AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವ್ಯಾನಿಟಿ ಬ್ಯಾಗ್​ನಲ್ಲಿ ತ್ರಿಶೂಲ ಇಟ್ಟುಕೊಳ್ಳಿ: ಮಹಿಳೆಯರಿಗೆ ಮುತಾಲಿಕ್ ಕಿವಿಮಾತು

ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಹುಬ್ಬಳ್ಳಿಯಲ್ಲಿ ಹಿಂದೂ ಮಹಿಳೆಯರಿಗೆ ತ್ರಿಶೂಲ ವಿತರಿಸಿ, ಆತ್ಮರಕ್ಷಣೆಗಾಗಿ ಬಳಸುವಂತೆ ಹೇಳಿದ್ದಾರೆ. ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಉಲ್ಲೇಖಿಸಿ, ಮುತಾಲಿಕ್ ಅವರು ಲವ್ ಜಿಹಾದ್ ವಿರುದ್ಧ ಎಚ್ಚರಿಸಿದ್ದಾರೆ. ಅಲ್ಲದೇ ನೇಹಾ ಹಿರೇಮಠರನ್ನು ಹತ್ಯೆ ಮಾಡಿದ ಆರೋಪಿಯನ್ನು ಗಲ್ಲಿಗೆ ಏರಿಸಿ ಎಂದು ಆಗ್ರಹಿಸಿದ್ದಾರೆ.

ವ್ಯಾನಿಟಿ ಬ್ಯಾಗ್​ನಲ್ಲಿ ತ್ರಿಶೂಲ ಇಟ್ಟುಕೊಳ್ಳಿ: ಮಹಿಳೆಯರಿಗೆ ಮುತಾಲಿಕ್ ಕಿವಿಮಾತು
ಪ್ರಮೋದ್ ಮುತಾಲಿಕ್
ಸಂಜಯ್ಯಾ ಚಿಕ್ಕಮಠ
| Edited By: |

Updated on:Apr 18, 2025 | 3:57 PM

Share

ಹುಬ್ಬಳ್ಳಿ, ಏಪ್ರಿಲ್​ 18: ಮಹಿಳೆಯರು ತ್ರಿಶೂಲವನ್ನು (Trishula) ವ್ಯಾನಿಟಿ ಬ್ಯಾಗ್​ನಲ್ಲಿಟ್ಟುಕೊಳ್ಳಿ. ಯಾರಾದರು ಚುಡಾಯಿಸಿದರೆ ಅಥವಾ ಅತ್ಯಾಚಾರ ಮಾಡಲು ಬಂದ್ರೆ ಚುಚ್ಚಿಬಿಡಿ. ಎಲ್ಲಿ ಒದಿಬೇಕು ಅಂತ ಗೊತ್ತಿದೆ ಅಲ್ವಾ, ಅಲ್ಲಿಗೆ ಒದ್ದುಬಿಡಿ ಎಂದು ಶ್ರೀರಾಮಸೇನೆ (Sri Ram Sena) ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik) ಕಿವಿಮಾತು ಹೇಳಿದರು.

ಹುಬ್ಬಳ್ಳಿಯ ಶಿವಕೃಷ್ಣ ಮಂದಿರದಲ್ಲಿ ಶ್ರೀರಾಮ ಸೇನೆವತಿಯಿಂದ ಹಿಂದೂ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಲಾಯಿತು. ಈ ಕಾರ್ಯಕ್ರಮಕ್ಕೆ ಬಂದ ಪ್ರತಿಯೊಬ್ಬ ಹೆಣ್ಮಕ್ಕಳಿಗೂ ಶ್ರೀರಾಮಸೇನೆ ಕಾರ್ಯಕರ್ತರು ತ್ರಿಶೂಲ ಹಂಚಿದರು. ತ್ರಿಶೂಲಗಳನ್ನು ಪಡೆದ ಮಹಿಳೆಯರು ಅದನ್ನು ಪ್ರದರ್ಶನ ಮಾಡಿದರು.

