಗ್ತಿದ್ದ ಮಹಿಳೆಯರ ಒಳ ಉಡುಪುಗಳನ್ನ ಕದಿಯುತ್ತಿದ್ದ ಸೈಕೋ ವ್ಯಕ್ತಿಯೋರ್ವನನ್ನು ಬೆಂಡಿಗೇರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ರಾತ್ರಿ ಸಮಯದಲ್ಲಿ ಮನೆ ಮುಂದೆ ಬಟ್ಟೆ ಹಾಕಿದ್ದನ್ನು ಗಮನಿಸಿಸುತ್ತಿದ್ದ ಈತ, ಕೇವಲ ಮಹಿಳೆಯರ ಒಳ ಉಡುಪುಗಳನ್ನಷ್ಟೇ ಕದಿಯುತ್ತಿದ್ದ ಎಂಬ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಮಹಿಳೆಯರ ಒಳ ಉಡುಪು ಕದ್ದು ವಿಕೃತಾನಂದ: ಹುಬ್ಬಳ್ಳಿಯಲ್ಲಿ ಸೈಕೋ ವ್ಯಕ್ತಿ ಅಂದರ್​
ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ಕಾರ್ತಿಕ್​ ಬಂಧನ
Edited By:

Updated on: Sep 30, 2025 | 4:24 PM

ಹುಬ್ಬಳ್ಳಿ, ಸೆಪ್ಟೆಂಬರ್​ 30: ಮನೆ ಹೊರಗೆ ಒಣಗಲೆಂದು ಹಾಕಲಾಗ್ತಿದ್ದ ಮಹಿಳೆಯರ ಒಳ ಉಡುಪುಗಳನ್ನ ಕದಿಯುತ್ತಿದ್ದ ಸೈಕೋ ವ್ಯಕ್ತಿಯೋರ್ವನನ್ನು ಹುಬ್ಬಳ್ಳಿಯ (Hubli) ಬೆಂಡಿಗೇರಿ ಠಾಣೆಯ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಬಂಧಿತನನ್ನು ನಗರದ ತಂತಿ ನಗರದ ನಿವಾಸಿ, ಸೌಂಡ್ ಸಿಸ್ಟಂ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ತಿಕ್ ಎಂದು ಗರುತಿಸಲಾಗಿದೆ. ಕದ್ದ ಒಳ ಒಡುಪುಗಳನ್ನ ಈತ ವಾರದ ಬಳಿಕ ಅದೇ ಮನೆಯ ಬಳಿ ಎಸೆದು ಹೋಗುತ್ತಿದ್ದ ಎಂಬ ವಿಷಯವೂ ತನಿಖೆ ವೇಳೆ ಬೆಳಕಿಗೆ ಬಂದಿದೆ.

ಘಟನೆ ಏನು?

ಮನೆ ಮುಂದೆ ಒಣಗಿಸುತ್ತಿದ್ದ ಮಹಿಳೆಯರ ಒಳ ಉಡುಪುಗಳು ನಾಪತ್ತೆಯಾಗುತ್ತಿರುವ ಘಟನೆ ವೀರಾಪುರ ಓಣಿಯಲ್ಲಿ ಕಳೆದ ಕೆಲ ತಿಂಗಳಿನಿಂದ ನಡೆಯುತ್ತಿತ್ತು. ತಾವೇ ಸರಿಯಾಗಿ ಬಟ್ಟೆ ಒಣಗಿಸದ ಕಾರಣ ಗಾಳಿಗೆ ಅವು ಹಾರಿ ಹೋಗಿರಬಹುದು ಎಂದು ಆರಂಭದಲ್ಲಿ ಮಹಿಳೆಯರು ಭಾವಿಸಿದ್ದರು. ಆದರೆ ಇದು ಕೇವಲ ಒಂದು ಮನೆಯ ಸಮಸ್ಯೆ ಅಲ್ಲ. ಬದಲಾಗಿ ಏರಿಯಾದಲ್ಲಿಯೇ ಈ ರೀತಿ ಘಟನೆಗಳು ನಡೆಯುತ್ತಿವೆ ಎಂಬ ವಿಷಯ ಗೊತ್ತಾದಾಗ, ಸಿಸಿ ಕ್ಯಾಮರಾಗಳ ಪರಿಶೀಲನೆಗೆ ನಿವಾಸಿಗಳು ಮುಂದಾಗಿದ್ದಾರೆ. ಈ ವೇಳೆ ಮಹಿಳೆಯ ಒಳ ಉಡುಪುಗಳು ನಾಪತ್ತೆಯಾಗ್ತಿರೋದಕ್ಕೆ ಅಸಲಿ ಕಾರಣ ಬಹಿರಂಗಗೊಂಡಿದೆ. ಯುವಕನೋರ್ವ ಅವುಗಳನ್ನು ಕದ್ದು ಹೋಗುವ ದೃಶ್ಯಗಳನ್ನು ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ.

