ಡಿಕೆ ಸಹೋದರರ ದೌರ್ಜನ್ಯ ಕೊನೆಗಾಣಿಸಲು ಮಂಜುನಾಥ್ ಕಣಕ್ಕಿಳಿಸಿದ್ರು ಮೋದಿ: ಹೆಚ್​ಡಿ ದೇವೇಗೌಡ

| Updated By: ಗಣಪತಿ ಶರ್ಮ

Updated on: Apr 13, 2024 | 3:22 PM

ಹಾಸನದಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಹೆಚ್​ಡಿ ದೇವೇಗೌಡರು, ರೇವಣ್ಣ ಹಾಗೂ ಪ್ರಜ್ವಲ್ ಸಾಧನೆಯನ್ನು ಹೊಗಳಿದ್ದಷ್ಟೇ ಅಲ್ಲದೆ, ಅತ್ತ ಬೆಂಗಳೂರು ಗ್ರಾಮಾಂತರದ ವಿಚಾರ ಉಲ್ಲೇಖಿಸಿ ಡಿಕೆ ಸಹೋದರರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೈತ್ರಿ ಅಭ್ಯರ್ಥಿಗಳ ಪರ ಎಲ್ಲೆಡೆ ಪ್ರಚಾರ ಕೈಗೊಳ್ಳುವುದಾಗಿಯೂ ಹೇಳಿದ್ದಾರೆ.

ಡಿಕೆ ಸಹೋದರರ ದೌರ್ಜನ್ಯ ಕೊನೆಗಾಣಿಸಲು ಮಂಜುನಾಥ್ ಕಣಕ್ಕಿಳಿಸಿದ್ರು ಮೋದಿ: ಹೆಚ್​ಡಿ ದೇವೇಗೌಡ
ಹೆಚ್​ಡಿ ದೇವೇಗೌಡ
Follow us on

ಹಾಸನ, ಏಪ್ರಿಲ್ 13: ‘ನನ್ನ ಅಳಿಯ ಎಂಬ ಕಾರಣಕ್ಕೆ ಡಾ. ಸಿಎನ್ ಮಂಜುನಾಥ್ (D CN Manjunath) ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಜಯದೇವ ಸಂಸ್ಥೆಯನ್ನು ಇಡೀ ದೇಶದಲ್ಲಿ ಎತ್ತರಕ್ಕೆ ಬೆಳೆಸಿದ ಕೀರ್ತಿ ಅವರದ್ದಾಗಿದೆ. ಅವರು ನಮ್ಮ ಪಕ್ಷದಿಂದಲೇ ಸ್ಪರ್ಧಿಸಬೇಕು ಎಂದು ಪ್ರಧಾನಿ ಮೋದಿ ಮನವಿ ಮಾಡಿದರು. ಆ ಅಣ್ಣ ತಮ್ಮರ (ಡಿಕೆ ಸಹೋದರರ) ದೌರ್ಜನ್ಯ ಏನಿದೆ, ಅದನ್ನು ನಿಲ್ಲಿಸಲೇಬೇಕು ಎಂದು ಮಂಜುನಾಥ್​​ರನ್ನು ಕಣಕ್ಕಿಳಿಸಿದ್ದಾರೆ. ಅರ್ಥ ಮಾಡಿಕೊಳ್ಳಿ’ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ (HD Deve Gowda) ಹೇಳಿದರು. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಮಂಚಿಗನಹಳ್ಳಿ ಗ್ರಾಮದಲ್ಲಿ ಪ್ರಜ್ವಲ್ ಪರ ಮತಯಾಚನೆ ಮಾಡಿದ ಅವರು, ಡಿಕೆ ಸಹೋದರರ ವಿರುದ್ಧವೂ ವಾಗ್ದಾಳಿ ನಡೆಸಿದರು.

