67ರ ವಯಸ್ಸಿನಲ್ಲಿ ಸೀರೆಯುಟ್ಟು ಪ್ಯಾರಾಗ್ಲೈಡಿಂಗ್, ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಅಜ್ಜಿಯ ಸಾಹಸ

Paragliding: ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನಾಂಬೆ ದರ್ಶನಕ್ಕೆ ಜನಸಾಗರವೇ ಹರಿದುಬರುತ್ತಿದೆ. ಇಂದು ಹಾಸನಾಂಬೆ ದೇವಿ ದರ್ಶನದ ಮೂರನೇ ದಿನ. ಹೀಗಾಗಿ ತಾಯಿ ದರ್ಶನಕ್ಕೆ ಬಂದಿದ್ದ ವೃದ್ಧೆ ಸಾಹಸ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಹಾಸನಾಂಬ ಉತ್ಸವ ಹಿನ್ನೆಲೆ ಬೂವನಹಳ್ಳಿ ಏರ್ ಪೋರ್ಟ್ ನಲ್ಲಿ ನಡೆಯುತ್ತಿರುವ ಪ್ಯಾರಾಗ್ಲೈಡಿಂಗ್, ಪ್ಯಾರಾಸೈಲಿಂಗ್​ನಲ್ಲಿ ಭಾಗಿಯಾಗಿ ನಿಬ್ಬೆರಗು ಮೂಡಿಸಿದ್ದಾರೆ.

67ರ ವಯಸ್ಸಿನಲ್ಲಿ ಸೀರೆಯುಟ್ಟು ಪ್ಯಾರಾಗ್ಲೈಡಿಂಗ್, ಹಾಸನಾಂಬೆ ದರ್ಶನಕ್ಕೆ ಬಂದಿದ್ದ ಅಜ್ಜಿಯ ಸಾಹಸ
67ರ ವಯಸ್ಸಿನಲ್ಲಿ ಸೀರೆಯುಟ್ಟು ಪ್ಯಾರಾಗ್ಲೈಡಿಂಗ್ ಮಾಡಿದ ಅಜ್ಜಿ
Follow us
ಮಂಜುನಾಥ ಕೆಬಿ
| Updated By: ಆಯೇಷಾ ಬಾನು

Updated on: Nov 05, 2023 | 7:49 AM

ಹಾಸನ, ನ.05: ಇಳಿ ವಯಸ್ಸಿನಲ್ಲೂ ಸಾಹಸ ಚಟುವಟಿಕೆಗಳಲ್ಲಿ ಭಾಗಿಯಾಗಿ ತಮಗೆ ವಯಸ್ಸಾಗಿಲ್ಲ ಎಂಬುವುದನ್ನು ಆಗಾಗ ನಮ್ಮ ಅನೇಕ ಹಿರಿಯ ನಾಗರಿಕರು ಜೀವನೋತ್ಸಾಹ ತೋರ್ಪಡಿಸುವುದುಂಟು. ಜೀವನ ಸವಿಯೋಕೆ ವಯಸ್ಸಿನ ಮಿತಿ ಬೇಡ. ಆರೋಗ್ಯ ಮುಖ್ಯ ಎಂಬುವುದನ್ನು ಆಗಾಗ ಸಾಬೀತು ಆಗುತ್ತಿರುತ್ತದೆ. ಡೊರೊಥಿ ಹಾಫ್ನರ್​ ಎಂಬ 104 ವಯಸ್ಸಿನ ವೃದ್ಧೆಯೊಬ್ಬರು ಸ್ಕೈಡೈವ್ ಮಾಡಿ ಗಿನ್ನೆಸ್​ ಬುಕ್​ ರೆಕಾರ್ಡ್​ನಲ್ಲಿ ದಾಖಲಾಗಿದ್ದರು. ಈಗ ಹಾಸನದಲ್ಲಿ 76ರ ಇಳಿ ವಯಸ್ಸಿನ ವೃದ್ಧೆಯೊಬ್ಬರು ಪ್ಯಾರಾಗ್ಲೈಡಿಂಗ್ (Paragliding) ಮಾಡಿ ನಿಬ್ಬೆರಗಾಗುವಂತೆ ಮಾಡಿದ್ದಾರೆ.

ಹೌದು, 67 ವರ್ಷದ ವೃದ್ಧೆ ರೋಪ್ ಸೈಕ್ಲಿಂಗ್ ಮಾಡುವುದು, 80 ವರ್ಷ ವಯಸ್ಸಿನ ಅಜ್ಜಿ ಪ್ಯಾರಾಗ್ಲೈಡಿಂಗ್‌ ಮಾಡುವಂತಹ ಅನೇಕ ಸಾಹಸ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಇಳಿ ವಯಸ್ಸಿನಲ್ಲೂ ಸಾಹಸ ಮೆರೆಯುವ ಅಜ್ಜ-ಅಜ್ಜಿಯನ್ನು ಕಂಡಾಗ ಮೈ ಜುಂ ಎನ್ನುತ್ತೆ. ಅವರ ಫಿಟ್​ನೆಸ್ ನೋಡಿ ಅಚ್ಚರಿಯಾಗುತ್ತೆ. ಅದೇ ರೀತಿ ಹಾಸನದಲ್ಲೂ 76ರ ವೃದ್ಧೆ ಸೀರೆಯಲ್ಲೇ ಪ್ಯಾರಾಗ್ಲೈಡಿಂಗ್ ಮಾಡಿದ್ದಾರೆ. ಹಾಸನಾಂಬ ದರ್ಶನಕ್ಕೆ ಬಂದಿದ್ದ ಅಜ್ಜಿಯ ಸಾಹಸ ನೋಡಿ ಜನ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನಾಂಬೆ ದರ್ಶನಕ್ಕೆ ಜನಸಾಗರವೇ ಹರಿದುಬರುತ್ತಿದೆ. ಇಂದು ಹಾಸನಾಂಬೆ ದೇವಿ ದರ್ಶನದ ಮೂರನೇ ದಿನ. ಹೀಗಾಗಿ ತಾಯಿ ದರ್ಶನಕ್ಕೆ ಬಂದಿದ್ದ ವೃದ್ಧೆ ಸಾಹಸ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಹಾಸನಾಂಬ ಉತ್ಸವ ಹಿನ್ನೆಲೆ ಬೂವನಹಳ್ಳಿ ಏರ್ ಪೋರ್ಟ್ ನಲ್ಲಿ ನಡೆಯುತ್ತಿರುವ ಪ್ಯಾರಾಗ್ಲೈಡಿಂಗ್, ಪ್ಯಾರಾಸೈಲಿಂಗ್​ನಲ್ಲಿ ಭಾಗಿಯಾಗಿ ನಿಬ್ಬೆರಗು ಮೂಡಿಸಿದ್ದಾರೆ.

ಪ್ಯಾರಾಗ್ಲೈಡಿಂಗ್, ಪ್ಯಾರಾಸೈಲಿಂಗ್​ನಲ್ಲಿ ಅನೇಕ ಯುವಕ, ಯುವತಿಯರು ಭಾಗವಹಿಸುತ್ತಿದ್ದು 76 ವರ್ಷದ ಅಜ್ಜಿ ಕೂಡ ಪ್ಯಾರಾಗ್ಲೈಡಿಂಗ್ ಮಾಡಿ ನೋಡುಗರ ಗಮನ ಸೆಳೆದಿದ್ದಾರೆ. ಬೆಂಗಳೂರು ಮೂಲದ ಅಜ್ಜಿಯ ಸಾಹಸಕ್ಕೆ ಜನ ಬೆರಗಾಗಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