ತ್ರಿಶೂಲ ದೀಕ್ಷೆ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಮೋದ್​ ಮುತಾಲಿಕ್​, ಆಯುಧ ಪೂಜೆ ದಿನ ಮನೆಯಲ್ಲಿ ತಲವಾರ ಪೂಜೆ ಮಾಡಬೇಕು. ಆದರೆ, ಇಂದು ಪುಸ್ತಕ ಪೆನ್ನು ಇಟ್ಟು ಪೂಜೆ ಮಾಡುತ್ತಿದ್ದೇವೆ. ದುರ್ಗಾಮಾತೆಯ ಕೈಯಲ್ಲಿ ಹತ್ತು ಶಸ್ತ್ರಗಳಿವೆ. ಈಶ್ವರನ ಕೈಯಲ್ಲಿ ತ್ರಿಶೂಲವಿದೆ. ಅದನ್ನೇ ಮಹಿಳೆಯರ ಕೈಗೆ ಕೊಡುತ್ತಿದ್ದೇವೆ. ಮುಂದಿನ ಆಯುಧ ಪೂಜೆ ದಿನ ಹರಿತವಾದ ತಲವಾರ ಇಟ್ಟು ಪೂಜೆ ಮಾಡಿ ಎಂದು ಹೇಳಿದರು. ನಾವು ನೀಡುತ್ತಿರುವ ತ್ರಿಶೂಲ ಬಗ್ಗೆ ಯಾರು ಭಯ ಪಡಬೇಡಿ. ಹಿಡಿಕೆ ಬಿಟ್ಟು ಆರು ಇಂಚು ಉದ್ದ ಇದ್ದರೇ ಅದು ಆಯುಧವಾಗುತ್ತದೆ. ಆದರೆ, ನಾವು ನೀಡುತ್ತಿರುವುದು ಮೂರು ಇಂಚಿನ ತ್ರಿಶೂಲ. ಯಾರಾದರು ಕೇಳಿದರೆ, ಮೊದಲು ಅವರಿಗೆ ಚುಚ್ಚಿಬಿಡಿ. ಪೊಲೀಸರು ಬಂದೂಕಿಗೆ ಪೂಜೆ ಮಾಡುತ್ತಾರೆ. ಹೀಗಾಗಿ, ನಾವು ಯಾಕೆ ತ್ರಿಶೂಲ ಇಟ್ಟುಕೊಳ್ಳಲು ಭಯ ಪಡಬೇಕು ಎಂದರು.

ಇದನ್ನೂ ಓದಿ
Image
ಮುತಾಲಿಕ್ ತರಾಟೆ ಬೆನ್ನಲ್ಲೇ ನೇಹಾ ಹಂತಕ ಫಯಾಜ್​ ಕಾಲೇಜಿನಿಂದಲೇ ಅಮಾನತು
Image
ಹುಬ್ಬಳ್ಳಿ ನೇಹಾ ಕೊಲೆ: ಚಾರ್ಜ್​ ಶೀಟ್​ನಲ್ಲಿ ಲವ್​ ಜಿಹಾದ್​ ಉಲ್ಲೇಖವಿಲ್ಲ!
Image
ನೇಹಾಳ ಹತ್ಯೆ ಕೋಪದಲ್ಲಿ ಮಾಡಿದ್ದಲ್ಲ! ಪೂರ್ವ ತಯಾರಿ ನಡೆಸಿದ್ದ ಫಯಾಜ್​
Image
ನೇಹಾ ಕೊಲೆ ಪ್ರಕರಣ: ಹತ್ಯೆಗೆ ಕಾರಣ ಬಾಯಿಟ್ಟ ಫಯಾಜ್

