AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡದಲ್ಲಿ ವಿಜಯಪುರದ ಡಾ ಆರ್ ಕೆ ಕುಲಕರ್ಣಿ ಅವರಿಗೆ ಕವಿ ಕಾವ್ಯ ಮನ್ನಣೆ ಪ್ರಶಸ್ತಿ ಪ್ರದಾನ

ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಡಾ ಆರ್ ಕೆ ಕುಲಕರ್ಣಿಯವರು “ ಸಾವಿತ್ರಿ”ಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅರವಿಂದರ ಈ ಕೃತಿಯ ಆಧ್ಯಾತ್ಮಿಕ ಹಿನ್ನೆಲೆ ಹಾಗೂ ಶ್ರೇಷ್ಠತೆ, ಸಾಹಿತ್ಯಿಕ ಮಹತ್ವದ ಕುರಿತು ಅವರು ಬೆಳಕು ಚೆಲ್ಲಿದರು.

ಧಾರವಾಡದಲ್ಲಿ ವಿಜಯಪುರದ ಡಾ ಆರ್ ಕೆ ಕುಲಕರ್ಣಿ ಅವರಿಗೆ ಕವಿ ಕಾವ್ಯ ಮನ್ನಣೆ ಪ್ರಶಸ್ತಿ ಪ್ರದಾನ
ಕವಿ ಕಾವ್ಯ ಮನ್ನಣೆ ಪುರಸ್ಕೃತ ಡಾ ಆರ್ ಕೆ ಕುಲಕರ್ಣಿ, ಡಾ ಶ್ಯಾಮಸುಂದರ ಬಿದರಕುಂದಿ, ಶ್ರೀ ದಾಮೋದರ ಕುಲಕರ್ಣಿ, ಶ್ರೀ ಸುರೇಶ ಕುಲಕರ್ಣಿ, ಶ್ರೀ ಮಧಸೂಧನ ಕುಲಕರ್ಣಿ ಹಾಗೂ ಪ್ರತಿಷ್ಠಾನದ ಸದಸ್ಯರು.
TV9 Web
| Edited By: ಸಾಧು ಶ್ರೀನಾಥ್​|

Updated on: Jan 01, 2023 | 7:09 PM

Share

ಧಾರವಾಡ: ಸುಶೀಲಾ ಕುಲಕರ್ಣಿ ಸ್ಮೃತಿ ಪ್ರತಿಷ್ಠಾನ ನೀಡುವ “ಕವಿ ಕಾವ್ಯ ಮನ್ನಣೆ” ಪ್ರಶಸ್ತಿಯನ್ನು ಈ ಬಾರಿ ವಿಜಯಪುರದ ಡಾ ಆರ್ ಕೆ ಕುಲಕರ್ಣಿ (Dr RK Kulkarni) ಅವರಿಗೆ ನೀಡಲಾಯಿತು. ಸ್ಮೃತಿ ಪ್ರತಿಷ್ಠಾನ, ಸುದಾಮ ದತ್ತಿ ನಿಧಿ ಯವರು ದಿವಂಗತ ನಾರಾಯಣ್ ಎಲ್ ಕುಲಕರ್ಣಿ ಅವರ ಸ್ಮರಣಾರ್ಥ ನೀಡುವ ಈ ಪ್ರಶಸ್ತಿಯನ್ನು (Award) ಧಾರವಾಡದಲ್ಲಿ (Dharwad) ಶನಿವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಯಿತು. ವೃತ್ತಿಯಿಂದ ಇಂಗ್ಲಿಷ್ ಹಿರಿಯ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಡಾ ಆರ್ ಕೆ ಕುಲಕರ್ಣಿಯವರು ಸಾಹಿತ್ಯದಲ್ಲಿ (Literature) ಕೂಡ ಕೃಷಿ ಮಾಡಿದವರು. ಶ್ರೀ ಅರವಿಂದರ ಪ್ರಸಿದ್ಧ “ ಸಾವಿತ್ರಿ” ಸೇರಿದಂತೆ ಹಲವು ಕೃತಿಗಳನ್ನು ಅನುವಾದ ಮಾಡಿದ್ದಾರೆ. ಹಾಗೂ ಕವನ ಸಂಕಲ, ಚಿಂತನ ಗ್ರಂಥಗಳನ್ನು, ಆಧ್ಯಾತ್ಮಿಕ ಕೃತಿಗಳನ್ನು, ಲೇಖನಗಳನ್ನು ಬರೆದಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಡಾ ಆರ್ ಕೆ ಕುಲಕರ್ಣಿಯವರು “ ಸಾವಿತ್ರಿ”ಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅರವಿಂದರ ಈ ಕೃತಿಯ ಆಧ್ಯಾತ್ಮಿಕ ಹಿನ್ನೆಲೆ ಹಾಗೂ ಶ್ರೇಷ್ಠತೆ, ಸಾಹಿತ್ಯಿಕ ಮಹತ್ವ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಅವರು ಬೆಳಕು ಚೆಲ್ಲಿದರು.

ಇದನ್ನೂ ಓದಿ:

ಸಾಹಿತಿಗಳ ಪ್ರತಿಮೆಗಳುಳ್ಳ ಬಯಲು ವಸ್ತುಸಂಗ್ರಹಾಲಯ ಸ್ಥಾಪನೆಗೆ ಸರ್ಕಾರದ ಚಿಂತನೆ: ಸಿಎಂ ಬಸವರಾಜ ಬೊಮ್ಮಾಯಿ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ ಶ್ಯಾಮಸುಂದರ ಬಿದರಕುಂದಿ ಅವರು ವಹಿಸಿಕೊಂಡಿದ್ದರು, ಪ್ರೊ ಜಿ ಎಸ್ ಕುಲಕರ್ಣಿ ಅವರು ಡಾ ಆರ್ ಕೆ ಕುಲಕರ್ಣಿ ಕುರಿತು ಮಾತನಾಡಿದರು, ಸುರೇಶ್ ಕುಲಕರ್ಣಿ ಅವರು ಸ್ವಾಗತ ಮಾಡಿದರು ಹಾಗೂ ಶ್ರೀಮತಿ ರಂಜನಾ ಕುಲಕರ್ಣಿ ನಿರೂಪಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ
ಧಾರಾಕಾರ ಮಳೆ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರು; ವಿಡಿಯೋ ನೋಡಿ