ಹುಬ್ಬಳ್ಳಿ ನೇಹಾ ಕೊಲೆ: ಚಾರ್ಜ್​ ಶೀಟ್​ನಲ್ಲಿ ಲವ್​ ಜಿಹಾದ್​ ಉಲ್ಲೇಖವಿಲ್ಲ, ಮದುವೆಗೆ ನಿರಾಕರಿಸಿದ್ದಕ್ಕೆ ಹತ್ಯೆ

Neha Hiremath Murder Case: ಗುರುವಾರ (ಏ.18) ರಂದು ಮಧ್ಯಾಹ್ನ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ, ವಿದ್ಯಾರ್ಥಿನಿ ನೇಹಾ ಕೊಲೆಯಾಗಿತ್ತು. ಪ್ರಕರಣದ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಹುಬ್ಬಳ್ಳಿ ನೇಹಾ ಕೊಲೆ: ಚಾರ್ಜ್​ ಶೀಟ್​ನಲ್ಲಿ ಲವ್​ ಜಿಹಾದ್​ ಉಲ್ಲೇಖವಿಲ್ಲ, ಮದುವೆಗೆ ನಿರಾಕರಿಸಿದ್ದಕ್ಕೆ ಹತ್ಯೆ
ನೇಹಾ ಹಿರೇಮಠ
Follow us
| Updated By: ವಿವೇಕ ಬಿರಾದಾರ

Updated on:Jul 10, 2024 | 10:28 AM

ಹುಬ್ಬಳ್ಳಿ, ಜುಲೈ 10: ಹುಬ್ಬಳ್ಳಿ-ಧಾರವಾಡ (Hubballi-Dharwad) ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ (Niranjan Hiremath) ಪುತ್ರಿ ನೇಹಾ ಹಿರೇಮಠ (Neha Hiremath) ಕೊಲೆ ರಾಜ್ಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಕೊಲೆ ಹಿಂದೆ ಲವ್​ ಜಿಹಾದ್ (Love Jihad)​ ಇದೆ ಅಂತ ನೇಹಾ ತಂದೆ ನಿರಂಜನ ಹಿರೇಮಠ, ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ರಾಜ್ಯವ್ಯಾಪಿ ಪ್ರತಿಭಟನೆ ಮಾಡಿದ್ದವು. ಪ್ರಕರಣದ ತನಿಖೆ ನಡೆಸಿದ ಸಿಐಡಿ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಲವ್​ ಜಿಹಾದ್​ ಉಲ್ಲೇಖವಿಲ್ಲ. ಮದುವೆಗೆ ನಿರಾಕರಿಸಿದಕ್ಕೆ ನೇಹಾಳನ್ನು ಫಯಾಜ್​ ಕೊಲೆ ಮಾಡಿದ್ದಾನೆ ಎಂದು ಸಿಐಡಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.​

ಕೊಲೆಯಾದ 81 ದಿನಗಳ ಬಳಿಕ ಸಿಐಡಿ ಅಧಿಕಾರಿಗಳು 483 ಪುಟಗಳ ಚಾರ್ಜ್​ ಶೀಟ್​ ಸಲ್ಲಿಸಿದ್ದಾರೆ. ಚಾರ್ಜ್​​ ಶೀಟ್​ನಲ್ಲಿ ನೇಹಾಳ ತಂದೆ, ತಾಯಿ, ಸಹೋದರ, ಸಹಪಾಠಿಗಳು, ಗೆಳತಿಯರು, ಬಿವಿಬಿ ಕಾಲೇಜಿನ ಉಪನ್ಯಾಸಕರು ಸೇರಿದಂತೆ 99 ಸಾಕ್ಷ್ಯಗಳನ್ನು ಉಲ್ಲೇಖಿಸಿದ್ದಾರೆ.

ನೇಹಾ ಹಿರೇಮಠ ಮತ್ತು ಆರೋಪಿ ಫಯಾಜ್​ ಹುಬ್ಬಳ್ಳಿಯ ಪಿಸಿ ಜಾಬಿನ್​ ಕಾಲೇಜಿನಲ್ಲಿ ಬಿಸಿಎ ಅಧ್ಯಯನ ಮಾಡುತ್ತಿದ್ದಾಗ ಸಹಪಾಠಿಗಳಾಗಿದ್ದರು. ಇಬ್ಬರೂ ಆರಂಭದಲ್ಲಿ ಸ್ನೇಹಿತರಾಗಿದ್ದರು. ನಂತರ ಪ್ರೀತಿಸಲು ಆರಂಭಿಸಿದ್ದರು. 2024ರ ಮಾರ್ಚ್​ ತಿಂಗಳಲ್ಲಿ ಇಬ್ಬರ ಮಧ್ಯೆ ಜಗಳವಾಗಿ, ಮನಸ್ತಾಪ ಉಂಟಾಯಿತು. ಬಳಿಕ ನೇಹಾ ಆರೋಪಿ ಫಯಾಜ್​ ಜೊತೆ ಮಾತನಾಡುವುದನ್ನು ನಿಲ್ಲಿಸಿದ್ದಳು.

