AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ದಂಧೆ ಪ್ರಕರಣ: ತನಿಖೆ ಮುಕ್ತಾಯಗೊಳಿಸಿದ ಸಿಐಡಿ ತಂಡ

ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣವನ್ನು ಸಿಐಡಿ ತಂಡ ಬಹುತೇಕ ತನಿಖೆಯನ್ನು ಮುಕ್ತಾಯಗೊಳಿಸಿದೆ. ಪ್ರಕರಣದಲ್ಲಿ ಒಟ್ಟು 12 ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಭ್ರೂಣ ಪತ್ತೆಗೆ ಬಳಸುತ್ತಿದ್ದ ಸ್ಕ್ಯಾನಿಂಗ್ ಯಂತ್ರಗಳ ಮೂಲದ ಬಗ್ಗೆ ಮಾಹಿತಿ ಸಿಕ್ಕಿಲ್ಲ. 2 ತಿಂಗಳಿಂದ ತನಿಖೆ ನಡೆಸುತ್ತಿದ್ದರೂ ಯಂತ್ರಗಳ ಖರೀದಿ ಮೂಲ ಪತ್ತೆ ಆಗಿಲ್ಲ.

ರಾಜ್ಯದಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ದಂಧೆ ಪ್ರಕರಣ: ತನಿಖೆ ಮುಕ್ತಾಯಗೊಳಿಸಿದ ಸಿಐಡಿ ತಂಡ
ಪ್ರಾತಿನಿಧಿಕ ಚಿತ್ರ
Follow us
Shivaprasad
| Updated By: ಗಂಗಾಧರ​ ಬ. ಸಾಬೋಜಿ

Updated on:Feb 11, 2024 | 4:28 PM

ಬೆಂಗಳೂರು, ಫೆಬ್ರವರಿ 11: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ (Fetus gender detection, murder case) ವನ್ನು ಸಿಐಡಿ ತಂಡ ಬಹುತೇಕ ತನಿಖೆಯನ್ನು ಮುಕ್ತಾಯಗೊಳಿಸಿದೆ. ಇನ್ನೊಂದು ವಾರದಲ್ಲಿ ಆರೋಗ್ಯ ಇಲಾಖೆಗೆ ವರದಿ ಸಲ್ಲಿಕೆ ಮಾಡಲಿದೆ. ಹನ್ನೆರಡು ಜನ ಆರೋಪಿಗಳನ್ನ ಬಂಧಿಸಿದ್ದು, ಭ್ರೂಣ ಹತ್ಯೆಯ ವರದಿಗೆ ಸಿದ್ದತೆ ಮಾಡಲಾಗಿದೆ. ಇನ್ನು ಭ್ರೂಣ ಪತ್ತೆಗೆ ಬಳಸುತ್ತಿದ್ದ ಸ್ಕ್ಯಾನಿಂಗ್ ಯಂತ್ರಗಳ ಮೂಲ ಸಿಕ್ಕಿಲ್ಲ. ಕಳೆದ ಎರಡು ತಿಂಗಳಿಂದ ತನಿಖೆ ನಡೆಸುತ್ತಿದ್ದರೂ ಸಿಐಡಿಗೆ ಸ್ಕ್ಯಾನಿಂಗ್ ಯಂತ್ರಗಳ ಖರೀದಿ ಮೂಲ ಮಾತ್ರ ಪತ್ತೆಯಾಗಿಲ್ಲ. ಈ ಮಧ್ಯೆ ಆರೋಗ್ಯ ಇಲಾಖೆಗೆ ಪತ್ರ ಬರೆದರೂ ಏನೂ ಪ್ರಯೋಜನವಾಗಿಲ್ಲ. ಹೀಗಾಗಿ ಸರ್ಕಾರದಿಂದ ಅನುಮತಿ ಪಡೆದು ಆರೋಗ್ಯ ಇಲಾಖೆಗೆ ವರದಿ ಕೊಡಲು ಸಿದ್ದತೆ ಮಾಡಲಾಗಿದೆ. ಸ್ಕ್ಯಾನಿಂಗ್ ಯಂತ್ರಗಳ ಮಾರಾಟ ಹಾಗೂ ಬಳಕೆ ಅಕ್ರಮ ಇದೆ. ಆದರೆ ಭ್ರೂಣ ಪತ್ತೆಗೆ ಬಳಸುತ್ತಿದ್ದ ಯಂತ್ರಗಳು ತಂದಿದ್ದು ಎಲ್ಲಿ ಎನ್ನುವುದು ಸದ್ಯ ನಿಗೂಢವಾಗಿದೆ.

