AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಸ್ರೇಲ್​ನಿಂದ ತಾಯ್ನಾಡಿಗೆ ಮರಳಿದ ದಂಪತಿ ಸೇರಿ ಮೂವರು ಕನ್ನಡಿಗರು; ಯುದ್ಧಭೂಮಿ ಬಗ್ಗೆ ಹೇಳಿದ್ದಿಷ್ಟು

ಇಸ್ರೇಲ್ನಿಂದ ಮೂರನೇ ವಿಮಾನದಲ್ಲಿ‌ 9 ಮಂದಿ ಕನ್ನಡಿಗರು ಬಂದಿದ್ದು, ಅದರಲ್ಲಿ ಬೆಳಗ್ಗೆ ಮೂವರು ಕನ್ನಡಿಗರು ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಇನ್ನು ಇಸ್ರೇಲ್​ನ ಟೆಲ್ ಅವೀವ್​ನಲ್ಲಿದ್ದ ಹುಬ್ಬಳ್ಳಿ ದಂಪತಿ, ಜೂನ್ ತಿಂಗಳಲ್ಲಿ ಇಸ್ರೇಲ್​​ಗೆ ಹೋಗಿದ್ದರು. ಈ ದಂಪತಿ, ಲೇಸರ್ ಟೆಕ್ನಾಲಜಿ ಪೋಸ್ಟ್​ ಡಾಕ್ಟರಲ್ ಫೆಲೋ (PDF) ವ್ಯಾಸಂಗಕ್ಕಾಗಿ ತೆರಳಿದ್ದರು.

ಇಸ್ರೇಲ್​ನಿಂದ ತಾಯ್ನಾಡಿಗೆ ಮರಳಿದ ದಂಪತಿ ಸೇರಿ ಮೂವರು ಕನ್ನಡಿಗರು; ಯುದ್ಧಭೂಮಿ ಬಗ್ಗೆ ಹೇಳಿದ್ದಿಷ್ಟು
ಇಸ್ರೇಲ್​ನಿಂದ ಬಂದ ಕನ್ನಡಿಗ ದಂಪತಿ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 15, 2023 | 4:28 PM

ಧಾರವಾಡ, ಅ.15: ಇಸ್ರೇಲ್​(Israel)ನಲ್ಲಿ ಯುದ್ಧ ಪರಿಸ್ಥಿತಿ ಎದುರಾಗಿದ್ದು, ಈ ಹಿನ್ನಲೆ ‘ಆಪರೇಷನ್ ಅಜಯ್’ ಮೂಲಕ ಅಲ್ಲಿರುವ ಭಾರತೀಯರನ್ನು ಕರೆತರುವ ಕೆಲಸ ನಡೆಯುತ್ತಿದೆ. ಅದರಂತೆ ಈಗಾಗಲೇ ಎರಡು ವಿಮಾನಗಳಲ್ಲಿ ಕರೆತರಲಾಗಿದ್ದು, ಇಂದು ಮೂರನೇ ವಿಮಾನದಲ್ಲಿ ಹುಬ್ಬಳ್ಳಿ(Hubballi) ಮೂಲದ ದಂಪತಿ ಅಖಿಲೇಶ್ ಕಾರಗದ್ದೆ ಹಾಗೂ ಕೃತಿ ಎಂಬುವವರು  ತಾಯ್ನಾಡಿಗೆ ಮರಳಿದ್ದಾರೆ. ಈ ಹಿನ್ನಲೆ ಧಾರವಾಡ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತದಿಂದ ದಂಪತಿಗೆ ಸ್ವಾಗತ ಕೋರಲಾಗಿದೆ.

ಬೆಳಗ್ಗೆ ಮೂವರು ಕನ್ನಡಿಗರು ರಾಜ್ಯಕ್ಕೆ ವಾಪಸ್

ಇಸ್ರೇಲ್ನಿಂದ ಮೂರನೇ ವಿಮಾನದಲ್ಲಿ‌ 9 ಮಂದಿ ಕನ್ನಡಿಗರು ಬಂದಿದ್ದು, ಅದರಲ್ಲಿ ಬೆಳಗ್ಗೆ ಮೂವರು ಕನ್ನಡಿಗರು ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಇನ್ನು ಇಸ್ರೇಲ್​ನ ಟೆಲ್ ಅವೀವ್​ನಲ್ಲಿದ್ದ ಹುಬ್ಬಳ್ಳಿ ದಂಪತಿ, ಜೂನ್ ತಿಂಗಳಲ್ಲಿ ಇಸ್ರೇಲ್​​ಗೆ ಹೋಗಿದ್ದರು. ಈ ದಂಪತಿ, ಲೇಸರ್ ಟೆಕ್ನಾಲಜಿ ಪೋಸ್ಟ್​ ಡಾಕ್ಟರಲ್ ಫೆಲೋ (PDF) ವ್ಯಾಸಂಗಕ್ಕಾಗಿ ತೆರಳಿದ್ದರು. ಇದೀಗ ಇಸ್ರೇಲ್​ನಿಂದ ದೆಹಲಿಗೆ ಹಾಗೂ ಅಲ್ಲಿಂದ ಹುಬ್ಬಳ್ಳಿ ಏರ್​ಪೋರ್ಟ್​ಗೆ ಸುರಕ್ಷಿತವಾಗಿ ಆಗಮಿಸಿದ್ದಾರೆ. ಮರಳಿ ತಾಯ್ನಾಡಿಗೆ ಆಗಮಿಸಿದ ಹಿನ್ನಲೆ ದಂಪತಿ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಆಪರೇಷನ್ ‘ಅಜಯ್’: 2ನೇ ಹಂತದಲ್ಲಿ ಇಸ್ರೇಲ್​​ನಿಂದ ಭಾರತಕ್ಕೆ ಬಂದ 235 ಭಾರತೀಯರು

