24 ಕಡೆ ಕತ್ತರಿ, ನಿರ್ಮಾಪಕನ ಮೇಲೆ ಇಡಿ ದಾಳಿ; ಆದರೂ ‘ಎಂಪುರಾನ್’ ಗೆಲ್ಲಿಸಿದ ಪ್ರೇಕ್ಷಕ
‘ಎಂಪುರಾನ್’ ಸಿನಿಮಾ ಬಿಡುಗಡೆಯಾದ ನಂತರ 24 ಕಡೆಗಳಲ್ಲಿ ಕತ್ತರಿ ಹಾಕಿಸಿಕೊಂಡಿತು ಮತ್ತು ನಿರ್ಮಾಪಕರ ಮೇಲೆ ದಾಳಿ ನಡೆಯಿತು. ಆದರೂ, ಚಿತ್ರವು ಮಲಯಾಳಂ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳಲ್ಲಿ ಒಂದಾಗಿದೆ, 250 ಕೋಟಿ ರೂಪಾಯಿಗಿಂತ ಹೆಚ್ಚು ಗಳಿಸಿದೆ. ಮೋಹನ್ಲಾಲ್ ಅವರ ಅದ್ಭುತ ನಟನೆ ಮತ್ತು ಪ್ರೇಕ್ಷಕರ ಬೆಂಬಲ ಈ ಯಶಸ್ಸಿಗೆ ಕಾರಣ.

‘ಎಲ್2: ಎಂಪುರಾನ್’ ಸಿನಿಮಾ ಬಿಡುಗಡೆ ಹೊಂದಿದ ನಂತರ ಸಾಕಷ್ಟು ಅಡೆತಡೆಗಳನ್ನು ಎದುರಿಸಿತು. ಈ ಸಿನಿಮಾ ಬಿಡುಗಡೆ ಹೊಂದಿದ ಬಳಿಕ ಎದುರಾದ ವಿರೋಧದ ಕಾರಣಕ್ಕೆ 24 ಕಡೆಗಳಲ್ಲಿ ಕತ್ತರಿ ಹಾಕಿಸಿಕೊಂಡಿತು. ಇಷ್ಟೇ ಅಲ್ಲ, ಈ ಚಿತ್ರದ ನಿರ್ಮಾಪಕನ ಮನೆ ಮೇಲೆ ಇಡಿ ದಾಳಿ ಕೂಡ ಆಯಿತು. ಈಗ ಇದೆಲ್ಲವನ್ನೂ ಚಿತ್ರತಂಡ ಮೆಟ್ಟಿ ನಿಂತಿದೆ. ಸಿನಿಮಾ ಮಲಯಾಳಂ ಇತಿಹಾಸದಲ್ಲೇ ದೊಡ್ಡ ದಾಖಲೆಯನ್ನು ಬರೆದಿದೆ. ಮೋಹನ್ಲಾಲ್ ಅವರ ನಟನೆಯ ಎಲ್ಲರಿಗೂ ಇಷ್ಟ ಆಗಿದ್ದು, ಪ್ರೇಕ್ಷಕರು ಸಿನಿಮಾನ ಗೆಲ್ಲಿಸಿದ್ದಾರೆ.
ರಿಲೀಸ್ ಆಗಿ 11ನೇ ದಿನಕ್ಕೆ (ಭಾನುವಾರ, ಏಪ್ರಿಲ್ 6) ಚಿತ್ರ ಸುಮಾರು 4 ಕೋಟಿ ರೂಪಾಯಿ ಗಳಿಸಿದೆ. ಈ ಮೂಲಕ ಭಾರತದಲ್ಲಿ ಚಿತ್ರದ ಕಲೆಕ್ಷನ್ 98.35 ಕೋಟಿ ರೂಪಾಯಿ ಆಗಿದ್ದು, ಇಂದಿನ ಲೆಕ್ಕಾಚಾರ ಸೇರಿದರೆ ಸಿನಿಮಾ 100 ಕೋಟಿ ರೂಪಾಯಿ ಬಾಚಿಕೊಳ್ಳಲಿದೆ.
