AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಆರ್​ಐ, ಸಿಟಿ ಸ್ಕ್ಯಾನ್​​ಗೆ ಎಬಿಆರ್​ಕೆ ಅನುಮತಿ ಕಡ್ಡಾಯ: ಸರ್ಕಾರದ ಹೊಸ ರೂಲ್ಸ್​​ಗೆ ರೋಗಿಗಳು ಪರದಾಟ

ಗದಗದ ಜಿಮ್ಸ್ ಆಸ್ಪತ್ರೆಯಲ್ಲಿ ಎಂಆರ್ಐ ಮತ್ತು ಸಿಟಿ ಸ್ಕ್ಯಾನ್‌ಗೆ ಎಬಿಆರ್ಕೆ ಅನುಮತಿ ಕಡ್ಡಾಯಗೊಳಿಸಿರುವುದರಿಂದ ಬಡ ರೋಗಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನುಮತಿ ಪಡೆಯಲು ದಿನಗಟ್ಟಲೆ ಕಾಯಬೇಕಾಗುತ್ತಿದ್ದು, ಗಂಭೀರ ರೋಗಿಗಳು ಸಮಯಕ್ಕೆ ಸರಿಯಾಗಿ ಸ್ಕ್ಯಾನ್ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಶಾಸಕರು ಆಸ್ಪತ್ರೆಗೆ ಭೇಟಿ ನೀಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂಆರ್​ಐ, ಸಿಟಿ ಸ್ಕ್ಯಾನ್​​ಗೆ ಎಬಿಆರ್​ಕೆ ಅನುಮತಿ ಕಡ್ಡಾಯ: ಸರ್ಕಾರದ ಹೊಸ ರೂಲ್ಸ್​​ಗೆ ರೋಗಿಗಳು ಪರದಾಟ
ಎಂಆರ್​ಐ, ಸಿಟಿ ಸ್ಕ್ಯಾನ್​​ಗೆ ಎಬಿಆರ್​ಕೆ ಅನುಮತಿ ಕಡ್ಡಾಯ: ಸರ್ಕಾರದ ಹೊಸ ರೂಲ್ಸ್​​ಗೆ ರೋಗಿಗಳು ಪರದಾಟ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಗಂಗಾಧರ​ ಬ. ಸಾಬೋಜಿ|

Updated on: Jan 02, 2025 | 10:06 PM

Share

ಗದಗ, ಜನವರಿ 02: ಸರ್ಕಾರಿ ಆಸ್ಪತ್ರೆಗಳು ಅಂದರೆ ಬಡವರ ಪಾಲಿನ ಸಂಜೀವಿನಿ ಅಂತಾರೆ. ಆದರೆ ಸರ್ಕಾರದ ಹೊಸ ನಿಮಯ ಜಾರಿಯಿಂದಾಗಿ ಬಡ ರೋಗಿಳು ನಿತ್ಯ ಗೋಳಾಡುವಂತಾಗಿದೆ. ಎಂಆರ್​ಐ (MRI) ಹಾಗೂ ಸಿಟಿ ಸ್ಕ್ಯಾನ್​ ಈ ಮೊದಲು ಸಂಪೂರ್ಣ ಉಚಿತವಾಗಿತ್ತು. ಆದರೆ ಈಗ ಎಬಿಆರ್​ಕೆ ಅನುಮತಿ ಕಡ್ಡಾಯ ಮಾಡಿ ಸರ್ಕಾರ ಆದೇಶ ಮಾಡಿದೆ. ಹೀಗಾಗಿ ಎಬಿಆರ್​ಕೆ ಅನುಮತಿ ಸಿಗದೇ ಬಡ ರೋಗಿಗಳು ನಿತ್ಯ ‌ಒದ್ದಾಡುತ್ತಿದ್ದಾರೆ. ಗಂಭೀರ ಸಮಸ್ಯೆ ಇದ್ದರೆ ಸಾವಿರಾರೂ ಹಣ ನೀಡಿ ಸ್ಕ್ಯಾನ್ ಮಾಡಿಸುವ ಸ್ಥಿತಿ ಬಂದಿದೆ. ಇಂದು ಶಿರಹಟ್ಟಿ ಶಾಸಕರು ದಿಢೀರ್ ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದಾಗಿ ಬಡ ರೋಗಿಗಳು ಗೋಳು ತೋಡಿಕೊಂಡಿದ್ದಾರೆ. ಸರ್ಕಾರದ ಹೊಸ ಆದೇಶ ಬಡ ರೋಗಿಗಳು ಸರ್ಕಾರಿ ಆಸ್ಪತ್ರೆ ಬರದಂತೆ ಮಾಡಿದೆ ಅಂತ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಸರ್ಕಾರದ ಹೊಸ ಆದೇಶ ಬಡ ರೋಗಿಗಳು ನರಳಾಟ

