ನಿಗೂಢ ಕಾಯಿಲೆಗೆ 20ಕ್ಕೂ ಹೆಚ್ಚು ಕುರಿಗಳು ಸಾವು: ಅಂಥ್ರಾಕ್ಸ್ ಸೊಂಕು ಶಂಕೆ
ಗದಗ ಜಿಲ್ಲೆಯಲ್ಲಿ ಅನೇಕ ಕುರಿಗಳು ನಿಗೂಢ ಕಾಯಿಲೆಯಿಂದ ಸಾವನ್ನಪ್ಪುತ್ತಿವೆ. ಅರ್ಧ ಗಂಟೆಯಲ್ಲಿ 20 ಕ್ಕೂ ಹೆಚ್ಚು ಕುರಿಗಳು ಸತ್ತಿರುವ ಘಟನೆ ಮುಂಡರಗಿ ತಾಲೂಕಿನಲ್ಲಿ ನಡೆದಿದೆ. ಪಶು ವೈದ್ಯರು ಅಂಥ್ರಾಕ್ಸ್ ಸೋಂಕಿನ ಶಂಕೆ ವ್ಯಕ್ತಪಡಿಸಿದ್ದು, ಕುರಿಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಸದ್ಯ ಕುರಿ ಸಾಕಣೆದಾರರು ಆತಂಕಗೊಂಡಿದ್ದಾರೆ.

ಗದಗ, ಮಾರ್ಚ್ 08: ನಿಗೂಢ ಕಾಯಿಲೆಗೆ ಹಿಂಡು ಹಿಂಡು ಕುರಿಗಳು (Sheep) ಸಾವನ್ನಪ್ಪುತ್ತಿವೆ. ನಿಂತಲ್ಲಿ, ಕುಂತಲ್ಲೇ ವಿಲವಿಲ ಒದ್ದಾಡಿ ಕುರಿಗಳು ಸಾಯುತ್ತಿರುವ (death) ದೃಶ್ಯಗಳು ಸಾಮಾನ್ಯವಾಗಿದ್ದು, ಕುರಿ ಸಾಕಾಣಿಕೆದಾರರು ಕಂಗಾಲಾಗಿದ್ದಾರೆ. ಅರ್ಧ ಗಂಟೆಯಲ್ಲಿ 20 ಕ್ಕೂ ಹೆಚ್ಚು ಕುರಿಗಳ ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೆರಳ್ಳಿ ತಾಂಡಾದಲ್ಲಿ ನಡೆದಿದೆ. ಅಂಥ್ರಾಕ್ಸ್ ಸೋಂಕು ಶಂಕೆ ವ್ಯಕ್ತವಾಗಿದೆ.
60 ಕುರಿಗಳಿರುವ ಹಿಂಡುನಲ್ಲಿ ನೋಡು ನೋಡುತ್ತಿದ್ದ 20 ಕುರಿಗಳ ಸಾವನ್ನಪ್ಪಿವೆ. ಪೋಮಪ್ಪ ಲಮಾಣಿ ಎಂಬುವರಿಗೆ ಸೇರಿದ ಕುರಿಗಳ ಸರಣಿ ಸಾವಾಗಿವೆ. ಕುರಿಗಳ ಸಾವು ಕಣ್ಣಾರೆ ಕಂಡು ಕುರಿಗಾಹಿಗಳು ಕಂಗಾಗಿದ್ದಾರೆ.
ಇದನ್ನೂ ಓದಿ: ಗದಗ: ಸ್ವಾಮೀಜಿಗಾಗಿ ಎರಡು ಸಮಾಜದ ನಡುವೆ ವೈಮನಸ್ಸು: ಸಲ್ಲೇಖನ ವೃತ್ತ ಆರಂಭಿಸಿದ ಶ್ರೀಗಳು
ಸ್ಥಳಕ್ಕೆ ದೌಡಾಯಿಸಿದ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಂಥ್ರಾಕ್ಸ್ ಸೋಂಕು ಶಂಕೆ ವ್ಯಕ್ತಪಡಿಸಿದ್ದಾರೆ. (ದೊಡ್ಡ ರೋಗ) ಕುರಿಗಳ ಮೂಗಲ್ಲಿ ರಕ್ತ ಸ್ರಾವವಾಗಿ ಸಾಯುತ್ತಿವೆ ಎಂದು ವೈದ್ಯರು ಹೇಳಿದ್ದಾರೆ. ಕುರಿಗಳ ಮಾದರಿ ತಪಾಸಣೆಗೆ ಲ್ಯಾಬ್ಗೆ ಕಳಿಸಲಾಗಿದೆ. ವರದಿ ಬಂದ ತಕ್ಷಣ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪಶು ವೈದ್ಯರು ತಿಳಿಸಿದ್ದಾರೆ.
