
ಗದಗ, ಜೂನ್ 24: ನಗರದಲ್ಲಿ ಅಟ್ಟಹಾಸ ಮೆರೆಯುತ್ತಿದ್ದ ಅಕ್ರಮ ಬಡ್ಡಿ ದಂಧೆಕೋರರ ವಿರುದ್ಧ ಪೊಲೀಸ್ ಇಲಾಖೆ ಸಮರ ಸಾರಿದೆ. ಅಕ್ರಮ ಹಣಕಾಸು ವ್ಯವಹಾರ ಮತ್ತು ಅತಿಯಾದ ಬಡ್ಡಿ ವಸೂಲಿ ಆರೋಪ ಬೆನ್ನಲ್ಲೇ ಡಿವೈಎಸ್ಪಿ ಮುರ್ತುಜ್ ಖಾದ್ರಿ ನೇತೃತ್ವದಲ್ಲಿ ಗದಗದ (gadag) ಬೆಟಗೇರಿಯ ಹಲವೆಡೆ ದಾಳಿ ನಡೆಸಿ ಪರಿಶೀಲನೆ ಮಾಡಿದರು. ದಾಳಿ ವೇಳೆ ಕಂತೆ ಕಂತೆ ಹಣ, ಅಪಾರ ಚಿನ್ನಾಭರಣ ಪತ್ತೆ ಆಗಿದ್ದು, ಪೊಲೀಸರೇ ಶಾಕ್ ಆಗಿದ್ದಾರೆ.
ಗದಗ ಎಸ್ಪಿ ರೋಹನ್ ಜಗದೀಶ್ ಸೂಚನೆ ಮೇರೆಗೆ ಪೊಲೀಸ್ರ ಆರು ತಂಡಗಳು ಏಕಕಾಲದಲ್ಲಿ ವಿವಿಧೆಡೆ ದಾಳಿ ಮಾಡಿದ್ದಾರೆ. ಅದರಲ್ಲೂ ಬಡ್ಡಿ ದಂಧೆಕೋರ ಮನೋಹರ ಕಟ್ಟಿಮಣಿ ಕಚೇರಿ ಮತ್ತು ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ 9 ಪಾಸ್ಬುಕ್, 11 ಚೆಕ್ ಬುಕ್, ATM ಕಾರ್ಡ್, ಪ್ಯಾನ್ ಕಾರ್ಡ್, 150ಕ್ಕೂ ಹೆಚ್ಚು ಚೆಕ್, 65ಕ್ಕೂ ಹೆಚ್ಚು ಖಾಲಿ ಬಾಂಡ್, ಒಪ್ಪಂದ ಪತ್ರಗಳು ಪತ್ತೆ ಆಗಿವೆ.
ಇದನ್ನೂ ಓದಿ: ಗದಗದಲ್ಲಿ ಬಡ್ಡಿ ಬಕಾಸುರರ ಅಟ್ಟಹಾಸ: 17 ಲಕ್ಷ ರೂ. ಸಾಲ ಕೊಟ್ಟು ರೈತನ 5 ಎಕರೆ ಜಮೀನು ನುಂಗಿದ ರೌಡಿಶೀಟರ್ ಗ್ಯಾಂಗ್
ಇನ್ನು 60 ಲಕ್ಷ ರೂಪಾಯಿ ಮೌಲ್ಯದ 422.4 ಗ್ರಾಂ ಚಿನ್ನಾಭರಣ. 5.5 ಲಕ್ಷ ನಗದು, 10 ಗೋವಾ ಮದ್ಯದ ಬಾಟಲಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಬ್ಬಾಳಿಕೆ, ಬೆದರಿಕೆ, ಮೈಕ್ರೋಫೈನಾನ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸಮಾಜಕ್ಕೆ ಹಾನಿಕಾರಕವಾಗಿರುವ ಅಕ್ರಮ ಹಣಕಾಸು ವ್ಯವಹಾರಗಳನ್ನು ನಿಯಂತ್ರಿಸಲು ಹಾಗೂ ನಿರ್ಮೂಲನೆ ಮಾಡಲು ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ದಾಳಿ ಕುರಿತು ಗದಗ ಎಸ್ಪಿ ರೋಹನ್ ಜಗದೀಶ್ ಮಾಹಿತಿ ನೀಡಿದ್ದಾರೆ.
ಇನ್ನು ಇತ್ತ ಮುಂಡಗೋಡನಲ್ಲಿ ಮೀಟರ್ ಬಡ್ಡಿ ದಂಧೆಗೆ ಬಿಳುತ್ತಿಲ್ಲ ಬ್ರೇಕ್. ಎಷ್ಟೇ ಕಠಿಣ ಕ್ರಮಕೈಗೊಂಡರು ದಂಧೆಕೋರರು ಮಾತ್ರ ಬಗ್ಗುತ್ತಿಲ್ಲ. ಹೀಗಾಗಿ ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ನೆತೃತ್ವದಲ್ಲಿ ಇಂದು ಬೆಳಿಗ್ಗೆ ಒಟ್ಟು 14 ಜನರ ಮನೆ ಮೇಲೆ ಏಕಕಾಲದಲ್ಲಿ ದಾಳಿ ಮಾಡಲಾಗಿದೆ.
ಮುಂಡಗೋಡ ಪಟ್ಟಣದ ನಿವಾಸಿ ತೌಸಿಪ್ ಪಣಿಬಂದ ಮನೆ ಮೇಲೆ ಅನುಮಾನಸ್ಪದ ದಾಳಿಯಲ್ಲಿ 14 ಖಾಲಿ ಚೆಕ್ ಹಾಗೂ ಬಾಂಡ್ಗಳು ಪತ್ತೆ ಆಗಿವೆ. ಇನ್ನು ಮೊಹಮ್ಮದ್ ಪಾನವಾಲೆ ಮನೆಯಲ್ಲಿ ಎರಡು ಜಿಂಕೆ ಕೊಂಬು ಪತ್ತೆ ಆಗಿವೆ. ಸದ್ಯ ಮುಂಡಗೊಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಇಡಿ ಖೆಡ್ಡಾಕ್ಕೆ ಬಿದ್ದ ಸಚಿವ ಜಾರಕಿಹೊಳಿ ಬಾಮೈದ: ಮೆಗಾ ಕಾರ್ಯಾಚರಣೆಯಲ್ಲಿ ಏನೆಲ್ಲಾ ಸಿಕ್ತು?
ಮುಂಡಗೊಡನಲ್ಲಿ ಬಡ್ಡಿ ದಂಧೆ ತಣ್ಣಗಾಗಿತ್ತು ಎನ್ನಲಾಗಿತ್ತು. ಇಂದು ಬೆಳಿಗ್ಗೆ 14 ಖಾಲಿ ಚೆಕ್ ಪತ್ತೆ ಹಿನ್ನೆಲೆ ಮುಂಡಗೋಡನಲ್ಲಿ ಮೀಟರ್ ಬಡ್ಡಿ ದಂಧೆ ಬಯಲಿಗೆ. ಕಳೆದ ಒಂದುವರೆ ವರ್ಷದಲ್ಲಿ 63 ಮನೆಗಳ ಮೇಲೆ ಪೊಲೀಸರು ದಾಳಿ ಮಾಡಿದ್ದು, 58 ಜನರನ್ನ ಬಂಧಿಸಿ, 2 ರೌಡಿ ಶೀಟರ್ನ್ನ ಬಳ್ಳಾರಿ ಜಿಲ್ಲೆಗೆ ಶಿಫ್ಟ್ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.