ಫಸಲು ಭೀಮಾ ಯೋಜನೆಯಡಿ 35 ಕೋಟಿ ರೂ. ಬಿಡುಗಡೆ: ಹಣ ನೀಡದ ಜಿಲ್ಲಾಡಳಿತ ವಿರುದ್ಧ ರೈತರು ಆಕ್ರೋಶ

Crop insurance: ಭೀಕರ ಬರದಿಂದ ರೈತರು ಈಗಾಗಲೇ ಕಂಗಾಲಾಗಿದ್ದಾರೆ. ಸರ್ಕಾರದಿಂದ ಫಸಲು ಭೀಮಾ ಯೋಜನೆಯಡಿ 35 ಕೋಟಿ ರೂ. ಬೆಳೆ ವಿಮೆ ಬಿಡುಗಡೆ ಆಗಿತ್ತು. ಬೆಳೆ ವಿಮೆ ಹಣ ಬಂದ್ದರೂ ಜಿಲ್ಲಾಡಳಿತ ಮಾತ್ರ ರೈತರಿಗೆ ನೀಡಿಲ್ಲ. ಆ ಮೂಲಕ ಭೀಕರ ಬರದಿಂದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಜಿಲ್ಲಾಡಳಿತದಿಂದ ಬರೆ ಎಳೆದಿದೆ.

ಫಸಲು ಭೀಮಾ ಯೋಜನೆಯಡಿ 35 ಕೋಟಿ ರೂ. ಬಿಡುಗಡೆ: ಹಣ ನೀಡದ ಜಿಲ್ಲಾಡಳಿತ ವಿರುದ್ಧ ರೈತರು ಆಕ್ರೋಶ
ಬೆಳೆ ವಿಮೆಗೆ ಆಗ್ರಹ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Nov 09, 2023 | 2:18 PM

ಗದಗ, ನವೆಂಬರ್​​​ 9: ಭೀಕರ ಬರದಿಂದ ರೈತರು ಈಗಾಗಲೇ ಕಂಗಾಲಾಗಿದ್ದಾರೆ. ಸರ್ಕಾರದಿಂದ ಬೆಳೆ ವಿಮೆ (Crop insurance) ಹಣ ಬಂದ್ದರೂ ಜಿಲ್ಲಾಡಳಿತ ಮಾತ್ರ ರೈತರಿಗೆ ನೀಡಿಲ್ಲ. ಆ ಮೂಲಕ ಭೀಕರ ಬರದಿಂದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಜಿಲ್ಲಾಡಳಿತದಿಂದ ಬರೆ ಎಳೆಯಲಾಗಿದೆ. ಫಸಲು ಭೀಮಾ ಯೋಜನೆಯಡಿ 35 ಕೋಟಿ ರೂ. ಬಿಡುಗಡೆ ಆಗಿತ್ತು. ರಾಜ್ಯದಲ್ಲೇ ಗದಗ ಜಿಲ್ಲೆಗೆ ಅತಿಹೆಚ್ಚು ಬಿಡುಗಡೆ ಮಾಡಲಾಗಿದೆ. ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತಾಗಿದೆ ರೈತರ ಪರಿಸ್ಥಿತಿ.

ಬಿಡುಗಡೆಯಾಗಿ ತಿಂಗಳಾದರೂ ರೈತರ ಖಾತೆಗೆ ಜಿಲ್ಲಾಡಳಿತ ಹಣ ಹಾಕಿಲ್ಲ. ಹಾಗಾಗಿ ಗದಗ ಜಿಲ್ಲಾಡಳಿತದ ವಿರುದ್ಧ ಅನ್ನದಾತರು ಆಕ್ರೋಶ ಹೊರಹಾಕಿದ್ದಾರೆ. ರೈತರ ವಿರುದ್ಧ ಜಿಲ್ಲಾಡಳಿತ ಅನ್ಯಾಯ ಮಾಡುತ್ತಿದೆ ಎಂದು ರೈತರು ಗರಂ ಆಗಿದ್ದಾರೆ.

ಇದನ್ನೂ ಓದಿ: ಗದಗ: ವಿಮೆ ಹಣ ನೀಡಲು ನಿರಾಕರಿಸಿದ ವಿಮಾ ಕಂಪನಿಗೆ 2 ಲಕ್ಷಕ್ಕೂ ಅಧಿಕ ದಂಡ; ಇಲ್ಲಿದೆ ವಿವರ

35 ಕೋಟಿ ರೂ. ಹಣಕ್ಕೆ ಎರಡ್ಮೂರು ತಿಂಗಳ ಬಡ್ಡಿ ಲಕ್ಷಾಂತರ ರೂ. ಆಗುತ್ತೆ. ಹಾಗಾಗಿ ಬ್ಯಾಂಕ್​ನಿಂದ ಬಡ್ಡಿ ತಿನ್ನಲು ರೈತರ ಹಣ ಇಟ್ಟುಕೊಂಡಿರುವ ಆರೋಪ ಮಾಡಲಾಗಿದೆ. ಬರ ಪರಿಹಾರ ನೀಡಲು ವಿಳಂಬ ಮಾಡ್ತಿರುವ ಜಿಲ್ಲಾಡಳಿತ ವಿರುದ್ಧ ಕಿಡಿಕಾರಲಾಗಿದೆ.

