ಕುಮಟಾ-ಶಿರಸಿ ಹೆದ್ದಾರಿ ಬಂದ್: ವೈರಲ್ ಪೋಸ್ಟ್​ ಹಿಂದಿನ ಸತ್ಯಾಸತ್ಯತೆ ಇಲ್ಲಿದೆ

ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಷೇಧದ ಸುಳ್ಳು ಸುದ್ದಿ ವೈರಲ್ ಆಗಿದೆ. ಪ್ರಿಂಟಿಂಗ್ ಪ್ರೆಸ್ ತಪ್ಪು ಮಾಹಿತಿ ಹರಡಿದ್ದರಿಂದ ಈ ಗೊಂದಲ ಉಂಟಾಗಿದೆ ಎಂದು ಎನ್‌ಹೆಚ್‌ಎಐ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕೃತವಾಗಿ ಹೆದ್ದಾರಿ ಬಂದ್ ಆಗಿಲ್ಲ. ಸಾರ್ವಜನಿಕರು ಈ ತಪ್ಪು ಮಾಹಿತಿಯನ್ನು ನಂಬಬಾರದು ಎಂದು ತಿಳಿಸಲಾಗಿದೆ.

ಕುಮಟಾ-ಶಿರಸಿ ಹೆದ್ದಾರಿ ಬಂದ್: ವೈರಲ್ ಪೋಸ್ಟ್​ ಹಿಂದಿನ ಸತ್ಯಾಸತ್ಯತೆ ಇಲ್ಲಿದೆ
ಕುಮಟಾ-ಶಿರಸಿ ಹೆದ್ದಾರಿ ಬಂದ್: ವೈರಲ್ ಪೋಸ್ಟ್​ ಹಿಂದಿನ ಸತ್ಯಾಸತ್ಯತೆ ಇಲ್ಲಿದೆ
Follow us
ಸೂರಜ್​, ಮಹಾವೀರ್​ ಉತ್ತರೆ
| Updated By: ಗಂಗಾಧರ​ ಬ. ಸಾಬೋಜಿ

Updated on:Nov 14, 2024 | 8:09 PM

ಕಾರವಾರ, ನವೆಂಬರ್​ 14: ಪ್ರಿಂಟಿಂಗ್ ಪ್ರೆಸ್​ ಮಾಲೀಕನ ಅವಾಂತರದಿಂದಾಗಿ ಜನರಲ್ಲಿ ಗೊಂದಲ ಉಂಟಾಗಿದೆ. ಕುಮಟಾ-ಶಿರಸಿ ರಾಷ್ಟ್ರೀಯ ಹೆದ್ದಾರಿ (Kumta-Sirsi Highway) ಬಂದ್​ ವಿಚಾರವಾಗಿ ಗೊಂದಲ ಸೃಷ್ಟಿಯಾಗಿದೆ. ಅಧಿಕೃತ ನಿರ್ಣಯಕ್ಕೂ ಮುನ್ನವೇ ಜಾಲತಾಣದಲ್ಲಿ ಕುಮಟಾ-ಶಿರಸಿ ರಾ.ಹೆದ್ದಾರಿಯಲ್ಲಿ ಸಂಚಾರ ನಿಷೇಧ ಪೋಸ್ಟ್​​ ವೈರಲ್​ ಆಗಿದೆ. ಸದ್ಯ ಹೆದ್ದಾರಿ ಬಂದ್ ಮಾಡಿಲ್ಲ ಎಂದು ಎನ್​ಹೆಚ್​​ಎಐ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

