ಕಂಬಳ ಕರಾವಳಿ ಜನರ ಜಾನಪದ ಕ್ರೀಡೆ.. ಮಿಂಚಿನ ಓಟ.. ಮೈ ನವಿರೇಳಿಸೋ ರೋಚಕತೆ.. ಕೆಸರಿನಲ್ಲಿ ಕೋಣಗಳ (Kambala Buffalo) ಶರವೇಗದ ಓಟ! ಅಬ್ಬಬ್ಬಾ ಕರಾವಳಿಯ ಕಂಬಳ ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ರೋಮಾಂಚನಕಾರಿಯಾದ ಈ ಜಾನಪದ ಕ್ರೀಡೆಯನ್ನ ಜಗತ್ತಿಗೂ ಪರಿಚಯಿಸಬೇಕು ಎನ್ನೋ ಹಂಬಲ ಶುರುವಾಗಿದ್ದು ಕಾಂತಾರ ಸಿನಿಮಾದಿಂದ. ಸಿನಿಮಾ ಹಿಟ್ ಆದಂತೆ ಕರಾವಳಿಯ ಹಲವು ವೈಶಿಷ್ಟ್ಯಗಳು ಎಲ್ಲೆಡೆ ಹಬ್ಬ ತೊಡಗಿದೆ ಅದರ ಮುಂದುವರೆದ ಭಾಗವೇ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (bangalore Kambala 2023) ಆಯೋಜನೆಗೊಂಡಿರುವ ನಮ್ಮ ಕಂಬಳ ಉತ್ಸವ, ಇದಕ್ಕಾಗಿ ಕಡಲ ತಡಿಯಿಂದ ಹೊರಟ 180ಕ್ಕೂ ಹೆಚ್ಚು ಜೋಡಿ ಕೋಣಗಳ ಪ್ರಯಾಣ ರೋಚಕವಾಗಿತ್ತು. ಹಾಸನದಲ್ಲಿ ರೆಸ್ಟ್ ಮಾಡಿದ ಕೋಣಗಳನ್ನ ಕಣ್ತುಂಬಿಕೊಳ್ಳಲು ಜನರು ಮುಗಿಬಿದ್ದಿದ್ದರು. ಫೊಟೊ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ಹಾಸನದ ಜನರು ಕೂಡ ಪ್ರಿತಿಯಿಂದ ಕರಾವಳಿಯ ಹುಲಿಗಳಿಗೆ ಸ್ವಾಗತಕೋರಿ, ಬೀಳ್ಕೊಟ್ಟರು. ಹೇಗಿತ್ತು ಕಂಬಳ ಕೋಣಗಳ ಜಬರ್ದಸ್ತ್ ಸವಾರಿ ಈ ಸ್ಟೋರಿ ನೋಡಿ.
ಹಾಸನದಲ್ಲಿ ಕರಾವಳಿಯ ಕಂಬಳ ಕೋಣಗಳ ಸವಾರಿ..ನೂರಾರು ಜೋಡಿ ಕಟ್ಟುಮಸ್ತಾದ ಕೋಣ ಕಂಡು ಮಲೆನಾಡ ಜನರು ಫಿದಾ.. ರಾಜಧಾನಿಗೆ ಹೊರಟ ಕಂಬಳ ಕೋಣಗಳಿಗೆ ಹಾಸನದಲ್ಲಿ ಹೃದಯಸ್ಪರ್ಶಿ ಸ್ವಾಗತ..ಹೌದು ನವೆಂಬರ್ 25 ಮತ್ತು 26ರಂದು ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರೋ ಕಂಬಳ ಉತ್ಸವಕ್ಕೆ ಕೋಟಿ ಕೋಟಿ ಜನರು ಉತ್ಸುಕರಾಗಿದ್ದಾರೆ.
