ED Raid: ನಕಲಿ ಚಿನ್ನ ಅಡವಿಟ್ಟು 62 ಕೋಟಿ ರೂ. ಸಾಲ ಕೊಟ್ಟಿದ್ದ ಪ್ರಕರಣ, ಶೋಭಾ ಸೇರಿ ಮೂವರ ಮೇಲೆ ಇಡಿ ದಾಳಿ

ನಕಲಿ ಚಿನ್ನ ಅಡವಿಟ್ಟು 62 ಕೋಟಿ ರೂ. ಸಾಲಕೊಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಮೊಗ್ಗದಲ್ಲಿ 8ಕ್ಕೂ ಹೆಚ್ಚಿನ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿರುವ ಶೋಭಾ ನಿವಾಸದ ಮೇಲೆ ಇಂದು ದಾಳಿ ನಡೆದಿದೆ. ಬ್ಯಾಂಕ್​ನ ವಾಹನ ಚಾಲಕನಾಗಿದ್ದ ಶಿವಕುಮಾರ್ ಮನೆ ಮೇಲೂ ಕೂಡ ದಾಳಿ ನಡೆಸಲಾಗಿದೆ. 2 ಕಡೆ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ. 2014ರ ಜೂನ್​ನಲ್ಲಿ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಈ ಹಗರಣ ನಡೆದಿತ್ತು.

ED Raid: ನಕಲಿ ಚಿನ್ನ ಅಡವಿಟ್ಟು 62 ಕೋಟಿ ರೂ. ಸಾಲ ಕೊಟ್ಟಿದ್ದ ಪ್ರಕರಣ,  ಶೋಭಾ ಸೇರಿ ಮೂವರ ಮೇಲೆ ಇಡಿ ದಾಳಿ
ಇಡಿ ದಾಳಿ
Image Credit source: Business Today
Edited By:

Updated on: Apr 08, 2025 | 10:45 AM

ಶಿವಮೊಗ್ಗ, ಏಪ್ರಿಲ್ 08: ಶೋಭಾ ಎಂಬುವವರು ಡಿಸಿಸಿ ಬ್ಯಾಂಕ್ ಮ್ಯಾನೇಜರ್​ ಆಗಿದ್ದ ಸಂದರ್ಭದಲ್ಲಿ ನಕಲಿ ಚಿನ್ನ ಅಡವಿಟ್ಟು 62 ಕೋಟಿ ರೂ. ಸಾಲ(Debt)ಕೊಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ದಾಳಿ(ED Raid) ನಡೆಸಿದ್ದಾರೆ. ಶಿವಮೊಗ್ಗದಲ್ಲಿ 8ಕ್ಕೂ ಹೆಚ್ಚಿನ ಇಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಶಿವಮೊಗ್ಗದ ಗೋಪಾಲಗೌಡ ಬಡಾವಣೆಯಲ್ಲಿರುವ ಶೋಭಾ ನಿವಾಸದ ಮೇಲೆ ಇಂದು ದಾಳಿ ನಡೆದಿದೆ.

ಬ್ಯಾಂಕ್​ನ ವಾಹನ ಚಾಲಕನಾಗಿದ್ದ ಶಿವಕುಮಾರ್ ಮನೆ ಮೇಲೂ ಕೂಡ ದಾಳಿ ನಡೆಸಲಾಗಿದೆ. 2 ಕಡೆ ದಾಳಿ ನಡೆಸಿ ಪರಿಶೀಲನೆ ಮಾಡುತ್ತಿದ್ದಾರೆ. 2014ರ ಜೂನ್​ನಲ್ಲಿ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಈ ಹಗರಣ ನಡೆದಿತ್ತು.
ಇದೇ ವೇಳೆ ಬ್ಯಾಂಕ್ ನ ವಾಹನ ಚಾಲಕನಾಗಿದ್ದ ನಿವಾಸದ ಮೇಲು ದಾಳಿ ನಡೆಸಲಾಗಿದೆ. ಕಾಮಾಕ್ಷಿ ಬೀದಿಯ ಶಿವಕುಮಾರ್ ಎಂಬುವರ ಮನೆ ಮೇಲು ಇಡಿ ತಂಡದ ಪ್ರತ್ಯೇಕ ದಾಳಿ ನಡೆಸಿದೆ. ಏಕಕಾಲಕ್ಕೆ ಎರಡು ಪ್ರತ್ಯೇಕ ಸ್ಥಳಗಳ ಮೇಲೆ ದಾಳಿ ನಡೆಸಿದ್ದಾರೆ.