ಶಾಸಕ ಹೆಚ್​ಡಿ ರೇವಣ್ಣ ಅವರನ್ನು ಹೊಗಳಿದ ದೇವೇಗೌಡರು, ರಾಜ್ಯದಲ್ಲಿ ಇಷ್ಟೊಂದು ಕೆಲಸ ಮಾಡುವ ಯಾವುದೇ ಶಾಸಕ ಇಲ್ಲ. ಯಾರಾದರು ಇದ್ದರೆ ಅವರು ನನ್ನ ಮುಂದೆ ಬಂದು ನಿಲ್ಲಬಹುದು. ನೀವು ಹಾಸನದ ಖಾಸಗಿ ಇಂಜಿನಿಯರಿಂಗ್ ಕಾಲೇಜಿಗೆ ಹೋಗಿ ಫೀಜ್ ಕೇಳಿ ಎಷ್ಟು ಹೇಳ್ತಾರೆ ನೋಡಿ. ರೇವಣ್ಣ ತಮ್ಮ ಕ್ಷೇತ್ರದ ಮೊಸಳೆಹೊಸಳ್ಲಿಯಲ್ಲಿ ಒಂದು ಇಂಜಿನಿಯರಿಂಗ್ ಕಾಲೇಜು ಮಾಡಿದರು. ಹಳ್ಳಿಯಲ್ಲಿ ಕಾಲೇಜು ಬೇಡಾ ಎಂದು ಕುಮಾರಸ್ವಾಮಿ ಹೇಳಿದ್ದರು. ಆದರೆ ಹಠ ಹಿಡಿದು ಅಲ್ಲಿ ಕಾಲೇಜು ಸ್ಥಾಪನೆ ಮಾಡಿದರು. ಅಲ್ಲಿ ಕೇವಲ ಐದು ಸಾವಿರಕ್ಕೆ ಸೀಟ್ ಸಿಗುತ್ತದೆ ಎಂದು ಹೇಳಿದರು.

ರೇವಣ್ಣ ದೊಡ್ಡ ವಿದ್ಯಾವಂತ ಅಲ್ಲ. ಅವನು ಕೇವಲ ಎಸ್​​ಎಸ್ ಎಲ್​​ಸಿ ಅಷ್ಟೆ. ಹಿಂದೆ ಕಾಂಗ್ರೆಸ್ ಜೊತೆ ಸಮ್ಮಿಶ್ರ ಸರ್ಕಾರ ಮಾಡಿದ್ದಾಗ ಎಷ್ಟು ಷರತ್ತು ಹಾಕಿದ್ದರು. ಕುಮಾರಸ್ವಾಮಿ ಸಾಲ‌ಮನ್ನಾ ಮಾಡುತ್ತೇನೆ ಅಂದರೆ ನಮ್ಮ ಯೋಜನೆಗೆ ಮೊದಲು ಹಣ ಇಡಿ ಎಂದರು. ಸಿಎಂ ಸಿದ್ದರಾಮಯ್ಯ ಏಪ್ರಿಲ್ 18 ಕ್ಕೆ ಬರ್ತಾರಂತೆ. ನಾನು ಅವರನ್ನೇ ಫಾಲೋ ಮಾಡ್ತೇನೆ, ಮಾತನಾಡಲಿ ನೊಡೋಣ ಎಂದು ದೇವೇಗೌಡರು ಸವಾಲು ಹಾಕಿದರು.

ನನ್ನ ರಾಜಕೀಯ ಜೀವನದ ಭದ್ರ ಬುನಾದಿ ಹಾಕಿದ್ದು ಈ ದಂಡಿಗನಹಳ್ಖಿ ಹೋಬಳಿ. ಕಾವೇರಿಕೊಳ್ಳದ ಹತ್ತು ಜಿಲ್ಲೆಯ ಜನ ನೀರು ಕುಡಿತೇವೆ. ತಮಿಳುನಾಡಿನ ಸಿಎಂ ಅವರ ಪ್ರಣಾಳಿಕೆಯಲ್ಲಿ ಹಾಕ್ತಾರೆ, ಒಂದು ಗ್ಲಾಸ್ ನೀಡು ಕೊಡಲ್ಲ ಅಂತ. ಹೇಮಾವತಿ, ಕಾವೇರಿ ನೀರು ನೀರು ಬಳಸುವ ಹಾಗಿಲ್ಲ ಎನ್ನುತ್ತಾರೆ. ಈ ಬಗ್ಗೆ ಏಕಾಂಗಿಯಾಗಿ ಪಾರ್ಲಿಮೆಂಟ್​​ನಲ್ಲಿ ಹೋರಾಟ ಮಾಡಿದೆ. ಅಂದು ಕಾಂಗ್ರೆಸ್​​ನಲ್ಲಿದ್ದ ಎಸ್​​​ಎಂ ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ, ವೀರಪ್ಪ ಮೊಯ್ಲಿ ಸಚಿವರಾಗಿದ್ದರು. ನಾನು ಪಾರ್ಲಿಮೆಂಟ್​​​ನಲ್ಲಿ ಮಾತನಾಡಿದೆ ಎಂದು ದೇವೇಗೌಡ ಮೆಲುಕು ಹಾಕಿದರು.

