AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿರಾ ಟು ಹಾಸನ ನಾಪತ್ತೆಯಾಗಿದ್ದ ಮಕ್ಕಳ ಪ್ರಕರಣಕ್ಕೆ ಟ್ವಿಸ್ಟ್: ಇದು ಅಪ್ರಾಪ್ತ ಮಕ್ಕಳ ಪ್ರೇಮ್ ಕಹಾನಿ!

ಶಿರಾದಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಹಾಸನದಲ್ಲಿ ಪತ್ತೆಯಾಗಿದ್ದಾರೆ. ವಿಚಾರಣೆ ವೇಳೆ ಇಬ್ಬರು ಅಪ್ರಾಪ್ತರ ಪ್ರೇಮ್ ಕಹಾನಿ ಹೊರಬಿದ್ದಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಶಿರಾ ಟು ಹಾಸನ ನಾಪತ್ತೆಯಾಗಿದ್ದ ಮಕ್ಕಳ ಪ್ರಕರಣಕ್ಕೆ ಟ್ವಿಸ್ಟ್: ಇದು ಅಪ್ರಾಪ್ತ ಮಕ್ಕಳ ಪ್ರೇಮ್ ಕಹಾನಿ!
ಶಿರಾದಿಂದ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಹಾಸನದಲ್ಲಿ ಪತ್ತೆ
Rakesh Nayak Manchi
|

Updated on: May 22, 2023 | 5:48 PM

Share

ಹಾಸನ: ತುಮಕೂರು ಜಿಲ್ಲೆಯ ಶಿರಾ (Sira) ತಾಲೂಕಿನ ನಾಲ್ವರು ಮಕ್ಕಳು ಪೋಷಕರಿಗೆ ಹೇಳದೆ ಕೇಳದೆ ಮನೆಬಿಟ್ಟು ಬೆಂಗಳೂರಿಗೆ ಆಗಮಿಸಿದ್ದಾರೆ. ಇಲ್ಲಿಂದ ಹಾಸನಕ್ಕೆ (Hassan) ಹೋಗಿದ್ದ ಅಪ್ರಾಪ್ತ ಮಕ್ಕಳು ಬಸ್​ ನಿಲ್ದಾಣದಲ್ಲಿ ಪೊಲೀಸರ ಕಣ್ಣಿಗೆ ಬಿದ್ದಿದ್ದಾರೆ. ವಿಚಾರಣೆ ನಡೆಸಿದಾಗ ಹೊರಬಿತ್ತು ಇಬ್ಬರ ಪ್ರೇಮ್ ಕಹಾನಿ. ಈ ಬಗ್ಗೆ ವರದಿ ಇಲ್ಲಿದೆ ನೋಡಿ.

ಬೆಂಗಳೂರಿನಲ್ಲಿ ಪ್ರಥಮ ವರ್ಷದ ಪಿಯುಸಿ ವ್ಯಾಸಾಂಗ ಮಾಡುತ್ತಿರುವ ಅಪ್ರಾಪ್ತ ಹಾಗೂ ಹೈಸ್ಕೂಲ್ ವ್ಯಾಸಾಂಗ ಮಾಡುತ್ತಿರುವ ಬಾಲಕಿ ನಡುವೆ ಪ್ರೀತಿ ಪ್ರೇಮ. ಹುಟ್ಟುಹಬ್ಬ ಆಚರಣೆ ಹಿನ್ನೆಲೆ ತನ್ನ ಪ್ರಿಯತಮೆ ಮತ್ತು ಅವರ ಮೂವರು ಸ್ನೇಹಿತರಿಗೆ ಬೆಂಗಳೂರಿಗೆ ಆಗಮಿಸುವಂತೆ ಆಹ್ವಾನ ನೀಡಿದ್ದಾನೆ. ಅದರಂತೆ ಮೇ 20ರಂದು ಹೇಳದೆ ಕೇಳದೆ ಮನೆಬಿಟ್ಟು ಬೆಂಗಳೂರಿಗೆ ಆಗಮಿಸಿದ್ದಾರೆ. ಇತ್ತ ನಮ್ಮ ಮಕ್ಕಳು ಕಾಣಿಸುತ್ತಿಲ್ಲ ಎಂದು ಪೋಷಕರು ಪಟ್ನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಮಿಸ್ಸಿಂಗ್ ಕೇಸ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ಇತ್ತ, ಶಿರಾದ ಚಿಕ್ಕಬಾಣಾವರದಿಂದ ತನ್ನ ಸ್ನೇಹಿತರೊಂದಿಗೆ ಬೆಂಗಳೂರಿಗೆ ನಿನ್ನೆ ಬೆಳಗ್ಗೆ ಆಗಮಿಸಿದ ಬಾಲಕಿ ಪ್ರಿಯಕರನೊಂದಿಗೆ ಇರುತ್ತಾಳೆ. ನಂತರ ಐವರು ಸೇರಿಕೊಂಡು ಮಾಡಿದ್ದ ಧರ್ಮಸ್ಥಳಕ್ಕೆ ಹೋಗುವ ಪ್ಲಾನ್ ಫ್ಲಾಪ್ ಆಗುತ್ತದೆ. ಹೀಗಾಗಿ ರಾತ್ರಿಯೇ ಹಾಸನಕ್ಕೆ ಹೋಗುತ್ತಾರೆ. ಅಲ್ಲಿ ಬಸ್​ ನಿಲ್ದಾಣದಲ್ಲಿ ರಾತ್ರಿ ಕಳೆದು ಬೆಳಗ್ಗೆ ಆಶ್ರಯ ಪಡೆಯಲು ಗೌರಿಕೊಪ್ಪಲು ಬಡಾವಣೆಯಲ್ಲಿ ರೂಮ್ ಹುಡುಕಾಡಲು ಆರಂಭಿಸಿದ್ದಾರೆ.

