ಕೃತಿಕಾ ರೆಡ್ಡಿ ಕೊಲೆ ಬಳಿಕ ಆರೋಪಿ ಮಹೇಂದ್ರ ರೆಡ್ಡಿ ಮಾಡಿದ್ದೇನು ಗೊತ್ತಾ? ಪೊಲೀಸ್ ವಿಚಾರಣೆ ವೇಳೆ ಅಚ್ಚರಿಯ ಸಂಗತಿ ಬಯಲು

ಡಾ ಕೃತಿಕಾ ರೆಡ್ಡಿ ಕೊಲೆ ಪ್ರಕರಣ ಎಲ್ಲೆಡೆ ಸುದ್ದಿ ಮಾಡಿದೆ. ಪ್ರಕರಣಕ್ಕೆ ದಿನಕ್ಕೊಂದು ಆಯಾಮ ಸಿಗುತ್ತಲೇ ಇದೆ. ಈ ನಡುವೆ ತನಿಖೆಯ ವೆಳೆ ಆರೋಪಿ ಮಹೇಂದ್ರ ರೆಡ್ಡಿ ಮತ್ತೊಂದು ಸತ್ಯ ಬಿಚ್ಚಿಟ್ಟಿದ್ದಾನೆ. ಕೊಲೆ ಮಾಡಿದ ನಂತರ ಆರೊಪಿ ತನ್ನ ಪಾಪ ಕಳೆದುಕೊಳ್ಳಲು 15 ದೇವಸ್ಥಾನಗಳಿಗೆ ಭೇಟಿ ನೀಡಿರುವ ವಿಚಾರವನ್ನು ತನಿಖೆ ವೇಳೆ ತಿಳಿಸಿದ್ದಾನೆ.

ಕೃತಿಕಾ ರೆಡ್ಡಿ ಕೊಲೆ ಬಳಿಕ ಆರೋಪಿ ಮಹೇಂದ್ರ ರೆಡ್ಡಿ ಮಾಡಿದ್ದೇನು ಗೊತ್ತಾ? ಪೊಲೀಸ್ ವಿಚಾರಣೆ ವೇಳೆ ಅಚ್ಚರಿಯ ಸಂಗತಿ ಬಯಲು
ಕೃತಿಕಾ ರೆಡ್ಡಿ ಕೊಲೆ ಬಳಿಕ ಆರೋಪಿ ಮಹೇಂದ್ರ ರೆಡ್ಡಿ ಮಾಡಿದ್ದೇನು ಗೊತ್ತಾ?
Edited By:

Updated on: Oct 24, 2025 | 10:43 AM

ಬೆಂಗಳೂರು, ಅಕ್ಟೋಬರ್ 24: ಇತ್ತೀಚೆಗೆ ಡಾ.ಕೃತಿಕಾ ರೆಡ್ಡಿ (Dr. Kruthika Reddy case)  ಕೊಲೆ ಪ್ರಕರಣ ಎಲ್ಲೆಡೆ ಸಂಚಲನ ಮೂಡಿಸಿದೆ. ಈ ಪ್ರಕರಣಕ್ಕೆ ದಿನಕ್ಕೊಂದು ತಿರುವು ಸಿಗುತ್ತಲೇ ಬಂದಿದೆ. ಇದೀಗ ಪೊಲೀಸ್ ವಿಚಾರಣೆ ವೇಳೆ ಮತ್ತೊಮ್ಮೆ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಕೊಲೆ ಆರೋಪಿಯಾದ ಡಾ. ಮಹೇಂದ್ರ ರೆಡ್ಡಿ, ಪಶ್ಚಾತ್ತಾಪದಿಂದ ದೇವಸ್ಥಾನಗಳನ್ನು ಸುತ್ತಿ ಬಂದಿದ್ದ ಎಂಬ ವಿಷಯ ಬಯಲಾಗಿದೆ.

ಪೊಲೀಸ್ ತನಿಖೆಯ ವೇಳೆ ಮಹತ್ವದ ಸಂಗತಿ ಬಿಚ್ಚಿಟ್ಟ ಆರೋಪಿ

ಡಾ. ಕೃತಿಕಾ ರೆಡ್ಡಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾದ ಪತಿ ಡಾ. ಮಹೇಂದ್ರ ರೆಡ್ಡಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡು ತನಿಖೆ ವೇಳೆ ಹಲವಾರು ಸತ್ಯಗಳನ್ನು ಬಿಚ್ಚಿಟ್ಟಿದ್ದಾನೆ. ಮಹೇಂದ್ರ ತನ್ನ ಪತ್ನಿಯ ಆರೋಗ್ಯ ಸಮಸ್ಯೆಯಿಂದ ಬೇಸತ್ತು ಆಕೆಯನ್ನು ಕೊಂದು ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದ. ಮರಣೋತ್ತರ ಪರೀಕ್ಷೆ ನಡೆಸಿದಾಗ ಆರೋಪಿ ಕೃತಿಕಾಗೆ ಮಿತಿ ಮೀರಿ ಅನಸ್ತೇಶಿಯಾ ನೀಡಿರುವ ವಿಚಾರ ಬಹಿರಂಗವಾಗಿತ್ತು. ಇದೀಗ ಪೊಲೀಸರ ಮುಂದೆ ಆರೋಪಿ ಮತ್ತೊಂದು ಸತ್ಯ ಬಿಚ್ಚಿಟ್ಟಿದ್ದಾನೆ.

ಇದನ್ನೂ ಓದಿ ಡಾ.ಕೃತಿಕಾರೆಡ್ಡಿ ಕೊಲೆ ಕೇಸ್​: ತಪ್ಪೊಪ್ಪಿಕೊಂಡ ಪತಿ; ಮಹೇಂದ್ರರೆಡ್ಡಿ ಪ್ಲ್ಯಾನ್​ ಹೇಗಿತ್ತು?

ಹತ್ಯೆಯ ಪ್ರಾಯಶ್ಚಿತ್ತಕ್ಕಾಗಿ 6 ತಿಂಗಳು ಟೆಂಪಲ್ ರನ್ ಮಾಡಿದ್ದ ಮಹೇಂದ್ರ

ಕೊಲೆ ಮಾಡಿ ಪಾಪಪ್ರಜ್ಞೆಯಿಂದ ಬಳಲುತ್ತಿದ್ದ ಆರೋಪಿ ದೇವಸ್ಥಾನಗಳ ಮೊರೆಹೋಗಿದ್ದ ಎನ್ನುವುದು ತನಿಖೆಯ ವೇಳೆ ತಿಳಿದುಬಂದಿದೆ. ಪತ್ನಿ ಸಾವಿನಿಂದ ತೀವ್ರ ಆತಂಕಕ್ಕೊಳಗಾಗಿದ್ದ ಮಹೇಂದ್ರ ರೆಡ್ಡಿ, ಆರು ತಿಂಗಳ ಕಾಲರಾಜ್ಯದ ಪ್ರಮುಖ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿದ್ದ . ಆರೋಪಿ ತಾನು ಮಾಡಿದ ಹೇಯ ಕೃತ್ಯದಿಂದ ಎಲ್ಲಿ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತೀನೋ ಎಂಬ ಭಯದಿಂದ ಹಾಗೂ ಮಾನಸಿಕ ನೆಮ್ಮದಿಗೋಸ್ಕರ ಸುಮಾರು 15 ಕ್ಕೂ ಹೆಚ್ಚು ದೇವಸ್ಥಾನಗಳನ್ನು ಸುತ್ತಿ ಬಂದಿದ್ದ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us