ಮಧ್ಯರಾತ್ರಿ ಬರ್ತಿದ್ದ ಡೇಂಜರ್​ ಸೈಕೋ

ladies Clothes theft: ಮಹಿಳೆಯರ ಒಳ ಉಡುಪು ಕಳ್ಳತನ ಮಾಡುವ ಸೈಕೋ ಕೃತ್ಯ ಸಿಸಿಟಿವಿಯಲ್ಲಿ ಸೆರೆ | #TV9D

ಘಟನೆ ಸಂಬಂಧ ಅರೆಸ್ಟ್​ ಆಗಿರೋ ಕಾರ್ತಿಕ್​, SSLCವರೆಗೆ ಓದಿದ್ದ. ಸೌಂಡ್​ ಸಿಸ್ಟಂ ಅಂಗಡಿಯೊಂದರಲ್ಲಿ ಕೆಲಸ ಮಾಡ್ತಿದ್ದ ಈತ, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಎನ್ನಲಾಗಿದೆ. ರಾತ್ರಿ ಸಮಯದಲ್ಲಿ ಮನೆ ಮುಂದೆ ಬಟ್ಟೆ ಹಾಕಿದ್ದನ್ನು ಗಮನಿಸಿಸುತ್ತಿದ್ದ ಈತ, ಕೇವಲ ಮಹಿಳೆಯರ ಒಳ ಉಡುಪುಗಳನ್ನಷ್ಟೇ ಕದಿಯುತ್ತಿದ್ದ. ಬಳಿಕ ಅವುಗಳನ್ನು ತನ್ನ ಪ್ಯಾಂಟ್ ನೊಳಗೆ ಇಟ್ಟುಕೊಂಡು ವಿಕೃತಾನಂದ ಅನುಭವಿಸುತ್ತಿದ್ದ. ವಾರದ ನಂತರ ಯಾರ ಮನೆಯ ಬಟ್ಟೆಗಳನ್ನು ಕದ್ದಿರುತ್ತಿದ್ದನೋ, ಅದೇ ಮನೆಯ ಬಳಿ ಅವನ್ನು ಎಸೆದು ಹೋಗುತ್ತಿದ್ದ ಎಂಬ ವಿಷಯ ತನಿಖೆ ವೇಳೆ ಗೊತ್ತಾಗಿದೆ.

ವಿಷಯ ಬೆಳಕಿಗೆ ಬರ್ತಿದ್ದಂತೆ ಆರೋಪಿ ವಿರುದ್ಧ ಸ್ಥಳೀಯರು ಬೆಂಡಿಗೇರಿ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಿಸಿ ಕ್ಯಾಮರಾ ದೃಶ್ಯಗಳ ಆಧಾರದ ಮೇಲೆ ಕಾರ್ತಿಕ್ ನನ್ನು ಈಗ ಬಂಧಿಸಲಾಗಿದೆ. ಸೈಕೋಪಾತ್ ಕಂಬಿ ಹಿಂದೆ ಹೋದ ಕಾರಣ ಸ್ಥಳೀಯರು ನಿಟ್ಟುಸಿರು ಬಬಿಟ್ಟಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಂಜಯ್ಯಾ ಚಿಕ್ಕಮಠ

ಸಂಜಯ್ಯಾ ಚಿಕ್ಕಮಠ. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ರಾಮನಾಳ. ಪತ್ರಿಕೋದ್ಯಮ ದಲ್ಲಿ ಕರ್ನಾಟಕ ವಿವಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ.‌ಕಳೆದ 14 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್​ನಿಂದ ಆರಂಭವಾದ ವೃತ್ತಿ ಬದುಕು, ಕಲಬುರಗಿ, ಕೊಪ್ಪಳದಿಂದ ಇದೀಗ ಹುಬ್ಬಳ್ಳಿಗೆ ಬಂದಿದ್ದು, ಉತ್ತರ ಕರ್ನಾಟಕ ಪ್ರಮುಖ ವಾಣಿಜ್ಯ ನಗರ ಹುಬ್ಬಳ್ಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಕೃಷಿ ನನ್ನಿಷ್ಟ.ಆದ್ರೆ ಕ್ರೈಮ್, ಜನರ ಬದುಕು ಬವಣೆಯ ಸುದ್ದಿಗಳನ್ನೇ ಮಾಡಿದ್ದೇ ಹೆಚ್ಚು.

Read More
Loading...
Unable to load recommendations.
Follow Us