ನೇಹಾ ಹತ್ಯೆ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು

ಇಂದಿಗೆ ಸಿರಿಯಾಗಿ ಒಂದು ವರ್ಷದ ಹಿಂದೆ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆಯಾಯಿತು. ಹತ್ಯೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು. ಅಂದಾಗ ಮಾತ್ರ ನೇಹಾ ಹಿರೇಮಠ ಹತ್ಯೆಗೆ ನ್ಯಾಯ ಸಿಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರೇ ತಿಂಗಳಿನಲ್ಲಿ ನ್ಯಾಯ ಕೊಡಿಸ್ತೇನೆ ಅಂತ ಹೇಳಿದ್ದರು. ಆದರೆ, ನಿದ್ರಾಮಯ್ಯನವರೇ ಏನು ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಾಲಯ ಆತನಿಗೆ ಜಾಮೀನು ನೀಡಿದರೇ, ನಾವೇ ಅವನನ್ನು ಕಲ್ಲು ಹೊಡೆದು ಕೊಂದು ಹಾಕುತ್ತೇವೆ. ನೇಹಾ ಹಿರೇಮಠ ಪ್ರೀತಿ ಮಾಡಿರಬಹುದು. ಆದರೆ, ಮದುವೆ ಆಗಲ್ಲ ಅಂತ ಹೇಳಿದ್ದಕ್ಕೆ ಕೊಂದು ಬಿಡುವುದಾ? ಮೋಸ ಮಾಡಿ ಹಿಂದೂ ಯುವತಿಯರನ್ನು ಲವ್ ಜಿಹಾದ್ ಮಾಡುತ್ತಿದ್ದಾರೆ. ಅಬ್ದಲ್ಲಾ, ಅಶೋಕ ಅಂತ ಹೇಳಿ ಪ್ರೀತಿ ಮಾಡುತ್ತಾನೆ. ಪ್ರೀತಿ ಮಾಡಿ ಬುರ್ಕಾ ಹಾಕಿಸಿ, ನಮಾಜ ಮಾಡಿಸಿ ಗೋ ಮಾಂಸ ತಿನಿಸುತ್ತಿದ್ದಾರೆ. ಈ ದೇಶವನ್ನು ಮತ್ತೊಂದು ಪಾಕಿಸ್ತಾನ ಮಾಡಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ: ನನ್ನ ಮಗಳ ಕೊಲೆ ಹಿಂದೆ ಶಾಸಕರ ಕೈವಾಡವಿದೆ, ನೇಹಾ ತಂದೆ ಆರೋಪ

ಅವರಿಗೆ ಹಂದಿ ಕಂಡರೆ ಆಗಲ್ಲ

ಒಂಬತ್ತು ಲಕ್ಷ ಎಕರೆ ವಕ್ಪ್ ಬೋರ್ಡ್ ಅಧಿನದಲ್ಲಿದೆ. ಇದು ಐದು ಪಾಕಿಸ್ತಾನ, ಹತ್ತು ಬಾಂಗ್ಲಾದೇಶಕ್ಕೆ ಸಮಾನವಾಗಿದೆ. ಜನಸಂಖ್ಯೆ ಹೆಚ್ಚಿಸಲು‌ ನಾಲ್ಕೈದು ಮದುವೆ ಮಾಡಿಕೊಳ್ಳುತ್ತಾರೆ. ಹಮ್ ಪಾಂಚ್, ಹಮಾರ ಪಚ್ಚಿಸ್ ಅಂತಾರೆ. ಹೀಗಾಗಿ, ಅವರಿಗೆ ಹಂದಿ ಕಂಡರೆ ಆಗಲ್ಲ. ಹಿಂದೂ ದಂಪತಿಗಳು ಮೂರು, ನಾಲ್ಕು, ಡಜನ್​ಗಟ್ಟಲೆ ಮಕ್ಕಳಿಗೆ ಜನ್ಮ ನೀಡಿ. ಮೂರನೇ ಮಗುವಿನ ಶಿಕ್ಷಣ, ಆರೋಗ್ಯ ಜವಾಬ್ದಾರಿ ಶ್ರಿರಾಮಸೇನೆ ಹೊತ್ತುಕೊಳ್ಳುತ್ತೆ. ದೇಶ ಉಳಿಸಬೇಕಾಗಿದೆ. ನಿಮಗೆ ಸಾಕಲು ಸಾದ್ಯವಾಗದಿದ್ದರೆ ನಾವು ಸಾಕುತ್ತೇವೆ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:54 pm, Fri, 18 April 25

ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