ಗದಗ ನಗರದ ಮಲ್ಲಸಮುದ್ರ ಬಳಿಯ ಜಿಮ್ಸ್ ಆಸ್ಪತ್ರೆಯಲ್ಲಿ ಬಡ ರೋಗಿಗಳು ಗೋಳು ಕೇಳುವವರಿದಂತಾಗಿದೆ. ಡಿಸೆಂಬರ್ 1ರಂದು ಸರ್ಕಾರ ಎಂಆರ್​ಐ ಹಾಗೂ ಸಿಟಿ ಸ್ಕ್ಯಾನ್​​ಗೆ ಎಬಿಆರ್​ಕೆ ಅನುಮತಿ ಕಡ್ಡಾಯ ಮಾಡಿ ಆದೇಶ ಮಾಡಿದೆ. ಈ ಮೊದ್ಲು ಆಧಾರ ಕಾರ್ಡ್, ರೇಷನ್ ಕಾರ್ಡ್ ಇದ್ರೆ ಸಾಕು ಸಲಿಸಾಗಿ ರೋಗಿಗಳಿಗೆ ಸ್ಕ್ಯಾನ್ ಮಾಡಲಾಗುತ್ತಿತ್ತು. ಆದ್ರೆ, ಈಗ ಸರ್ಕಾರ MRI ಹಾಗೂ CT SCAN ಸ್ಕ್ಯಾನ್​ಗೆ ABRK ಅನುಮತಿ ಮಾಡಿದೆ. ಸರ್ಕಾರ ಹೊಸ ಆದೇಶ ಬಡ ರೋಗಿಗಳು ನರಳಾಡುವಂತಾಗಿದೆ.

ಇದನ್ನೂ ಓದಿ: ದೆಹಲಿ ಗಣರಾಜ್ಯೋತ್ಸವ ಪರೇಡ್‍ಗೆ ಗದಗನ ಬ್ರಹ್ಮ ಜಿನಾಲಯ ದೇವಾಲಯ ಆಯ್ಕೆ

ವೈದ್ಯರು ಅಗತ್ಯ ಇದ್ದರೆ ಮಾತ್ರ ಸ್ಕ್ಯಾನ್ ಬರೆದು ಕೊಡ್ತಾರೆ. ಆದರೆ ಬಡರೋಗಿಗಳು ಸ್ಕ್ಯಾನ್ ವಿಭಾಗಕ್ಕೆ ಬಂದ್ರೆ ಸಾಕು ABRK ಅನುಮತಿ ಪಡೆದುಕೊಂಡು ಬರುವಂತೆ ಹೇಳ್ತಾರೆ. ಆದ್ರೆ, ABRK ಅನುಮತಿಗಾಗಿ ಬಡ ರೋಗಿಗಳು ದೊಡ್ಡ ಸರ್ಕಸ್ ಮಾಡುವಂತಾಗಿದೆ. 2 ರಿಂದ 4 ಗಂಟೆ ಅಲ್ಲ. ಒಂದು, ಎರಡು ದಿನಗಳು ಕಳೆದ್ರೂ ABRK ಅನುಮತಿ ಸಿಗ್ತಾಯಿಲ್ಲ. ಹೀಗಾಗಿ ಬಡ ರೋಗಿಗಳು ನಗರದಿಂದ 5 ಕಿಲೋಮೀಟರ್ ದೂರದ ಆಸ್ಪತ್ರೆಗೆ ಅಲೇದು ಅಲೆದು ಸುಸ್ತಾಗಿದ್ದಾರೆ.

ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್ ಇದ್ರೂ ABRK ಅನುಮತಿ ಸಿಗದಿದ್ರೆ ಸಾವಿರಾರು ಹಣ ಕೊಟ್ಟು ಸ್ಕ್ಯಾನ್ ಮಾಡಿಸಬೇಕು. ಹೀಗಾಗಿ ಗಂಭೀರ ಸ್ವರೂಪದ ರೋಗಿಗಳು ಹಣ ಕೊಟ್ಟು ಸ್ಕ್ಯಾನ್ ಮಾಡಿಸುತ್ತಿದ್ದಾರೆ. ಇಂದು ಜಿಮ್ಸ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದಾಗ ಸಕಾಲಕ್ಕೆ ಸ್ಕ್ಯಾನ್ ಆಗುತ್ತಿಲ್ಲ ಅಳಲು ತೋಡಿಕೊಂಡ್ರು. ಸರ್ಕಾರದ ಹೊಸ ನಿಯಮದಿಂದ ಸಾಕಷ್ಟು ತೊಂದರೆ ಆಗುತ್ತಿದೆ ಎಂದು ರೋಗಿ ತಾಯಿ ರೇಣುಕಾ ಎನ್ನುವವರು ಗೋಳಾಡಿದ್ದಾರೆ.

ಎಬಿಆರ್ಕೆ ಅನುಮತಿ ಸಿಗದೆ ಪರದಾಟ

ಅಧಿಕಾರಿಗಳ ಪ್ರಕಾರ ABRK ಅನುಮತಿಗೆ ಕೇವಲ 2 ರಿಂದ 4 ಗಂಟೆಗಳು ಬೇಕು ಅಂತಾರೆ. ಆದ್ರೆ, ಎರಡು ಮೂರು ದಿನ ಕಾಯುವ ಸ್ಥಿತಿ ಬಂದಿದೆ. ತೀವ್ರ ಸಮಸ್ಯೆ ಇರೋ ರೋಗಿಗಳಿಗೆ ಈ ನಿಯಮ ಮಾರಕವಾಗಿದೆ. ದುಡಿದ್ರೆ ಹೊಟ್ಟೆ ತುಂಬುತ್ತೆ ಅನ್ನೋ ಕುಟುಂಬದ ರೋಗಿಗಳು ಎಬಿಆರ್ಕೆ ಅನುಮತಿ ಸಿಗದೇ ನರಳಾಡುತ್ತಿದ್ದಾರೆ. ಇನ್ನೂ ಅಪಘಾತ, ಚಿಂತಾಜನಕ ಸ್ಥಿತಿಯಲ್ಲಿರೋ ರೋಗಿಗಳ ಬಂದಾಗಿ ತಕ್ಷಣ ಸ್ಕ್ಯಾನ್ ಮಾಡಲಾಗುತ್ತೆ. ಆದರೂ ಎಬಿಆರ್ಕೆ ಅನುಮತಿ ಸಿಗುತ್ತಿಲ್ಲ. ಹೀಗಾಗಿ ಸರ್ಕಾರ ಜೊತೆ ಖಾಸಗಿ ಭಾಗಿತ್ವದಲ್ಲಿ ಇರೋ ಸ್ಕ್ಯಾನ್ ಸೆಂಟರ್ ಗಳಿಗೂ ತೊಂದರೆ ಆಗುತ್ತಿದೆ.

