ಸರ್ಕಾರದ ತಂತ್ರಾಂಶದಲ್ಲಿ ಎಡವಟ್ಟು; ಲಸಿಕೆ ಪಡೆಯದಿದ್ದರೂ ಸಿಗುತ್ತಿದೆ ಲಸಿಕೆ ಪಡೆದ ಸರ್ಟಿಫಿಕೆಟ್

ಹುಬ್ಬಳ್ಳಿಯ ಮಂಟೂರು ರೋಡ್ ನಿವಾಸಿ M.S.ಸುಂದರ್ ಜುಲೈನಲ್ಲಿ ಮೊದಲ ಡೋಸ್ ಪಡೆದಿದ್ದರು. ಹೀಗಾಗಿ 2ನೇ ಡೋಸ್ ಲಸಿಕೆ ಪಡೆಯಲು ಲಸಿಕಾ ಕೇಂದ್ರಕ್ಕೆ ಹೋದಾಗ ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ. ಸುಂದರ್ ತಮ್ಮ 2ನೇ ಡೋಸ್ ಅಕ್ಟೋಬರ್‌ನಲ್ಲಿ ಪಡೆಯಬೇಕಾಗಿತ್ತು. ಅನಿವಾರ್ಯ ಕಾರಣಗಳಿಂದಾಗಿ ಹೋಗಲು ಸಾಧ್ಯವಾಗಿಲ್ಲ.

ಸರ್ಕಾರದ ತಂತ್ರಾಂಶದಲ್ಲಿ ಎಡವಟ್ಟು; ಲಸಿಕೆ ಪಡೆಯದಿದ್ದರೂ ಸಿಗುತ್ತಿದೆ ಲಸಿಕೆ ಪಡೆದ ಸರ್ಟಿಫಿಕೆಟ್
ಸಾಂಕೇತಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Dec 04, 2021 | 9:13 AM

ಹುಬ್ಬಳ್ಳಿ: ಮಹಾಮಾರಿ ಕೊರೊನಾ ಆತಂಕ ಹೆಚ್ಚಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ತೆರಳಿ ಲಸಿಕೆ ಹಾಕುತ್ತಿದ್ದಾರೆ. ಆದ್ರೆ ಕೆಲವರಿಗೆ ಲಸಿಕೆ ಪಡೆಯದಿದ್ದರೂ ಲಸಿಕೆ ಪಡೆದಿರುವ ಸರ್ಟಿಫಿಕೆಟ್ ಸಿಕ್ಕಿದೆ. ತಾಂತ್ರಿಕ ಸಮಸ್ಯೆಯಿಂದ ಲಸಿಕೆ ಪಡೆದಂತೆ ಸರ್ಟಿಫಿಕೆಟ್ ಸಿಕ್ಕಿದೆ.

ಹುಬ್ಬಳ್ಳಿಯ ಮಂಟೂರು ರೋಡ್ ನಿವಾಸಿ M.S.ಸುಂದರ್ ಜುಲೈನಲ್ಲಿ ಮೊದಲ ಡೋಸ್ ಪಡೆದಿದ್ದರು. ಹೀಗಾಗಿ 2ನೇ ಡೋಸ್ ಲಸಿಕೆ ಪಡೆಯಲು ಲಸಿಕಾ ಕೇಂದ್ರಕ್ಕೆ ಹೋದಾಗ ಇಂತಹದೊಂದು ಘಟನೆ ಬೆಳಕಿಗೆ ಬಂದಿದೆ. ಸುಂದರ್ ತಮ್ಮ 2ನೇ ಡೋಸ್ ಅಕ್ಟೋಬರ್‌ನಲ್ಲಿ ಪಡೆಯಬೇಕಾಗಿತ್ತು. ಅನಿವಾರ್ಯ ಕಾರಣಗಳಿಂದಾಗಿ ಹೋಗಲು ಸಾಧ್ಯವಾಗಿಲ್ಲ. ಹೀಗಾಗಿ 2 ದಿನದ ಹಿಂದೆ ಲಸಿಕೆ ಪಡೆಯಲು ಹೋಗಿದ್ದರು. ಈ ವೇಳೆ ವೈದ್ಯಕೀಯ ಸಿಬ್ಬಂದಿ ಅವರ ಮೊಬೈಲ್ ನಂಬರ್ ಕೋವಿಡ್ ತಂತ್ರಾಂಶದಲ್ಲಿ ಹಾಕುತ್ತಿದ್ದಂತೆ ನಿಮಗೆ ಈಗಾಗಲೇ ಎರಡನೇ ಡೋಸ್ ಆಗಿದೆ ಎಂದು ಬಂದಿದೆ. ಅವರ ಮೊಬೈಲ್ನಲ್ಲಿಯೇ ಪ್ರಮಾಣ ಪತ್ರ ಡೌನ್‌ಲೋಡ್ ಮಾಡಿ ತೋರಿಸಿದ್ದಾರೆ.

