ತುಂಗಭದ್ರಾ ಡ್ಯಾಮೇಜ್​ ಬಳಿಕ ಎಚ್ಚೆತ್ತ ಸರ್ಕಾರ: ರಾಜ್ಯದ ಎಲ್ಲಾ ಡ್ಯಾಂಗಳ ಸೇಫ್ಟಿ ಕಮಿಟಿ ರಚನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 12, 2024 | 7:49 PM

ತುಂಗಭದ್ರಾ ಡ್ಯಾಂನ ಕ್ರಸ್ಟ್‌ಗೇಟ್‌ ಕೊಚ್ಚಿ ಹೋಗಿ ಸಾಕಷ್ಟು ಆತಂಕ ಸೃಷ್ಟಿಯಾಗಿದೆ. ಸದ್ಯ ದುರಂತದಿಂದ ಎಚ್ಚೆತ್ತಿರುವ ಸರ್ಕಾರ ರಾಜ್ಯದ ಎಲ್ಲಾ ಡ್ಯಾಮ್‌ಗಳ ಗುಣಮಟ್ಟ ಪರಿಶೀಲನೆಗೆ ಸಮಿತಿ ರಚಿಸಲು ಮುಂದಾಗಿದೆ. ಆ ಮೂಲಕ ಡ್ಯಾಂಗಳ ಸುರಕ್ಷತೆಯನ್ನ ಕಾಪಾಡುವುದಕ್ಕೆ ಹೆಜ್ಜೆ ಇಟ್ಟಿದೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್​ ಪ್ರತಿಕ್ರಿಯಿಸಿದ್ದು, ಡ್ಯಾಮ್​ ನೀರು ಉಳಿಸಿಕೊಳ್ಳೋದು ನಮ್ಮ ಮುಂದಿರುವ ಸವಾಲಾಗಿದೆ ಎಂದಿದ್ದಾರೆ.

ತುಂಗಭದ್ರಾ ಡ್ಯಾಮೇಜ್​ ಬಳಿಕ ಎಚ್ಚೆತ್ತ ಸರ್ಕಾರ: ರಾಜ್ಯದ ಎಲ್ಲಾ ಡ್ಯಾಂಗಳ ಸೇಫ್ಟಿ ಕಮಿಟಿ ರಚನೆ
ತುಂಗಾಭದ್ರ ಡ್ಯಾಮೇಜ್​ ಬಳಿಕ ಎಚ್ಚೆತ್ತ ಸರ್ಕಾರ: ರಾಜ್ಯ ಎಲ್ಲಾ ಡ್ಯಾಂಗಳ ಸೇಫ್ಟಿ ಕಮಿಟಿ ರಚನೆ
Follow us on

ಬೆಂಗಳೂರು, ಆಗಸ್ಟ್​ 12: ಕರ್ನಾಟಕದ ನಾಲ್ಕು ಜಿಲ್ಲೆಗಳ ಉಸಿರಾಗಿರುವ ತುಂಗಭದ್ರಾ ಡ್ಯಾಂ (Tungabhadra dam) ಗೇಟ್ ಕಿತ್ಕೊಂಡು ಹೋಗಿ, ಹಂತಹಂತವಾಗಿ ನೀರು ಖಾಲಿ ಆಗುತ್ತಿದೆ. ಇದರ ನಡುವೆ ಡ್ಯಾಂನಲ್ಲಿ ಅಲ್ಲಲ್ಲಿ ಬಿರುಕು ಬಿಟ್ಟಿರುವುದು ಕೂಡ ಬಯಲಾಗಿದೆ. ಸರ್ಕಾರ (Govt) ಈಗಾಗಲೇ ಹೊಸ ಗೇಟ್​ ನಿರ್ಮಾಣಕ್ಕೆ ಮುಂದಾಗಿದೆ. ಸದ್ಯ ಘಟನೆಯಿಂದ ಎಚ್ಚೆತ್ತಿರುವ ಸರ್ಕಾರ ಇಡೀ ರಾಜ್ಯದಲ್ಲಿ ಎಲ್ಲಾ ಡ್ಯಾಂಗಳ ಸುರಕ್ಷತೆಗೆ ಕಮಿಟಿ ರಚನೆ ಮಾಡಲಾಗುತ್ತಿದೆ.

ಡ್ಯಾಮ್​ ನೀರು ಉಳಿಸಿಕೊಳ್ಳೋದು ನಮ್ಮ ಮುಂದಿರುವ ಸವಾಲು: ಡಿಕೆ ಶಿವಕುಮಾರ್

ಈ ಬಗ್ಗೆ ಜಲಸಂಪನ್ಮೂಲ ಇಲಾಖೆ ಸಚಿವರಾಗಿರುವ ಡಿಸಿಎಂ ಡಿಕೆ ಶಿವಕುಮಾರ್​ ಪ್ರತಿಕ್ರಿಯಿಸಿದ್ದು,  ರಾಜ್ಯದಲ್ಲಿ ಎಲ್ಲಾ ಡ್ಯಾಮ್​ಗಳ ಸೇಫ್ಟಿಗೆ ಕಮಿಟಿ ರಚನೆ ಮಾಡಲಾಗುತ್ತಿದೆ. ಸದ್ಯಕ್ಕೆ ಡ್ಯಾಮ್​ ನೀರು ಉಳಿಸಿಕೊಳ್ಳೋದು ನಮ್ಮ ಮುಂದಿರುವ ಸವಾಲಾಗಿದೆ. ಗೇಟ್ ಯಾವ ರೀತಿ ಸಿದ್ಧಪಡಿಸಲಾಗಿತ್ತು ಎಂಬ ದಾಖಲೆಗಳು ಇತ್ತು. ಆ ದಾಖಲೆಗಳನ್ನು ಅಧಿಕಾರಿಗಳು ಕೊಟ್ಟಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಭರದಿಂದ ಸಾಗಿದ ತುಂಗಭದ್ರಾ ಡ್ಯಾಂ ಗೇಟ್​ ನಿರ್ಮಾಣದ ಕಾರ್ಯ: ಗೇಟಿನ ಅಗಲ-ಉದ್ದ ಎಷ್ಟು? ಇಲ್ಲಿದೆ ವಿವರ