ಇದನ್ನೂ ಓದಿ: Missing: ಕಂಪನಿಯೊಂದರ ಮುಖ್ಯಸ್ಥ ಎವರೆಸ್ಟ್ ಉತ್ತುಂಗಕ್ಕೆ ಏರಿ ನಾಪತ್ತೆ; ಭಾರತೀಯ ಮೂಲದ ಸಿಂಗಾಪುರ ವ್ಯಕ್ತಿಗಾಗಿ ಹುಡುಕಾಟ

ಅಪ್ರಾಪ್ತ ಮಕ್ಕಳು ರೂಮ್​ಗಾಗಿ ಯಾಕೆ ಹುಡುಕಾಡುತ್ತಿದ್ದಾರೆ ಎಂದು ಅನುಮಾನಗೊಂಡ ಸ್ಥಳೀಯರು ವಿಚಾರಿಸಲು ಮುಂದಾಗಿದ್ದಾರೆ. ಅಷ್ಟರಲ್ಲಾಗಲೇ ಮಕ್ಕಳು ಆಟೋ ಹತ್ತಿ ಹೋಗುತ್ತಾರೆ. ಈ ವಿಚಾರವನ್ನು ಕೂಡಲೇ ಪೊಲೀಸರಿಗೆ ತಿಳಿಸುತ್ತಾರೆ. ಎಚ್ಚೆತ್ತ ಪೊಲೀಸರು ಕಂಟ್ರೋಲ್​ ರೂಮ್​ಗೆ ಮಾಹಿತಿ ನೀಡಿ ಹುಡುಕಾಟ ಆರಂಭಿಸುತ್ತಾರೆ. ಈ ವೇಳೆ ಹಾಸನ ನಗರದ ಹೊಸ ಬಸ್​ ನಿಲ್ದಾಣದಲ್ಲಿ ಮಕ್ಕಳು ಪತ್ತೆಯಾಗಿದ್ದಾರೆ.

ಪೊಲೀಸರು ವಿಚಾರಣೆ ನಡೆಸಿದಾಗ ಮಕ್ಕಳು ಶಿರಾದಿಂದ ತಪ್ಪಿಸಿ ಬಂದಿರುವುದಾಗಿ ಬಾಯಿಬಿಟ್ಟಿದ್ದಾರೆ. ಕೂಡಲೇ ಹಾಸನ ಪೊಲೀಸರು ಪಟ್ನಾಯಕನಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅದರಂತೆ ಹಾಸನಕ್ಕೆ ಆಗಮಿಸಿದ ಪೊಲೀಸರು ಮಕ್ಕಳನ್ನು ವಶಕ್ಕೆ ಪಡೆದು ಶಿರಾಕ್ಕೆ ಕರೆದುಕೊಂಡು ಹೋಗಿದ್ದು, ಸಂಜೆ ಸುಮಾರು 7 ಗಂಟೆ ಹೊತ್ತಿಗೆ ತಲುಪಲಿದ್ದಾರೆ. ಪ್ರೀತಿಸುತ್ತಿರುವ ಮಕ್ಕಳು ಅಪ್ರಾಪ್ತರಾಗಿರುವುದರಿಂದ ಪೋಕ್ಸೋ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