ಇನ್ನು ವಿಶ್ವ ಬಾಕ್ಸ್ ಆಫೀಸ್ ಲೆಕ್ಕಾಚಾರದ ಪ್ರಕಾರ ಸಿನಿಮಾ 250+ ಕೋಟಿ ರೂಪಾಯಿ ಗಳಿಸಿದೆ ಎಂದು ತಂಡದವರು ರಿವೀಲ್ ಮಾಡಿದ್ದಾರೆ. ಈ ಮೂಲಕ ಮಲಯಾಳಂನ ಸೂಪರ್ ಹಿಟ್ ಸಿನಿಮಾ ‘ಮಂಜುಮ್ಮೇಲ್ ಬಾಯ್ಸ್’ (230 ಕೋಟಿ ರೂಪಾಯಿ) ಗಳಿಕೆಯನ್ನು ಈ ಸಿನಿಮಾ ಹಿಂದಿಕ್ಕಿದೆ.
‘ಎಂಪುರಾನ್’ ವಿವಾದಗಳ ಸುರಿಮಳೆ
‘ಎಂಪುರಾನ್’ ಸಿನಿಮಾ ಮಾರ್ಚ್ 27ರಂದು ರಿಲೀಸ್ ಆಯಿತು. ಈ ಚಿತ್ರ ಮೊದಲ ದಿನವೇ ವಿಮರ್ಶಕರಿಂದ ಮೆಚ್ಚುಗೆ ಪಡೆಯಿತು. ಆದರೆ, ಹಿಂದೂ ಸಂಘಟನೆಗಳು ಈ ಚಿತ್ರದ ಬಗ್ಗೆ ಅಪಸ್ವರ ತೆಗೆದರು. ಹಿಂದೂಗಳಿಗೆ ವಿರುದ್ಧವಾದಗಿ ಚಿತ್ರ ಎಂಬ ಆರೋಪಗಳು ಕೇಳಿ ಬಂದಿದ್ದರಿಂದ ಸಿನಿಮಾದಲ್ಲಿನ 24 ದೃಶ್ಯಗಳಿಗೆ ಕತ್ತರಿ/ಬದಲಾವಣೆ ಮಾಡಬೇಕಾಯಿತು. ಇನ್ನು ಚಿತ್ರದ ನಿರ್ಮಾಪಕರ ಕಚೇರಿ ಮೇಲೆ ದಾಳಿ ನಡೆದಿದೆ.
ಇದನ್ನೂ ಓದಿ: ಎಲ್2: ಎಂಪುರಾನ್: ಬಿಜೆಪಿ ವಿರೋಧಕ್ಕೆ ಮಣಿದ ಮೋಹನ್ಲಾಲ್ 24 ಕಡೆ ಕತ್ತರಿ
ಮುಂದಿದೆ ನಿಜವಾದ ಸವಾಲು
ಈ ವಾರ (ಏಪ್ರಿಲ್ 10 ಹಾಗೂ 11) ‘ಎಂಪುರಾನ್’ ಚಿತ್ರಕ್ಕೆ ನಿಜವಾದ ಸವಾಲು ಆರಂಭ ಆಗಲಿದೆ. ಕನ್ನಡದಲ್ಲಿ ‘ವಿದ್ಯಾಪತಿ’, ‘ಅಜ್ಞಾತವಾಸಿ’, ತಮಿಳಿನಲ್ಲಿ ‘ಗುಡ್ ಬ್ಯಾಡ್ ಅಗ್ಲಿ’ ರೀತಿಯ ಸಿನಿಮಾಗಳು ರಿಲೀಸ್ ಆಗುತ್ತಿವೆ. ಇದರಿಂದ ಚಿತ್ರಕ್ಕೆ ಹಿನ್ನಡೆ ಆಗಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.