ಯುದ್ದಭೂಮಿ ಬಗ್ಗೆ ಹೇಳಿದ ತುಮಕೂರು ಮೂಲದ ವಿದ್ಯಾರ್ಥಿ

ತುಮಕೂರು: ಇನ್ನು ಇಸ್ರೇಲ್​ನಿಂದ ಬಂದ ಬಳಿಕ ಮಾತನಾಡಿದ ಅವರು ‘ನಾವು ಇದ್ದಂತಹ ಸ್ಥಳದಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ, ಗಾಜಾ ಭಾಗ ಹಾಗೂ ಇಸ್ರೇಲ್​ನ ದಕ್ಷಿಣ ಭಾಗದಲ್ಲಿ ಯುದ್ದ ನಡೆಯುತ್ತಿದೆ. ನಮಗೆಲ್ಲ ಎಂಬ್ಬೆಸ್ಸಿ ಉತ್ತಮ ಸಹಾಯ ಮಾಡಿ‌ ಕರೆದುಕೊಂಡು ಬಂದಿದೆ. ಕುಟುಂಬಸ್ಥರು ಭಯಬೀತರಾಗಿದ್ರು, ಇದೀಗ ಮನೆಗೆ ತೆರಳುತ್ತಿದ್ದೇವೆ. ಅಲ್ಲಿನ ಯುದ್ದ ಮುಗಿದ ನಂತರ ಮತ್ತೆ ವಾಪಸ್ ಹೋಗುತ್ತೇವೆ ಎಂದು ತುಮಕೂರು ಮೂಲದ ವಿದ್ಯಾರ್ಥಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ; ಪೇಶಾವರದಲ್ಲಿ ಭಾರತ ಪ್ರತಿದಾಳಿ
ಪಾಕಿಸ್ತಾನದಿಂದ ಕದನವಿರಾಮ ಉಲ್ಲಂಘನೆ; ಪೇಶಾವರದಲ್ಲಿ ಭಾರತ ಪ್ರತಿದಾಳಿ
ಜಮ್ಮುವಿನಲ್ಲಿ ಪಾಕ್​ನಿಂದ ಶೆಲ್ ದಾಳಿ; ಓರ್ವ ಯೋಧ ಸಾವು, 7 ಸೈನಿಕರಿಗೆ ಗಾಯ
ಜಮ್ಮುವಿನಲ್ಲಿ ಪಾಕ್​ನಿಂದ ಶೆಲ್ ದಾಳಿ; ಓರ್ವ ಯೋಧ ಸಾವು, 7 ಸೈನಿಕರಿಗೆ ಗಾಯ
ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಕದನ ವಿರಾಮ ಉಲ್ಲಂಘನೆ: ಪಾಕಿಸ್ತಾನದಿಂದ ಭಾರತದ ಮೇಲೆ ಮತ್ತೆ ದಾಳಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಭಾರತೀಯ ಸೇನೆ ಸಂವಿಧಾನಿಕ ಮೌಲ್ಯಗಳಲ್ಲಿ ವಿಶ್ವಾಸ ಹೊಂದಿದೆ: ಸೋಫಿಯಾ ಖುರೇಷಿ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಒಂದನ್ನು ಜೈಸಲಮ್ಮೇರ್​ನಲ್ಲಿ ಪುಡಿಗಟ್ಟಿದರೆ ಮತ್ತೊಂದನ್ನು ಸಿರ್ಸಾದಲ್ಲಿ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
ಎಲ್ಲ ಸರಿಯಾದ ಬಳಿಕ ಊರಿಗೆ ವಾಪಸ್ಸು ಬರುತ್ತೇವೆ ಎನ್ನುತ್ತಿರುವ ಜನ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
Live: ರಕ್ಷಣಾ ಇಲಾಖೆಯಿಂದ ಸುದ್ದಿಗೋಷ್ಠಿ
ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ನೋಂದಣಿಗೆ ಬಂದವರಲ್ಲಿ ಯುವತಿಯರು ಮತ್ತು ವಯಸ್ಕರೂ ಶಾಮೀಲು!
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿರುವ ಕ್ರಮಗಳ ಜೊತೆಗಿದ್ದೇವೆ: ಮುಸಲ್ಮಾನರು
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ
ದಿನೇದಿನೆ ಅತೀವ ಹಾನಿಗೊಳಗಾಗುತ್ತಿದ್ದರೂ ಬುದ್ಧಿ ಕಲಿಯದ ಪಾಕಿಸ್ತಾನ