ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಭ್ರಷ್ಟಾಚಾರದ ಆರೋಪ; ನಕಲಿ ನೌಕರರಿಂದ ಮುಕ್ತಿ ನೀಡುವಂತೆ ಸಾರ್ವಜನಿಕರಿಂದ ಒತ್ತಾಯ

ಒಂದು ಖರೀದಿ ಆಗಬೇಕಾದರೆ ತಿಂಗಳುಗಟ್ಟಲೇ ಅಲೆದಾಡಬೇಕಾಗುತ್ತದೆ. ಇದರಿಂದ ಸಾರ್ವಜನಿಕರು ನಿತ್ಯ ಜಗಳವಾಡುವಂತಾಗಿದೆ. ಸಿಬ್ಬಂದಿ ಕೊರತೆ ಎಂದು ಜನರಿಗೆ ಸತಾಯಿಸುತ್ತಾರೆ. ಹೀಗಾಗಿ ಗದಗ ಶಹರ, ಗದಗ ಗ್ರಾಮೀಣ ಅಂತ ವಿಂಗಡಣೆ ಮಾಡಬೇಕು ಎಂದು ಖರೀದಿದಾರ ದೀಪಕ್ ಶೆಟ್ಟಿ ಒತ್ತಾಯಿಸಿದ್ದಾರೆ.

ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಭ್ರಷ್ಟಾಚಾರದ ಆರೋಪ; ನಕಲಿ ನೌಕರರಿಂದ ಮುಕ್ತಿ ನೀಡುವಂತೆ ಸಾರ್ವಜನಿಕರಿಂದ ಒತ್ತಾಯ
ಸಬ್ ರಿಜಿಸ್ಟ್ರಾರ್​ ಕಚೇರಿಯಲ್ಲಿ ಭ್ರಷ್ಟಾಚಾರದ ಆರೋಪ
Follow us
TV9 Web
| Updated By: preethi shettigar

Updated on: Aug 28, 2021 | 9:38 AM

ಗದಗ: ಸಬ್ ರಿಜಿಸ್ಟ್ರಾರ್​ ಕಚೇರಿ ಎಂದರೆ ಅಲ್ಲಿ ಜನರಿಗೆ ನೆರವಾಗುವ ಒಂದಷ್ಟು ಕಾರ್ಯಗಳು ನಡೆಯಬೇಕು. ಆದರೆ ಗದಗ ಜಿಲ್ಲೆಯ ಸಬ್ ರಿಜಿಸ್ಟ್ರಾರ್ ಕಚೇರಿಯೊಂದು ಇವುಗಳಿಗೆ ವಿರುದ್ಧವಾಗಿದೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಕಾರಣ ಈ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ. ಒಂದು ಕಡೆ ಕಚೇರಿ ಸುತ್ತ ತಲೆ ಎತ್ತಿರುವ ಎಜೆಂಟರ ಕೂಟದ ಮೂಲಕ ಭ್ರಷ್ಟಾಚಾರ ನಡೆದರೆ. ಇನ್ನೊಂದೆಡೆ ನಕಲಿ ನೌಕರರಿಂದ ಅಧಿಕಾರಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂಬುವುದು ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಒಂದು ಕೆಲಸ ಆಗಬೇಕು ಅಂದರೆ ಬರೋಬ್ಬರಿ 15 ರಿಂದ 20 ದಿನಗಳು ಬೇಕಾಗುತ್ತದೆ. ಕೆಲವು ಬಾರಿ ಸಾರ್ವಜನಿಕರು ಕೊಟ್ಟ ಅರ್ಜಿಗಳೇ ನಾಪತ್ತೆ ಆಗುತ್ತದೆ. ಅಲ್ಲದೆ ಈ ಅರ್ಜಿ ಎಲ್ಲಿಟ್ಟಿದ್ದಾರೆ ಎನ್ನುವುದು ಕೂಡ ಇಲ್ಲಿನ ಅಧಿಕಾರಿಗಳಿಗೆ ಗೊತ್ತಿರುವುದಿಲ್ಲ. ಇನ್ನು ಸಾರ್ವಜನಿರನ್ನು ಹೇಗೆ ಅಲೆದಾಡಿಸುತ್ತಾರೆ ಎಂದರೆ ಅಲೆದಾಡಿ ಅಲೆದಾಡಿ ಸುಸ್ತಾಗಿ ಕೊನೆಗೆ ತಮಗೇ ಆಗಬೇಕಾಗಿರುವ ಕೆಲಸವನ್ನೇ ಕೈಬಿಟ್ಟು ಮನೆಯಲ್ಲಿ ಕೂರುವಂತೆ ಮಾಡುತ್ತಾರೆ. ಆದರೆ ಕೆಲಸ ಆಗಲೇಬೇಕು ಎಂದರೆ ಏಜೆಂಟರ ಮೂಲಕ ಮಾಡಿಸಬಹುದು. ಇದಕ್ಕಾಗಿ ಲಂಚ ಕೊಟ್ಟರೆ ಸಬ್ ರಿಜಿಸ್ಟ್ರಾರ್ ಸಾಹೇಬರು ಸಹಿ ಹಾಕುತ್ತಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ

