ಡಾ. ಸಂಗನಬಸವ ಶ್ರೀಗಳಿಗೆ ಸಕಲ ಸರ್ಕಾರಿ ಗೌರವ ಸಲ್ಲಿಕೆ; ಡಾ. ಅಭಿನವ ಅನ್ನದಾನ ಶ್ರೀಗಳ ಅಂತಿಮ ದರ್ಶನಕ್ಕೆ ಹರಿದುಬಂದ ಜನಸಾಗರ
ಹಾಲಕೆರೆ ರಥ ಬೀದಿಯಲ್ಲಿ ಅಂತಿಮ ಯಾತ್ರೆ ಮೆರವಣಿಗೆ ಸಾಗಿದೆ. ನಂತರ ಕ್ರೀಯಾ ಸಮಾಧಿಯಲ್ಲಿ ವೀರಶೈವ ಲಿಂಗಾಯತ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಗದಗ: ಅಕ್ಷರ ದಾಸೋಹಿ ಡಾ.ಸಂಗನಬಸವ ಶ್ರೀ ಲಿಂಗೈಕ್ಯ ಹಿನ್ನಲೆ ಡಾ. ಸಂಗನಬಸವ ಶ್ರೀಗಳಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಲಾಗಿದೆ. ಪೊಲೀಸ್ ಇಲಾಖೆಯಿಂದ ಶ್ರೀಗಳಿಗೆ ಸರ್ಕಾರಿ ಗೌರವ ಸಲ್ಲಿಕೆ ಮಾಡಲಾಗಿದೆ. ಗದಗ ಜಿಲ್ಲೆಯ ಹಾಲಕೆರೆ ಮಠದಲ್ಲಿ ಶ್ರೀಗಳ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸಿ ಇಂದು (ನವೆಂಬರ್ 23) ಗೌರವ ಸಮರ್ಪಣೆ ಮಾಡಲಾಗಿದೆ.
ಸರ್ಕಾರದ ಪ್ರತಿನಿಧಿಯಾಗಿ ಸಚಿವ ಸಿಸಿ ಪಾಟೀಲ, ಸಂಸದ ಶಿವಕುಮಾರ್ ಉದಾಸಿ, ಪಿ.ಸಿ ಗದ್ದಿಗೌಡರ್, ಶಾಸಕ ಕಳಕಪ್ಪ ಬಂಡಿ ಭಾಗಿ ಆಗಿದ್ದಾರೆ. ಶ್ರೀಗಳ ಪಾರ್ಥಿವ ಶರೀರ ಮೆರವಣಿಗೆ ನಡೆಸಲಾಗಿದೆ. ಮಠದ ಆವರಣದಿಂದ ಹಾಲಕೆರೆ ಗ್ರಾಮದಲ್ಲಿ ಶ್ರೀ ಅಂತಿಮ ಯಾತ್ರೆ ನಡೆಸಲಾಗಿದೆ. ಹಾಲಕೆರೆ ರಥ ಬೀದಿಯಲ್ಲಿ ಅಂತಿಮ ಯಾತ್ರೆ ಮೆರವಣಿಗೆ ಸಾಗಿದೆ. ನಂತರ ಕ್ರೀಯಾ ಸಮಾಧಿಯಲ್ಲಿ ವೀರಶೈವ ಲಿಂಗಾಯತ ವಿಧಿವಿಧಾನಗಳ ಮೂಲಕ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಹಾಲಕೆರೆ ಸಂಸ್ಥಾನ ಮಠದ ಡಾ. ಅಭಿನವ ಅನ್ನದಾನ ಶ್ರೀಗಳು ಲಿಂಗೈಕ್ಯ ಹಿನ್ನಲೆ, ಶ್ರೀಗಳ ಅಂತಿಮ ದರ್ಶನಕ್ಕೆ ಸಾವಿರ ಸಾವಿರ ಭಕ್ತರು ಹರಿದು ಬಂದಿದ್ದಾರೆ. ಹುಬ್ಬಳ್ಳಿ ಮೂಗು ಜಗದ್ಗುರು, ದಿಂಗಾಲೇಶ್ವರ ಶ್ರೀಗಳು, ಹರಿಹರ ಪಂಚಮಸಾಲಿ ಮಠದ ವಚನಾನಂದ ಶ್ರೀಗಳು, ಶಿರಹಟ್ಟಿ ಫಕೀರೇಶ್ವರ ಶ್ರೀಗಳು ಸೇರಿ ನೂರಾರು ಮಠಾಧೀಶರು, ಹಾಗೂ ಮಾಜಿ ಸಚಿವರು, ಕಾಂಗ್ರೆಸ್, ಬಿಜೆಪಿ ಹಾಲಿ, ಮಾಜಿ ಶಾಸಕರು ಸೇರಿ ಹರಿದು ಬಂದ ಜನಪ್ರತಿನಿಧಿಗಳು ಭೇಟಿ ನೀಡಿ, ಶ್ರೀಗಳ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದ್ದಾರೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಹಾಲಕೆರೆ ಗ್ರಾಮದಲ್ಲಿ ಶ್ರೀಗಳ ಅಂತಿಮ ದರ್ಶನ ಮಾಡಿದ್ದಾರೆ.
ಹಾಲಕೆರೆ ಅನ್ನದಾನೇಶ್ವರ ಲಿಂಗೈಕ್ಯ ಹಿನ್ನೆಲೆ ವೀರಶೈವ ಸಂಪ್ರದಾಯದಂತೆ ಶ್ರೀಗಳ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀಗಳ ನೇತೃತ್ವದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ. ಜಗದ್ಗುರು ಶ್ರೀ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿಗಳು, ಮಠಾದೀಶರ ಮಂತ್ರಘೋಷಗಳೊಂದಿಗೆ ಶ್ರೀಗಳಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ. 10 ಸಾವಿರ ವಿಭೂತಿಗಳೊಂದಿಗೆ ಸ್ವಾಮೀಜಿಗಳ ಅಂತ್ಯಕ್ರಿಯೆ ಮಾಡಲಾಗಿದ್ದು, ಅಂತಿಮ ದರ್ಶನದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಭಕ್ತರು ಭಾಗಿ ಆಗಿದ್ದಾರೆ.
ಇದನ್ನೂ ಓದಿ: ಹಾಲಕೆರೆ ಶ್ರೀ ಅಭಿನವ ಅನ್ನದಾನೇಶ್ವರ ಸ್ವಾಮಿಗಳು ಲಿಂಗೈಕ್ಯ; ಅಂತಿಮ ದರ್ಶನಕ್ಕೆ ವ್ಯವಸ್ಥೆ
ಇದನ್ನೂ ಓದಿ: ಕೊಟ್ಟೂರು ಮಠದ ಡಾ. ಸಂಗನ ಬಸವ ಮಹಾಸ್ವಾಮಿ, ಹಾಲಕೆರೆ ಅನ್ನದಾನೇಶ್ವರ ಮಠದ ಡಾ. ಅಭಿನವ ಸ್ವಾಮೀಜಿ ಲಿಂಗೈಕ್ಯ
Published On - 5:43 pm, Tue, 23 November 21




