ಬೆಂಗಳೂರು, ನವೆಂಬರ್ 27: ರೈತರ ಜಮೀನು ವಿಭಜನೆಯ ಕಾರ್ಯವನ್ನು ಸರಳಗೊಳಸುವ ನಿಟ್ಟಿನಲ್ಲಿ ಸರ್ಕಾರ ದರಖಾಸ್ತು ಪೋಡಿ ಅಭಿಯಾನವನ್ನು ಕೆಲ ತಿಂಗಳ ಹಿಂದೆ ಆರಂಭಿಸಿತ್ತು. ಈಗ ದರಖಾಸ್ತು ಪೋಡಿಯಲ್ಲಿ ಇನ್ನಷ್ಟು ಸರಳೀಕರಣಕ್ಕೆ ಸರ್ಕಾರ ಕ್ರಮ ತೆಗೆದುಕೊಂಡಿದೆ. ದರಖಾಸ್ತು ಪೋಡಿ ನಮೂನೆ 1-5 ಮತ್ತು ನಮೂನೆ 6-10ರಲ್ಲಿ ಬದಲಾವಣೆ ಮಾಡಲು ಸರ್ಕಾರ ಸೂಚಿಸಿದೆ.
ಈಗ ಒಂದು ಸರ್ವೆ ನಂಬರಿಗೆ ಒಮ್ಮೆ ದಾಖಲೆಗಳನ್ನು ಅಳವಡಿಸಿದ ನಂತರ ಅವು ಖಾಯಂ ಆಗಿ ಲಭ್ಯವಾಗುತ್ತವೆ. ಈ ದಾಖಲೆಗಳನ್ನು ಯಾರೂ ನಕಲು ಮಾಡಲು ಅಥವಾ ತಿದ್ದಲು ಸಾಧ್ಯವಿಲ್ಲ.
ಇದನ್ನೂ ಓದಿ: ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆ, ಕನಕಲಕ್ಷ್ಮೀ ಬಂಧನ ಆಗಬೇಕು: ವಕೀಲರ ಸಂಘದ ಅಧ್ಯಕ್ಷ ವಿವೇಕ್ ಆಗ್ರಹ
ಈ ಮೊದಲು ಯಾವುದೇ ಒಂದು ದಾಖಲಾತಿ ಲಭ್ಯವಿಲ್ಲದೇ ಹೋದರೂ ಆ ಕಡತವನ್ನು ಗೈರುವಿಲೇ ಕಮಿಟಿಗೆ ಮಂಡಿಸಲಾಗುತ್ತಿತ್ತು. ಈಗ ಕನಿಷ್ಠ 3 ದಾಖಲಾತಿಗಳು ಲಭ್ಯವಿದ್ದಲ್ಲಿ, ತಹಶೀಲ್ದಾರರು ನೈಜತೆಯನ್ನು ಪರಿಶೀಲಿಸಿ ಪೋಡಿ ಕ್ರಮ ವಹಿಸಲು ಆದೇಶಿಸಬಹುದಾಗಿದೆ.
ಹಲವಾರು ವರ್ಷಗಳ ಹಿಂದೆ ರಾಜ್ಯದ 10 ಲಕ್ಷಕ್ಕೂ ಹೆಚ್ಚು ಜನರಿಗೆ ಅಕ್ರಮ ಸಕ್ರಮದಡಿ ಗೋಮಾಳ ಜಮೀನು ಮಂಜೂರಾತಿ ಆಗಿದೆ. ಆದರೆ ಕೆಲ ರೈತರಿಗೆ ಮಾತ್ರ ಪೋಡಿ ದುರಸ್ತಿಯಾಗಿರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಪೋಡಿ ದುರಸ್ತಿ ಅಭಿಯಾನ ನಡೆಸಿದೆ.
ಪೋಡಿ ದುರಸ್ತಿಯ 1-5 ನಮೂನೆಗನ್ನು ಕಂಪ್ಯೂಟರೀಕರಣಗೊಳಿಸಲಾಗುತ್ತಿದೆ. ಡಿಜಿಟಲ್ ಆ್ಯಪ್ ಮೂಲಕ ಕಡತಗಳನ್ನು ವೇಗವಾಗಿ ಮತ್ತು ಸರಳವಾಗಿ ತಯಾರಿಸಲು ಸಾಧ್ಯವಾಗಿದೆ. ಇವುಗಳನ್ನು ನಕಲಿ ಮಾಡಲು ಅಥವಾ ತಿದ್ದಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ: ನನಗೆ ಎಲ್ಲ ಧರ್ಮವೂ ಒಂದೇ, ಓಲೈಕೆ ಮಾಡುವವನಲ್ಲ; ಸಿಎಂ ಸಿದ್ದರಾಮಯ್ಯ
ಈ ಡಿಜಿಟಲ್ ಆ್ಯಪ್ ಅನ್ನು ಹಾಸನದಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಳಿಸಲಾಗಿತ್ತು. ಅದು ಸಂಪೂರ್ಣ ಯಶಸ್ವಿಯಾದ ಬಳಿಕ ರಾಜ್ಯಾದ್ಯಂತ ಇದನ್ನು ಜಾರಿಗೊಳಿಸಲಾಗಿದೆ. ಈ ಆ್ಯಪ್ ಇಡೀ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ನೀಡಬಲ್ಲುದು. ಯಾವ ಫೈಲು ಯಾವ ಅಧಿಕಾರಿ ಬಳಿ ಇದೆ. ಎಷ್ಟು ದಿನದಿಂದ ವಿಲೇವಾರಿಯಾಗದೇ ಬಾಕಿ ಉಳಿದಿದೆ ಎನ್ನುವ ಮಾಹಿತಿಯು ಆಡಳಿತದ ಗಮನಕ್ಕೆ ಬರುತ್ತದೆ. ಹೀಗಾಗಿ, ಸರ್ವೆ ಅಧಿಕಾರಿಗಳು ಮುತುವರ್ಜಿಯಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