AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನದಲ್ಲಿ ಪತ್ರಕರ್ತರ ರಾಜ್ಯಮಟ್ಟದ ಕ್ರಿಕೆಟ್ ಕ್ರೀಡಾಕೂಟಕ್ಕೆ ಬ್ಯಾಟಿಂಗ್ ಮೂಲಕ ಚಾಲನೆ

ಹಾಸನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಲಾದ ಎರಡು ದಿನಗಳ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಸಂಸದ ಶ್ರೇಯಸ್ ಪಟೇಲ್ ಚಾಲನೆ ನೀಡಿದರು. 24 ತಂಡಗಳು ಭಾಗವಹಿಸಿದ ಈ ಪಂದ್ಯಾವಳಿಯಲ್ಲಿ ಪತ್ರಕರ್ತರು ತಮ್ಮ ಒತ್ತಡವನ್ನು ನಿವಾರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶ್ರೇಯಸ್ ಪಟೇಲ್ ಶ್ಲಾಘಿಸಿದರು. ಕ್ರೀಡಾ ಮನೋಭಾವನೆಯನ್ನು ಬೆಳೆಸಿಕೊಳ್ಳುವಂತೆ ಅವರು ಕರೆ ನೀಡಿದರು. ಪ್ರತಿ ವರ್ಷವೂ ಈ ಕ್ರೀಡಾಕೂಟ ಆಯೋಜಿಸಲಾಗುತ್ತದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ತಿಳಿಸಿದರು.

ಹಾಸನದಲ್ಲಿ ಪತ್ರಕರ್ತರ ರಾಜ್ಯಮಟ್ಟದ ಕ್ರಿಕೆಟ್ ಕ್ರೀಡಾಕೂಟಕ್ಕೆ ಬ್ಯಾಟಿಂಗ್ ಮೂಲಕ ಚಾಲನೆ
ಕೆಯುಡಬ್ಲೂಜೆ ಕ್ರಿಕೆಟ್​ ಪಂದ್ಯಾವಳಿ
Follow us
TV9 Web
| Updated By: ವಿವೇಕ ಬಿರಾದಾರ

Updated on: Apr 12, 2025 | 7:26 PM

ಹಾಸನ, ಏಪ್ರಿಲ್​ 12: ಹಾಸನದಲ್ಲಿ (Hassan) ಕೆಯುಡಬ್ಲ್ಯೂಜೆ (KUWJ) ಏರ್ಪಡಿಸಿದ್ದ ಎರಡು ದಿನದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಸಂಸದ ಶ್ರೇಯಸ್ ಪಟೇಲ್ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸದಾ ಒತ್ತಡದಲ್ಲಿರುವ ಪತ್ರಕರ್ತರು ಒಂದೆಡೆ ಸೇರಿ ಕ್ರಿಕೇಟ್ ಆಡುವ ಮೂಲಕ ಒತ್ತಡ ನೀಗಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಕ್ರೀಡೆಯಲ್ಲಿ ಮಾತ್ರ ಯಾವುದೇ ಬೇದಭಾವ ಕಾಣಲು ಸಾಧ್ಯವಿಲ್ಲ. ಆದ್ದರಿಂದಲೇ ಕ್ರೀಡಾಮನೋಭಾವ ಗಳಿಸಿಕೊಳ್ಳುವ ಮೂಲಕ ಸೋಲು-ಗೆಲುವು ಸಮಾನವಾಗಿ ಸ್ವೀಕಾರ ಮಾಡಬೇಕು ಎಂದು ಕರೆ ನೀಡಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಪ್ರತಿ ವರ್ಷವೂ ಪತ್ರಕರ್ತರಿಗಾಗಿಯೇ ಕ್ರೀಡಾಕೂಟ ಆಯೋಜನೆ ಮಾಡಲಾಗುತ್ತಿದೆ. ಈ ಬಾರಿ 24 ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ವಿಶೇಷ ಎಂದರು.

ಕೆಯುಡಬ್ಲ್ಯೂಜೆ ರಾಜ್ಯ ಸಮಿತಿ ಸದಸ್ಯ ಎಚ್.ಬಿ.ಮದನಗೌಡ, ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್, ಉಪಾಧ್ಯಕ್ಷರಾದ ಅಜ್ಜಮಾಡ ಕುಟ್ಟಪ್ಪ, ಭವಾನಿಸಿಂಗ್ ಠಾಕೂರ್, ಪುಂಡಲೀಕ ಬಾಳೋಜಿ, ಖಜಾಂಚಿ ವಾಸುದೇವ ಹೊಳ್ಳ, ಕಾರ್ಯದರ್ಶಿಗಳಾದ ಮತ್ತಿಕೆರೆ ಜಯರಾಂ, ಸೋಮಶೇಖರ ಕೆರಗೋಡು, ನಿಂಗಪ್ಪ ಚಾವಡಿ, ಜಿಲ್ಲಾ ಸಂಘದ ಅಧ್ಯಕ್ಷ ವೇಣುಕುಮಾರ್, ಸಣ್ಣಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಜೆ.ಆರ್.ಕೆಂಚೇಗೌಡ, ಎನ್. ರವಿಕುಮಾರ್ ಪದಾಧಿಕಾರಿಗಳು ಹಾಜರಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ತಾಳಿ ಕಟ್ಟಿದ ಮರುಕ್ಷಣವೇ ಪರೀಕ್ಷೆಗೆ ಹಾಜರಾದ ನವವಧು: ವಿಡಿಯೋ ನೋಡಿ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆ ಸಮೂಹದ ಮೇಲೆ ಈಡಿ ದಾಳಿ ನಡೆದಿದೆ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಪರಮೇಶ್ವರ್ ಸಂಸ್ಥೆಗಳ ಮೇಲೆ ಇಡಿ ದಾಳಿ: ಡಿಸಿಎಂ ಡಿಕೆಶಿ ಹೇಳಿದ್ದೇನು ನೋಡಿ
ಪುನರಾಭಿವೃದ್ಧಿಗೊಂಡ 103 ರೈಲ್ವೆ ನಿಲ್ದಾಣಗಳ ಉದ್ಘಾಟಿಸಿದ ಪ್ರಧಾನಿ ಮೋದಿ
ಪುನರಾಭಿವೃದ್ಧಿಗೊಂಡ 103 ರೈಲ್ವೆ ನಿಲ್ದಾಣಗಳ ಉದ್ಘಾಟಿಸಿದ ಪ್ರಧಾನಿ ಮೋದಿ
Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ
Video: ಪಾಕಿಸ್ತಾನದ ಗೃಹ ಸಚಿವ ಹಸನ್ ಮನೆಗೆ ಬೆಂಕಿ
ಪೊಲೀಸ್ ಉನ್ನತ ಹುದ್ದೆಗೆ ನೇಮಕಗೊಂಡವರು ಹೆಚ್​ಎಂ ಭೇಟಿಯಾಗೋದು ಶಿಷ್ಟಾಚಾರ
ಪೊಲೀಸ್ ಉನ್ನತ ಹುದ್ದೆಗೆ ನೇಮಕಗೊಂಡವರು ಹೆಚ್​ಎಂ ಭೇಟಿಯಾಗೋದು ಶಿಷ್ಟಾಚಾರ