AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಯಿಯಿಂದ ಬೇರ್ಪಟ್ಟಿದ್ದ ಮರಿಯಾನೆ ಹತ್ತು ದಿನಗಳ ನಂತರ ಸಾವು: ಕಾಫಿ ತೋಟದಲ್ಲಿ ಶವ ಪತ್ತೆ

Hassan News: ಕಾಡಾನೆ ಹಿಂಡಿನಿಂದ ಬೇರ್ಪಟ್ಟಿದ್ದ ಮರಿಯಾನೆ ಒಂದು ಕಾಫಿ ತೋಟ ಮೊದಲಾದ ಕಡೆಗಳಲ್ಲಿ ಓಡಾಡಿಕೊಂಡಿತ್ತು. ಆದರೆ ಹತ್ತು ದಿನಗಳ ನಂತರ ಆ ಮರಿಯಾನೆ ಮೃತಪಟ್ಟಿರುವಂತಹ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕೋಗೋಡು ಗ್ರಾಮದ ಕಾಫಿ ತೋಟದಲ್ಲಿ ನಡೆದಿದೆ.

ತಾಯಿಯಿಂದ ಬೇರ್ಪಟ್ಟಿದ್ದ ಮರಿಯಾನೆ ಹತ್ತು ದಿನಗಳ ನಂತರ ಸಾವು: ಕಾಫಿ ತೋಟದಲ್ಲಿ ಶವ ಪತ್ತೆ
ಮೃತ ಮರಿಯಾನೆ
Follow us
ಮಂಜುನಾಥ ಕೆಬಿ
| Updated By: ಗಂಗಾಧರ​ ಬ. ಸಾಬೋಜಿ

Updated on:Aug 05, 2023 | 3:43 PM

ಹಾಸನ, ಆಗಸ್ಟ್​​ 05: ಇತ್ತೀಚೆಗೆ ತಾಯಿಯಿಂದ ಬೇರ್ಪಟ್ಟಿದ್ದ ಹೆಣ್ಣಾನೆ ಮರಿ (Baby Elephant) ಒಂದು ಇದೀಗ ಹತ್ತು ದಿನಗಳ ನಂತರ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಾನನಹಳ್ಳಿ ಗ್ರಾಮದ ಕಾಫಿ ತೋಟದಲ್ಲಿ ನಡೆದಿದೆ. ಎರಡು ಭಾರಿಯೂ ಕಾಡಾನೆ ಹಿಂಡಿನಿಂದ ಮರಿಯಾನೆ ತಪ್ಪಿಸಿಕೊಂಡಿತ್ತು. ಆಗ  ಎರಡು ಭಾರೀ ಕೂಡ ಕಾಡಾನೆ ಗುಂಪಿನೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸೇರಿಸಿದ್ದರು.

ಬಳಿಕ ಎಂಟು ಕಾಡಾನೆಗಳ ಹಿಂಡಿನಿಂದ ಮರಿ ಆನೆ ಮತ್ತೆ ತಪ್ಪಿಸಿಕೊಂಡಿತ್ತು. ಬೇಲೂರು ತಾಲ್ಲೂಕಿನ ಕೋಗೋಡು ಗ್ರಾಮದ ಕಾಫಿ ತೋಟದಲ್ಲೇ ಉಳಿದಿತ್ತು. ಆದರೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಮರಿಯಾನೆ ಸೆರೆ ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಾಂತರ ಮಾಡಿದ್ದರು.

ಇದನ್ನೂ ಓದಿ: Baby Elephant: ತಾಯಿಯಿಂದ ದೂರವಾದ ಮರಿ ಆನೆ ರೋಧನೆ, ಅಯ್ಯಯ್ಯೋ…!

