ಕರ್ನಾಟಕದ ಕಿಂಗ್‌ಮೇಕರ್: ರಶೀದ್‌ ಪುಸ್ತಕದಲ್ಲಿ ಡಿಕೆ ಶಿವಕುಮಾರ್ ರಾಜಕೀಯ ಪಯಣ,ಬೈಕ್‌ ಪ್ರೇಮ ಅನಾವರಣ

ಪತ್ರಕರ್ತ ರಶೀದ್‌ ಕಿದ್ವಾಯಿ ಅವರು 'ಡಿ.ಕೆ. ಶಿವಕುಮಾರ್ – ಕಾಂಗ್ರೆಸ್ ಕ್ರೈಸಿಸ್ ಮ್ಯಾನೇಜರ್, ಕರ್ನಾಟಕದ ಕಿಂಗ್‌ಮೇಕರ್'ಎನ್ನುವ ಪುಸ್ತಕ ಬರೆದಿದ್ದು, ಇಂದು (ಜುಲೈ 16) ರಶೀದ್‌ ಕಿದ್ವಾಯಿ ಬರೆದ ಪುಸ್ತಕವನ್ನು ಡಿಕೆ ಶಿವಕುಮಾರ್ ಅವರಿಗೆ ಹಸ್ತಾಂತರಿಸಿದ್ದು, ಯೆಜ್ಡಿ ರೋಡ್‌ಕಿಂಗ್ ಬೈಕ್‌ ಜತೆಗಿನ ಅವರ ಒಡನಾಟದ ಬಗ್ಗೆ ಪುಸ್ತಕದಲ್ಲಿ ಬರೆಯಲಾಗಿದೆ.

ಕರ್ನಾಟಕದ ಕಿಂಗ್‌ಮೇಕರ್: ರಶೀದ್‌ ಪುಸ್ತಕದಲ್ಲಿ ಡಿಕೆ ಶಿವಕುಮಾರ್ ರಾಜಕೀಯ ಪಯಣ,ಬೈಕ್‌ ಪ್ರೇಮ ಅನಾವರಣ
Dk Shivakumar Book

Updated on: Jul 16, 2026 | 10:51 PM

ನವದೆಹಲಿ, (ಜುಲೈ 16): ಪತ್ರಕರ್ತ ರಶೀದ್‌ ಕಿದ್ವಾಯಿ (senior journalist Rasheed Kidwai) ಅವರು ಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಅವರ ಬಗ್ಗೆ ಪುಸ್ತಕ ಬರೆದಿದ್ದಾರೆ. ‘ಡಿ.ಕೆ. ಶಿವಕುಮಾರ್ – ಕಾಂಗ್ರೆಸ್ ಕ್ರೈಸಿಸ್ ಮ್ಯಾನೇಜರ್, ಕರ್ನಾಟಕದ ಕಿಂಗ್‌ಮೇಕರ್’ (“Congress’s Crisis Manager, Karnataka’s Kingmaker”) ಎನ್ನುವ ಪುಸ್ತಕವನ್ನು ಬರೆದಿದ್ದು, ಪುಸ್ತಕದಲ್ಲಿ, ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್‌ ಅವರ ಯೆಜ್ಡಿ ಬೈಕ್‌ ಪ್ರೀತಿಯ ಅನಾವರಣವಾಗಿದೆ. ಇನ್ನು ಇಂದು (ಜುಲೈ 16) ರಶೀದ್‌ ಕಿದ್ವಾಯಿ ಅವರು ಡಿ.ಕೆ. ಶಿವಕುಮಾರ್​​ಗೆ ಪುಸ್ತಕ ಹಸ್ತಾಂತರಿಸಿದ್ದು, ಇದಕ್ಕೆ ಡಿಕೆ ಶಿವಕುಮಾರ್ ಸಹ ತಮ್ಮ ಜೀವನ ಚರಿತ್ರೆಯುಳ್ಳ ಪುಸ್ತಕವನ್ನು ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

ಪುಸ್ತಕದಲ್ಲೇನಿದೆ?

