ಬೆಂಗಳೂರು: ಕರ್ನಾಟಕ ಸಂಪುಟದ ನೂತನ ಸಚಿವರಿಗೆ ಕೊವಿಡ್, ನೆರೆ ವೀಕ್ಷಣೆಗೆ ಜಿಲ್ಲೆ ಹಂಚಿಕೆ ಮಾಡುತ್ತೇವೆ. ಸಚಿವರು ನಾಳೆಯೇ ಜಿಲ್ಲೆಗಳಿಗೆ ತೆರಳಿ ಪರಿಹಾರ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಆಗಸ್ಟ್ 4) ಸುದ್ದಿಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದರು. ಕೊರೊನಾ 3ನೇ ಅಲೆ, ನೆರೆ ವೀಕ್ಷಣೆ ಜತೆ ಪರಿಹಾರದ ವ್ಯವಸ್ಥೆ ಮಾಡಲಾಗುತ್ತದೆ. ಸ್ಥಳೀಯವಾಗಿ ಪರಿಹಾರ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಂಜೆಯಷ್ಟೇ ಸಿಎಂ ಬೊಮ್ಮಾಯಿ ತಿಳಿಸಿದ್ದರು. ಇದೀಗ ಜಿಲ್ಲಾವಾರು ಉಸ್ತುವಾರಿಯಾಗಿ ನೂತನ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
29 ನೂತನ ಸಚಿವರಿಗೆ ಜಿಲ್ಲೆಗಳ ಹಂಚಿಕೆ ಮಾಡಿ ಆದೇಶ; ಯಾವ ಜಿಲ್ಲೆಗೆ ಯಾವ ಸಚಿವರು?
ಕೊರೊನಾ ನಿರ್ವಹಣೆ, ನೆರೆ ಕಾರ್ಯಗಳಿಗೆ ಉಸ್ತುವಾರಿಯಾಗಿ ನೂತನ ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ಯಾವ ಜಿಲ್ಲೆಗೆ ಯಾರು ನೆರೆ ಪರಿಹಾರ ಹಾಗೂ ಕೊರೊನಾ ನಿರ್ವಹಣೆ ಉಸ್ತುವಾರಿ ಸಚಿವರು ಎಂಬ ಪಟ್ಟಿ ಇಲ್ಲಿ ನೀಡಲಾಗಿದೆ.
ಎಸ್ಟಿಪಿಎಸ್ ಹಣ ಬೇರೆ ಇಲಾಖೆಗೆ ನೀಡುತ್ತಿದ್ದ ಹಿನ್ನೆಲೆ ಶೀಘ್ರದಲ್ಲೇ ಎಸ್ಟಿ ಸೆಕ್ರೆಟರಿಯೇಟ್ ರಚನೆ ತೀರ್ಮಾನ ಮಾಡುತ್ತೇವೆ. ಎಸ್ಟಿ ಸಮುದಾಯದ ಬೇಡಿಕೆಯಂತೆ ಸೆಕ್ರೆಟರಿಯೇಟ್ ರಚನೆ ಮಾಡುತ್ತೇವೆ ಎಂದು ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಸಬಲೀಕರಣಕ್ಕೆ ಅಭಿಯಾನ ನಡೆಸುತ್ತೇವೆ. ಅಭಿಯಾನ ನಡೆಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ ಎಂದೂ ಬೊಮ್ಮಾಯಿ ಹೇಳಿದ್ದಾರೆ.
ಇದನ್ನೂ ಓದಿ: ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿ: ಸಚಿವ ಸಂಪುಟ ರಚನೆ ಬಳಿಕ ಸಿಎಂ ಮೊದಲ ಮಾತು
Karnataka Cabinet: ಬಸವರಾಜ ಬೊಮ್ಮಾಯಿ ಟೀಂನ ನೂತನ ಸಚಿವರಲ್ಲಿ ಯಾರಿಗೆ ಯಾವ ಖಾತೆ? ಸಂಭಾವ್ಯ ಪಟ್ಟಿ ಇಲ್ಲಿದೆ
(District In charge for Covid19 Coronavirus and Flood Relief works in Karnaraka details here)
Published On - 8:56 pm, Wed, 4 August 21