ಕಾಫಿ ತೋಟದಲ್ಲಿ ಹೆಣ್ಣಾನೆ ಮರಿ ಶವವಾಗಿ ಪತ್ತೆ

ಅರೇಹಳ್ಳಿ ಬಳಿ ಇರುವ ಆನೆ ಗುಂಪಿಗೆ ಈ ಮರಿಯಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಿಟ್ಟಿದ್ದರು.  ಆದರೆ ಗುಂಪಿಗೆ ಸೇರದೆ ರಸ್ತೆಯಲ್ಲಿ ಅಲೆದಾಡುತ್ತಿತ್ತು. ನಂತರ ನಾಲ್ಕು ದಿನದ ಹಿಂದೆ ಕಾಡಾನೆ ಗುಂಪಿಗೆ ಸೇರಿಕೊಂಡಿದ್ದ ಹೆಣ್ಣಾನೆ ಮರಿ, ಇಂದು ಕಾಫಿ ತೋಟದಲ್ಲಿ ಶವವಾಗಿ ಪತ್ತೆಯಾಗಿದೆ. ಸದ್ಯ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಪರಿಸರ ಪ್ರೇಮಿ ಮೇಲೆ ಮರಿಯಾನೆ ದಾಳಿ 

ತನ್ನ ತಾಯಿಯನ್ನು ಅಗಲಿರುವ ಮರಿಯಾನೆ ಸಿಟ್ಟಿನಿಂದ ಅಥವಾ ಗಾಬರಿಯಿಂದ ಗ್ರಾಮಗಳ ಕಡೆ ಬಾರದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಮುನ್ನೆಚ್ಚರಿಕೆ ವಹಿಸಿದ್ದರು. ಕಾಡಾನೆ ಮರಿಗೆ ಹಲಸಿನ ಹಣ್ಣು, ಕಬ್ಬು ನೀಡಿ ಆರೈಕೆ ಮಾಡಲಾಗುತ್ತಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸಪಟ್ಟು ಎರಡು ಬಾರಿ ಕಾಡಾನೆ ಗುಂಪಿಗೆ ಸೇರಿಸಿದ್ದರು.

ಇದನ್ನೂ ಓದಿ: Hassan News: ಚಿರತೆ ಸೆರೆ ಹಿಡಿದು ಬೈಕ್​ಗೆ ಕಟ್ಟಿಕೊಂಡು ಹೋಗಿ ಅರಣ್ಯ ಇಲಾಖೆಗೆ ಒಪ್ಪಿಸಿದ ಯುವಕ

ಆದರೂ ಕಾಡಾನೆಗಳು ಮರಿಯನ್ನು ಬಿಟ್ಟು ಹೋಗಿದ್ದವು. ಇದರಿಂದಾಗಿ ಮರಿಯಾನೆ ಕಾಫಿ ತೋಟವೊಂದರಲ್ಲಿ ಬೀಡುಬಿಟ್ಟಿತ್ತು. ಕಾಡಾನೆ ವೀಕ್ಷಣೆಗೆ ಬಂದ ಪರಿಸರ ಪ್ರೇಮಿ ಹುರುಡಿ ವಿಕ್ರಂ ಮೇಲೆ ಮರಿಯಾನೆ ದಾಳಿ ಮಾಡಿದ್ದು, ಆನೆಯೊಂದಿಗೆ ವಿಕ್ರಂ ಸೆಣೆಸಾಡಿದ್ದರು. ಕಾಡಾನೆ ಮರಿಯನ್ನು ನೋಡಲು ಜನರು ಮುಗಿಬಿದ್ದಿದ್ದು, ತಾಯಿಗಾಗಿ ಪರಿತಪಿಸುತ್ತಿರುವ ಮರಿಯಾನೆಯ ಸಂಕಟ ಕಂಡು ಮೊಮ್ಮಲ ಮರುಗಿದ್ದರು.

ಜಿಲ್ಲೆಯಲ್ಲಿ ಕಾಡಾನೆಗಳ ಉಪಟಳವಿದ್ದು, ವರ್ಷದಿಂದ ವರ್ಷಕ್ಕೆ ಸಂತತಿ ಜಾಸ್ತಿಯಾಗುತ್ತಿವೆ. ಇದರಿಂದಾಗಿ ಮಲೆನಾಡು ತಾಲ್ಲೂಕುಗಳಲ್ಲಿ ಕಾಡಾನೆ ಕಾಟ ಹೆಚ್ಚಾಗಿ ಬೆಳೆ, ಆಸ್ತಿಪಾಸ್ತಿ ನಷ್ಟವಾಗುತ್ತಿರುವುದು ಒಂದೆಡೆಯಾದರೆ, ಈ ರೀತಿಯ ಸಾವು-ನೋವು ಸಂಭವಿಸುತ್ತಿರುವುದು ಆನೆ ಮತ್ತು ಮಾನವರ ಸಂಘರ್ಷ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:42 pm, Sat, 5 August 23