ಹಾಸನ: ಹಾಸನ ನಗರ ಸಭೆ ಸದಸ್ಯ ಪ್ರಶಾಂತ್ ಭೀಕರ ಹತ್ಯೆ ನಡೆದಿದೆ. ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಪ್ರಶಾಂತ್ನನ್ನು ಹಿಂಬಾಲಿಸಿ ಅಟ್ಟಾಡಿಸಿ ಕೊಲೆ ಮಾಡಲಾಗಿದೆ. ಹಾಸನ ನಗರದ ಲಕ್ಣ್ಮಿಪುರ ಬಡಾವಣೆಯಲ್ಲಿ ಹತ್ಯೆ ನಡೆದಿದೆ. ಹಾಸನ ನಗರದ 16ನೇ ವಾರ್ಡ್ನಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಶಾಂತ್ ಆಯ್ಕೆಯಾಗಿದ್ದರು. ಇಂದು ಸಂಜೆ ಕೆಲಸ ಮುಗಿಸಿ ಮನೆಗೆ ತೆರಳೋ ವೇಳೆ ಅಟ್ಯಾಕ್ ಮಾಡಿ ಹತ್ಯೆ ಮಾಡಲಾಗಿದೆ. ಭೀಕರವಾಗಿ ಕೊಚ್ಚಿ ಹಂತಕರು ಕೊಲೆ ಮಾಡಿದ್ದಾರೆ. ಹಾಸನ ಪೆನ್ಷನ್ ಮೊಹಲ್ಲಾ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಳೆದ 13 ವರ್ಷದಗಳ ಹಿಂದೆ ಇದೇ ರೀತಿ ಪ್ರಶಾಂತ್ ಅವರ ತಂದೆಯನ್ನೂ ಸಹ ಕೊಲೆ ಮಾಡಲಾಗಿತ್ತು. ಪ್ರಶಾಂತ್ ತಂದೆ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದರು. ಪ್ರಶಾಂತ್ ಕೂಡ ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದಲ್ಲಿ ಆಕ್ಟಿವ್ ಆಗಿದ್ದರು. ಪ್ರಶಾಂತ್ ಕೊಲೆಗೆ ಹಳೇ ವೈಷಮ್ಯದ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಹಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹ ಶಿಫ್ಟ್ ಮಾಡಲು ನಕಾರ ಎದ್ದಿದೆ. ಆಸ್ಪತ್ರೆ ಆವರಣಕ್ಕೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಆಗಮಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಶವಾಗಾರಕ್ಕೆ ಶವ ಕಳಿಸಲು ಬಿಡುವುದಿಲ್ಲ ಎಂದು ರೇವಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಅಂಬ್ಯುಲೆನ್ಸ್ ನಲ್ಲಿ ಮೃತದೇಹ ಇಟ್ಟುಕೊಂಡು ಪ್ರತಿಭಟನೆ ನಡೆಸಲಾಗುತ್ತಿದೆ. ಇದನ್ನೂ ಓದಿ: Caste Census ಬಿಹಾರದಲ್ಲಿ ಜಾತಿ ಜನಗಣತಿಗೆ ಸಿಎಂ ನಿತೀಶ್ ಕುಮಾರ್ ನಿರ್ಧಾರ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಬಾಡಿ ಶವಾಗಾರಕ್ಕೆ ಕಳಿಸಬೇಡಿ ಎಂದು ಜೆಡಿಎಸ್ ನಾಯಕ ರೇವಣ್ಣ ಪಟ್ಟು ಹಿಡಿದಿದ್ದಾರೆ. ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ ಹದಗೆಟ್ಟಿದೆ ಎಂದು ರೇವಣ್ಣ ಗರಂ ಆಗಿದ್ದಾರೆ. ರೌಡಿಸಂಗೆ ಪೊಲೀಸ್ ಇಲಾಖೆ ಸಪೋರ್ಟ್ ಮಾಡಿ ಬೆಳೆಸುತ್ತಿದೆ. ಗೂಂಡಾ ಜಿಲ್ಲೆಯಾಗಲು ಪೊಲೀಸರು ಕಾರಣ. ಪೊಲೀಸರು ಗುಲಾಮರಾಗಿ ಕೆಲಸ ಮಾಡ್ತಿದ್ದಾರೆ ಎಂದು ರೇವಣ್ಣ ಗರಂ ಆಗಿದ್ದು ನಗರದ ಪಿಎಸ್ಐ, ಸರ್ಕಲ್ ಇನ್ಸ್ ಪೆಕ್ಟರ್ ,ಡಿವೈಎಸ್ಪಿ ಸಸ್ಪೆಂಡ್ ಮಾಡುವಂತೆ ರೇವಣ್ಣ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬೋಲ್ಡ್ ಅವತಾರದಲ್ಲಿ ಮಿಂಚಿದ ತಮನ್ನಾ; ವಿಡಿಯೋದಲ್ಲೊಂದು ಟ್ವಿಸ್ಟ್!