ಇದನ್ನೂ ಓದಿ: ಯುವತಿಯೊಂದಿಗೆ ಮಾತನಾಡಿದ್ದಕ್ಕೆ ಬಾಲಕನ ಮೇಲೆ ಹಲ್ಲೆ

ಇದರಿಂದ ಫಯಾಜ್ ಹತಾಶಗೊಂಡು ನೇಹಾಳನ್ನು ಕೊಲೆ ಮಾಡಬೇಕೆಂದು ನಿರ್ಧಿರಿಸಿದ್ದನು. ಹೀಗಾಗಿ, ಏಪ್ರಿಲ್​ 18 ರಂದು ಕೊಲೆ ಮಾಡುವ ಮೂರು ದಿನಗಳ ಮೊದಲು ಏಪ್ರಿಲ್​ 15 ರಂದು ಧಾರವಾಡದ ಆರ್ಯ ಸೂಪರ್​ ಬಜಾರ್​ನಲ್ಲಿ ಚಾಕು ಖರೀದಿಸಿದ್ದಾನೆ. ಫಯಾಜ್​ ಚಾಕು ಖರೀದಿಸಿದ ಸಿಸಿಟಿವಿ ದೃಶ್ಯ ಸಿಐಡಿ ಅಧಿಕಾರಿಗಳಿಗೆ ಲಭ್ಯವಾಗಿದೆ. ನಂತರ ಬಳಿಕ ನ್ಯೂ ಸಾಯಿ ಗಾರ್ಮೆಂಟ್​ನಲ್ಲಿ ಟೋಪಿ ಕೆಂಪು ಟೋಪಿ ಖರೀದಿಸಿದ್ದಾನೆ.

ಬಳಿಕ ಏಪ್ರಿಲ್​ 18 ರಂದು ಫಯಾಜ್​ ಬಿವಿಬಿ ಕಾಲೇಜಿಗೆ ಬಂದು ನೇಹಾ ಎದುರು “ಇಷ್ಟು ದಿನ ಪ್ರೀತಿ ಮಾಡಿ ಈಗ ಮೋಸ ಮಾಡುತ್ತಿದ್ದೀಯಾ? ನನ್ನನ್ನು ಮದುವೆ ಆಗುವುದಿಲ್ಲವೇ? ಈ ನಿನ್ನನ್ನು ಬಿಡುವುದಿಲ್ಲವೆಂದು ಸಂಜೆ 4:40ರ ಸುಮಾರಿಗೆ ಚಾಕುವಿನಿಂದ ಮನಬಂದಂತೆ ಚುಚ್ಚಿ ಕೊಲೆ ಮಾಡಿ, ಚಾಕು ಅಲ್ಲೆ ಬಿಟ್ಟು ಓಡಿ ಹೋಗಿದ್ದಾನೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖವಾಗಿದೆ. ​

ಆರೋಪಿ ಫಯಾಜ್​ ವಿರುದ್ಧ ಕಲಂ 302 (ಮರಣದಂಡನೆ ಇಲ್ಲವೇ ಜೀವಾವಧಿ ಶಿಕ್ಷೆ) 341 (ಒಂದು ತಿಂಗಳು ಜೈಲು ಶಿಕ್ಷೆ) ಹಾಗೂ 506 (ಜೀವ ಬೆದರಿಕೆಗಾಗಿ 7 ವರ್ಷಗಳ ಜೈಲು ಶಿಕ್ಷೆ) ಅಡಿಯಲ್ಲಿ ದೋಷಾರೋಪ ಹೊರಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:21 am, Wed, 10 July 24

