ದಕ್ಷಿಣ ಕನ್ನಡ ಜಿಲ್ಲೆ ರೈತರಿಗೆ ಸಿಹಿ ಸುದ್ದಿ: ಬರೋಬ್ಬರಿ 13 ವರ್ಷಗಳ ಬಳಿಕ ರಬ್ಬರ್​ ಬೆಲೆ ಏರಿಕೆ

2011ರ ಬಳಿಕ ಬರೋಬ್ಬರಿ 13 ವರ್ಷಗಳ ನಂತರ ರಬ್ಬರ್​ ಬೆಲೆ ಏರಿಕೆಯಾಗಿದೆ. ಇದು ರಬ್ಬರ್​ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ. ರಾಜ್ಯದಲ್ಲಿ 55,000 ಹೆಕ್ಟೇರ್‌ ಪ್ರದೇಶದಲ್ಲಿ ರಬ್ಬರ್ ಬೆಳೆಯಲಾಗುತ್ತಿದೆ. ರಬ್ಬರ್​ ಬೆಲೆ ಎಷ್ಟು ಏರಿಕೆಯಾಗಿದೆ? ಈ ಸುದ್ದಿ ಓದಿ.

ದಕ್ಷಿಣ ಕನ್ನಡ ಜಿಲ್ಲೆ ರೈತರಿಗೆ ಸಿಹಿ ಸುದ್ದಿ: ಬರೋಬ್ಬರಿ 13 ವರ್ಷಗಳ ಬಳಿಕ ರಬ್ಬರ್​ ಬೆಲೆ ಏರಿಕೆ
ರಬ್ಬರ್ ಮರ
Follow us
ವಿವೇಕ ಬಿರಾದಾರ
|

Updated on: Aug 19, 2024 | 12:10 PM

ಮಂಗಳೂರು, ಆಗಸ್ಟ್​​ 19: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಬ್ಬರ್​ (Rubber) ದರ ಏರಿಕೆಯಾಗಿದ್ದು, ಬೆಳೆಗಾರರ ​​ಮುಖದಲ್ಲಿ ಮಂದಹಾಸ ಮೂಡಿದೆ. ಬರೋಬ್ಬರಿ 13 ವರ್ಷಗಳ ನಂತರ ರಬ್ಬರ್ ಬೆಲೆ ಏರಿಕೆಯಾಗಿದೆ. ಅಂದರೆ 2011ರಲ್ಲಿ ರಬ್ಬರ್​ ಬೆಲೆ ಕೆಜಿಗೆ 242ರೂ. ಈ ಬಳಿಕ ರಬ್ಬರ್​ ಬೆಲೆ ಕಳೆದ ವರ್ಷ ರಬ್ಬರ್​ ಬೆಲೆ ಕೆಜಿಗೆ 149 ರೂ.ಗೆ ಇಳಿಕೆಯಾಗಿತ್ತು. ಈ ವರ್ಷ ರಬ್ಬರ್ (ಆರ್‌ಎಸ್‌ಎಸ್ 4 ಗ್ರೇಡ್) ಕೆಜಿಗೆ 239 ರೂ., ಆರ್‌ಎಸ್‌ಎಸ್ 5 ಗ್ರೇಡ್ ಕೆಜಿಗೆ 234 ರೂ. ಮತ್ತು ಲ್ಯಾಟೆಕ್ಸ್ ಬೆಲೆಯು ಕೆಜಿಗೆ 165 ರೂ. ಏರಿಕೆಯಾಗಿದೆ.

ರಾಜ್ಯದಲ್ಲಿ 55,000 ಹೆಕ್ಟೇರ್‌ ಪ್ರದೇಶದಲ್ಲಿ ರಬ್ಬರ್ ಬೆಳೆಯಲಾಗುತ್ತಿದೆ. ಕೇರಳ, ಕರಾವಳಿ ಜಿಲ್ಲೆಗಳು ಮತ್ತು ಕರ್ನಾಟಕದ ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದಾಗಿ ರಬ್ಬರ್​ ಸರಬರಾಜಿನಲ್ಲಿ ಕೊರತೆಯುಂಟಾಗಿದೆ. ಇದರಿಂದ ರಬ್ಬರ್‌ಗೆ ಬೇಡಿಕೆ ಹೆಚ್ಚುತ್ತಿದ್ದು, ಬೆಲೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಲ್ಲಿ ವ್ಯಾಪಾರಿಗಳು ಇದ್ದಾರೆ.

