AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೀಘ್ರದಲ್ಲೇ ಸಿಎಂ ದೆಹಲಿಗೆ, ಹೈಕಮಾಂಡ್ ಮುಂದೆ ಡಿಕೆ ಶಿವಕುಮಾರ್! ರೋಚಕ ಘಟ್ಟಕ್ಕೆ ಕಾಂಗ್ರೆಸ್ ಪಟ್ಟದ ಆಟ

ನವೆಂಬರ್​ನಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಕ್ರಾಂತಿ ಆಗುತ್ತದೆಯೇ? ಕ್ರಾಂತಿ ಅಂದರೆ ಸಂಪುಟ ಬದಲಾವಣೆಯಾ ಅಥವಾ ಮುಖ್ಯಮಂತ್ರಿಗಳ ಬದಲಾವಣೆಯೇ? ಸಂಪುಟಕ್ಕೂ ಸಿಎಂ ಬದಲಾವಣೆ ವಿಚಾರಕ್ಕೂ ಏನು ಸಂಬಂಧ ಎಂಬುದನ್ನು ಗಮನಿಸುತ್ತಾ ಹೋದರೆ, ಒಂದೊಂದೇ ರೋಚಕ ಸಂಗತಿಗಳು ಹೊರಗೆ ಬರುತ್ತಿವೆ. ಏನದು? ಸಂಪೂರ್ಣ ವಿವರ ಇಲ್ಲಿದೆ.

ಶೀಘ್ರದಲ್ಲೇ ಸಿಎಂ ದೆಹಲಿಗೆ, ಹೈಕಮಾಂಡ್ ಮುಂದೆ ಡಿಕೆ ಶಿವಕುಮಾರ್! ರೋಚಕ ಘಟ್ಟಕ್ಕೆ ಕಾಂಗ್ರೆಸ್ ಪಟ್ಟದ ಆಟ
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್
ಪ್ರಸನ್ನ ಗಾಂವ್ಕರ್​
| Edited By: |

Updated on: Oct 27, 2025 | 7:06 AM

Share

ಬೆಂಗಳೂರು, ಅಕ್ಟೋಬರ್ 27: ನವೆಂಬರ್ 20ಕ್ಕೆ ಎರಡೂವರೆ ವರ್ಷ ಪೂರೈಸುವ ಕಾಂಗ್ರೆಸ್ (Congress) ಸರ್ಕಾರದಲ್ಲೀಗ ಆಂತರಿಕ ಚಟುವಟಿಕೆಗಳು ಬರೀ ನಿಗೂಢವಾಗಿವೆ. ನವೆಂಬರ್ ಕ್ರಾಂತಿ ಸಂಭವಿಸಲಿದೆಯೇ? ಕ್ರಾಂತಿ ಅಂದರೆ ಸಂಪುಟ ಸರ್ಜರಿಯಾ ಅಥವಾ ಸಂಪುಟ ವಿಸ್ತರಣೆಯಾ? ನಾಯಕತ್ವವನ್ನೇ ಅದಲು ಬದಲು ಮಾಡುವ ಆಟವೇ? ಹೀಗೆ ಹತ್ತಾರು ಪ್ರಶ್ನೆಗಳು ಹುಟ್ಟಿಕೊಂಡಿವೆ. ಇತ್ತೀಚೆಗೆ ಸಿಎಂ ಪುತ್ರ ಯತೀಂದ್ರ ಸಿಡಿಸಿದ ಉತ್ತರಾಧಿಕಾರಿ ಬಾಂಬ್​​ನ ಕಂಪನ ‘ಕೈ’ ಮನೆಯನ್ನು ಇನ್ನೂ ನಡುಗಿಸುತ್ತಿದೆ. ಹೀಗಿರುವಾಗ ಸಂಪುಟ ಪುನಾರಚನೆ ಮಾಡಿ ತಮ್ಮ ಕುರ್ಚಿ ಭದ್ರ ಮಾಡಿಕೊಳ್ಳಲು ಮುಂದಾಗಿರುವ ಸಿಎಂ ಸಿದ್ದರಾಮಯ್ಯ (Siddaramaiah), ನವೆಂಬರ್ 15ಕ್ಕೆ ದೆಹಲಿಗೆ ತೆರಳುತ್ತಿದ್ದಾರೆ. ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಸಂಪುಟ ಪುನಾರಚನೆ ಕುರಿತು ಚರ್ಚಿಸಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಮಧ್ಯೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ದೆಹಲಿಗೆ ಹೋಗಲ್ಲ ಎನ್ನುತ್ತಲೇ, ಭಾನುವಾರವೇ ದೆಹಲಿ ತಲುಪಿದ್ದಾರೆ.

