Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣ ಡಬಲ್ ಮೋಸ: ಇಬ್ಬರೇ ಇಬ್ಬರು ಮಹಿಳೆಯರಿಂದ 3 ಕೋಟಿ ರೂ, ಅಧಿಕ ವಂಚನೆ

ಎಷ್ಟೇ ವಂಚನೆ ಪ್ರಕರಣಗಳು ಬೆಳಕಿಗೆ ಬಂದರೂ, ಇಂತಹವರ ಜಾಲಕ್ಕೆ ಸಿಲುಕುವವರ ಸಂಖ್ಯೆ ಏರುತ್ತಲೇ ಇದೆ. ಇದೀಗ ಹಾಸನ ಮೂಲದ ಇಬ್ಬರು ಮಹಿಳೆಯರು ಸೇರಿಕೊಂಡು ಕೊಟ್ಟ ಹಣಕ್ಕೆ ಡಬಲ್ ಕೊಡುವುದಾಗಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ್ದಾರೆ. ಈ ಕುರಿತು ಯಸಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಆರಂಭವಾಗಿದೆ.

ಹಣ ಡಬಲ್ ಮೋಸ: ಇಬ್ಬರೇ ಇಬ್ಬರು ಮಹಿಳೆಯರಿಂದ 3 ಕೋಟಿ ರೂ, ಅಧಿಕ ವಂಚನೆ
ಹಾಸನದಲ್ಲಿ ಇಬ್ಬರು ಮಹಿಳೆಯರಿಂದ 3 ಕೋಟಿ ರೂ, ಅಧಿಕ ವಂಚನೆ
Follow us
ಮಂಜುನಾಥ ಕೆಬಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 27, 2024 | 3:36 PM

ಹಾಸನ, ಆ.27: ‘ನನಗೆ ಸೇರಿದ ನೂರಾರು ಕೋಟಿ ಆಸ್ತಿ ನ್ಯಾಯಾಲಯದಲ್ಲಿದೆ ಎಂದು ನಂಬಿಸಿ ಕೋಟ್ಯಾಂತರ ರೂಪಾಯಿಯನ್ನ ಜನಗಳಿಂದ ಪಡೆದು ವಂಚಿಸಿರುವ ಆರೋಪದ ಮೇಲೆ ಹಾಸನ ಮೂಲದ ಇಬ್ಬರು ಮಹಿಳೆಯರು ಸೇರಿ ಒಟ್ಟು ಎಂಟು ಜನರ ವಿರುದ್ದ 22 ಜನರು ಸಕಲೇಶಪುರ(Sakleshpura) ತಾಲ್ಲೂಕಿನ ಯಸಳೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಹಾಸನ ನಗರ ಮೂಲದ ಅನುಷಾ ಅಲಿಯಾಸ್​ ಕೃಪಾ, ಭುವನೇಶ್ವರಿ ಅಲಿಯಾಸ್​ ಅಶ್ವಿನಿ ಮತ್ತು ದೇವರಾಜ್, ಗಫಾರ್, ಶಶಿ, ಅಭಿಷೇಕ್, ಹರೀಶ್ ಸಾಗರ್ ವಿರುದ್ದ 3 ಕೋಟಿ 80 ಲಕ್ಷ ಹಣ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ.

ಏನಿದು ಘಟನೆ?

ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹಾಡ್ಲಹಳ್ಳಿ, ವಳಲಹಳ್ಳಿ, ನಿಡ್ತಾ ಹಾಗೂ ಕರಗೂರು ಸೇರಿ ಹಲವು ಹಳ್ಳಿ ಜನರ ಬಳಿ ಹೋಗಿ ನನಗೆ ಸೇರಿದ ನೂರಾರು ಕೋಟಿ ಮೌಲ್ಯದ ಆಸ್ತಿ ಹಾಗೂ ಮೂರುವರೆ ಕೋಟಿಯಷ್ಟು ನಗದು ಕೋರ್ಟ್ ಕೇಸ್​ನಲ್ಲಿ ಸಿಲುಕಿರುವ ಬಗ್ಗೆ ಆರೋಪಿ ಮಹಿಳೆ ಅನುಷಾ ಹೇಳಿದ್ದಾರೆ. ಜೊತೆಗೆ ತಾನು ಆಗರ್ಭ ಶ್ರೀಮಂತೆ, ನನ್ನ ಬಳಿಯ ಅಪಾರ ಮೌಲ್ಯದ ಆಸ್ತಿ ಕೋರ್ಟ್ ವ್ಯಾಜ್ಯಕ್ಕೆ ಸಿಲುಕಿದೆ. ಕೋರ್ಟ್ ವ್ಯಾಜ್ಯ ಬಗೆಹರಿಯಲಿ ಎಂದು ಸಕಲೇಶಪುರ ತಾಲ್ಲೂಕಿನ ದೊಡ್ಡನಹಳ್ಳಿ ಚೌಡೇಶ್ವರಿ ದೇವಾಲಯಕ್ಕೆ ಪ್ರತೀ ತಿಂಗಳು ಬಂದು, ಹಂದಿವೊಂದನ್ನು ಬಲಿಕೊಟ್ಟು ಪೂಜೆ ಸಲ್ಲಿಸುತ್ತಿದ್ದರು.

ಇದನ್ನೂ ಓದಿ:ಪ್ರವಾಸೋದ್ಯಮ ಇಲಾಖೆ ಹಣ ವಂಚನೆ ಪ್ರಕರಣ: 19 ಆರೋಪಿಗಳ ಬಂಧನ, ಕೇಸ್ ಶೀಘ್ರ ಸಿಐಡಿಗೆ ಹಸ್ತಾಂತರ

ನೀವು ಕೊಟ್ಟ ಹಣಕ್ಕೆ ಡಬಲ್ ಹಣ ಕೊಡುವುದಾಗಿ ನಂಬಿಸಿ ಮೋಸ

ಇನ್ನು ಅನುಷಾ ಪೂಜೆಗೆ ಬಂದಾಗ ಅಲ್ಲಿಗೆ ಪೂಜೆಗೆ ಬಂದವರ ಜೊತೆ ವಿಶ್ವಾಸಗಳಿಸಿ, 2018 ರಿಂದ ನಿರಂತರವಾಗಿ ಅವರಿಗೆ ಸುಳ್ಳು ಹೇಳಿ ಹಣ ಪಡೆದು ‘ತಾನು ಕಷ್ಟದಲ್ಲಿದ್ದು, ಈಗ ಸಹಾಯ ಮಾಡಿದ್ರೆ ನೀವು ಕೊಟ್ಟ ಹಣಕ್ಕೆ ಡಬಲ್ ಹಣ ಕೊಡುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ. ಈ ಹಿನ್ನಲೆ ಅನುಷಾ, ಭುವನೇಶ್ವರಿ ಸೇರಿ ಎಂಟು ಜನರ ವಿರುದ್ದ ಎಫ್​ಐಆರ್ ದಾಖಲು ಮಾಡಲಾಗಿದೆ. ಒಟ್ಟು ಫೋನ್ ಪೇ ಮೂಲಕ 1.46 ಕೋಟಿ ಹಾಗೂ ನಗದಾಗಿ 2.34 ಕೋಟಿ ಹಣ ಪಡೆದಿರುವ ಬಗ್ಗೆ ದೂರು ನೀಡಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲಿಸರು ತನಿಖೆ ನಡೆಸುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