ಇಂದು ಆಸ್ಪತ್ರೆಗೆ ಭೇಟಿ ಶಾಸಕ ಡಾ. ಚಂದ್ರು ಲಮಾಣಿ ಸರ್ಕಾರದ ವ್ಯವಸ್ಥೆ ವಿರುದ್ಧ ಕಿಡಿಕಾರಿದ್ದಾರೆ. ಬಡ ರೋಗಿಗಳು ಸರ್ಕಾರಿ ಆಸ್ಪತ್ರೆಗೆ ಬಾರದಂತೆ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಸರ್ಕಾರದ ಆದೇಶ ಬಡ ರೋಗಿಗಳಿಗೆ ಮಾರಕವಾಗಿದೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಕೂಡಲೇ ಮೊದಲಿನ ವ್ಯವಸ್ಥೆ ಮಾಡಿ ಬಡ ರೋಗಿಗಳಿಗೆ ಅನಕೂಲ ಮಾಡಬೇಕು ಅಂತ ಒತ್ತಾಯಿಸಿದ್ದಾರೆ. ಗದಗ ಜಿಮ್ಸ್ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ABRK ಅನುಮತಿ ಸಿಗದೇ ಬಡವರು ಕೊನೆಗೆ ಹಣ ನೀಡಿ ಸ್ಕ್ಯಾನ್ ಮಾಡಿಸುತ್ತಿದ್ದಾರೆ. ABRK ಅನುಮತಿ ಬಳಿಕ ಉಚಿತ ಸ್ಕ್ಯಾನಿಂಗ್ ನಿಯಮ ಅವೈಜ್ಞಾನಿಕ ಅಂತ ಶಾಸಕ ಡಾ ಚಂದ್ರು ಹೇಳಿದ್ದಾರೆ.

ಇನ್ನೂ ಜಿಮ್ಸ್ ನಿರ್ದೇಶಕ ಡಾ. ಬಸವರಾಜ್ ಬೊಮ್ಮನಹಳ್ಳಿ ಅವ್ರನ್ನು ಕೇಳಿದ್ರೆ, MRI ಹಾಗೂ CT SCAN ABRK ಅನುಮತಿ ಸಮಸ್ಯೆ ಆಗ್ತಾಯಿದೆ. 2 ರಿಂದ 5 ಗಂಟೆ ಆಗುತ್ತೆ ಎಂದಿದ್ರು. ಆದ್ರೆ ಡಾಟಾ ತೆಗೆದು ನೋಡಿದ್ರೆ ಸಮಯ ಜಾಸ್ತಿ ಬಂದಿದೆ. ಸಕಾಲಕ್ಕೆ ABRK ಅನುಮತಿ ಸಿಗದಿರುವುದು ಕಂಡು ಬಂದಿದೆ. ಪದೇ ಪದೇ ಕೇಳಿದ್ದೇ ಕೇಳುತ್ತಿದ್ದಾರೆ. ಸಾಸ್ಟ್ ಟೀಮ್ ನಲ್ಲಿ‌ ಟೆಕ್ನಿಕಲ್ ಏನ್ ಸಮಸ್ಯೆ ಇದೆ ಗೊತ್ತಿಲ್ಲ ಅಂತ ಸ್ಕ್ಯಾನಿಂಗ್ ಸಮಸ್ಯೆಗೆ ಬಗ್ಗೆ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಕೊರೆಯುವ ಚಳಿಯಲ್ಲಿ ನಡುಗುತ್ತಿದ್ದವರಿಗೆ ಬೆಚ್ಚನೆಯ ರಕ್ಷಣೆ: ವಿದ್ಯಾರ್ಥಿಗಳ ಸಮಾಜಮುಖಿ ಕೆಲಸಕ್ಕೆ ಭೇಷ್ ಎಂದ ಜನ

ಗಂಭೀರ ಸ್ವರೂಪದ ಸಮಸ್ಯೆ ಇರೋ ರೋಗಿಗಳಿಗೆ ತಕ್ಷಣ ಸ್ಕ್ಯಾನಿಂಗ್ ಆಗಬೇಕಿದೆ. ಆದ್ರೆ ಸರ್ಕಾರದ ಹೊಸ ನಿಯಮದಿಂದ ತಕ್ಷಣ ಆಗುತ್ತಿಲ್ಲ. ಇದ್ರಿಂದ ರೋಗಿಗಳು ಜೀವ ಕಳೆದುಕೊಳ್ಳುವ ಆತಂಕ ಕೂಡ ಇರುತ್ತೆ. 24-25 ಗಂಟೆಯಿಂದ ABRK ಅನುಮತಿ ಸಿಗದೇ ಪರದಾಡುತ್ತಿದ್ದಾರೆ. ಸರ್ಕಾರ ವೈದ್ಯರ ಸಲಹೆ ಪಡೆಯಬೇಕಿತ್ತು. ಸರ್ಕಾರ ಕೂಡಲೇ ಈ ನಿಯಮ ವಾಪಸ್ ಪಡೆಯಬೇಕು ಅಂತ ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.