ಕರಾವಳಿಗೆ ಸೀಮಿತವಾಗಿದ್ದ ಕಡಲ ತಡಿಯ ಜನರ ಜಾನಪದ ಕ್ರೀಡೆ ಈಗ ಎಲ್ಲೆಡೆ ಹರಡೋಕೆ ಸಜ್ಜಾಗಿದೆ, ಸರ್ಕಾರದ ಸಹಯೋಗದಲ್ಲಿ ನಡೆಯುತ್ತಿರೋ ಈ ಕಂಬಳ ಉತ್ಸವಕ್ಕೆ ಕರಾವಳಿಯಿಂದ ಪ್ರಯಾಣ ಬೆಳೆಸಿದ 180 ಜೋಟಿ ಕೋಣಗಳು ಹಾಸನದ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿವೆ, ದಕ್ಷಿಣ ಕನ್ನಡ ಹಾಗು ಉಡುಪಿ ಸೇರಿ ಕರಾವಳಿಯ ವಿವಿಧೆಡೆಗಳಿಂದ ಹೊರಟ ಕಟ್ಟುಮಸ್ತಾದ ಕೋಣಗಳಿಗೆ ಹಾಸನದಲ್ಲಿ ಹೃದಯಸ್ಪರ್ಶಿ ಸ್ವಾಗತ ನೀಡಲಾಯ್ತು.
Also Read: ಬೆಂಗಳೂರು ಕಂಬಳ: ರಿಹರ್ಸಲ್ ಆರಂಭ, ಕೋಣಗಳಿಗೆ ಮಂಗಳೂರಿಂದಲೇ ಬಂದ ಕುಡಿಯುವ ನೀರು
ಹಾಸನದ ಹೊರವಲಯದ ದೇವರಾಯಪಟ್ಟಣದಲ್ಲಿ ಸ್ವಾಗತ ಕೋರಿ ಬಳಿಕ ಹಾಸನದ ಸರ್ಕಾರಿ ಇಂಜನಿಯರಿಂಗ್ ಕಾಲೇಜು ಮೈದಾನದಲ್ಲಿ ಕೋಣಗಳಿಗೆ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿತ್ತು, ಸಾಂಪ್ರದಾಯಿಕ ಪೂಜೆ ಸಲ್ಲಿಸಿ, ಕರಾವಳಿಯ ಮಂಗಳ ವಾದ್ಯಗಳೊಂದಿಗೆ ಕೋಣಗಳನ್ನ ಸ್ವಾಗತ ಮಾಡಿದ ಹಾಸನದ ಜನರು ರಾಜದಾನಿಯತ್ತ ಹೊರಟ ಕೋಣಗಳಿಗೆ ಶುಭ ಹಾರೈಸಿದ್ರು ಹಾಸನ ಶಾಸಕ ಸ್ವರೂಪ್ ಪ್ರಕಾಶ್, ಜೆಡಿಎಸ್ ಶಾಸಕ ಮಾಜಿ ಸಚಿವ ರೇವಣ್ಣ ನೇತೃತ್ವದಲ್ಲಿ ಸ್ವಾಗತ ಕೋರಿದ ಜಿಲ್ಲೆಯ ಜನರು ಕೋಣಗಳಿಗೆ ಶುಭ ಹಾರೈಸಿದ್ರು.
ಬೆಂಗಳೂರಿನಲ್ಲಿ ನವೆಂಬರ್ 25 ಮತ್ತು ನವೆಂಬರ್ 26ರಂದು ಎರಡು ದಿನ ನಗರದ ಅರಮನೆ ಮೈದಾನದಲ್ಲಿ ಮೊದಲಬಾರಿಗೆ ಕರಾವಳಿಯ ಹೊರತಾಗಿ ಬೇರೆಡೆ ಕಂಬಳ ಆಯೋಜನೆಗೊಂಡಿದೆ, ಅದಕ್ಕಾಗಿ ತಿಂಗಳುಗಳಿಂದ ದೊಡ್ಡ ತಂಡವೇ ತಯಾರಿ ನಡೆಸಿದೆ. ಭರ್ಜರಿ ಟ್ರ್ಯಾಕ್ ಸಿದ್ದಗೊಂಡಿದ್ದು ರೋಮಾಂಚನಕಾರಿ ಆಟ ನೋಡೋಕೆ ಕೋಟಿಕೋಟಿ ಜನರು ಕೂಡ ಕಾತರರಾಗಿದ್ದಾರೆ.