ಮಂಡ್ಯ ಮೈಸೂರಿನಲ್ಲಿ ರೇಡ್ ಮಾಡಲಾಗಿತ್ತು. ಚೆನೈ ಮೂಲದ ವೈದ್ಯ ತುಳಸಿರಾಮ್, ಮೈಸೂರಿನ ಖಾಸಗಿ ಆಸ್ಪತ್ರೆಯೊಂದರ ವೈದ್ಯ. ಮೀನಾ, ಮೈಸೂರಿನ ಖಾಸಗಿ ಆಸ್ಪತ್ರೆಯ ರಿಸೆಪ್ಶನಿಸ್ಟ್ ರಿಜ್ಮಾ, ಲ್ಯಾಬ್ ಟೆಕ್ನಿಶಿಯನ್ ನಿಸ್ಸಾರ್ ಎಂಬಾತನ ಬಂಧನವಾಗಿತ್ತು.

ಇದನ್ನೂ ಓದಿ: ಮೈಸೂರಿನಲ್ಲಿ ಭ್ರೂಣಲಿಂಗ ಪತ್ತೆ ,ಹತ್ಯೆ ಪ್ರಕರಣ ಬೆಳಕಿಗೆ ಬಂದು 6 ದಿನವಾದ್ರೂ ಮಹದೇವಪ್ಪ ಡೋಂಟ್​ಕೇರ್​

ಮಂಡ್ಯದ ಆಲೆಮನೆಯಲ್ಲಿ ಸ್ಕ್ಯಾನಿಂಗ್ ಯಂತ್ರಗಳನಿಟ್ಟು ಭ್ರೂಣ ಪತ್ತೆ ಮಾಡಿ ಹತ್ಯೆ ಮಾಡಲಾಗುತ್ತಿತ್ತು. ಕೇವಲ ಮೂರು ತಿಂಗಳಲ್ಲಿ 245 ಭ್ರೂಣ ಹತ್ಯೆ ಮಾಡಿದ್ದು ಬೆಳಕಿಗೆ ಬಂದಿತ್ತು. ಒಂದೊಂದು ಭ್ರೂಣ ಹತ್ಯೆಗೆ ಪ್ಯಾಕೇಜ್ ರೀತಿ 60 ಸಾವಿರ ರೂ. ಫಿಕ್ಸ್ ಮಾಡುತ್ತಿದ್ದರು. ಬೈಯಪ್ಪನಹಳ್ಳಿ ಪೊಲೀಸರು ಪ್ರಕರಣದ ಸಂಪೂರ್ಣ ತನಿಖೆ ನಡೆಸಿದ್ದರು. ಬಳಿಕ ಪ್ರಕರಣವನ್ನು ಎರಡು ತಿಂಗಳ ಹಿಂದೆ ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು.

ಆಲೆಮನೆಯಲ್ಲೇ ನಡೆಯುತ್ತಿತ್ತು ಭ್ರೂಣ ಪತ್ತೆ!

ಈ ಕರಾಳ ದಂಧೆಗೆ ಅಡ್ಡೆಯಾಗಿದ್ದೇ ಮಂಡ್ಯ ಜಿಲ್ಲೆ. ಮಂಡ್ಯ ತಾಲೂಕಿನ ಹಾಡ್ಯ ಗ್ರಾಮದ ಬಳಿ ಆಲೆಮನೆಯೊಂದರಲ್ಲಿ ಸಣ್ಣದಾದ ಶೆಡ್ ನಿರ್ಮಾಣ ಮಾಡಿ ಹೇಯಕೃತ್ಯವನ್ನ ಕ್ರೂರಿಗಳು ನಡೆಸುತ್ತಿದ್ದರು. ಆಲೆಮನೆಯಲ್ಲಿಯೇ ಎರಡು ವರ್ಷಗಳಲ್ಲಿ 900 ಭ್ರೂಣಲಿಂಗವನ್ನ ಪತ್ತೆ ಮಾಡಿ, ಕರಳುಬಳ್ಳಿಗಳನ್ನ ಕಮರಿಸಲು ಮೈಸೂರಿನ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡುತ್ತಿದ್ದರು.

ಇದನ್ನೂ ಓದಿ: ಮಂಡ್ಯದ ಆಲೆಮನೆ ಮಾತ್ರವಲ್ಲ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲೂ ಭ್ರೂಣಲಿಂಗ ಪತ್ತೆ?