ಇದನ್ನು ಕಂಡ ಸುಂದರ್ ಶಾಕ್ ಆಗಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ್ದಾರೆ. ಆಗ ಲಸಿಕಾ ಕೇಂದ್ರದ ಸಿಬ್ಬಂದಿ ಅದೇಗೆ ಬಂದಿದೆ ನಮಗೆ ಗೊತ್ತಿಲ್ಲ ಎಂದಿದ್ದಾರೆ. ನಿಮಗಂತೂ ಎರಡನೇ ಡೋಸ್ ಹಾಕಲು ಅವಕಾಶ ಇಲ್ಲ ಎಂದು ಹೇಳಿದ್ದಾರೆ. ನಂತರ ಸುಂದರ್, ನಾನು ಎರಡು ಡೋಸ್ ಹಾಕಿಸಿಕೊಂಡಿದ್ದರೇ ನಾನೇಕೆ ಮತ್ತೆ ಲಸಿಕೆ ತೆಗೆದುಕೊಳ್ಳಲು ಬರುತ್ತಿದ್ದೆ. ಸರಕಾರವಾಗಲಿ, ವೈದ್ಯರಾಗಲಿ ಮೂರನೇ ಡೋಸ್‌ಗೆ ಅವಕಾಶ ನೀಡಿದ್ದಾರೆಯೇ? ನಾನೇಕೆ ಹೆಚ್ಚಿನ ಡೋಸ್ ಪಡೆಯಲಿ? ಎಂದು ಪ್ರಶ್ನಿಸಿದ್ದಾರೆ. ಆಗ ಅವರು ಹೇಳುವುದು ಸರಿ ಎಂದು ಆಧಾರ ಕಾರ್ಡ್ ನಂಬರ್ ಹಾಕಿ ಲಸಿಕೆ ನೋಂದಣಿ ಮಾಡಲು ಮುಂದಾಗಿದ್ದಾರೆ. ಆದ್ರೆ, ಅವರ ಆಧಾರ್ ಕಾರ್ಡ್‌ನಿಂದ ಎರಡನೇ ಡೋಸ್ ಲಸಿಕೆ ಪ್ರಮಾಣ ಪತ್ರ ಬಂದಿದ್ದರಿಂದ ನೋಂದಣಿ ಆಗಿಲ್ಲ. ಕೊನೆಗೆ ಪಾನ್‌ಕಾರ್ಡ್ ಗುರುತಿನ ಮೇಲೆ ನೋಂದಣಿ ಮಾಡಿ ಲಸಿಕೆ ಹಾಕಿದ್ದಾರೆ.

ಇದನ್ನೂ ಓದಿ: ಡಿಸೆಂಬರ್​ಗೆ ಕೊರೊನಾ 3ನೆಯ ಅಲೆ; ಜನ ಇನ್ನೂ ‘ನಮಗೆ ಬ್ಯಾಡಾ ಕೊರೊನಾ ಲಸಿಕೆ’ ಅಂತಿದ್ದಾರೆ- ಎಚ್ಚರಿಕೆ ಇರಲಿ

Published On - 9:07 am, Sat, 4 December 21