ಹಾಗಾಗಿಯೇ ಎರಡು ದಿನ ಮೊದಲೇ ಕರಾವಳಿಯಿಂದ ಹಾಸನದ ಮೂಲಕ ಕೋಣಗಳು ಬೆಂಗಳೂರಿನತ್ತ ಪ್ರಯಾಣ ಬೆಳೆಸಿವೆ, ಕಂಬಳ ಕೋಣಗಳ ಮಾಲೀಕರು, ಕೋಣಗಳ ಉಸ್ತುವಾರಿ ಹೊತ್ತವರು ಎಲ್ಲರೂ ತಮ್ಮ ತಮ್ಮ ಕೋಣಗಳ ಮೂಲಕ ಬೆಂಗಳೂರಿನತ್ತ ಹೊರಟಿದ್ದಾರೆ, ನೂರಾರು ಸಂಖ್ಯೆಯಲ್ಲಿ ಬಂದಿದ್ದ ಕೋಣಗಳನ್ನ ನೋಡೋಕೆ ಹಾಸನದ ಸಾವಿರಾರು ಜನರು ಜಮಾಯಿಸಿದ್ರು, ಕೋಣಗಳ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ರು.
ಇಷ್ಟು ದಿನ ಕೇವಲ ಕರಾವಳಿಗೆ ಸೀಮಿತವಾಗಿದ್ದ ಕಂಬಳ ಕಾಂತಾರ ಸಿನಿಮಾ ಹಿಟ್ ಆಗೋ ಮೂಲಕ ಕರಾವಳಿಯ ಹಲವು ಸಾಂಸ್ಕತಿಕ ಪ್ರಕಾರಗಳು ಮುಂಚೂಣೀಗೆ ಬಂದಿವೆ,ಕರಾವಳಿಯ ಜಾನಪದ ಕ್ರೀಡೆ ಕಂಬಳ ಕೂಡ ಇದೀಗ ಎಲ್ಲರ ಮನಸ್ಸಿನಲ್ಲಿ ನೆಲೆಸಿದೆ, ಅದರಭಾಗವಾಗಿ ಬೆಂಗಳೂರಿನಲ್ಲಿ ಕಂಬಳ ಆಯೋಜನೆಗೊಂಡಿರೋದು ಕಂಬಳ ಪ್ರಿಯರ ಖುಷಿ ಹೆಚ್ಚಿಸಿದೆ.
ಒಟ್ನಲ್ಲಿ ರಾಜ್ಯ ರಾಜದಾನಿಯಲ್ಲಿ ನಡೆಯುತ್ತಿರೋ ಕಂಬಳ ಉತ್ಸವಕ್ಕೆ ಇಡೀ ಬೆಂಗಳೂರು ಸಜ್ಜಾಗಿದೆ, ಮೊದಲಬಾರಿಗೆ ನಡೆಯುತ್ತಿರೋ ಕರಾವಳಿ ಜನರ ಜಾನಪದ ಕ್ರೀಡೆ ದೊಡ್ಡ ಸಜ್ಜುಮಾಡುತ್ತಿದ್ದು ಹಾಸನದ ಮೂಲಕ ಹೊರಟ ನುರಾರು ಜೋಡಿ ಕೋಣಗಳಿಗೆ ಹಾಸನದ ಜನತೆ ಹೃದಯಸ್ಪರ್ಶಿ ಸ್ವಾಗತ ನೀಡಿ ಕಳಿಸಿಕೊಟ್ಟಿದ್ದು ನಾಳೆಯಿಂದ ಆರಂಭವಾಗಲಿರೋ ಕರಾವಳಿ ಸಂಭ್ರಮ ಎಲ್ಲರ ನಿರೀಕ್ಷೆ ಹೆಚ್ಚಿಸಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