ನೋ ಡೆಲ್ಲಿ, ಯಾವ ಹೈಕಮಾಂಡ್​ ನಾಯಕರನ್ನೂ ಭೇಟಿಯಾಗಲ್ಲ ಎಂದು ಭಾನುವಾರ ಬೆಳಗ್ಗೆ 11 ಗಂಟೆಗೆ ಹೇಳಿದ್ದ ಡಿಸಿಎಂ ಡಿಕೆ ಶಿವಕುಮಾರ್, ಮಧ್ಯಾಹ್ನ 1.30 ರ ಸುಮಾರಿಗೆ ದೆಹಲಿ ವಿಮಾನ ಹತ್ತಿದ್ದಾರೆ. ಇದು ತೀವ್ರ ಕುತೂಹಲ ಮೂಡಿಸಿದೆ. ಇದಕ್ಕೂ ಮುನ್ನ ಡಿಸಿಎಂ ಡಿಕೆ ಶಿವಕುಮಾರ್ ಸಚಿವರಿಗೆ ಶಾಸಕರಿಗೆ ನವೆಂಬರ್ 20ರ ಡೆಡ್​ಲೈನ್ ಕೊಟ್ಟಿದ್ದಾರೆ.

ಸಚಿವರು, ಶಾಸಕರಿಗೆ ಡಿಕೆ ಶಿವಕುಮಾರ್ ನ. 20ರ ಡೆಡ್​ಲೈನ್!

ನವೆಂಬರ್ 20ಕ್ಕೆ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರ್ಣವಾಗುತ್ತಿದೆ. ಅದೇ ನವೆಂಬರ್ 20ರ ಡೆಡ್​​ಲೈನ್ ನೀಡಿ ಸಚಿವರಿಗೆ, ಶಾಸಕರಿಗೆ, ಡಿಸಿಸಿ ಅಧ್ಯಕ್ಷರಿಗೆ ಡಿಕೆ ಶಿವಕುಮಾರ್ ಪತ್ರ ಬರೆದಿದ್ದಾರೆ. ‘ಗಾಂಧಿ ಭಾರತ್’ ಶತಮಾನೋತ್ಸವಕ್ಕೆ 100 ಕಾಂಗ್ರೆಸ್ ಕಚೇರಿಗಳಿಗೆ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲು ನವೆಂಬರ್ 20ರ ದಿನ ನಿಗದಿ ಮಾಡಿದ್ದಾರೆ ಡಿಕೆ ಶಿವಕುಮಾರ್. 100 ಕಚೇರಿ ನಿರ್ಮಾಣಕ್ಕೆ ಏಕಕಾಲದಲ್ಲಿ ಶಂಕುಸ್ಥಾಪನೆ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಅದಕ್ಕಾಗಿ ನ. 20ರಂದು ರಾಹುಲ್ ಗಾಂಧಿ ರಾಜ್ಯಕ್ಕೆ ಬರಲಿದ್ದಾರೆ. ಕಚೇರಿ ನಿರ್ಮಾಣಕ್ಕೆ ಸ್ವಂತ ನಿವೇಶನ ಹೊಂದುವ ಪ್ರಕ್ರಿಯೆ ಮುಗಿಸಲು ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ.

