ಧಾರವಾಡ ಡಿಸಿ ಕಚೇರಿ ಬಳಿ ಗಲಾಟೆ: ಕೈಕೊಯ್ದುಕೊಂಡು ಆರೋಪಿಯಿಂದ ಹೈಡ್ರಾಮ

ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಧಾರವಾಡ ಉಪನಗರ ಠಾಣೆ ಪೊಲೀಸರ ವಿರುದ್ಧ ಆರೋಪ ಮಾಡಿ, ರಕ್ತ ಸುರಿಸಿಕೊಂಡು ಪ್ರತಿಭಟಿಸಿದ್ದಾನೆ

ಧಾರವಾಡ ಡಿಸಿ ಕಚೇರಿ ಬಳಿ ಗಲಾಟೆ: ಕೈಕೊಯ್ದುಕೊಂಡು ಆರೋಪಿಯಿಂದ ಹೈಡ್ರಾಮ
ಪ್ರಾತಿನಿಧಿಕ ಚಿತ್ರ

ಧಾರವಾಡ: ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದಿದ್ದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪ್ರಕರಣದ ಪ್ರಮುಖ ಆರೋಪಿ ರೌಡಿಶೀಟರ್ ಮನು ಆಲಿಯಾಸ್ ಮನ್ಮಥ ಕೈಕುಯ್ದುಕೊಂಡು ನಾಟಕವಾಡಿದ್ದಾನೆ. ಧಾರವಾಡದ ಶ್ರೀರಾಂಪುರ ಬಡಾವಣೆಯಲ್ಲಿ ನಡೆದ ವಿದ್ಯಮಾನಕ್ಕೆ ಜನರು ಸಾಕ್ಷಿಯಾದರು. ನ 30ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದಿದ್ದ ಗಲಾಟೆ ವೇಳೆ ನಾನು ಅಲ್ಲಿ ಇರಲಿಲ್ಲ. ಆದರೂ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಧಾರವಾಡ ಉಪನಗರ ಠಾಣೆ ಪೊಲೀಸರ ವಿರುದ್ಧ ಆರೋಪ ಮಾಡಿ, ರಕ್ತ ಸುರಿಸಿಕೊಂಡು ಪ್ರತಿಭಟಿಸಿದ್ದಾನೆ. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಬಳಿ ಈಚೆಗೆ ವಿದ್ಯಾರ್ಥಿಯೊಬ್ಬನನ್ನು ಪುಂಡರ ಗುಂಪು ಥಳಿಸಿತ್ತು. ಈ ವೇಳೆ ಅಲ್ಲಿದ್ದ ಪೊಲೀಸರು ರಕ್ಷಣೆ ನೀಡಲಿಲ್ಲ ಎಂಬ ಟೀಕೆಗಳು ಕೇಳಿಬಂದಿದ್ದವು.

ಮೊಟ್ಟೆ ವಿತರಣೆಗೆ ವಿರೋಧ ಶಾಲಾ‌ ಮಕ್ಕಳಿಗೆ ಮೊಟ್ಟೆ ವಿತರಣೆಗೆ ವಿರೋಧ ವ್ಯಕ್ತವಾಗಿದೆ. ಧಾರವಾಡದಲ್ಲಿ ಬಸವ ಧರ್ಮ ಪೀಠದ ಆರು ಪೀಠಾಧಿಪತಿಗಳ ನೇತೃತ್ವದಲ್ಲಿ ಅಕ್ಕಮಹಾದೇವಿ ಅನುಭಾವ ಪೀಠದಲ್ಲಿ ಶನಿವಾರ ಸಭೆ ನಡೆಯಿತು. ಹದಿನೈದಕ್ಕೂ ಹೆಚ್ಚು ಮಠಾಧೀಶರು ಸಭೆಯಲ್ಲಿ ಭಾಗಿಯಾಗಿದ್ದರು. ಗಂಗಾದೇವಿ ಮಾತಾಜಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೂಡಲ ಸಂಗಮ ಬಸವ ಧರ್ಮಪೀಠದ ಮಾತಾಜಿ ಆದೇಶ ವಾಪಸ್ ಪಡೆಯುವಂತೆ ಸರ್ಕಾರಕ್ಕೆ ಆಗ್ರಹಿಸಿದರು. ಆದೇಶ ವಾಪಸ್ ಪಡೆಯದಿದ್ದಲ್ಲಿ ಮುಂದೆ ಹೋರಾಟ ನಡೆಸಲು ನಿರ್ಧರಿಸಲಾಯಿತು.

ವಿದ್ಯಾರ್ಥಿನಿಗೆ ಕಿರುಕುಳ: ಆಟೊ ಚಾಲಕ ಬಂಧನ ಮಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆ ಪೊಲೀಸರು ಆಟೊ ಚಾಲಕನನ್ನು ಬಂಧಿಸಿದ್ದಾರೆ. ತನ್ನ ಆಟೋದಲ್ಲಿ ಶಾಲೆಗೆ ಬರುತ್ತಿದ್ದ ಮಕ್ಕಳಿಗೆ ಈತ ನಿತ್ಯ ಕಿರುಕುಳ ನೀಡುತ್ತಿದ್ದ. ಇದು ತಿಳಿದ ನಂತರ ಪೋಷಕರು ಮಕ್ಕಳನ್ನು ಶಾಲೆಯ ಬಸ್​ಗೆ ಕಳುಹಿಸುತ್ತಿದ್ದರು.

ಇದನ್ನೂ ಓದಿ: ಧಾರವಾಡ: ಎಸ್​ಡಿಎಮ್​ ವಿದ್ಯಾರ್ಥಿನಿಯಿಂದ ಸಹೋದರನಿಗೆ ಹರಡಿದ ಕೊರೊನಾ ಸೋಂಕು; ಶಾಲೆಗೆ ರಜೆ ಘೋಷಣೆ ಇದನ್ನೂ ಓದಿ: ಧಾರವಾಡ: ಇದುವರೆಗೆ ಯಾರಲ್ಲೂ ಹೊಸತಳಿಯ ವೈರಾಣು ಕಂಡುಬಂದಿಲ್ಲ; ಜಿಲ್ಲಾಧಿಕಾರಿ ಮಾಹಿತಿ

Click on your DTH Provider to Add TV9 Kannada