ಮಳೆಯ ಕೊರೆತೆ: ಸೋಯಾಬಿನ್ ಬೆಳೆ ಹಾನಿ

ಬೀದರ್: ಜಿಲ್ಲೆಯಲ್ಲಿ ಅತಿ ಹೆಚ್ಚಾಗಿ ಸೋಯಾಬಿನ್ ಹಾಗೂ ತೊಗರಿ ಬೆಳೆಯುತ್ತಾರೆ. ಈ ವರ್ಷ 1.83 ಲಕ್ಷ ಹೆಕ್ಷರ್ ಪ್ರದೇಶದಲ್ಲಿ ಸೋಯಾ ಬೀನ್ ಬಿತ್ತನೆ ಮಾಡಿದ್ದರು ಈಗ ಸೋಯಾಬಿನ್ ಬಹುತೇಕ ರಾಸಿ ಮಾಡಿದ್ದು ಶೇಕಡಾ 30 ರಷ್ಟು ಸೋಯಾಬಿನ್ ಬೆಳೆ ಕಾಯಿ ಬಿಡುವ ಸಮಯದಲ್ಲಿ ಮಳೆಯ ಕೊರೆತಯಿಂದಾಗಿ ಸೋಯಾಬಿನ್ ಬೆಳೇ ಹಾಳಾಗಿದೆ. ಇನ್ನೂ ತೊಗರಿಯನ್ನ ಈ ವರ್ಷ 1.18 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಿದ್ದು ಶೇಕಡಾ 70 ರಷ್ಟು ತೊಗರಿ ಬೆಳೆ ಹಾಳಾಗಿದೆ.

ಇದನ್ನೂ ಓದಿ: ಗದಗ: ಗ್ರಾಹಕ – ರೈತ ಇಬ್ಬರಿಗೂ ಕಣ್ಣೀರು ತರಿಸಿದ ಈರುಳ್ಳಿ, ಬಂಪರ್ ಬೆಲೆ ಇದ್ದಾಗಲೇ ಇಳುವರಿ ಕುಸಿತ

ಹೂವು ಬಿಡುವ ಸಮಯದಲ್ಲಿ ತೊಗರಿಗೆ ಮೆಳೆಯಾಗಬೇಕಾಗಿತ್ತು ಆದರೆ ಮಳೆಯ ಕೊರತೆಯಿಂದಾಗಿ ತೊಗರಿ ಬೆಳೆ ಹಾಳಾಗಿದೆ. ಆರಂಭದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿಯೂ ಮಳೆಯ ಕೊರತೆಯಾಗಿತ್ತು ಆದರೆ ಬೀದರ್ ಜಿಲ್ಲೆಯಲ್ಲಿ ಮಾತ್ರ ಉತ್ತಮವಾದ ಮಳೆಯಾಗಿತ್ತು ಹೀಗಾಗಿ ಜಿಲ್ಲೆಯ ಪ್ರಮುಖ ಬೆಳೆಗಳಾದ ಉದ್ದು, ಸೋಯಾಬಿನ್ ಹಾಗೂ ತೊಗರಿ ಬೆಳೆ ಚನ್ನಾಗಿ ಬಂದಿತ್ತು ಆದರೆ ಕಾಲ ಕಳೆದಂತೆ ಮಳೆಯ ಕೊರತೆಯಿಂದಾಗಿ ರೈತರು ಬಿತ್ತನೆ ಮಾಡಿದ ಬೆಳೆ ಹಾಳಾಗಿದೆ.

ಆರಂಭದಲ್ಲಿ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕು, ಭಾಲ್ಕಿ ತಾಲೂಕು, ಹುಲಸೂರು ತಾಲೂಕನ್ನ ಮಾತ್ರ ಬರ ಎಂದು ರಾಜ್ಯ ಸರಕಾರ ಘೋಷಣೆ ಮಾಡಿತ್ತು ಆದರೆ ರೈತರ ಆಕ್ರೋಶದ ಮೇರೆ ಎರಡು ದಿನದಿದ ಹಿಂದೆ ಜಿಲ್ಲೆಯ ಎಲ್ಲಾ ಎಂಟು ತಾಲೂಕನ್ನ ಬರಗಾಲ ಜಿಲ್ಲೆ ಎಂದು ಘೋಷನೆ ಮಾಡಿದೆ. ಮಳೆಯ ಕೊರೆತೆಯಿಂದಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಮಳೆಯ ಮಳೆಯ ಕಣ್ಣಾಮುಚ್ಚಾಲೆಯಾಟದಿಂದಾಗಿ ಸೋಯಾಬಿನ್ ಇಳುವರಿ ಕಡಿಮೆಯಾಗಿದೆ. ಕಳೆದ ವರ್ಷ ಎಕರೆಗೆ 7 ರಿಂದ 9 ಕ್ವಿಂಟಲ್‌ ಇಳುವರಿ ಬಂದಿದ್ದರೆ ಈ ವರ್ಷ 4 ರಿಂದ 5 ಕ್ವಿಂಟಲ್‌ ದೊರೆತಿದೆ ಎಂದು ರೈತರು ಹೇಳುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:23 pm, Thu, 9 November 23