ತಾಜಾ ಸುದ್ದಿ
ಕಾರವಾರ ಜಿಲ್ಲೆಯಲ್ಲಿ ಗುಡ್ಡ ಕುಸಿತದ ಮತ್ತೊಂದು ಪ್ರಕರಣ, ಪ್ರಾಣಾಪಾಯವಿಲ್ಲ
ಕಾರವಾರ ಜಿಲ್ಲೆಯಲ್ಲಿ ಗುಡ್ಡ ಕುಸಿತದ ಮತ್ತೊಂದು ಪ್ರಕರಣ, ಪ್ರಾಣಾಪಾಯವಿಲ್ಲ
ಸದನದ ಬಾವಿಗಿಳಿದು ಬಿಜೆಪಿ ಶಾಸಕರ ಪ್ರತಿಭಟನೆ, ಸಿದ್ದರಾಮಯ್ಯ ಅಸಹಾಯಕ
ಸದನದ ಬಾವಿಗಿಳಿದು ಬಿಜೆಪಿ ಶಾಸಕರ ಪ್ರತಿಭಟನೆ, ಸಿದ್ದರಾಮಯ್ಯ ಅಸಹಾಯಕ
ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಯಾವತ್ತೂ ಕಡಿಮೆಯಾಗಲ್ಲ: ಸಿದ್ದರಾಮಯ್ಯ
ಹಿಂದುಳಿದ ವರ್ಗಗಳ ಬಗ್ಗೆ ಕಾಳಜಿ ಯಾವತ್ತೂ ಕಡಿಮೆಯಾಗಲ್ಲ: ಸಿದ್ದರಾಮಯ್ಯ
ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ಮಾಗುಂಡಿ ಸೇತುವೆ ಮುಳುಗಡೆ, ಸಂಪರ್ಕ ಕಡಿತ
ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ: ಮಾಗುಂಡಿ ಸೇತುವೆ ಮುಳುಗಡೆ, ಸಂಪರ್ಕ ಕಡಿತ
ಭಾರೀ ಗಾಳಿಗೆ ಅಂಗಡಿಗಳ ಮೇಲೆ ಉರುಳಿ ಬಿದ್ದ ಮೊಬೈಲ್​ ಟವರ್; ತಪ್ಪಿದ ಅನಾಹುತ
ಭಾರೀ ಗಾಳಿಗೆ ಅಂಗಡಿಗಳ ಮೇಲೆ ಉರುಳಿ ಬಿದ್ದ ಮೊಬೈಲ್​ ಟವರ್; ತಪ್ಪಿದ ಅನಾಹುತ
ಪ್ರತಿ ವಿಷಯಕ್ಕೂ ಅಶ್ವಥ್ ನಾರಾಯಣ ಎದ್ದು ನಿಂತು ಮಾತಾಡೋದು ಸರಿಯಲ್ಲ: ಸಿಎಂ
ಪ್ರತಿ ವಿಷಯಕ್ಕೂ ಅಶ್ವಥ್ ನಾರಾಯಣ ಎದ್ದು ನಿಂತು ಮಾತಾಡೋದು ಸರಿಯಲ್ಲ: ಸಿಎಂ
ಅಶೋಕ್​ಗೆ ಸದನದಲ್ಲೇ ಮುಜುಗರವಾಗುವಂತೆ ಟಾಂಗ್ ಕೊಟ್ಟ ಯತ್ನಾಳ್
ಅಶೋಕ್​ಗೆ ಸದನದಲ್ಲೇ ಮುಜುಗರವಾಗುವಂತೆ ಟಾಂಗ್ ಕೊಟ್ಟ ಯತ್ನಾಳ್
ದರ್ಶನ್ ನೋಡಲು ಬಂದು ನಿರಾಶರಾಗಿ ತೆರಳಿದ ನಟ ಶ್ರೀಕಿ
ದರ್ಶನ್ ನೋಡಲು ಬಂದು ನಿರಾಶರಾಗಿ ತೆರಳಿದ ನಟ ಶ್ರೀಕಿ
ಉಡುಪಿಯಲ್ಲಿ ಮುಂದುವರೆದ ನಿರಂತರ ಮಳೆ: ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಉಡುಪಿಯಲ್ಲಿ ಮುಂದುವರೆದ ನಿರಂತರ ಮಳೆ: ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಬಾರದ ಬಸ್; ಲೋಕೋಪಯೋಗಿ ಕಚೇರಿಯಲ್ಲೇ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಬಾರದ ಬಸ್; ಲೋಕೋಪಯೋಗಿ ಕಚೇರಿಯಲ್ಲೇ ವಿದ್ಯಾರ್ಥಿಗಳಿಂದ ಪ್ರತಿಭಟನೆ