ಭಾರತದಲ್ಲಿ 8.57 ಲಕ್ಷ ಟನ್​ನಷ್ಟು ರಬ್ಬರ್ ಉತ್ಪಾದನೆಯಾಗುತ್ತದೆ. ಆದರೆ, ಬಳಕೆಗೆ ಬೇಕಾಗಿದ್ದು 14.16 ಲಕ್ಷ ಟನ್‌ ರಬ್ಬರ್​ ಬೇಕು. ಬರೊಬ್ಬರಿ 5.59 ಲಕ್ಷ ಟನ್​ನಷ್ಟು ಕೊರತೆ ಇದೆ. ಇದರಿಂದ ರಬ್ಬರ್​​ಗೆ ಭಾರಿ ಬೇಡಿಕೆ ಉಂಟಾಗಿದೆ. ಕೈಗಾರಿಕೆಗಳಿಂದ ನೈಸರ್ಗಿಕ ರಬ್ಬರ್‌ಗೆ ಬೇಡಿಕೆ ಹೆಚ್ಚಿದೆ. ಇದರಿಂದ ಬೆಲೆ ಹೆಚ್ಚಾಗುತ್ತದೆ ಎಂದು ರಬ್ಬರ್ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕ ಎಂ ವಸಂತಗೇಸನ್ ತಿಳಿಸಿದರು.

ಇದನ್ನೂ ಓದಿ: ರಾಮನಗರದ ಬಿಡದಿಯಲ್ಲಿ ಟೊಯೋಟೆಟ್ಸು ಕಂಪನಿಯಿಂದ ಹೊಸ ಘಟಕ; 450 ಕೋಟಿ ರೂ ಹೂಡಿಕೆ

ಕೇಂದ್ರ ಸರ್ಕಾರವು ರಬ್ಬರ್ ಮಂಡಳಿ ಮೂಲಕ ರಬ್ಬರ್ ಬೆಳೆಗಾರರಿಗೆ ಆರ್ಥಿಕ ನೆರವು ನೀಡುತ್ತಿದೆ. ಹೆಚ್ಚಿನ ಇಳುವರಿಗಾಗಿ, ರೋಗ ನಿಯಂತ್ರಣ, ರಾಸಾಯನಿಕಗಳ ಸಿಂಪರಣೆ ಮತ್ತು ಮರಗಳ ಕಾವಲು ಮುಂತಾದ ಉತ್ತಮ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ನೆರವು ನೀಡುತ್ತಿದೆ.

ಕರ್ನಾಟಕದಲ್ಲಿ ರಬ್ಬರ್ ಉತ್ಪಾದನೆಯು 2019-20ರಲ್ಲಿ 41,550 ಟನ್‌ಗಳಿಂದ 2023-24ರಲ್ಲಿ 52,000 ಟನ್‌ಗಳಿಗೆ ಏರಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಜಿತಿನ್ ಪ್ರಸಾದ್ ಇತ್ತೀಚೆಗೆ ರಾಜ್ಯಸಭೆಗೆ ತಿಳಿಸಿದರು.

ಕೇಂದ್ರ ಸರ್ಕಾರದ ಯೋಜನೆಯಡಿ, ಬೆಳೆಗಾರರಿಗೆ ಆರ್ಥಿಕ ನೆರವು ನೀಡಲಾಗುತ್ತದೆ ಮತ್ತು ಲ್ಯಾಟೆಕ್ಸ್ ಅನ್ನು ಕೊಯ್ಲು ಮಾಡುವ ಮತ್ತು ಶೀಟ್ ರಬ್ಬರ್ ಆಗಿ ಸಂಸ್ಕರಿಸುವ ವೈಜ್ಞಾನಿಕ ವಿಧಾನಗಳ ಬಗ್ಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ರಬ್ಬರ್​ ಬೆಳೆಗಾರ ಮಾತನಾಡಿ, ಮುಂಗಾರು ಸಮಯದಲ್ಲಿ ಲ್ಯಾಟೆಕ್ಸ್ ಒಣಗಲು ಕಷ್ಟವಾಗುತ್ತದೆ. ಹೀಗಾಗಿ ರೈತರು ಬೇಗ ಮಾರಾಟ ಮಾಡುತ್ತಿದ್ದಾರೆ. ಲ್ಯಾಟೆಕ್ಸ್ ಸಂಗ್ರಹಿಸಲು ಖರೀದಿದಾರರು ನಮ್ಮ ಮನೆ ಬಾಗಿಲಿಗೆ ಬರುತ್ತಿದ್ದಾರೆ. ಮಳೆಗಾಲದಲ್ಲಿ, ಬೆಳೆಗಾರರು ನೇರವಾಗಿ ರಬ್ಬರ್ ಅನ್ನು ಟ್ಯಾಪ್ ಮಾಡಲು ಸಾಧ್ಯವಿಲ್ಲ. ಟ್ಯಾಪಿಂಗ್ ಪ್ರದೇಶಕ್ಕೆ ನೀರು ಪ್ರವೇಶಿಸಿದರೆ, ಅದು ಶಿಲೀಂಧ್ರದ ಬೆಳವಣಿಗೆಗೆ ಕಾರಣವಾಗುತ್ತದೆ. ಮತ್ತು ಮರವು ರೋಗಕ್ಕೆ ತುತ್ತಾಗುತ್ತದೆ. ಕೆಲವು ಬೆಳೆಗಾರರು ಟ್ಯಾಪಿಂಗ್ ಮಾಡುವಾಗ ಮರಗಳಿಗೆ ರೈನ್ ಗಾರ್ಡ್ ಬಳಸುತ್ತಾರೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