ಮಂಡ್ಯ ಜಿಲ್ಲೆಯಲ್ಲಿ ಇಂತಹದೊಂದು ಹೇಯಕೃತ್ಯ ನಡೆಯುತ್ತಿರುವ ಸುದ್ದಿಕೇಳಿ ಮಂಡ್ಯ ಜಿಲ್ಲೆಯ ಜನ ಆತಂಕಕ್ಕೆ ಒಳಗಾಗಿದ್ದಾರೆ. ಇನ್ನು ಕರಾಳ ದಂಧೆಗೆ ಮಂಡ್ಯ ಜಿಲ್ಲೆಯೇ ಅಡ್ಡೆಯಾಗಿದ್ರು ಕೂಡ ಸಂಬಂಧಪಟ್ಟ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ವಿಪರ್ಯಾಸ. ಇನ್ನು ಎರಡು ವರ್ಷಗಳ ಕೆಳಗೆ ಈ ಬಗ್ಗೆ ಮಾಹಿತಿ ಇದ್ದರು, ಜಿಲ್ಲೆಯ ಸಂಬಂಧಪಟ್ಟ ಅಧಿಕಾರಿಗಳು ಇದುವರೆಗೂ ಯಾವುದೇ ಕ್ರಮ ತೆಗೆದುಕೊಳ್ಳದೇ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ.

ಮಂಡ್ಯದಲ್ಲಿ ಹೆಣ್ಣು ಭ್ರೂಣಲಿಂಗ ಪತ್ತೆ ಬಗ್ಗೆ 2011ರಲ್ಲಿಯೇ ಆರೋಗ್ಯ ಇಲಾಖೆಗೆ ಮಾಹಿತಿ ಇತ್ತು. ಸಭೆಯೊಂದರಲ್ಲಿ ದೊಡ್ಡಜಾಲ ದಂಧೆ ಮಾಡುತ್ತಿರುವ ಬಗ್ಗೆ ಅಧಿಕಾರಿಯೇ ಸಭೆಯಲ್ಲಿಯೇ ಒಪ್ಪಿಕೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:27 pm, Sun, 11 February 24

ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಸಾಯಿ ಕುಮಾರ್; ‘ರಂಗಿತರಂಗ’ ಸ್ಪೆಷಲ್
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಯಲ್ಲಿ 10 ಲಕ್ಷಕ್ಕೂ ಹೆಚ್ಚು ಜನ ಭಾಗಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಧಾರವಾಡ ಟು ಬೆಂಗಳೂರು ವಂದೇ ಭಾರತ್​ ರೈಲಿನಲ್ಲಿ ಬೆಂಕಿ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ಹುಲಿಗಳ ಅಸಹಜ ಸಾವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದಂತಿದೆ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ತಾಜ್​ ಮಹಲ್ ಮುಂದೆ ವಿಜಯಲಕ್ಷ್ಮಿಗೆ ಪ್ರಪೋಸ್ ಮಾಡಿದ ಪ್ರೇಮ್ ಥಾಪ: ವಿಡಿಯೋ
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಕೊನೆಯ ಎಸೆತ, 1 ರನ್ ಬೇಕು; ಕ್ಯಾಚ್ ಬಿಟ್ಟ ನೈಟ್ ರೈಡರ್ಸ್ ತಂಡಕ್ಕೆ ಸೋಲು
ಶಾಸಕ ಅಶ್ವಥ್ ನಾರಾಯಣ್ ಮನೇಲಿ ಬಿಜೆಪಿ ನಾಯಕರ ಸಭೆ ನಡೆದಿದ್ದು ಯಾಕೆ?
ಶಾಸಕ ಅಶ್ವಥ್ ನಾರಾಯಣ್ ಮನೇಲಿ ಬಿಜೆಪಿ ನಾಯಕರ ಸಭೆ ನಡೆದಿದ್ದು ಯಾಕೆ?
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ...?
ಮಂಗಳಮುಖಿಯರ ಅಶ್ಲೀಲ ಡ್ಯಾನ್ಸ್, ಕೆಂಪೇಗೌಡರ ಜಯಂತಿಯಲ್ಲಿ ಇದೆಂಥಾ ನೃತ್ಯ...?
ನಂದಿನಿ ಸ್ಕೂಟರ್​ಗೆ ಗುದ್ದಿದ ಕಾರು ಓಡಿಸುತ್ತಿದ್ದ ಮಹಿಳೆ ಕುಡಿದಿದ್ದಳೇ?
ನಂದಿನಿ ಸ್ಕೂಟರ್​ಗೆ ಗುದ್ದಿದ ಕಾರು ಓಡಿಸುತ್ತಿದ್ದ ಮಹಿಳೆ ಕುಡಿದಿದ್ದಳೇ?
ಕಾಂಗ್ರೆಸ್​ಗೆ ಸ್ವಾತಂತ್ರ್ಯಕ್ಕಾಗಿ ನಡೆದ ಕ್ರಾಂತಿ ಮಾತ್ರ ಗೊತ್ತು: ಪಾಟೀಲ್
ಕಾಂಗ್ರೆಸ್​ಗೆ ಸ್ವಾತಂತ್ರ್ಯಕ್ಕಾಗಿ ನಡೆದ ಕ್ರಾಂತಿ ಮಾತ್ರ ಗೊತ್ತು: ಪಾಟೀಲ್