‘ಸೋಮಣ್ಣ, ಮಹಾರಾಜರು, ಕುಮಾರಸ್ವಾಮಿ ಗೆಲ್ಲಬೇಕು’

ನಾನು ಬಂದಿರುವುದು ಒಬ್ಬ ರೇವಣ್ಣರನ್ನು ಗೆಲ್ಲಿಸಲು ಅಲ್ಲ. ತುಮಕೂರಿಗೆ ಹೋಗ್ತೇನೆ, ಅಲ್ಲಿ ಸೋಮಣ್ಣ ಗೆಲ್ಲಬೇಕು. ಮೈಸೂರಿಗೆ ಹೋಗ್ತೇನೆ ಅಲ್ಲಿ ಮಹರಾಜರು ಗೆಲ್ಲಬೇಕು. ಮಂಡ್ಯಕ್ಕೆ ಹೋಗ್ತೇನೆ ಅಲ್ಲಿ ಕುಮಾರಸ್ವಾಮಿ ಗೆಲ್ಲಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಗೆಲುವು ಯಾರಿಗೆ? ಸಿಎಸ್​​ಡಿಎಸ್ ಸಮೀಕ್ಷೆಯಲ್ಲಿ ಬಿಜೆಪಿಗೆ ಬಲ, ದಕ್ಷಿಣ ಭಾರತದಲ್ಲಿಯೂ ಮೋದಿ ಮೋಡಿ

ಸ್ಟಾಲಿನ್ ಹೇಳಿದ್ದಾರೆ ಕಾವೆರಿ ನೀರು ಕೊಡಲ್ಲ ಎಂಬುದಾಗಿ. ಈ ಕಾವೇರಿ ನೀರು ಬಳಸುವ ಹತ್ತು ಜಿಲ್ಲೆಯಲ್ಲಿ ನಮ್ಮ ಅಭ್ಯರ್ಥಿ ಗಳು ಗೆಲ್ಲಬೇಕು. ಅವರೊಟ್ಡಿಗೆ ನಾನು ಹೋರಾಟ ಮಾಡ್ತೇನೆ. ನಾಳೆ ನರೇಂದ್ರ ಮೋದಿಯವರು ನನ್ನ ಜೊತೆ ಬಂದು ಕೂಳಿತುಕೊಳ್ಳಬೇಕು ಎಂದಿದ್ದಾರೆ.

ಇದನ್ನೂ ಓದಿ: ಹೃದಯವಂತರು ಬಂದಿರುವುದರಿಂದ ಕಟುಕರು ಕಾಣೆಯಾಗ್ತಾರೆ: ಅಶೋಕ ವ್ಯಂಗ್ಯಾಸ್ತ್ರ, ಸುರೇಶ್ ತಿರುಗೇಟು

ಗಾಂಧಿ ಕಟ್ಟಿದ ಕಾಂಗ್ರೆಸ್​ಗೆ ಎಂಥಾ ಅಧ್ಯಕ್ಷ: ಡಿಕೆಶಿ ಬಗ್ಗೆ ವ್ಯಂಗ್ಯ

ಬರುತ್ತಾರಂತೆ ಡಿಕೆ ಶಿವಕುಮಾರ್, ಅಬ್ಬಾ… ಇಡೀ ಬೆಂಗಳೂರು ಅವರ ಕೈಯಲ್ಲಿದೆ. ನೀವು ವಿದ್ಯಾವಂತರು ಅರ್ಥಮಾಡಿಕೊಳ್ಳಬೇಕು. ಬಿಡಿಎ, ಕಾರ್ಪೊರೇಷನ್​ನಿಂದ ಬಾಚಿ ತೆಗೆದುಕೊಂಡು ಅದನ್ನು ಬೇರೆ ರಾಜ್ಯಗಳಿಗೆ ಕೊಡುತ್ತಾರೆ. ಅವರು ಕೆಪಿಸಿಸಿ ಅದ್ಯಕ್ಷರು ಕಡಿಮೆ ಏನಲ್ಲ. ಮಹಾತ್ಮ ಗಾಂಧಿ ಕಟ್ಟಿದ ಕಾಂಗ್ರೆಸ್ ಅಧ್ಯಕ್ಷರದ್ದು ಎಂತಹ ವ್ಯಕ್ತಿತ್ವ ಅದು ಎಂದು ಡಿಕೆ ಶಿವಕುಮಾರ್ ಹೆಸರು ಹೇಳಿ ದೇವೇಗೌಡರು ವ್ಯಂಗ್ಯವಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:21 pm, Sat, 13 April 24