ತುಂಗಭದ್ರಾ ಡ್ಯಾಮ್​ ಕೇಂದ್ರ ಸರ್ಕಾರದ ಕಂಟ್ರೋಲ್​ನಲ್ಲಿ ಇರೋದು. ಬೇರೆ ಡ್ಯಾಮ್​ಗಳಲ್ಲಿ ಎರಡು ರೀತಿಯ ಕಂಟ್ರೋಲ್ ಸಿಸ್ಟಮ್ ಇರುತ್ತೆ. 19ನೇ ಗೇಟ್​ಗೂ ಈಗ ಓಪನ್ ಮಾಡಿರುವ ಗೇಟ್​ಗೂ ವ್ಯತ್ಯಾಸವಿದೆ. ಬೇರೆ ಗೇಟ್​ಗಳಿಗೂ ತೊಂದರೆ ಆಗಬಾರದು. ವಿರೋಧ ಪಕ್ಷದವರು ಸಿಎಂ, ನನ್ನನ್ನು ಮತ್ತು ಅಧಿಕಾರಿಗಳಿಗೆ ಬೈಯ್ಯಲಿ. ಬ್ಲೇಮ್ ಮಾಡೋದಕ್ಕೆ ನಾನು ರಾಜಕೀಯ ಮಾಡೋಕೆ ಆಗಲ್ಲ. ವಿರೋಧ ಪಕ್ಷಗಳು ಏನು ಹೇಳ್ತಾರೆ ಅನ್ನೋದು ಮುಖ್ಯ ಅಲ್ಲ. ಟೆಕ್ನಿಕಲ್ ಟೀಮ್​ನವರು ಏನು ಹೇಳ್ತಾರೆ ಅನ್ನೋದು ನಮಗೆ ಮುಖ್ಯ ಎಂದಿದ್ದಾರೆ.

ತುಂಗಭದ್ರಾ ಅಣೆಕಟ್ಟಿನ ಗೇಟ್​ಗೆ​ ರಾತ್ರಿ 10.50ಕ್ಕೆ ಡ್ಯಾಮೇಜ್ ಆಗಿದೆ. ನನಗೆ ರಾತ್ರಿ 11.30ಕ್ಕೆ ವಿಚಾರ ತಿಳಿತು, ಅಧಿಕಾರಿಗಳ ಜೊತೆ ಮಾತಾಡಿದ್ದೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಡ್ಯಾಮ್​ಗೆ ಹೋಗಿದ್ದರು. ಡ್ಯಾಮ್​ನಿಂದ ನೀರು ರಿಲೀಸ್ ಮಾಡದಿದ್ರೆ ಕಂಟ್ರೋಲ್ ಸಿಗುವುದಿಲ್ಲ. ಗೇಟ್ ಮುರಿದಿದ್ದರಿಂದ ನಮ್ಮ ಬೋರ್ಡ್ ಜೊತೆಗೆ ಮಾತನಾಡಿದೆ. ಅದು ಸೆಂಟ್ರಲ್ ಕಮಿಟಿ ಇದೆ, ಆಂಧ್ರಪ್ರದೇಶದ ಕಮಿಟಿಯೂ ಇದೆ. ನಮ್ಮವರು ಡ್ಯಾಮ್ ಸೆಫ್ಟಿ ಕಮಿಟಿಯಲ್ಲಿದ್ದಾರೆ, ಎಲ್ಲರ ಬಳಿ ಮಾತಾಡಿದ್ದೆ. ಈಗ ತಂಡ ಬಂದು ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತುಂಗಭದ್ರಾ ಜಲಾಶಯ ಖಾಲಿಯಾದ್ರೆ ನಾಲ್ಕು ಜಿಲ್ಲೆ ಜನರಿಗೆ ಸಂಕಷ್ಟ, ಆಂಧ್ರಕ್ಕೂ ಇದೇ ಪಾಲು

50-60 ಟಿಎಂಸಿ ನೀರನ್ನು ಉಳಿಸಿ ರೈತರಿಗೆ ಕೊಡುವ ಬಗ್ಗೆ ಚಿಂತನೆ ಮಾಡಲಾಗುತ್ತಿದೆ. ಕ್ಯಾನಲ್​ಗೆ ನೀರು ಹರಿಯುವಂತೆ ಮಾಡಿದ್ದೇವೆ. ಡ್ಯಾಮ್​ನ 2 ಕಿ.ಮೀ. ಅಂತರದಲ್ಲಿ ಅಲರ್ಟ್ ಆಗಿರಲು ಸೂಚಿಸಲಾಗಿದೆ. ಆಂಧ್ರಪ್ರದೇಶ, ತೆಲಂಗಾಣ ಸಚಿವರು ಕೂಡ ಬಂದಿದ್ದರು. ಕೇಂದ್ರ ಜಲಶಕ್ತಿ ಸಚಿವರು ಮಾತಾಡಿದ್ರು, ವಿ.ಸೋಮಣ್ಣ ಮಾತಾಡಿದ್ರು. ಕೇಂದ್ರ ಸಚಿವರಿಗೆ ಎಲ್ಲಾ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:47 pm, Mon, 12 August 24