ಬೈಕ್ ಸರ್ವಿಸ್ ಮಾಡಲು.. ಟ್ರಾನ್ಸ್ಫಾರ್ಮರ್ ಕೆಳಗೆ ಪೆಟ್ರೋಲ್ ಟ್ಯಾಂಕ್ ತೆಗೆದಿಟ್ಟರು, ಮುಂದೇನಾಯ್ತು?
ಬೈಕ್ನ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡು ನಾಲ್ವರಿಗೆ ಗಾಯಗಳಾಗಿರುವ ಘಟನೆ ಚೋಳರಪಾಳ್ಯದ ಗ್ಯಾರೇಜ್ ಬಳಿ ನಡೆದಿದೆ.

ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡ ಸ್ಥಳ
ಬೆಂಗಳೂರು: ಬೈಕ್ನ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡು ನಾಲ್ವರಿಗೆ ಗಾಯಗಳಾಗಿರುವ ಘಟನೆ ಚೋಳರಪಾಳ್ಯದ ಗ್ಯಾರೇಜ್ ಬಳಿ ನಡೆದಿದೆ.
ಬೈಕ್ ಸರ್ವಿಸ್ ಮಾಡಲು ಮುಂದಾದ ಮೆಕ್ಯಾನಿಕ್ಗಳು ಅದರ ಪೆಟ್ರೋಲ್ ಟ್ಯಾಂಕ್ ತೆಗೆದಿಟ್ಟಿದ್ದರು. ಪೆಟ್ರೋಲ್ ಟ್ಯಾಂಕ್ನ ಟ್ರಾನ್ಸ್ಫಾರ್ಮರ್ ಕೆಳಗೆ ಇರಿಸಿದ್ದರು. ಆದರೆ, ಟ್ಯಾಂಕ್ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ.

ಹೀಗಾಗಿ, ಸ್ಫೋಟದಲ್ಲಿ ಪುನೀತ್, ನಂಜುಂಡ, ಅಣ್ಣಾಮಲೈ ಹಾಗೂ ವಿಶ್ವನಾಥ್ಗೆ ಗಾಯಗಳಾಗಿದೆ. ನಾಲ್ವರು ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕ ಎಂದು ತಿಳಿದುಬಂದಿದೆ. ಸದ್ಯ, ಎಲ್ಲರಿಗೂ ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬೆಣ್ಣೆನಗರಿಯಲ್ಲಿ.. 2 ತಲೆಯ ಹಾವುಗಳನ್ನು ಮಾರಲು ಯತ್ನಿಸಿದ ಕಿರಾತಕರು ಅಂದರ್



