AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೆಸ್ಕಾಂ ಅಧಿಕಾರಿಗಳ ಕಳ್ಳಾಟ, ಜನ ಪ್ರಶ್ನೆ ಮಾಡ್ತಿದ್ದಂತೆ ಟೆಂಡರ್ ಕ್ಯಾನ್ಸಲ್!

ತಮಗೆ ಬೇಕಾದ ಕೆಲವೇ ಗುತ್ತಿಗೆದಾರರಿಗೆ ಮಾತ್ರ ಟೆಂಡರ್ ನೀಡಲು ಜೆಸ್ಕಾಂ ಅಧಿಕಾರಿಗಳು ಟೆಂಡರ್ ಗೋಲ್ಮಾಲ್ ಮಾಡಿರೋದು ಮೇಲ್ನೋಟಕ್ಕೆ ಬಹಿರಂಗವಾಗಿದೆ. ಇನ್ನು ಜನ ಪ್ರಶ್ನೆ ಮಾಡ್ತಿದ್ದಂತೆ ಮಾಡಿರುವ ತಪ್ಪನ್ನ ಮುಚ್ಚಿಕೊಳ್ಳಲು ಜೆಸ್ಕಾಂ ಅಧಿಕಾರಿಗಳು ಟೆಂಡರ್ ಕ್ಯಾನ್ಸಲ್ ಗೆ ಮುಂದಾಗಿದ್ದಾರೆ. ಒಟ್ನಲ್ಲಿ ಜೆಸ್ಕಾಂ ಅಧಿಕಾರಿಗಳ ಕಳ್ಳಾಟ ಬಟಾಬಯಲಾಗಿದೆ. ಅದು ಏನೇ ಇರಲಿ ಎಂಜಲು ಕಾಸಿನ ಆಸೆಗೆ ನೀತಿ ನಿಯಮಾವಳಿಗಳಲ್ಲೆ ಬಿಡೋದು ಎಷ್ಟು ಸರಿ ನೀವೆ ಹೇಳಿ?

ಜೆಸ್ಕಾಂ ಅಧಿಕಾರಿಗಳ ಕಳ್ಳಾಟ, ಜನ ಪ್ರಶ್ನೆ ಮಾಡ್ತಿದ್ದಂತೆ ಟೆಂಡರ್ ಕ್ಯಾನ್ಸಲ್!
ಜೆಸ್ಕಾಂ ಅಧಿಕಾರಿಗಳ ಕಳ್ಳಾಟ, ಜನ ಪ್ರಶ್ನೆ ಮಾಡ್ತಿದ್ದಂತೆ ಟೆಂಡರ್ ಕ್ಯಾನ್ಸಲ್!
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಸಾಧು ಶ್ರೀನಾಥ್​|

Updated on: Mar 22, 2024 | 1:42 PM

Share

ಜೆಸ್ಕಾಂ (ಗುಲ್ಬರ್ಗಾ ವಿದ್ಯುತ್ ಸರಬರಾಜು ನಿಯಮಿತ)ನಲ್ಲಿ ಭಾರೀ ಟೆಂಡರ್ ಗೋಲ್ಮಾಲ್ ವಾಸನೆ ಎದ್ದಿದೆ. ಮ್ಯಾನ್ ಪವರ್ ಸಪ್ಲೈ ಮತ್ತು ಮೈನರ್ ಮೆಂಟೆನೆನ್ಸ್ ವರ್ಕ್ ಗಾಗಿ ಕರೆಯಲಾದ ಟೆಂಡರ್ ನಲ್ಲಿ ಗೋಲ್ಮಾಲ್ ನಡೆಸಿರೋ ಆರೋಪ ಕೇಳಿ ಬಂದಿದೆ. ಜೆಸ್ಕಾಂ ಅಧಿಕಾರಿಗಳು ತಮಗೆ ಬೇಕಾದ ಗುತ್ತಿಗೆದಾರರಿಗೆ ಟೆಂಡರ್ ಕಲ್ಪಿಸುವ ದುರುದ್ದೇಶದಿಂದ ಟೆಂಡರ್ ಹಗರಣ ಮಾಡಿರೋ ಶಂಕೆ ವ್ಯಕ್ತವಾಗಿದೆ. ಹಾಗಿದ್ರೆ ಏನೀ ಟೆಂಡರ್ ಗೋಲ್ ಮಾಲ್ ಅಂತೀರ ಈ ಸ್ಟೋರಿ ನೋಡಿ.

ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಜೆಸ್ಕಾಂ) ನಲ್ಲಿ ಟೆಂಡರ್ ಗೋಲ್ಮಾಲ್ ನಡೆದಿದೆ. ತಮಗೆ ಬೇಕಾದ ಗುತ್ತೇದಾರರಿಗೆ ಟೆಂಡರ್ ಕಲ್ಪಿಸುವ ದುರುದ್ದೇಶದಿಂದ ಜೆಸ್ಕಾಂ ಅಧಿಕಾರಿಗಳು ಟೆಂಡರ್ ಹಗರಣ ನಡೆಸಿದ್ದಾರೆ. 33/11 KV ವಿದ್ಯುತ್ ವಿತರಣಾ ಸಬ್ ಸ್ಟೇಷನ್ ನಲ್ಲಿ ಶಿಫ್ಟ್ ಡ್ಯೂಟಿ ಮತ್ತು ಮೈನರ್ ಮೆಂಟೆನೆನ್ಸ್ ಗಾಗಿ ಮ್ಯಾನ್ ಪವರ್ ಟೆಂಡರ್ ಕರೆಯಲಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 61 ಸಬ್ ಸ್ಟೇಷನ್ ಗೆ ಟೆಂಡರ್ ಕರೆಯಲಾಗಿದೆ. ಈ ಮುಂಚೆ ಸಿಂಗಲ್ ಸಬ್ ಸ್ಟೇಷನ್, ಡಬಲ್ ಸಬ್ ಸ್ಟೇಷನ್ ಪ್ಯಾಕೇಜ್ ಮಾಡಿ ಟೆಂಡರ್ ಕರೆಯಲಾಗುತ್ತಿತ್ತು. ಆದ್ರೆ ಈ ಬಾರಿ ನಾಲ್ಕು ಸಬ್ ಸ್ಟೇಷನ್ ಗಳನ್ನ ಸೇರಿಸಿ ಒಂದೊಂದು ಪ್ಯಾಕೇಜ್ ಮಾಡಿ ಟೆಂಡರ್ ಕರೆಯಲಾಗಿದೆ. ಹೀಗಾಗಿ ಸಿಂಗಲ್ ಸಬ್ ಸ್ಟೇಷನ್ ವರ್ಕ್ ಪಡೆದಿರೋ ಗುತ್ತಿಗೆದಾರರಿಗೆ ಟೆಂಡರ್ ಕೈತಪ್ಪಲಿದೆ.

ಅಲ್ಲದೆ ನಾಲ್ಕು ಸಬ್ ಸ್ಟೇಷನ್ ಮಾಡಿ ಟೆಂಡರ್ ಮಾಡಿ ತಮಗೆ ಬೇಕಾದ ಕೆಲವೇ ಕೇಲವು ಗುತ್ತಿಗೆದಾರರಿಗೆ ಟೆಂಡರ್ ಕಲ್ಲಿಸಲು ಜೆಸ್ಕಾಂ ಅಧಿಕಾರಿಗಳು ಟೆಂಡರ್ ಗೋಲ್ಮಾಲ್ ಮಾಡಿದ್ದಾರೆಂದು ಗುತ್ತಿಗೆದಾರರು ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಟೆಂಡರ್ ತಿದ್ದುಪಡಿ ಮಾಡಿ ಸಿಂಗಲ್ ಸ್ಟೇಷನ್ ಅಥವಾ ಡಬಲ್ ಸಬ್ ಸ್ಟೇಷನ್ ಟೆಂಡರ್ ಕರೆಯುವಂತೆ ಒತ್ತಾಯ ಮಾಡ್ತಿದ್ದಾರೆ ಎನ್ನುತ್ತಾರೆ ಗೋವಿಂದ ರಾಠೋಡ್, ಜೆಸ್ಕಾಂ ಗುತ್ತಿಗೆದಾರರು.