ಡಿಸಿಎಂ ಡಿಕೆ ಹೀಗೆ ಹೇಳುತ್ತಿರುವಾಗಲೇ ಹಿಂದೆ ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ಭವಿಷ್ಯ ನುಡಿದಿದ್ದ ಮಾಜಿ ಸಚಿವ ರಾಜಣ್ಣ, ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಸಂಪುಟ ಪುನಾರಚನೆಗೆ ಒಪ್ಪಿಗೆ ಕೊಟ್ರೆ ಸಿದ್ದರಾಮಯ್ಯ 5 ವರ್ಷ ಸಿಎಂ: ಇಲ್ಲದಿದ್ರೆ ರಾಜಕೀಯವೇ ತಲೆಕೆಳಗಾಗುತ್ತೆ: ರಾಜಣ್ಣ

ಸಂಪುಟ ಪುನಾರಚನೆ ಮಾಡುವ ಇರಾದೆಯಲ್ಲಿರುವ ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಒಪ್ಪಿಗೆ ನೀಡಬೇಕು. ಹಾಗೇನಾದರೂ ಹೈಕಮಾಂಡ್ ಒಪ್ಪಿಗೆ ನೀಡಿದರೆ ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿರುತ್ತಾರೆ. ಒಂದು ವೇಳೆ ಒಪ್ಪಿಗೆ ಕೊಡದೇ ಇದ್ದರೆ, ರಾಜಕೀಯ ಬೆಳವಣಿಗೆಗಳೇ ತಲೆ ಕೆಳಗಾಗಬಹುದು ಎಂದು ರಾಜಣ್ಣ ಬಾಂಬ್ ಸಿಡಿಸಿದ್ದಾರೆ.

ಇತ್ತ ಸಿಎಂ ಸಂಪುಟ ಪುನಾರಚನೆ ವಿಚಾರವಾಗಿ ಸಿದ್ದರಾಮಯ್ಯ ಹೈಕಮಾಂಡ್ ಕಡೆ ಬೊಟ್ಟು ಮಾಡಿದ್ರೆ, ಡಿಸಿಎಂ ಡಿಕೆ ಶಿವಕುಮಾರ್​ ಅದು ಸಿಎಂಗೆ ಬಿಟ್ಟ ವಿಚಾರ ಎಂದಿದ್ದಾರೆ. ಆದರೆ, ಸಚಿವ ಸತೀಶ್ ಜಾರಕಿಹೊಳಿ ಸಂಪುಟ ಪುನಾರಚನೆ ವಿಚಾರ ಅಂತಿಮ ಹಂತಿಕ್ಕೆ ಬಂದಿರಬಹುದು ಎಂದಿದ್ದಾರೆ.

ಹೈಕಮಾಂಡ್ ಸೂಚಿಸಿದರೆ ಸಚಿವ ಸ್ಥಾನ ತ್ಯಾಗಕ್ಕೂ ಸಿದ್ಧ ಎಂದು ಸಚಿವ ಕೃಷ್ಣಭೈರೇಗೌಡ ಶನಿವಾರ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಿಯಾಂಕ್ ಖರ್ಗೆ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ಏನೇ ಜವಾಬ್ದಾರಿ ಕೊಟ್ರೂ ಸರಿ ಎಂದಿದ್ದಾರೆ.

ಇದನ್ನೂ ಓದಿ: ಪುತ್ರನ ರಾಜಕೀಯ ಪ್ರವೇಶದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಡಿಸಿಎಂ ಡಿ.ಕೆ. ಶಿವಕುಮಾರ್

ಅಲ್ಲಿಗೆ ಒಂದಂತೂ ಸ್ಪಷ್ಟವಾಗಿದೆ. ಹೈಕಮಾಂಡ್ ದಾಳ ಉರುಳಿಸಿದರಷ್ಟೇ ರಾಜ್ಯ ರಾಜಕಾರಣದ ಕ್ರಾಂತಿ, ಕಿಚ್ಚು ಏನಿದೆಯೋ ಅದು ಹೊರಗೆ ಬರಲಿದೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಯಾವಾಗ ದಾಳ ಉರುಳಿಸಲಿದೆ ಎಂಬುದೇ ಸದ್ಯದ ಕುತೂಹಲವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