ಅಧಿಕೃತವಾಗಿ ಇದುವರೆಗೂ ಬಂದ್ ಮಾಡುವ ದಿನಾಂಕ ನಿಗದಿ ಆಗಿಲ್ಲ: ಶಿವಕುಮಾರ್

ಈ ಬಗ್ಗೆ ಟಿವಿ9 ಜೊತೆಗೆ ಹೊನ್ನಾವರದ ಎನ್​ಹೆಚ್​​ಎಐ ಯೋಜನಾ ನಿರ್ದೇಶಕ ಶಿವಕುಮಾರ್​ ಪ್ರತಿಕ್ರಿಯಿಸಿದ್ದು, ಅಧಿಕೃತವಾಗಿ ಇದುವರೆಗೂ ಬಂದ್ ಮಾಡುವ ದಿನಾಂಕ ನಿಗದಿ ಆಗಿಲ್ಲ. ಸದ್ಯ ವಾಹನ ನಿಷೇಧ ಅನಿವಾರ್ಯತೆ ಇಲ್ಲದ ಸ್ಥಳದಲ್ಲಿ ಕಾಮಗಾರಿ ಮಾಡಲು ಸೂಚಿಸಲಾಗಿದೆ. ವಾಹನ ನಿಷೇಧ ಅನಿವಾರ್ಯತೆ ಇದ್ದ ಸ್ಥಳದಲ್ಲಿ ಬಂದ್ ಮಾಡಿದ ಬಳಿಕ ಕಾಮಗಾರಿ ಮಾಡಲು ಸೂಚಿಸಲಾಗಿದೆ.

ಇದನ್ನೂ ಓದಿ: ಶಿರೂರು ದುರಂತ: ಒಂದು ವಾರ ಕಳೆದ್ರೂ ಪತ್ತೆಯಾದ ಮೂಳೆಗಳ ಡಿಎನ್​ಎ ವರದಿ ಬಂದಿಲ್ಲ, ವೈದ್ಯ ಸಿಬ್ಬಂದಿ ಎಡವಟ್ಟು

ನಿಷೇಧ ಮಾಡದೆ ವಾಹನ ಸಂಚಾರಕ್ಕೆ ಸಮಸ್ಯೆ ಆಗದ ಹಾಗೆ ಕಾಮಗಾರಿ ಮಾಡಲಾಗುತ್ತಿದೆ. ನವೆಂಬರ್​ 15 ರಂದು ವಾಹನ ಸಂಚಾರ ನಿಷೇಧಕ್ಕೆ ನಾವು ಮನವಿ ಮಾಡಿದ್ದೇವು. ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳ ಸಲಗೆ ಮೇರೆಗೆ ಈ ನಿರ್ಣಯ ಕೈಗೊಂಡಿದ್ದೇವೆ.

ಮುಂದೆ ಬಂದ್ ಮಾಡಲು ನಿರ್ಣಯಿಸಿದಾಗ ಪೋಸ್ಟರ್​ ಮಾಡಲು ಪ್ರಿಂಟಿಂಗ್ ಪ್ರೆಸ್​ಗೆ ಹೇಳಿದ್ದೇವು. ಅವರು ತಪ್ಪಾಗಿ ಅರ್ಥೈಸಿಕೊಂಡು ಹಳೆಯ ಆದೇಶದಂತೆ ಇರಬಹುದು ಅಂತಾ ಅನ್ಕೊಂಡು ಈ ಅವಾಂತರ ಆಗಿದೆ ಎಂದಿದ್ದಾರೆ.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: ನದಿಯಲ್ಲಿ ಲಾರಿಯೊಳಗೆ ಅರ್ಜುನನ ಮೃತದೇಹ ಎರಡು ತುಂಡಾಗಿ ಪತ್ತೆ

ಅಕ್ಟೋಬರ್ 15 ರಿಂದ ವಾಹನ ನಿಷೇಧದ ಪೋಸ್ಟ್ ರೆಡಿ ಮಾಡಿ ನಮ್ಮ ಗಮನಕ್ಕೆ ತರದೆ ವೈರಲ್​ ಮಾಡಲಾಗಿದೆ. ಸಾರ್ವಜನಿಕರು ಈ ಪೋಸ್ಟ್ ಅನ್ನು ಅಧಿಕೃತವಾಗಿ ಪರಗಣಿಸಬಾರದೆಂದು ಹೆದ್ದಾರಿ ಪ್ರಾಧಿಕಾರ ಅಧಿಕಾರಿ ಟಿವಿ9 ಮೂಲಕ ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:07 pm, Thu, 14 November 24