ಇನ್ನು ಜೆಸ್ಕಾಂ ವ್ಯಾಪ್ತಿಯಲ್ಲಿ ಬರುವ ರಾಯಚೂರಿನಲ್ಲಿ ಸಿಂಗಲ್ ಸಬ್ ಸ್ಟೇಷನ್ ಟೆಂಡರ್ ಕರೆಯಲಾಗಿದೆ. ಬಳ್ಳಾರಿಯಲ್ಲಿ ಡಬಲ್ ವಿದ್ಯುತ್ ವಿತರಣಾ ಸಬ್ ಸ್ಟೇಷನ್ ಪ್ಯಾಕೇಜ್ ಮಾಡಿ ಟೆಂಡರ್ ಕರೆಯಲಾಗಿದೆ. ಆದ್ರೆ ಕಲಬುರಗಿಯಲ್ಲಿ ಮಾತ್ರ ಜೆಸ್ಕಾಂ ಅಧಿಕಾರಿಗಳು ನಾಲ್ಕು ಸಬ್ ಸ್ಟೇಷನ್ ಸೇರಿ ಒಂದೊಂದು ಪ್ಯಾಕೇಜ್ ಮಾಡಿದ್ದಾರೆ‌.

Also Read: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಶಂಕಿತ ವ್ಯಕ್ತಿ ಧರಿಸಿದ್ದ ಕ್ಯಾಪ್ ಮತ್ತು ತಲೆಗೂದಲಿನಿಂದ ಎನ್​ಐಎಗೆ ಸಿಕ್ತು ಮಹತ್ವದ ಸುಳಿವು!

ಈ ಟೆಂಡರ್ ಗೋಲ್ಮಾಲ್ ನಿಂದ ಕೇವಲ 15 ಜನ ಗುತ್ತಿಗೆದಾರರಿಗೆ ಮಾತ್ರ ವರ್ಕ್ ಸಿಗಲಿದೆ. ಅಂದಹಾಗೆ ಕಲಬುರಗಿ ಜಿಲ್ಲೆಯಲ್ಲಿ ಸುಮಾರು 150 ಕ್ಕೂ ಹೆಚ್ಚು ಜನ ಜೆಸ್ಕಾಂ ನಲ್ಲಿ ಮ್ಯಾನ್ ಪವರ್ ಸರ್ವಿಸ್ ಗುತ್ತಿಗೆದಾರರಿದ್ದಾರೆ. ಕೇವಲ ಹದಿನೈದು ಜನರಿಗೆ ಮಾತ್ರ ವರ್ಕ್ ಸಿಕ್ಕರೆ ಉಳಿದ ಗುತ್ತಿಗೆದಾರರು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ತಮಗೆ ಬೇಕಾದ ಕೆಲವೇ ಗುತ್ತಿಗೆದಾರರಿಗೆ ಮಾತ್ರ ಟೆಂಡರ್ ನೀಡಲು ಜೆಸ್ಕಾಂ ಅಧಿಕಾರಿಗಳು ಟೆಂಡರ್ ಗೋಲ್ಮಾಲ್ ಮಾಡಿರೋದು ಮೇಲ್ನೋಟಕ್ಕೆ ಬಹಿರಂಗವಾಗಿದೆ. ಇನ್ನು ಜನ ಪ್ರಶ್ನೆ ಮಾಡ್ತಿದ್ದಂತೆ ಮಾಡಿರುವ ತಪ್ಪನ್ನ ಮುಚ್ಚಿಕೊಳ್ಳಲು ಜೆಸ್ಕಾಂ ಅಧಿಕಾರಿಗಳು ಟೆಂಡರ್ ಕ್ಯಾನ್ಸಲ್ ಗೆ ಮುಂದಾಗಿದ್ದಾರೆ. ಒಟ್ನಲ್ಲಿ ಜೆಸ್ಕಾಂ ಅಧಿಕಾರಿಗಳ ಕಳ್ಳಾಟ ಬಟಾಬಯಲಾಗಿದೆ. ಅದು ಏನೇ ಇರಲಿ ಎಂಜಲು ಕಾಸಿನ ಆಸೆಗೆ ನೀತಿ ನಿಯಮಾವಳಿಗಳಲ್ಲೆ ಬಿಡೋದು ಎಷ್ಟು ಸರಿ ನೀವೆ ಹೇಳಿ?

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಬಿ. ಸರೋಜಾದೇವಿ ಅಂತ್ಯಕ್ರಿಯೆಗೆ ಸಿದ್ಧತೆ
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?