ಹುಬ್ಬಳ್ಳಿಯಲ್ಲಿ ಇಂದು ವಿದ್ಯುತ್ ವ್ಯತ್ಯಯ: ಇಲ್ಲಿದೆ ಕರೆಂಟ್ ಕಟ್ ಆಗುವ ಏರಿಯಾ ಪಟ್ಟಿ
ಹುಬ್ಬಳ್ಳಿಯ ಪ್ರಮುಖ ಟ್ರಾನ್ಸ್‌ಫಾರ್ಮರ್ ಸೆಂಟರ್ ಶಿಫ್ಟ್ ಆಗಿರುವ ಕಾರಣ ಈ ಕೆಳಕಂಡ ಪ್ರದೇಶಗಳಲ್ಲಿ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ದೇಶದಲ್ಲೇ ಸಾಕಷ್ಟು ಚರ್ಚೆಯಲ್ಲಿದೆ. ಸ್ಮರ್ಟ್ ಸಿಟಿ ಪ್ರಾಜೆಕ್ಟ್ ಅಡಿಯಲ್ಲಿ ಹುಬ್ಬಳ್ಳಿ ಸಾಕಷ್ಟು ಅಭಿವೃದ್ದಿಯಾಗುತ್ತಿದೆ. ಸ್ಮಾರ್ಟ್ ಸಿಟಿ ಕೆಲಸ ಈಗಾಗಲೆ ಆರಂಭವಾಗಿದೆ. ಈ ಯೋಜನೆಯಡಿ ವಿದ್ಯುತ್ ಸರಬರಾಜಿಗೂ ಹೊಸ ರೂಪ ನೀಡಲಾಗುತ್ತಿದೆ. ನಗರದ ಟ್ರಾನ್ಸ್‌ಫಾರ್ಮರ್ ಸೆಂಟರ್ ಶಿಫ್ಟ್ ಆಗಿರುವ ಕಾರಣ ಈ ಕೆಳಕಂಡ ಪ್ರದೇಶಗಳಲ್ಲಿ ಬೆಳಗ್ಗೆ 10:00 ರಿಂದ ಸಂಜೆ 4:00 ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಏರಿಯಾಗಳು
ಶೆಟ್ಟರ್ ಓಣಿ, ಚೋಟಿ ಮಸೀದಿ, ಬದಿ ಮಸೀದಿ, ಗಣೇಶಪೇಟೆ ಮುಖ್ಯರಸ್ತೆ ಮತ್ತು ವಾಲ್ವೇಕರ ಗಲಿಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.