ಏನಿದು ಅಂಥ್ರಾಕ್ಸ್ ಸೋಂಕು?
ಇದು ಬ್ಯಾಸಿಲಸ್ ಅಂಥಾಸಿಸ್ (Bacillus anthracis) ಎಂಬ ಬ್ಯಾಕ್ಟಿರಿಯಾ ಮೂಲಕ ಹರಡುವಂತಹ ರೋಗ. ಗಾಳಿ ಮೂಲಕ ಈ ಸೋಂಕು ಹೆಚ್ಚಾಗಿ ಹರಡುತ್ತದೆ. ದನ, ಕುದುರೆ ಮತ್ತು ಕುರಿಗಳಲ್ಲೂ ಈ ಅಂಥ್ರಾಕ್ಸ್ ರೋಗ ಕಾಣಿಸಿಕೊಳ್ಳುತ್ತದೆ. ಅಂಥ್ರಾಕ್ಸ್ ಸೋಂಕು ಕಂಡು ಬಂದರೆ ನಿಂತಲ್ಲಿ, ಕುಂತಲ್ಲೇ ವಿಲವಿಲ ಒದ್ದಾಡಿ ಪ್ರಾಣಿಗಳಲ್ಲಿ ಸಾಯುತ್ತವೆ. ಹಳ್ಳಿಗಳಲ್ಲಿ ಈ ಸೋಂಕಿಗೆ ದೊಡ್ಡ ರೋಗ ಎಂದು ಕರೆಯುತ್ತಾರೆ.
ಕುರಿಗಳ್ಳರ ಹಾವಳಿಗೆ ಬೆಚ್ಚಿಬಿದ್ದ ಕುರುಬರು
ಇನ್ನು ಇತ್ತೀಚೆಗೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಹತ್ತಲ್ಲ ಇಪ್ಪತ್ತಲ್ಲ ಸುಮಾರು 150 ರಿಂದ 160ಕ್ಕೂ ಅಧಿಕ ಕುರಿಗಳ ಕಳ್ಳತನವಾಗಿರುವಂತಹ ಘಟನೆ ನಡೆದಿತ್ತು. ಇದರಿಂದ ಕುರುಬರೆಲ್ಲರೂ ಬೆಚ್ಚಿ ಬಿದಿದ್ದರು. ಒಂದೇ ಭಾಗದಲ್ಲಿ ನಿರಂತರವಾಗಿ ಕುರಿಗಳ ಕಳ್ಳತನ ಆಗ್ತಿದ್ದು ಹೇಗೆ ತಮ್ಮ ಕುರಿಗಳನ್ನ ಉಳಿಸಿಕೊಳ್ಳಬೇಕು ಅಂತಾ ಗೊತ್ತಾಗದ ಸ್ಥಿತಿಯಲ್ಲಿದ್ದರು.
ಇದನ್ನೂ ಓದಿ: ಗದಗ: ಮುಸುಕುಧಾರಿ ಗ್ಯಾಂಗ್ ಹಾವಳಿ, 20 ಸೆಕೆಂಡ್ಗಳಲ್ಲಿ ಅಂಗಡಿ ಬಾಗಿಲು ಮುರಿದು ಕಳ್ಳತನ
ಬೆಳಗಾವಿ ತಾಲೂಕಿನ ಬೆಳಗುಂದಿ, ಕಡೋಲಿ, ಕಾಕತಿ, ಕುದ್ರೆಮನಿ ಸೇರಿದಂತೆ ಮಹಾರಾಷ್ಟ್ರಕ್ಕೆ ಹೊಂದಿಕೊಂಡ ಗ್ರಾಮದಲ್ಲಿ ಕುರಿಗಳು ಕಳ್ಳತನ ನಡೆದಿತ್ತು. ಈ ಬಗ್ಗೆ ಬೆಳಗಾವಿ ಗ್ರಾಮೀಣ ಮತ್ತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ನೊಂದುಕೊಂಡ ಕುರುಬರು ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿ ಮುಂದೆ ಧರಣಿ ಕೂಡ ಮಾಡಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.