ಒಂದು ಖರೀದಿ ಆಗಬೇಕಾದರೆ ತಿಂಗಳುಗಟ್ಟಲೇ ಅಲೆದಾಡಬೇಕಾಗುತ್ತದೆ. ಇದರಿಂದ ಸಾರ್ವಜನಿಕರು ನಿತ್ಯ ಜಗಳವಾಡುವಂತಾಗಿದೆ. ಸಿಬ್ಬಂದಿ ಕೊರತೆ ಎಂದು ಜನರಿಗೆ ಸತಾಯಿಸುತ್ತಾರೆ. ಹೀಗಾಗಿ ಗದಗ ಶಹರ, ಗದಗ ಗ್ರಾಮೀಣ ಅಂತ ವಿಂಗಡಣೆ ಮಾಡಬೇಕು ಎಂದು ಖರೀದಿದಾರ ದೀಪಕ್ ಶೆಟ್ಟಿ ಒತ್ತಾಯಿಸಿದ್ದಾರೆ.

Sub Registrar Office

ಸಬ್ ರಿಜಿಸ್ಟ್ರಾರ್​ ಕಚೇರಿ

ಏಜೆಂಟರ ಹಾವಳಿ ಒಂದು ಕಡೆಯಾದರೆ ಇನ್ನೊಂದೆಡೆ ನಕಲಿ ನೌಕರರ ಹಾವಳಿ ಹೆಚ್ಚಾಗಿದೆ. ಇವರಿಗೆ ಕಚೇರಿಯಲ್ಲಿಯೇ ಪ್ರತ್ಯೇಕ ಕೊಠಡಿ ಮಾಡಿಕೊಡಲಾಗಿದೆ. ಇವರ ಕೆಲಸ ಹೇಗೆ ಅಂದರೆ ಥಟ್ ಅಂತಾ ಆಗಿಬಿಡುತ್ತದೆ. ಏಜೆನ್ಸಿಗಳಿಂದ ಸ್ವಲ್ಪ ತಡವಾಗಬಹುದು. ಆದರೆ ಈ ನಕಲಿ ನೌಕರರಿಂದ ಆ ಕ್ಷಣದಲ್ಲಿಯೇ ಕೆಲಸ ಆಗುತ್ತದೆ. ಈ ಕೆಲಸಕ್ಕಾಗಿ ಇಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತದೆ ಎಂದು ಇಲ್ಲಿನ ಸ್ಥಳೀಯರು ಆರೋಪಿಸಿದ್ದಾರೆ.

ಈ ಸಂಬಂಧ ಸಬ್ ರಿಜಿಸ್ಟ್ರಾರ್ ಡಿ.ಕೆ. ನಡುವಲಮನಿ ಸಾಹೇಬರನ್ನು ಕೇಳಿದರೆ, ನಕಲಿ ನೌಕರರು ಯಾರು ಅಂತ ನನಗೆ ಗೊತ್ತಿಲ್ಲ. ಅಂತಹ ಯಾವ ನೌಕರರು ನಮ್ಮಲ್ಲಿ ಇಲ್ಲ. ಇದ್ದರೆ ಅಂತವರನ್ನು ವಿಚಾರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಸದ್ಯ ಅಧಿಕಾರಿಗಳ ಉಪಟಳಕ್ಕೆ ಪ್ರತಿನಿತ್ಯ ನೂರಾರು ಜನ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಅದರಲ್ಲೂ ಕೊವಿಡ್ ನಿಯಮಗಳನ್ನು ಪಾಲನೆ ಮಾಡದೆ. ನೂರಾರು ಜನರನ್ನು ಕಚೇರಿ ತುಂಬ ನಿಲ್ಲಿಸಿಕೊಂಡು ಗದ್ದಲ ಮಾಡಲಾಗುತ್ತದೆ ಎನ್ನುವುದು ಕೂಡ ತಿಳಿದು ಬಂದಿದೆ.

ವರದಿ: ಸಂಜೀವ ಪಾಂಡ್ರೆ

ಇದನ್ನೂ ಓದಿ: ಭ್ರಷ್ಟಾಚಾರ ಆರೋಪ: ಟಿಎಂಸಿ ಪಕ್ಷದ ಮಾಜಿ ಸಚಿವ ಶ್ಯಾಮಪ್ರಸಾದ್ ಮುಖರ್ಜಿ ಬಂಧನ

ಸದುದ್ದೇಶದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ಆತಂಕದಿಂದ ಆರೋಪಿ ಡಾಟಾ ಎಂಟ್ರಿ ಆಪರೇಟರ್‌ ಆತ್ಮಹತ್ಯೆ

ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