ರಾಜಕೀಯ ಪತ್ರಕರ್ತ ರಶೀದ್ ಕಿದ್ವಾಯಿ ಅವರು ಬರೆದಿರುವ ಈ ಇಂಗ್ಲಿಷ್ ಪುಸ್ತಕವನ್ನು  ಹ್ಯಾಚೆಟ್ ಇಂಡಿಯಾ (Hachette India) ಪ್ರಕಾಶನ ಸಂಸ್ಥೆಯು ಪ್ರಕಟಿಸಿದ್ದು,   ಅಪರೂಪದ ಬಾಂಧವ್ಯದ ಕಥೆಯನ್ನು ಹಿರಿಯ ಪತ್ರಕರ್ತ ರಶೀದ್ ಕಿದ್ವಾಯಿ ಅವರ ಹೊಸ ಪುಸ್ತಕ ‘ಡಿ.ಕೆ. ಶಿವಕುಮಾರ್ – ಕಾಂಗ್ರೆಸ್ ಕ್ರೈಸಿಸ್ ಮ್ಯಾನೇಜರ್, ಕರ್ನಾಟಕದ ಕಿಂಗ್‌ಮೇಕರ್’ನಲ್ಲಿ ವಿವರಿಸಲಾಗಿದೆ. ಶಿವಕುಮಾರ್ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಶಾಸಕರಾಗಿ ಆಯ್ಕೆಯಾದಾಗಿನಿಂದ ಹಿಡಿದು, ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಬಂದಿರುವ ಹಾದಿಯನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ನೋಡಿ: ಡಿಕೆ ಶಿವಕುಮಾರ್ ​ಲಕ್ಕಿ ಬೈಕ್‌ಗೆ ಹೊಸ ರೂಪ, ಆ ದಿನಗಳನ್ನು ಮೆಲುಕು ಹಾಕಿದ ಡಿಸಿಎಂ


ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಏರಿಳಿತಗಳು, ಕನಕಪುರದಿಂದ ಆರಂಭವಾದ ಅವರ ಪ್ರಯಾಣ ಮತ್ತು ಅವರ ರಾಜಕೀಯ ತಂತ್ರಗಳನ್ನು ವಿವರವಾಗಿ ಪರಿಚಯಿಸುತ್ತದೆ. ಶಿವಕುಮಾರ್‌ ವಿದ್ಯಾರ್ಥಿಯಾಗಿದ್ದ 1980ರ ಕಾಲವನ್ನು ಸ್ಮರಿಸಿರುವ ಲೇಖಕರು, ಅವರ ಕಾಲೇಜು ದಿನಗಳಿಂದಳಲ್ಲೂ ಅವರ ಸಂಘಟನಾ ಚಾತುರ್ಯವನ್ನೂ ಈ ಪುಸ್ತಕದಲ್ಲಿ ವಿವರಿಸಿದ್ದಾರೆ. ಅಲ್ಲದೇ ಯೆಜ್ಡಿ ರೋಡ್‌ಕಿಂಗ್ ಬೈಕ್‌ ಜತೆಗಿನ ಅವರ ಒಡನಾಟದ ಬಗ್ಗೆ ಬರೆಯಲಾಗಿದೆ.

ಯಾರು ಈ ರಶೀದ್ ಕಿದ್ವಾಯಿ ?

ರಶೀದ್ ಕಿದ್ವಾಯಿ ಹಿರಿಯ ಪತ್ರಕರ್ತ, ಲೇಖಕ ಮತ್ತು ರಾಜಕೀಯ ವಿಶ್ಲೇಷಕರು. ಅವರು ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ORF) ನಲ್ಲಿ ಸಂದರ್ಶಕ ಸಹೋದ್ಯೋಗಿಯಾಗಿದ್ದಾರೆ. ದಿ ಟೆಲಿಗ್ರಾಫ್‌ನ ಮಾಜಿ ಸಹಾಯಕ ಸಂಪಾದಕರಾದ ಕಿದ್ವಾಯಿ ಸರ್ಕಾರ, ರಾಜಕೀಯ, ಸಮುದಾಯ ವ್ಯವಹಾರಗಳು ಮತ್ತು ಹಿಂದಿ ಸಿನಿಮಾಗಳನ್ನು ಟ್ರ್ಯಾಕ್ ಮಾಡುತ್ತಾರೆ ಮತ್ತು ಈ ವಿಷಯಗಳ ಕುರಿತು ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ. ನವದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಪದವಿ ಪಡೆದ ಅವರು ಯುಕೆಯ ಲೀಸೆಸ್ಟರ್ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರು ವಿವಿ ಸುದ್ದಿ ವಾಹಿನಿಗಳಲ್ಲಿ ರಾಜಕೀಯ ವಿಶ್ಲೇಷಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us