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಂಜುನಾಥ್​ ಗೌಡಗೂ ಇಡಿ ಶಾಕ್ ನೀಡಿದೆ. ಬೆಂಗಳೂರಿನಲ್ಲಿ ಇಡಿ ಅಧಿಕಾರಿಗಳಿಂದ ಮಂಜುನಾಥ್ ಗೌಡ ವಿಚಾರಣೆ ನಡೆಸಲಾಗುತ್ತಿದೆ. ಅಪೆಕ್ಸ್ ಬ್ಯಾಂಕ್​ನ ಗೆಸ್ಟ್ ಹೌಸ್​ನಲ್ಲಿ ಮಂಜುನಾಥ್ ಗೌಡ ವಿಚಾರಣೆ ಮಾಡುತ್ತಿದ್ದಾರೆ. 10ಕ್ಕೂ ಹೆಚ್ಚು ಇಡಿ ಅಧಿಕಾರಿಗಳಿಂದ ಮಂಜುನಾಥ್​ಗೌಡ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ
‘ಎಂಪುರಾನ್’ಗೆ ಬಿಜೆಪಿ ವಿರೋಧ; ನಿರ್ಮಾಪಕನ ಕಚೇರಿ ಮೇಲೆ ಇಡಿ ದಾಳಿ
ಸಲ್ಮಾನ್ ಖಾನ್ ಮನೆಯ ಮೇಲೆ ಗುಂಡಿನ ದಾಳಿ ಎಂದು ವಿಡಿಯೋ ವೈರಲ್
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಬೆಂಗಳೂರಿನ ಉದ್ಯಮಿಗಳು, ಬಿಲ್ಡರ್​ಗಳಿಗೆ ಐಟಿ ಶಾಕ್​: ದಾಳಿ

ಶಿವಮೊಗ್ಗದ ಗಾಂಧಿ ಬಜಾರ್ ನಗರದಲ್ಲಿರುವ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಕಳೆದ 11 ವರ್ಷಗಳ ಹಿಂದೆ ಹಗರಣ ನಡೆದಿತ್ತು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ತನಿಖೆ ನಡೆಸಿ ಪೊಲೀಸರು 2014ರ ಅ.18ರಂದು ಚಾರ್ಜ್​ಶೀಟ್​ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯಕ್ಕೆ ಮೊದಲ ದೋಷಾರೋಪಪಟ್ಟಿ ಸಲ್ಲಿಸಿದ್ದರು.

ಮತ್ತಷ್ಟು ಓದಿ: 24 ಕಡೆ ಕತ್ತರಿ, ನಿರ್ಮಾಪಕನ ಮೇಲೆ ಇಡಿ ದಾಳಿ; ಆದರೂ ‘ಎಂಪುರಾನ್’ ಗೆಲ್ಲಿಸಿದ ಪ್ರೇಕ್ಷಕ

ಈ ಹಿನ್ನೆಲೆಯಲ್ಲಿ ಮಂಜುನಾಥ್ ಗೌಡಗೆ ಇಡಿ ಸಮನ್ಸ್ ಜಾರಿಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಮಂಜುನಾಥ್ ಗೌಡಗೆ ಇಡಿ ಸಮನ್ಸ್ ಜಾರಿಗೊಳಿಸಿತ್ತು. ಕಳೆದ ವಾರವಷ್ಟೇ ಇಡಿ ಸಮನ್ಸ್ ಪ್ರಶ್ನಿಸಿದ್ದ ಮಂಜುನಾಥ್ ಗೌಡ ಮೇಲ್ಮನವಿಯನ್ನು ಹೈಕೋರ್ಟ್​ ವಜಾಗೊಳಿಸಿತ್ತು.

 

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:43 am, Tue, 8 April 25